ಟೊಯೋಟೊ ಸುಜುಕಿ ಭಾಯಿ ಭಾಯಿ


Team Udayavani, Aug 13, 2018, 6:00 AM IST

agni-1.jpg

ಎರಡು ಸಂಸ್ಥೆಗಳ ಬ್ರಾಂಡ್‌ ನೇಮ್‌ನಲ್ಲಿ ಬೈಕ್‌, ಕಾರುಗಳನ್ನು ಪರಿಚಯಿಸಿದ ಉದಾಹರಣೆಗಳು ಒಂದಲ್ಲ, ಎರಡಲ್ಲ, ನೂರಾರು ಸಿಗುತ್ತವೆ. ಹಾಗೇ, ಭಾರತದ ಆಟೋಮೊಬೈಲ್‌ ಕ್ಷೇತ್ರಕ್ಕೂ ಇಂಥ ಒಪ್ಪಂದ ಹೊಸದೇನಲ್ಲ.

ಆದರೆ, ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದು ಟೊಯೋಟ ಮತ್ತು ಸುಜುಕಿ (ಮಾರುತಿ ಪಾಲುದಾರಿಕೆ ಸಂಸ್ಥೆ) ಸಂಸ್ಥೆಗಳ ನಡುವೆ ನಡೆದ ಒಪ್ಪಂದ.

ಭಾರತದ ಆಟೋಮೊಬೈಲ್‌ ಮಾರುಕಟ್ಟೆಯ ಬಹುಪಾಲನ್ನು ಆವರಿಸಿಕೊಂಡಿರುವ ಈ ಎರಡು ಸಂಸ್ಥೆಗಳು ಈಗ ಕೈಜೋಡಿಸಿ, ಮಾರುಕಟ್ಟೆ ವಿಸ್ತರಣೆಗೆ ಮುಂದಾಗಿರುವುದು ಸಂಚಲನಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ, ಈ ಎರಡೂ ಸಂಸ್ಥೆಗಳ ಗ್ರಾಹಕರು ಹಾಗೂ ಹೊಸದಾಗಿ ಕಾರು ಕೊಳ್ಳಬೇಕೆಂದಿರುವವರಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿವೆ. 

ಯಾಕಾಗಿ ನಡೆದಿದೆ ಒಪ್ಪಂದ?
ಟೊಯೋಟ ಅಥವಾ ಸುಜುಕಿ ಕಂಪನಿಗೆ ಈ ಒಪ್ಪಂದದಿಂದ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಸಾಧ್ಯವಾಗಿಬಿಡುತ್ತದೆ ಎಂದೇನೂ ಇಲ್ಲ. ಕಾರಣ, ಎರಡೂ ಕಂಪನಿಗಳೂ ತನ್ನದೇ ಬ್ರಾಂಡ್‌ ಮೌಲ್ಯ ಹೊಂದಿವೆ. ಈ ನಡುವೆಯೂ ಉದ್ಯಮದಲ್ಲಿ ಸ್ಥಿರ ಏಳ್ಗೆ ಕಾಯ್ದುಕೊಳ್ಳುವ ಕಾರಣಕ್ಕಾಗಿ ಈ ಒಪ್ಪಂದ ಮಾಡಿಕೊಂಡಿವೆ ಎನ್ನಲೇನಡ್ಡಿಯಿಲ್ಲ.

ಒಪ್ಪಂದದ ಪ್ರಕಾರ, ಸುಜುಕಿ ಸಂಸ್ಥೆ ಜನಪ್ರಿಯ ಮಾಡೆಲ್‌ ಆಗಿರುವ ಬಲೆನೋ ಮತ್ತು ವಿತಾರಾ ಬ್ರಿàಝಾವನ್ನು ಮಾರಾಟ ಮಾಡುವ ಮತ್ತು ಅದರದೇ ಪ್ಲಾಂಟ್‌ನಲ್ಲಿ ತಯಾರಿಸುವ ಹಕ್ಕು ಹಂಚಿಕೊಂಡಿದ್ದರೆ, ಟೊಯೋಟ ತನ್ನ ಹೈಬ್ರಿàಡ್‌ ಸೆಡಾನ್‌ ಕೊರೊಲಾವನ್ನು ತಯಾರಿಸುವ ಹಾಗೂ ಮಾರಾಟ ಮಾಡುವ ಹಕ್ಕು ಹಂಚಿಕೊಂಡಿದೆ. ಅದರರ್ಥ, ಈ ಕಾರುಗಳು ಇನ್ನು ಮುಂದೆ ಎರಡೂ ಸಂಸ್ಥೆಗಳ ಶೋ ರೂಂನಲ್ಲಿ ಲಭ್ಯವಾಗಲಿವೆ. ಒಂದು ಹಂತದಲ್ಲಿ ಈ ಮೂರು ಕಾರುಗಳ ಬೆಲೆಯಲ್ಲೂ ಸಣ್ಣ ಪ್ರಮಾಣದ ವ್ಯತ್ಯಾಸವಾಗುವ ಎಲ್ಲಾ ಸಾಧ್ಯತೆಗಳಿವೆ.

ಭಾರತೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೊಂದಿರುವ ಸೆಗೆ¾ಂಟ್‌ ಕಾರುಗಳನ್ನೇ ಗುರಿಯಾಗಿಸಿಕೊಂಡು, ಕಾರುಗಳ ತಯಾರಿಕೆ ಹಾಗೂ ಮಾರುಕಟ್ಟೆಗೆ  ಅನುಕೂಲವಾಗುವಂತೆ ಈ ಒಪ್ಪಂದ ಏರ್ಪಟ್ಟಿದೆ.

