ಡಿಜಿ ಲಾಕರ್‌; ಈಗಲೂ ಕಾಡುತ್ತಿದೆ ಅಸುರಕ್ಷತೆಯ ಭಯ!


Team Udayavani, Aug 20, 2018, 6:00 AM IST

5.jpg

ಡಿಜಿಲಾಕರ್‌ನಲ್ಲಿನ ದಾಖಲೆ ಬೇರೆಯವರು ಕದ್ದು ನೋಡದಷ್ಟು ಸುರಕ್ಷಿತವೇ ಎಂಬ ಪ್ರಶ್ನೆಯನ್ನು ಇಡೀ ದೇಶ ಕೇಳುತ್ತಿದೆ. ಮೊನ್ನೆ ಮೊನ್ನೆ ಆಧಾರ್‌ ಸುರಕ್ಷಿತತೆಯನ್ನು ಪ್ರತಿಪಾದಿಸಲು ಹೊರಟ ದೂರವಾಣಿ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷ ಆರ್‌.ಎಸ್‌.ಶರ್ಮ, ತಮ್ಮ ಆಧಾರ್‌ ಸಂಖ್ಯೆಯನ್ನು ಬಹಿರಂಗಪಡಿಸಿ ಆಧಾರ್‌ ಸುರಕ್ಷತೆ ಪ್ರಶ್ನಿಸುವವರಿಗೆ ಸವಾಲು ಹಾಕಿದ್ದರು. ಈ ಸವಾಲು ಸ್ವೀಕರಿಸಿದ ಹ್ಯಾಕರ್‌ಗಳು ಅದರಿಂದ ಅವರ ಹತ್ತುಹಲವು ಮಾಹಿತಿಗಳನ್ನು ಬರಂಗಪಡಿಸಿ ಖುದ್ದು ಶರ್ಮ ಅವರೇ ಚಡಪಡಿಸುವಂತೆ ಮಾಡಿದ್ದರು.

ಪತ್ರಿಕೆಗಳಲ್ಲಿ ಒಂದು ಪುಟ್ಟ ಜಾಹೀರಾತು ಆಗೊಮ್ಮೆ ಈಗೊಮ್ಮೆ ನೋಡಲು ಸಿಗುವುದುಂಟು. ಬಸ್‌ ನಿಲ್ದಾಣದಲ್ಲಿ ಓರ್ವ ವ್ಯಕ್ತಿಯ ಹ್ಯಾಂಡ್‌ ಬ್ಯಾಗ್‌ ಕಳೆದುಹೋಗಿದೆ. ಇದರಲ್ಲಿ ಅಂಕಪಟ್ಟಿ ಸೇರಿದಂತೆ ಅತಿ ಮುಖ್ಯ ದಾಖಲೆಗಳು ಇದ್ದವು. ಇದನ್ನು ಈ ವಿಳಾಸಕ್ಕೆ ಮರಳಿಸಿದವರಿಗೆ ಆಕರ್ಷಕ ಬಹುಮಾನ ನೀಡಲಾಗುವುದು. ಈ ಆಧುನಿಕ ಕಾಲದಲ್ಲಿ ಈ ದಾಖಲೆಗಳನ್ನು ಡಿಜಿಟಲ್‌ ಸ್ವರೂಪದಲ್ಲಿ ಇಡಬಹುದು ಎಂಬುದು ಹಲವರಿಗೆ ಗೊತ್ತಿದೆ. ಆದರೆ, ಅದನ್ನು ಅಧಿಕೃತ ದಾಖಲೆ ಎಂದು ಪರಿಗಣಿಸದಿದ್ದರೆ ಮತ್ತೆ ಸಮಸ್ಯೆಯಾಗುತ್ತದೆ. ನಮ್ಮ ವಾಹನ ಚಾಲನೆಯ ಪರವಾನಗಿಯ ದಾಖಲೆಯನ್ನು ಡಿಜಿಟಲ್‌ ಸ್ವರೂಪದಲ್ಲಿಟ್ಟುಕೊಂಡರೂ ವಾಹನವನ್ನು ರಸ್ತೆ ಮಧ್ಯೆ ನಿಲ್ಲಿಸುವ ಪೊಲೀಸ್‌ ಅಥವಾ ಸಾರಿಗೆ ಇಲಾಖೆ ಅಧಿಕಾರಿ ಅದನ್ನು ಮಾನ್ಯ ಮಾಡದಿದ್ದರೆ ಪ್ರಯೋಜನವೇನು? ಇಂತಹ ಸಮಸ್ಯೆಗಳಿಗೆ ಪರಿಹಾರದ ಸ್ವರೂಪವಾಗಿಯೇ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು ಡಿಜಿ ಲಾಕರ್‌ ವ್ಯವಸ್ಥೆ. digilocker.gov.in, ಇದು ಅಧಿಕೃತ.

