ಗ್ರಾಹಕ ಹಕ್ಕು ನಿಯಮ ಎಂಬ ಹಲ್ಲಿಲ್ಲದ ಹಾವು ! 


Team Udayavani, Jul 23, 2018, 12:16 PM IST

grahaka-hakku.png

ಇವತ್ತಿಗೂ ಬ್ಯಾಂಕ್‌ಗಳು ತಾವು ನೀಡಿದ್ದೇ ಪ್ರಸಾದ ಎಂಬ ಮನೋಭಾವವನ್ನು ಹೊಂದಿವೆ. ಇಂತಹ ಗ್ರಾಹಕರ ಹಕ್ಕು ನಿಯಮ ರೂಪಿಸುವಾಗ ಗ್ರಾಹಕರ ಕಡೆಯಿಂದಲೂ ಸಲಹೆಗಳನ್ನು ಸ್ವೀಕರಿಸಬೇಕು ಎಂದು ಯಾವ ಬ್ಯಾಂಕ್‌ಗೂ ಅನಿಸಿದಂತಿಲ್ಲ. ತಾನೇ ಖುದ್ದು ಪ್ರತಿ ಬ್ಯಾಂಕ್‌ನಲ್ಲಿ ಸಲಹೆ, ಸೂಚನೆ ನೀಡಲು ಒಂದು ಗ್ರಾಹಕ ಸಮಿತಿಯನ್ನು ರಚಿಸುವಂತೆ ಮಾಡಿದ್ದರೆ ಗ್ರಾಹಕ ಸೇವೆಯ ಗುಣಮಟ್ಟ ಹೆಚ್ಚಿಸಲು ಅನುಕೂಲವಾಗುತ್ತಿತ್ತು. ಗ್ರಾಹಕ ಹಕ್ಕು ನಿಯಮ ಇಂತಹುದರ ಕಡೆ ಕನಿಷ್ಠ ಗಮನವನ್ನೂ ತೆಗೆದುಕೊಂಡಿಲ್ಲ. 

ಹಿಂದೆಲ್ಲ ಒಂದು ಮಾತನ್ನು ಪದೇ ಪದೆ ಕೇಳುತ್ತಿದ್ದೆವು. ನಾವು ರೂಪಿಸುವ ವ್ಯವಸ್ಥೆ ಕೆಟ್ಟದಾಗಿಲ್ಲ. ಆದರೆ ಅದನ್ನು ನಿರ್ವಹಿಸುವ ವ್ಯಕ್ತಿಗಳು ಭ್ರಷ್ಟರಾಗಿರುವುದರಿಂದ ಸಮಸ್ಯೆ ಗಹನವಾಗುತ್ತಿದೆ. ಇದನ್ನು ಪ್ರಜಾಪ್ರಭುತ್ವ ಮಾದರಿಯಲ್ಲಿ ಹೆಚ್ಚು ಕಾಣುತ್ತಿದ್ದೇವೆ. ಆದರೆ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ವ್ಯಕ್ತಿಗಳ ಭ್ರಷ್ಟತೆಗಿಂತ ವ್ಯವಸ್ಥೆಯ ನಯವಂಚನೆ ಪ್ರಖರವಾಗಿ ಕಾಣುತ್ತಿದೆ. ತುಸು ಕಟುವಾದ ಪ್ರತಿಕ್ರಿಯೆ ಇದು. ಒಂದು ತ್ರೆ„ಮಾಸಿಕದಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದ ವರಮಾನ, ತನ್ನ ಉತ್ಪನ್ನಗಳನ್ನು ಮಾರಾಟ ಮಾಡಿದ್ದರಲ್ಲಿ ಬಂದಿದ್ದಕ್ಕಿಂತ ಗ್ರಾಹಕರ ಮೇಲೆ ಹಾಕಿದ ದಂಡ ಶುಲ್ಕದಿಂದ ಹೆಚ್ಚು ಬಂದಿತ್ತು ಎಂಬ ಉದಾಹರಣೆ ಆರೋಗ್ಯಕರ ಲಕ್ಷಣವಂತೂ ಅಲ್ಲ.

