ಈ ಸ್ಪೋರ್ಟ್ಸ್ ಕಾರು ಭಾರೀ ದುಬಾರಿ


Team Udayavani, Jul 30, 2018, 12:39 PM IST

car.png

– ಜೊಂಡಾ ಎಚ್‌ಪಿ ಬರ್ಚೆಟ್ಟ ಪರಿಚುಸಿದ ಪಗಾನಿ
– ಶ್ವದಲ್ಲಿ ಇದಕ್ಕಿಂತ ತುಟ್ಟಿ ಕಾರು ಮತ್ತೂಂದಿಲ್ಲ

ಜಮಾನ ಬಲು ದುಬಾರಿ ಕಣ್ರೀ!
ಹೀಗೆಂದಾಗ ಎದುರಿಗಿರುವವರು ಹೌದಪ್ಪಾ ಹೌದು, ಎಲ್ಲವೂ ದುಬಾರಿಯಾಗಿಬಿಟ್ಟಿವೆ’ ಎಂದು ತಲೆದೂಗುವುದು ಈ ದಿನಗಳಲ್ಲಿ ಸರ್ವೇ ಸಾಮಾನ್ಯ. ಹಿರಿಯರಾದರಂತೂ ಅವರ ಪ್ರತಿಕ್ರಿಯೆ ಹೀಗಿರುತ್ತದೆ. “ಅಯ್ಯೋ, ನಮ್ಮ ಕಾಲದಲ್ಲಿ ಹೀಗೆಲ್ಲಾ ಇರಲಿಲ್ಲಪ್ಪ, ಅಷ್ಟಕ್ಕೂ ಯಾಕ್ರೀ ಬೇಕು ಅಷ್ಟೊಂದು ದುಬಾರಿ ಲೈಫ‌ು” ಎಂದು ಮಾರುದ್ದ ಭಾಷಣ ಮಾಡಿ ಹೋಗುವುದೂ ಉಂಟು. ಆದರೆ ಲೈಫ‌ು ಹೀಗೆನ್ನುತ್ತಲೇ ಅವರು, ಇರಬೇಕೆಂದು ನಿರ್ಧಾರವಾಗಿದ್ದರೆ, ಬದಲಾಯಿಸಿಕೊಳ್ಳಲು ಯಾರಾದ್ರು ರೆಡಿಯಾಗ್ತಾರಾ? ಬದಲಾಯಿಸಿಕೊಂಡಿರುವ ಉದಾಹರಣೆಯೂ ಕಡಿಮೆ.

ಅದರಲ್ಲೂ ಕಳೆದೆರಡು ದಶಕಗಳಿಂದೀಚೆಗೆ ಜೀವನದ ಬಗ್ಗೆ ಕನಸು ನನಸಾಗಿಸಿಕೊಳ್ಳುವ ನಿಟ್ಟಿನಲ್ಲಿ ಯುವಕ -ಯುವತಿಯರು ತಮ್ಮ ಲೈಫ್ ಬಗ್ಗೆ ವಿಶೇಷವಾದ ಯೋಜನೆಯನ್ನೇ ಸಿದ್ಧಪಡಿಸಿಕೊಂಡಿರುತ್ತಾರೆ. ಆ ಪ್ರಕಾರವೇ ಜೀವನ ಸಾಗುವಂತೆ ನೋಡಿಕೊಳ್ಳುವಲ್ಲು, ಕಾಳಜಿವಹಿಸುವಲ್ಲೂ ಮುತುವರ್ಜಿ ವಹಿಸುತ್ತಾರೆ. ಇಂದಿನ ದುಬಾರಿ ಜಮಾನದಲ್ಲೂ ತಮ್ಮೆಲ್ಲಾ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುತ್ತಾರೆ. ಕ್ರೇಜಿ ಬದುಕನ್ನೇ ನಡೆಸುತ್ತಾರೆ. ಅವರ ಆಯ್ಕೆ, ಬಳಕೆ ಸೇರಿದಂತೆ ಜೀವನ ಶೈಲಿಯೇ ನಮಗೆ ಅತಿ ಭಿನ್ನವಾಗಿ ಕಾಣಿಸುತ್ತದೆ. ಅಚ್ಚರಿ ಮೂಡಿಸುತ್ತದೆ. ಗಾಬರಿಯಾಗಿಸಿ, ನಿಬ್ಬೆರಗಾಗಿಸುವ ಸಾಧ್ಯತೆಯೂ ಇರುತ್ತದೆ.