ಸರಳ ಡಿಜಿ ಲಾಕರ್‌
2016ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಡಿಜಿ ಲಾಕರ್‌ ಮೊದಲು ವೆಬ್‌ ಸ್ವರೂಪದಲ್ಲಿ ಮತ್ತು ನಂತರದಲ್ಲಿ ಆಂಡ್ರಾಯ್ಡ ಆ್ಯಪ್‌ ಮಾದರಿಯಲ್ಲಿಯೂ ಲಭ್ಯವಾಗುತ್ತಿದೆ. ಆಧಾರ್‌ ಲಿಂಕ್‌ ಆದ ಹಲವು ದಾಖಲೆಗಳನ್ನು ನಾವು ನೇರವಾಗಿ ಡಿಜಿ ಲಾಕರ್‌ನಲ್ಲಿ ಇಟ್ಟುಕೊಳ್ಳಬಹುದು. ಪಾನ್‌ಕಾರ್ಡ್‌, ವಾಹನ ನೋಂದಣಿ ದಾಖಲೆ, ವಾಹನ ಚಾಲನಾ ಪರವಾನಗಿ ಸೇರಿದಂತೆ ದಾಖಲೆಗಳನ್ನು ಡಿಜಿಟಲ್‌ ಸ್ವರೂಪದಲ್ಲಿ ಇರಿಸಿಕೊಳ್ಳುವ ಅವಕಾಶ ಒಂದು ಜಿಬಿ ಸ್ಥಳದಲ್ಲಿ ಉಚಿತವಾಗಿ ಲಭ್ಯ. 36 ದಾಖಲೆ ತರಿಸುವವರು ಹಾಗೂ 15 ದಾಖಲೆ ಲಿಂಕ್‌ ಮಾಡಿದವರಿಂದ ಡಿಜಿಲಾಕರ್‌ಗೆ ನೇರ ದಾಖಲೆ ತುಂಬಬಹುದು. ಆಧಾರ್‌, ಚುನಾವಣಾ ಮತಪತ್ರ ನೀಡುವ ವ್ಯವಸ್ಥೆ ದಾಖಲೆಗಳನ್ನು ರೂಪಿಸುತ್ತದೆ. ಪಾಸ್‌ಪೋರ್ಟ್‌, ಆರ್‌ಟಿಓ ಥರದವರು ದಾಖಲೆ ಲಿಂಕ್‌ ಮಾಡಿದವರು. ಸಧ್ಯದ ಮಾಹಿತಿಯಂತೆ ಡಿಜಿಗೆ 11,41,346 ನೋಂದಾಯಿತ ಬಳಕೆದಾರರಿದ್ದಾರೆ. 20,44,777 ಅಪ್‌ಲೋಡ್‌ ಮಾಡಿ ಸಂರಕ್ಷಿಸಿದ ದಾಖಲೆಗಳಿವೆ. 51,70,081 ದಾಖಲೆಗಳನ್ನು ಡಿಜಿಲಾಕರ್‌ ನೇರವಾಗಿ ಪೂರೈಸಲಾಗಿದೆ. ಇ ಸೈನ್‌ ಮಾಡಿ ದೃಢೀಕರಿಸಿದ 2,45,047 ದಾಖಲೆಗಳು ಡಿಜಿಲಾಕರ್‌ನಲ್ಲಿದೆ.