ದಂಡವೇ ದಂಢಿ!
ನೆನಪಿಸಿಕೊಳ್ಳುವುದಾದರೆ, 2017ರ ಏಪ್ರಿಲ್‌ನಿಂದ ನವೆಂಬರ್‌ ಅವಧಿಯಲ್ಲಿ ಸಾಮಾನ್ಯ ಉಳಿತಾಯ ಖಾತೆಯಲ್ಲಿ ನಿಗದಿತ ಕನಿಷ್ಠ ಶುಲ್ಕಕ್ಕಿಂತ ಕಡಿಮೆ ಮೊತ್ತ ಹೊಂದಲಾಗಿದೆ ಎಂಬ ಕಾರಣಕ್ಕಾಗಿ ಎಸ್‌ಬಿಐ ಸಂಗ್ರಹಿಸಿದ ಮೊತ್ತ 1,771 ಕೋಟಿ ರೂ, ವಾಸ್ತವವಾಗಿ ಇದು ಆ ಸಾಲಿನ ಎರಡನೇ ತ್ರೆ„ಮಾಸಿಕದ ಬ್ಯಾಂಕ್‌ನ ನಿವ್ವಳ ಆದಾಯ 1,581.55 ಕೋಟಿ ರೂ.ಗಿಂತ ಹೆಚ್ಚಿನದಾಗಿತ್ತು. 42 ಕೋಟಿ ಉಳಿತಾಯ ಖಾತೆಗಳನ್ನು ಹೊಂದಿರುವ ಈ ಬ್ಯಾಂಕ್‌, ಇದರಲ್ಲೂ 13 ಕೋಟಿ ಜನಧನ್‌, ಸರಳ ಖಾತೆಗಳಿಗೆ ಈ ದಂಡ ಶುಲ್ಕ ಹೇರಿರಲಿಲ್ಲ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ತನ್ನಲ್ಲಿರುವ ಪ್ರತಿ ಎಸ್‌ಬಿ ಖಾತೆಯಿಂದ ಸರಾಸರಿ 61 ರೂ.ಗಳನ್ನು ಅಯಾಚಿತವಾಗಿ ಬ್ಯಾಂಕ್‌ ಮುಟ್ಟುಗೋಲು ಹಾಕಿಕೊಂಡಂತೆ. ಇದರ ಜೊತೆ ಎಟಿಎಂ ಕಾರ್ಡ್‌ಗಾಗಿ ವಾರ್ಷಿಕ 125ರಿಂದ 300 ರೂ. ವಸೂಲಿ ಮಾಡುವುದು, ಎಟಿಎಂನ ಎಸ್‌ಎಂಎಸ್‌ ಶುಲ್ಕವಾಗಿ ಪ್ರತಿ ತ್ರೆ„ಮಾಸಿಕಕ್ಕೆ 30 ರೂ.ಗೆ ಕಡಿಮೆ ಇಲ್ಲದಂತೆ ಶುಲ್ಕ ವಿಧಿಸುವುದು ಮೊದಲಾದವುಗಳನ್ನು ಸೇರಿಸಲಾಗಿಲ್ಲ.

ಬ್ಯಾಂಕ್‌ಗಳಿಗೆ ತಮ್ಮಲ್ಲಿರುವ ಖಾತೆಗಳಿಗೆ ಶುಲ್ಕ, ದಂಡ ವಿಧಿಸುವುದು ಅತ್ಯಂತ ಸುಲಭದ ಕೆಲಸ. ವಸೂಲಿ ಮಾಡಬೇಕಾದ ದಂಡದ ಮೊತ್ತ, ಶುಲ್ಕವನ್ನು ಗ್ರಾಹಕನ ಖಾತೆಯಿಂದ ತೆಗೆದುಕೊಳ್ಳಲು ಅವರಿಗೆ ಅಡೆತಡೆ ಇಲ್ಲ. ದೊಡ್ಡ ದೊಡ್ಡ ಮೊತ್ತದ ಪ್ರಕರಣದಲ್ಲಿ ಗ್ರಾಹಕರು ಬ್ಯಾಂಕಿಂಗ್‌ ಒಂಬುಡ್ಸ್‌ಮನ್‌, ಇತರ ನ್ಯಾಯ ವ್ಯವಸ್ಥೆಗಳ ಮೊರೆ ಹೋಗುತ್ತಾರೆ. ಒಂದು 61 ರೂ.ಗಾಗಿ ಆಕ್ಷೇಪಿಸುವ ವಿಧಾನ ಕಾಲವ್ಯಯದ ಮೌಲ್ಯಕ್ಕಿಂತ ಕಡಿಮೆಯದಾಗಿದ್ದರೆ? ಇತ್ತ ಬ್ಯಾಂಕ್‌ ಮಾತ್ರ 1,771 ಕೋಟಿ ರೂ. ಆದಾಯಕ್ಕೆ ಹಕ್ಕುದಾರನಾಗುತ್ತದೆ!