ಇಂಥ ಕ್ರೇಜಿಗಳಿಗೆಂದೇ ಇಟಲಿಯ ಜನಪ್ರಿಯ ನ್ಪೋರ್ಟ್ಸ್ ಕಾರುಗಳ ತಯಾರಿಕಾ ಸಂಸ್ಥೆ ಪಗಾನಿ, ಹೊಚ್ಚ ಹೊಸ, ಅತ್ಯಾಧುನಿಕ ತಂತ್ರಜಾnನದ, ವಿಶ್ವದಲ್ಲೇ ಅತಿ ದುಬಾರಿಯಾದ ಕಾರೊಂದನ್ನು ತಯಾರಿಸಿ ಪ್ರದರ್ಶಿಸಿದೆ. ಈ ಮೂಲಕ ಪ್ರಪಂಚದ ಕ್ರೇಜಿಗಳ ಗಮನ ಸೆಳೆದಿದೆ. ಭಿನ್ನ ವಿನ್ಯಾಸದಲ್ಲಿ ತಯಾರಾದ ಜೊಂಡಾ ಎಚ್‌ಪಿ ಬರ್ಚೆಟ್ಟ’ ಕಾರನ್ನು ಲಂಡನ್‌ನಲ್ಲಿ ನಡೆಯುತ್ತಿರುವ ಈ ಸಾಲಿನ ಗುಡ್‌ವುಡ್‌ ಆಟೋ ಫೆಸ್ಟ್‌ನಲ್ಲಿ ಅನಾವರಣಗೊಳಿಸಿದೆ. ಮುಂದಿನ ಸಾಲನ್ನು ಉಸಿರು ಬಿಗಿಹಿಡಿದು ಕೊಂಡೇ ಓದಿರಿ; ಈ ಕಾರಿನ ಬೆಲೆ ಬರೋಬ್ಬರಿ 21 ಕೋಟಿ ರೂಪಾಯಿ.

ಹಾಗಾದರೆ ಅಂತದ್ದೇನಿದೆ ಎಂದು ಮೂಗು ಮುರಿದು ನಿರ್ಲಕ್ಷಿಸುವಂತಿಲ್ಲ. ಕಡೇ ಪಕ್ಷ ಆಟೋಮೊಬೈಲ್‌ ಆಸಕ್ತರು, ಕಾರು ಪ್ರಿಯರಂತೂ ತಿಳಿದಿರುವ ಅನೇಕ ವಿಶೇಷತೆಗಳನ್ನು ಈ ಕಾರಿನಲ್ಲಿ ನೋಡಲು ಸಾಧ್ಯ. ಸದ್ಯಕ್ಕೆ ಲಿಮಿಟೆಡ್‌ ಎಡಿಷನ್‌ ಎಂದು ಪ್ರಮೋಷನ್‌ಗಾಗಿ ಕೇವಲ ಮೂರು ಕಾರುಗಳನ್ನಷ್ಟೇ ತಯಾರಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
 