ಡಿಜಿ ಲಾಕರ್‌ ವ್ಯವಸ್ಥೆಯನ್ನು ತುಂಬಾ ಸರಳವಾಗಿ ರೂಪಿಸಿರುವುದು ಇದರ ವೈಶಿಷ್ಟ್ಯ. ಓರ್ವ ಸಾಮಾನ್ಯ ನಾಗರಿಕ ಕೂಡ ಇಲ್ಲಿ ತನ್ನ ಲಾಕರ್‌ ತೆರೆಯಬಹುದು. ತನ್ನ ಮೊಬೈಲ್‌ ಸಂಖ್ಯೆಯನ್ನು ಒದಗಿಸಿ ಆತ ಲಾಕರ್‌ ತೆರೆಯಬಹುದು. ಈ ಹಾದಿಯಲ್ಲಿ ದಾಖಲಿಸಿದ ಮೊಬೈಲ್‌ಗೆ ಒಟಿಪಿ ಬರುತ್ತದೆ. ಅದನ್ನು ದಾಖಲಿಸಿದ ನಂತರ ಮೊಬೈಲ್‌ ಅಥವಾ ಇ ಮೈಲ್‌ ಐಡಿ ಮೂಲಕ ಆಧಾರ್‌ ಸಂಖ್ಯೆ ಒದಗಿಸಿ ಖಾತೆಯನ್ನು ಆರಂಭಿಸಬಹುದು. 

ಆಧಾರ್‌ ಜೊತೆಗೂಡಿದರೆ ಆಧಾರ್‌ ಕಾರ್ಡ್‌ ಹಾಗೂ ಪಾನ್‌ಕಾಡ್‌, ಎಲೆಕ್ಷನ್‌ ಕಾರ್ಡ್‌ ಮೊದಲಾದವು ಅಲ್ಲಿ ಕೇಳಿದ ಕೆಲವು ಮಾಹಿತಿಗಳನ್ನು ತುಂಬಿದರೆ ಸಾಕು, ತಾನೇ ತಾನಾಗಿ ಇಲ್ಲಿಗೆ ಬಂದು ದಾಖಲಾಗುತ್ತವೆ. ಪಾನ್‌ಕಾರ್ಡ್‌, ಪಾಸ್‌ಪೋರ್ಟ್‌, ವಿಶ್ವವಿದ್ಯಾಲಯದ ದಾಖಲೆಗಳು ತರಹದ ಕೆಲವನ್ನು ಆಧಾರ್‌ ಹಾಗೂ ಇನ್ನು ಕೆಲವು ಮಾಹಿತಿ ತುಂಬಿ ಹೊಂದಾಣಿಕೆ ಆಗುವ ಆಧಾರದ ಮೇಲೆ ಈ ಲಾಕರ್‌ಗೆ ಹರಿದುಬರುತ್ತದೆ. 

ಡಿ.ಎಲ್‌ ಬೇಡ, ಆರ್‌ಸಿ ಬೇಕಿಲ್ಲ!
ಸರ್ಕಾರಿ ಆಡಳಿತ ಇದೀಗ ಡಿಜಿ ಲಾಕರ್‌ನ್ನು ಒಪ್ಪಲಾರಂಭಿಸಿದೆ. ಸಾರಿಗೆ ಇಲಾಖೆ ಡಿಜಿ ಲಾಕರ್‌ನ ವಾಹನ, ಚಾಲನಾ ದಾಖಲೆಗಳು ಅಧಿಕೃತ ಎಂದು ಘೋಷಿಸಿದೆ. ಕೇಂದ್ರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಡಿಜಿ ಲಾಕರ್‌ ಅಥವಾ ಎಂಪರಿವಾಹನ್‌ ಆ್ಯಪ್‌ಗ್ಳಲ್ಲಿನ ಡಿಎಲ್‌, ಆರ್‌ಸಿ, ವಿಮೆಗಳು ಕಾಗದದ ದಾಖಲೆ ಇದ್ದಂತೆಯೇ ಎಂದು ಸಾರಿದೆ. ಡಿಜಿ ಲಾಕರ್‌ನಿಂದ ತೆಗೆದು ಮುದ್ರಿಸಿಕೊಂಡ ದಾಖಲೆಗಳಿಗೆ ಅಧಿಕೃತ ದಾಖಲೆಗಳಷ್ಟೇ ಮನ್ನಣೆ ಇದೆ ಎಂಬುದನ್ನು ಸದರಿ ಪ್ರಕಟಣೆ ದೃಢಪಡಿಸಿದೆ. 