ಮೇಲಿನ ಪ್ರಹಸನಗಳ ಹೊರತಾಗಿ ಭಾರತೀಯ ಬ್ಯಾಂಕಿಂಗ್‌ ಕ್ಷೇತ್ರದ ದೈತ್ಯ ಎಸ್‌ಬಿಐ, Åಹಕರ ಹಕ್ಕು ನಿಯಮ 2018ನ್ನು ಜಾರಿಗೊಳಿಸಿದೆ. ಈ ಹಿಂದೆ 2014-15ರಲ್ಲಿ ಹೊರಡಿಸಿದ್ದ ನಾಗರಿಕ ಸನದಿನ ಮತ್ತೂಂದು ಆವೃತ್ತಿಯಂತೆ ಇದು ಕಾಣುತ್ತದೆ. ಆವತ್ತು ನಾಗರಿಕ ಸನದು ಕೂಡ ಕಾನೂನಿನ ಇಕ್ಕಳದಲ್ಲಿ ಸಿಲುಕದಂತೆ ಇದ್ದಿದ್ದರಿಂದ ಅದರ ಪ್ರಯೋಜನ ಬ್ಯಾಂಕ್‌ ಗ್ರಾಹಕರಿಗೆ ಸಿಕ್ಕಿದ್ದು ಅಲ್ಪವೇ ಆಗಿತ್ತು. ಇದೂ ಕೂಡ 2014-15ರ ಆರ್‌ಬಿಐ ಸುತ್ತೋಲೆ (ಸಿಇಪಿಡಿ. ಸಿಓ. ಪಿಆರ್‌ಎಸ್‌ ನಂ.9957 20.60.001)ಯನ್ನು ಅನುಸರಿಸಿ ಜಾರಿಗೊಳಿಸಲಾಗಿದೆ.

ಸೌಕರ್ಯ ಹೆದರದ ಹಕ್ಕು!
ಇಂಥದೊಂದು ನಿಯಮಗಳ ಮುಖ್ಯಾಂಶವನ್ನು ವಿಶ್ಲೇಷಣೆ ಸಹಿತವಾಗಿ ನೋಡುವುದಾದರೆ, ಗ್ರಾಹಕ ಹಕ್ಕು ಎಂಬುದು ಬ್ಯಾಂಕ್‌ ಅಥವಾ ಅದರ ಪ್ರತಿನಿಧಿ ನೀಡುವ ಎಲ್ಲ ಉತ್ಪನ್ನ ಹಾಗೂ ಸೇವೆಗಳಿಗೆ ಅನ್ವಯಿಸುತ್ತದೆ. ಕೌಂಟರ್‌, ಪೋಸ್ಟ್‌, ಪೋನ್‌, ಎಲೆಕ್ಟ್ರಾನಿಕ್‌ ಮಾಧ್ಯಮ, ಅಂತಜಾìಲ ಹಾಗೂ ಇನ್ನಿತರ ಮಾಧ್ಯಮಗಳ ಮೂಲಕ ನೀಡಿದ ಸೇವೆಗೂ ಇದು ಲಾಗೂ ಆಗುತ್ತದೆ. ಇದು ಹೊಸದೇನನ್ನೋ ಹೇಳಿದಂತೇನೂ ಆಗಿಲ್ಲ. ಒಂದೇ ಒಂದು ಅನುಕೂಲವೆಂದರೆ, ಇದಕ್ಕೆ ನಾನು ಕಾರಣವಲ್ಲ ಎಂದು ಒಂದು ನಿರ್ದಿಷ್ಟ ಸೇವಾವ್ಯತ್ಯಯದತ್ತ ಬ್ಯಾಂಕ್‌ ಸಬೂಬು ಹೇಳಿದರೆ ಈ ನಿಯಮವನ್ನು ಉಲ್ಲೇಖೀಸಬಹುದು.