ವಿನ್ಯಾಸ ಅನನ್ಯ
ಕಾರಿನ ವಿನ್ಯಾಸ ವಿಭಿನ್ನವಾಗಿದೆ. ನ್ಪೋರ್ಟ್‌ ಕಾರುಗಳ ತಯಾರಿಕಾ ಸಂಸ್ಥೆ ಇದನ್ನು ತಯಾರಿಸಿದ್ಧರಿಂದ ಬಾಹ್ಯ ವಿನ್ಯಾಸ ರೇಸ್‌ ಕಾರುಗಳದ್ದೇ ಆಗಿದೆ. ಎಲ್ಲಾ ಭಾಗಗಳ ಶಾರ್ಪ್‌ನೆಸ್‌ ವಿಶ್ವದ ನ್ಪೋರ್ಟ್‌ ಕಾರುಗಳನ್ನು ತಯಾರಿಸುವ ಪ್ರತಿಷ್ಠಿತ ಕಂಪನಿಗಳಿಗೆ ಸವಾಲೊಡ್ಡುವಂತಿದೆ. ಆದರೆ ಪಗಾನಿ ಸಂಸ್ಥೆ ತನ್ನ ಜೊಂಡಾ ಸರಣಿಯ ಈ ಮೊದಲ ಕಾರುಗಳಿಗಿಂತಲೂ ಭಾರೀ ಬದಲಾವಣೆಯನ್ನೇನೂ ಮಾಡಿರುವುದು ಕಂಡುಬರುವುದಿಲ್ಲ. ಇನ್ನಷ್ಟು ಶಾರ್ಪ್‌ ಮಾಡುವಲ್ಲಿ ಗಮನ ಹರಿಸಿದೆ ಎನ್ನಬಹುದು. ಉಳಿದಂತೆ ವಿಶ್ವದ ಎಲ್ಲಾ ದುಬಾರಿ ನ್ಪೋರ್ಟ್ಸ್ ಕಾರುಗಳಲ್ಲಿರುವ ಅತ್ಯಾಧುನಿಕ ತಂತ್ರಜಾnನವನ್ನೇ ಇದರಲ್ಲಿಯೂ ಬಳಸಿಕೊಳ್ಳಲಾಗಿದೆ. ಡ್ಯಾಶ್‌ಬೋರ್ಡ್‌ನಲ್ಲೇ ನೂರಾರು ಆಪ್ಶನ್‌ಗಳನ್ನು ನೀಡಲಾಗಿದ್ದು, ಇನ್ನಷ್ಟು ಚಾಲಕ ಸ್ನೇಹಿಯಾಗಿರುವಂತೆ ಮುತುವರ್ಜಿ ವಹಿಸಲಾಗಿದೆ. ಮರ್ಸಿಡಿಸ್‌ ಬೆಂಜ್‌ ಕಾರುಗಳನ್ನು ವಿನ್ಯಾಸಗೊಳಿಸಿದ್ದ ಹೊರಾಶಿಯೋ ಈ ಕಾರನ್ನು ವಿನ್ಯಾಸಗೊಳಿಸಿದ್ದಾರೆ. ಅಷ್ಟೇ ಅಲ್ಲ, ಪಗಾನಿ ತಯಾರಿಸಿದ ಮೂರು ಕಾರುಗಳಲ್ಲಿ ಒಂದನ್ನು ಹೊರಾಶಿಯೋ ಅವರೇ ಕೊಂಡುಕೊಂಡಿದ್ದಾರೆ. ಉಳಿದ ಎರಡು ಕಾರುಗಳೂ ಈಗಾಗಲೇ ಮಾರಾಟವಾಗಿವೆ.

ಎಂಜಿನ್‌ ಸಾಮರ್ಥ್ಯ
ಈ ಬಗ್ಗೆ ಪಿನ್‌ ಟು ಪಿನ್‌ ಮಾಹಿತಿ ಬೇಕಾಗಿಲ್ಲ. ಕಾರಣ, ಇದು ನ್ಪೋರ್ಟ್ಸ್ ಕಾರು ಎಂದ ಮೇಲೆ ವೇಗವಾಗಿ ಓಡುವ ಹಾಗೂ ಅಷ್ಟೇ ಸುರಕ್ಷಿ$ತವಾಗಿ ನಿಲ್ಲಿಸುವ ಎಲ್ಲಾ ತಂತ್ರಜಾnನಗಳನ್ನೂ ಅಳವಡಿಸಿರುವುದರಲ್ಲಿ ಅನುಮಾನವಿಲ್ಲ. ಜೊಂಡಾ ಎಚ್‌ಪಿ ಬರ್ಚೆಟ್ಟ, 7.3 ಲೀಟರ್‌ನ 7,300 ಸಿಸಿ ಭಲೇ ಸಾಮರ್ಥ್ಯದ ಕಾರಾಗಿದೆ. ಈ ಕಾರಿನಲ್ಲಿ ಮರ್ಸಿಡಸ್‌ ಎಎಂಜಿ ಎ120 12 ಎಂಜಿನ್‌ ಬಳಕೆ ಮಾಡಲಾಗಿದೆ. 6ಸ್ಪೀಡ್‌ ಗೇರ್‌ಬಾಕ್ಸ್‌ ನೊಂದಿಗೆ 789ಬಿಎಚ್‌ಪಿ ಶಕ್ತಿಯನ್ನು ಉತ್ಪಾದಿಸುವ ಈ ಎಂಜಿನ್‌ಗೆ ಇರುವುದರಿಂದ ವೇಗ ಮತ್ತು ಬಲ ಎರಡೂ ಜಾಸ್ತಿ. ಕೇವಲ 3.1 ಸೆಕೆಂಡ್‌ಗಳಲ್ಲಿ 0ದಿಂದ 100 ಕಿ.ಮೀ. ವೇಗ ಪಡೆದುಕೊಳ್ಳಬಲ್ಲದು. ಪ್ರತಿಗಂಟೆಗೆ 355ಕಿ.ುà. ಗರಿಷ್ಠ ವೇಗದ ಮಿತಿ ನೀಡಲಾಗಿದೆ. ಅಂದರೆ ಊಹಿಸಿಕೊಳ್ಳಿ, ಫಾರ್ಮುಲಾ ಒನ್‌ ರೇಸ್‌ಗಳಲ್ಲಿ ಬಳಸಿಕೊಳ್ಳಲಾಗುವ ಕಾರಿನ ವೇಗದಲ್ಲೇ ಚಲಿಸಲು ಸಾಧ್ಯ.