ಕ್ರಾಸ್‌ ಬ್ಯಾಡ್ಜ್ ನ್ಯೂ ಬ್ರಾಂಡ್‌
ಇನ್ನು, ಮುಂದೆ ಈ ಮೂರು ಕಾರುಗಳ ಮೇಲೆ ಎರಡೂ ಸಂಸ್ಥೆಗಳ ಹೆಸರುಗಳು ಇರಲಿವೆ. ಸುಜುಕಿ ಮತ್ತು ಟೊಯೋಟ ಲೋಗೋ ಒಟ್ಟೊಟ್ಟಿಗೇ ಇರಲಿವೆ. ಈ ಒಪ್ಪಂದದಿಂದ ಟೊಯೋಟ ಸಂಸ್ಥೆಗೆ ಬಲೆನೋ ಮತ್ತು ಬ್ರಿàಝಾ ಕಾರುಗಳ ಬ್ರಾಂಡ್‌ ಜನಪ್ರಿಯತೆ ಹೆಚ್ಚುವ ಹಾಗೂ ಅದೇ ಕಾರಣದಿಂದ ಆ ಕಾರುಗಳ ಮಾರಾಟ ಕೂಡ ಏರುಗತಿಯಲ್ಲಿ ಸಾಗುವ ಸಾಧ್ಯತೆಗಳಿವೆ.  ಹಾಗೇ ಸುಜುಕಿ ಕೂಡ ಒಂದು ಉತ್ತಮ ಸೆಡಾನ್‌ ಕಾರಿನ ಮೂಲಕ ಮಾರುಕಟ್ಟೆಯಲ್ಲಿ ಇನ್ನಷ್ಟು ಗಟ್ಟಿಯಾಗಿ ನಿಲ್ಲುವ ನಿರೀಕ್ಷೆಯಲ್ಲಿದೆ. ಒಂದಂತೂ ಖರೆ, ಈ ಒಪ್ಪಂದದಿಂದ ಈ ಮೂರು ಕಾರುಗಳಲ್ಲಿ ಒಂದಿಷ್ಟು ಬದಲಾವಣೆ ನಿರೀಕ್ಷಿಸಬಹುದಾಗಿದೆ.

ಕರ್ನಾಟಕದ ಪಾಲಿಗೆ ಬಲೆನೋ ಗರಿ
ಮಾರುತಿ ಸುಜುಕಿ ಅವರ ಜನಪ್ರಿಯ ಕಾರು ಬಲೆನೋ ತಯಾರಿಕೆಗೆ ಕರ್ನಾಟಕ ವೇದಿಕೆಯಾಗಲಿದೆ. ಹೌದು, ಟೊಯೋಟ ಕಂಪನಿಯು ಬಲೆನೋ ತಯಾರಿಕೆಗೆ ಬಿಡದಿಯಲ್ಲಿರುವ ಪ್ಲಾಂಟ್‌ನಲ್ಲಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ.

ಒಪ್ಪಂದ ಮೊದಲೇನಲ್ಲ
ಎರಡು ಪ್ರತಿಷ್ಠಿತ ಸಂಸ್ಥೆಗಳ ನಡುವಿನ ಒಪ್ಪಂದ ಇದೇ ಮೊದಲೇನಲ್ಲ. ಕೆಲವೇ ತಿಂಗಳುಗಳ ಹಿಂದಷ್ಟೇ, ಎಲೆಕ್ಟ್ರಿಕ್‌ ಕಾರುಗಳ ತಯಾರಿಕೆಗಾಗಿ ಟೊಯೋಟ ಮತ್ತು ಸುಜುಕಿ ಒಪ್ಪಂದ ಮಾಡಿಕೊಂಡಿದ್ದವು. ಅದಾದ ಬಳಿಕ ಮಹತ್ವದ ಮತ್ತೂಂದು ಒಪ್ಪಂದಕ್ಕೆ ಎರಡೂ ಸಂಸ್ಥೆಗಳ ನಡುವೆ ಒಪ್ಪಂದ ನೆರವೇರಿದೆ. ಒಂದು ಮೂಲದ ಪ್ರಕಾರ, ಟೊಯೋಟ ಸಹಕಾರದೊಂದಿಗೆ ಮಾರುತಿ ಸುಜುಕಿ ಅವರ ಎಲೆಕ್ಟ್ರಿಕ್‌ ಕಾರು 2021ರ ಒಳಗಾಗಿ ಮಾರುಕಟ್ಟೆ ಪ್ರವೇಶಿಸಲಿವೆ.

30,000: ಪ್ರತಿ ತಿಂಗಳಲ್ಲಿ ಬಲೆನೋ ಮತ್ತು ಬ್ರಿàಝಾ ಕಾರುಗಳ ಸರಾಸರಿ ಮಾರಾಟ
2,80,000: 11 ತಿಂಗಳಲ್ಲಿ ಮಾರಾಟವಾದ ಬಲೆನೋ ಮತ್ತು ಬ್ರಿಝಾ

– ಗಣಪತಿ ಅಗ್ನಿಹೋತ್ರಿ

ಟಾಪ್ ನ್ಯೂಸ್

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.