ಉತ್ಪನ್ನಗಳನ್ನು ಸ್ಥಗಿತಗೊಳಿಸಿದಾಗ, ಶಾಖೆಯನ್ನು ಸ್ಥಳಾಂತರಗೊಳಿಸಿದಾಗ, ಕೆಲಸ ಅವಧಿಯನ್ನು ಮಾರ್ಪಡಿಸಿದಾಗ, ದೂರವಾಣಿ ಸಂಖ್ಯೆಯನ್ನು ಬದಲಿಸಿದಾಗ ಅಥವಾ ಶಾಖೆ, ಕಚೇರಿಯನ್ನು ನಿಲುಗಡೆಗೊಳಿಸುವ ಸಂದರ್ಭದಲ್ಲೂ 30 ದಿನಗಳ ಪೂರ್ವ ಮಾಹಿತಿಯನ್ನು ಗ್ರಾಹಕರಿಗೆ ನೀಡಬೇಕು ಎಂಬುದು ಗ್ರಾಹಕನಿಗೆ ಲಭಿಸಿರುವ ಹಕ್ಕು. ಸೂಚನೆ ಇಲ್ಲದೆ ಗ್ರಾಹಕನ ಒಪ್ಪಂದವನ್ನು ಕಡಿತಗೊಳಿಸುವಂತಿಲ್ಲ. ಯಾವುದೇ ಉತ್ಪನ್ನಗಳ ಜಾಹೀರಾತು ಪ್ರಾದೇಶಿಕ ಭಾಷೆಯಲ್ಲಿ ಪಾರದರ್ಶಕವಾಗಿ ಹಾಗೂ ಯಾವುದೇ ಅಸ್ಪಷ್ಟತೆ ಇಲ್ಲದೆ ರೂಪಿತವಾಗಬೇಕು ಎಂದು ನೀತಿಯಲ್ಲಿ ಹೇಳಲಾಗಿದೆ. ತನ್ನ ಉತ್ಪನ್ನ ಅಥವಾ ಏಜೆನ್ಸಿಯಾಗಿ ತೆಗೆದುಕೊಳ್ಳುವ ಉತ್ಪನ್ನಗಳ ಖರೀದಿಗೆ ಒತ್ತಾಯಿಸುವಂತಿಲ್ಲ. ನಮ್ಮಲ್ಲಿ ಸಾಲ ಮಾಡಿದರೆ ಇದೇ ಕಂಪನಿಯ ವಿಮೆ ಮಾಡಿಸಿಕೊಳ್ಳಬೇಕು ಎಂಬುದ ಕಡ್ಡಾಯ ಮಾಡಲು ಅವಕಾಶವಿಲ್ಲ. ತನ್ನ ಉತ್ಪನ್ನದ ಬದಲಿಗೆ ನಿರ್ದಿಷ್ಟ ಬಾಹ್ಯ ಉತ್ಪನ್ನದ ಸದಸ್ಯತ್ವಕ್ಕೂ ಒತ್ತಾಯಿಸುವಂತಿಲ್ಲ. 

ದೂರುಗಳ ನಿರ್ವಹಣೆಗೆ ಪರಮಾವಧಿ 21 ದಿನಗಳನ್ನು ನಿಗದಿಪಡಿಸಲಾಗಿದೆ. ಇದರಲ್ಲಿ ಗ್ರಾಹಕ ದೂರಿಗೆ ಸಂಬಂಧಿಸಿದ ಆಂತರಿಕ ವಿಚಾರಣೆಯ ಅವಧಿ ಕೂಡ ಸೇರಿಸಲ್ಪಟ್ಟಿದೆ. ಆದರೆ ಮಾಸ್ಟರ್‌ ಕಾರ್ಡ್‌, ವೀಸಾ, ರುಪೇ ಮೊದಲಾದ ಕೆಲವು ನಿರ್ದಿಷ್ಟ ಸೇವಾ ದೂರುಗಳಲ್ಲಿ ಆಯಾ ವ್ಯವಸ್ಥೆಯಲ್ಲಿ ಹೇಳಿದ ಸಮಯ ಮಿತಿ ಅನ್ವಯವಾಗುತ್ತದೆಯೇ ವಿನಃ ಈ 21 ದಿನಗಳ ಕಟ್ಟುಪಾಡಲ್ಲ. ಉಳಿದಂತೆ ಎಲ್ಲ ಆಯಾಮಗಳ ಮಾಹಿತಿ ನೀಡಬೇಕು ಎಂಬುದನ್ನೇ ಗ್ರಾಹಕ ಹಕ್ಕು ಎಂದು ತೋರಿಸಲಾಗಿದೆ.