ಸುರಕ್ಷತೆಗೆ ತಂತ್ರಜಾnನದ ಬಲ
ವೇಗದ ಮಿತಿ ಹಾಗೂ ಕಾಸಿಗೆ ತಕ್ಕ ಕಜಾjಯ ಎನ್ನುವಂತೆ ಜೊಂಡಾ ಎಚ್‌ಪಿ ಬರ್ಚೆಟ್ಟ ಕಾರಿನ ಸುರಕ್ಷತೆಯ ಗುಣಮಟ್ಟವನ್ನು ಸಾಕಷ್ಟು ಹೆಚ್ಚಿಸಲಾಗಿದೆ. ಹೈಪರ್‌ ಕಾರು ಇದಾಗಿದ್ದರಿಂದ ಚಕ್ರಗಳ ವೇಗವನ್ನು ಹತೋಟಿಗೆ ತರಲು ಶ್‌ಬೋನ್ಸ್‌, ರಾಕರ್‌ ಆರ್ಮ್ಗಳನ್ನು, ಒಹೋಲೈನ್‌ ಶಾರ್ಕ್ಸ್, ಆಂಟಿ ರೂಲರ್‌ ಬಾರ್‌, 380ು.ುà. ಬ್ರೇಕ್‌ಗಳ ಜತೆ ವೆಂಟಿಲೇಟೆಡ್‌ ಡಿಸ್ಕ್ಗಳನ್ನು ಬಳಸಿಕೊಳ್ಳಲಾಗಿದೆ. ಮುಂಭಾಗದಲ್ಲಿ 6ಪಿಸ್ಟನ್‌ ಕಾಲಿಪರ್ಸ್‌, ಹಿಂಭಾಗದಲ್ಲಿ ಫ್ಲೋರ್‌ ಪಿಸ್ಟನ್‌ ಕಾಲಿಪರ್ಸ್‌ಗಳನ್ನು ಬಳಸಿಕೊಳ್ಳಲಾಗಿದೆ. ಹೀಗಾಗಿ ಕಾರು ಎಷ್ಟೇ ವೇಗದಲ್ಲಿ ಓಡುತ್ತಿದ್ದರೂ ಸೆಕೆಂಡ್‌ಗಳ ಲೆಕ್ಕಾಚಾರದಲ್ಲಿ ಹತೋಟಿಗೆ ಪಡೆದುಕೊಳ್ಳುವ ಅವಕಾಶ ನೀಡಲಾಗಿದೆ. ಇವೆಲ್ಲವೂ ಚಾಲಕ ಸ್ನೇಯಾಗಿವೆ ಎನ್ನುವುದು ಕಂಪನಿಯ ಅಂಬೋಣ.

ಜೊಂಡಾ ಎಚ್‌ಪಿ ಬರ್ಚೆಟ್ಟ ಕಾರಿನ ಬೆಲೆ: 12 ಕೋಟಿ ರೂ.

ಹೈಲೈಟ್ಸ್‌
– ಟಾಪ್‌ಲೆಸ್‌ ನ್ಯಾಸವೇ ಸ್ಪೆಷಲ್‌
– ಇಬ್ಬರು ಮಾತ್ರ ಕುಳಿತುಕೊಳ್ಳಲು ಸಾಧ್ಯ
– ವಿಶ್ವದ ಅತ್ಯಂತ ದುಬಾರಿ ಕಾರು ಎಂಬ ಹೆಗ್ಗಳಿಕೆ

– ಗಣಪತಿ ಅಗ್ನಿಹೋತ್ರಿ

ಟಾಪ್ ನ್ಯೂಸ್

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

arvind kejriwal aap

Lok Sabha Election; ಕೇಜ್ರಿವಾಲ್‌ ಸೆರೆ‌ ಆಪ್‌ಗೆ ವರವೇ? ಶಾಪವೇ?

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

arvind kejriwal aap

Lok Sabha Election; ಕೇಜ್ರಿವಾಲ್‌ ಸೆರೆ‌ ಆಪ್‌ಗೆ ವರವೇ? ಶಾಪವೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.