ಸನದಿನ ಹೊಸ ವೇಷ!
ಈ ಹಿಂದೆ ನಾಗರಿಕ ಸನದು ಕೂಡ ಪರಿಣಾಮ ಬೀರದಿರಲು ಅದು ಯಾವುದೇ ಪ್ರಮಾದಕ್ಕೆ ಜವಾಬ್ದಾರಿಯನ್ನು ನಿಗದಿಪಡಿಸದಿರುವುದೇ ಆಗಿತ್ತು. ಗ್ರಾಹಕನಿಗೆ ಮಾಹಿತಿ ತಲುಪಿಸಬೇಕು, ಮಾಹಿತಿ ಪಡೆಯುವುದು ಗ್ರಾಹಕ ಹಕ್ಕು ಎಂದು ಸದರಿ ನಿಯಮವೂ ಹೇಳುತ್ತದೆ. ಅದರಲ್ಲಿ ಉಲ್ಲಂಘನೆಯಾಗಿದೆ ಎಂದರೆ ಮಾಡಬೇಕಾಗಿರುವುದೇನು ಎಂಬ ಬಗ್ಗೆ ಸ್ಪಷ್ಟ ಉಲ್ಲೇಖವೇ ಇಲ್ಲ. ಬ್ಯಾಂಕಿಂಗ್‌ ಒಂಬುಡ್ಸ್‌ಮನ್‌, ಗ್ರಾಹಕ ಹಕ್ಕು ಕಾಯ್ದೆ ಸೌಲಭ್ಯಗಳು ಈ ಹಿಂದಿನಿಂದಲೂ ಇರುವಂಥದು. ಅದಕ್ಕಾಗಿ ಇಂತಹ ಗ್ರಾಹಕ ಹಕ್ಕು ನಿಯಮಗಳನ್ನು ರೂಪಿಸುವ ಅಗತ್ಯವೇ ಇರಲಿಲ್ಲ. 

ಇವತ್ತಿಗೂ ಬ್ಯಾಂಕ್‌ಗಳು ತಾವು ನೀಡಿದ್ದೇ ಪ್ರಸಾದ ಎಂಬ ಮನೋಭಾವವನ್ನು ಹೊಂದಿವೆ. ಇಂತಹ ಗ್ರಾಹಕರ ಹಕ್ಕು ನಿಯಮ ರೂಪಿಸುವಾಗ ಗ್ರಾಹಕರ ಕಡೆಯಿಂದಲೂ ಸಲಹೆಗಳನ್ನು ಸ್ವೀಕರಿಸಬೇಕು ಎಂದು ಯಾವ ಬ್ಯಾಂಕ್‌ಗೂ ಅನಿಸಿದಂತಿಲ್ಲ. ತಾನೇ ಖುದ್ದು ಪ್ರತಿ ಬ್ಯಾಂಕ್‌ನಲ್ಲಿ ಸಲಹೆ, ಸೂಚನೆ ನೀಡಲು ಒಂದು ಗ್ರಾಹಕ ಸಮಿತಿಯನ್ನು ರಚಿಸುವಂತೆ ಮಾಡಿದ್ದರೆ ಗ್ರಾಹಕ ಸೇವೆಯ ಗುಣಮಟ್ಟ ಹೆಚ್ಚಿಸಲು ಅನುಕೂಲವಾಗುತ್ತಿತ್ತು.

ಗ್ರಾಹಕ ಹಕ್ಕು ನಿಯಮ ಇಂತಹುದರ ಕಡೆ ಕನಿಷ್ಠ ಗಮನವನ್ನೂ ತೆಗೆದುಕೊಂಡಿಲ್ಲ. ಕೊನೆಪಕ್ಷ ದೇಶದ ಗ್ರಾಹಕ ಪರ ಸಂಘಟನೆಗಳ ಅಭಿಮತವನ್ನು ಪಡೆಯುವ ತ್ರಾಸವನ್ನೇ ತೆಗೆದುಕೊಳ್ಳದೆ ರೂಪಿಸಿರುವುದು ಕೇವಲ ತೋರ್ಪಡಿಕೆಯ ಗ್ರಾಹಕ ತ ಚಿಂತನೆ ಎನ್ನಿಸಿಕೊಳ್ಳುತ್ತದೆ. ಇದರಿಂದ ಏನನ್ನೂ ನಿರೀಕ್ಷಿ$ಸುವುದೇ ದೊಡ್ಡ ಕ್ರೆ„ಮ್‌!! 

 ನಿಯಮಗಳನ್ನು ಯಾರೂ ಪಾಲಿಸ್ತಾ ಇಲ್ಲ 
ಬ್ಯಾಂಕ್‌ ಗ್ರಾಹಕರಿಗೆ ಅನುಕೂಲಕರವಾದ ಸೇವಾ ದರ, ನಿಯಮದಲ್ಲಿ ಬದಲಾವಣೆಗಳನ್ನು ತಂದರೆ ಅದರ ಕುರಿತಾಗಿ ಒಂದು ತಿಂಗಳೊಳಗೆ ಮಾಹಿತಿ ನೀಡುವುದು ಕಡ್ಡಾಯವಾಗಿದೆ. ಅದೇ ವೇಳೆ ಗ್ರಾಹಕರನ್ನು ಬಾಧಿಸುವ ಬದಲಾವಣೆಯಾದರೆ ಒಂದು ತಿಂಗಳಿಗೆ ಮುಂಚಿತವಾಗಿಯೇ ತನ್ನ ಗ್ರಾಹಕನಿಗೆ ಮಾಹಿತಿ ನೀಡಿ ಅವರನ್ನು ಎಚ್ಚರಿಸಬೇಕಾಗುತ್ತದೆ. ಸದರಿ ಬದಲಾವಣೆ ಗ್ರಾಹಕನಿಗೆ ಸಮ್ಮತವಲ್ಲದ ಪಕ್ಷದಲ್ಲಿ ಆ ಉತ್ಪನ್ನದಿಂದ  ವರ್ಗಾವಣೆಗೊಳ್ಳಲು 60 ದಿನಗಳ ಅವಕಾಶ ಕಲ್ಪಿಸಬೇಕಾಗುತ್ತದೆ. ಮಾಹಿತಿಯನ್ನು ಬ್ಯಾಂಕ್‌ನ ಶಾಖೆಯಲ್ಲಿ, ಪತ್ರಿಕಾ ಪ್ರಕಟಣೆಯ ಮೂಲಕ ಅಥವಾ ಬ್ಯಾಂಕ್‌ ವೆಬ್‌ಸೈಟ್‌ನಲ್ಲಿ ನೀಡಲಾಗುತ್ತದೆ ಎಂಬ ಪ್ರತಿಪಾದನೆಯನ್ನೇ ನಾವು ಕಾಣುತ್ತೇವೆ. ಇಂದಿನ ಎಟಿಎಂ ಕಾರ್ಡ್‌ ಬಳಕೆ, ಆನ್‌ಲೈನ್‌ ಪಾವತಿಗಳ ಕಾಲದಲ್ಲಿ ಬ್ಯಾಂಕ್‌ಗೆ ಗ್ರಾಹಕ ಹೋಗುವುದು ಅಥವಾ ಬ್ಯಾಂಕ್‌ನ ವೆಬ್‌ ಮುಖಪುಟಕ್ಕೆ ಹೋಗುವುದನ್ನೋ ನಿರೀಕ್ಷಿಸಲಾಗದು. ಗ್ರಾಹಕನಿಗೆ ಮೇಲಿನ ಬದಲಾವಣೆಗಳನ್ನು ಮುಟ್ಟಿಸುವುದೇ ತಮ್ಮ ಆದ್ಯ ಕರ್ತವ್ಯ ಎಂದು ಬ್ಯಾಂಕ್‌ ಭಾವಿಸುವುದಾದರೆ ಗ್ರಾಹಕ ತನ್ನ ಕೆವೈಸಿಯಲ್ಲಿ ಒದಗಿಸಿರುವ ಮೊಬೈಲ್‌ ಸಂಖ್ಯೆಗೆ ಎಸ್‌ಎಂಎಸ್‌ ಮಾಡುವುದು ಅಥವಾ ಒದಗಿಸಿರುವ ಇ ಮೈಲ್‌ ಐಡಿಗೆ ಮಾಹಿತಿ ಪತ್ರ ಹಾಕುವುದು ಕಷ್ಟವಲ್ಲ. ಎಲ್ಲೋ ಒಂದು ಕಡೆ ಬ್ಯಾಂಕ್‌ಗಳ ಗ್ರಾಹಕ ಹಿತ ರಕ್ಷಣಾ ಮನೋಭಾವವೇ ಅನುಮಾನಾಸ್ಪದವಾಗಿ ಕಾಣುವುದು ಈ ಕಾರಣದಿಂದ. ಈ ಮಾತನ್ನು ಕೇವಲ ಎಸ್‌ಬಿಐಗೆ ಮಾತ್ರ ಅನ್ವಯಿಸಬೇಕಾಗಿಲ್ಲ, ಇಡೀ ಬ್ಯಾಂಕಿಂಗ್‌ ಕ್ಷೇತ್ರದತ್ತಲಿನ ಶಂಕೆ ಇದು.

-ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.