ಕರ್ನಾಟಕ, ಮಧ್ಯಪ್ರದೇಶ ಹಾಗೂ ಬಿಹಾರಗಳು, ಡಿಜಿಲಾಕರ್‌ನ ದಾಖಲೆಗಳನ್ನು ಈಗಾಗಲೇ ಅಧಿಕೃತ ಎಂದು ಪರಿಗಣಿಸಿದ್ದವು. ಸಾರಿಗೆ ಇಲಾಖೆಯ ಪ್ರಕಟಣೆ ಇಡೀ ದೇಶಕ್ಕೆ ಅನ್ವಯವಾಗುತ್ತದೆ. ಈಗ ಹೊಸ ವಾಹನ ಅಥವಾ ವಿಮೆ ನವೀಕರಣ ಕೂಡ ಇನ್ಸುರೆನ್ಸ್‌ ಇನ್‌ಫಾರೆಶನ್‌ ಬೋರ್ಡ್‌ ಡಾಟಾ ಬೇಸ್‌ನಲ್ಲಿ ದಾಖಲಾಗುವುದರಿಂದ ಅವು ಕೂಡ ಆಧಾರ್‌ ಲಿಂಕ್‌ ಮೂಲಕ ಡಿಜಿಲಾಕರ್‌ನ್ನು ಸ್ವಯಂಚಾಲಿತವಾಗಿ ಸೇರುತ್ತವೆ. 

ಒಬ್ಬನ ಡಿಜಿ ಲಾಕರ್‌ನಲ್ಲಿ ಇ.ಸಹಿ ಪಡೆದ ಹಾಗೂ ಸ್ವಯಂಚಾಲಿತವಾಗಿ ಸರಬರಾಜಾದ ದಾಖಲೆಗಳು ಅನಧಿಕೃತವಾಗಿರಲು ಸಾಧ್ಯವಿಲ್ಲ. ಅದನ್ನು ನಕಲುಗೊಳಿಸಲು ಕೂಡ ಅಸಂಭವ. ಈ ದಾಖಲೆಗಳು ಕಳೆದುಹೋಗುವುದಿಲ್ಲ. ಆಧಾರ್‌ ಸಂಖ್ಯೆ ಬಳಸಿ ಒಟಿಪಿ ತೆಗೆದುಕೊಂಡು ಲಾಗಿನ್‌ ಆಗಬಹುದಾದ್ದರಿಂದ ಯೂಸರ್‌ ನೇಮ್‌ ಪಾಸ್‌ವರ್ಡ್‌ ಬಗ್ಗೆಯೇ ಯೋಚಿಸಬೇಕಾಗಿಲ್ಲ. ದಾಖಲೆಗಳು ಒಂದೇ ಕಡೆ ಸಿಗುವುದು ಹಾಗೂ ಇ.ಸೈನ್‌ ದೃಢೀಕರಣ ಮಾಡಬಹುದಾದುದು ಹೆಚ್ಚುಗಾರಿಕೆ. 

ಸುರಕ್ಷಿತ ಡಿಜಿಲಾಕರ್‌ಗಾಗಿ 
ವೆಬ್‌ ಮೂಲಕ ಡಿಜಿ ಲಾಕರ್‌ನಲ್ಲಿ ನೋಂದಣಿ ಮಾಡುವವರು ಬ್ರೌಸರ್‌ ಟ್ಯಾಬ್‌ನಲ್ಲಿ ಸೆಕ್ಯುರ್‌ ಎಂಬ ಹಸಿರು ಬಣ್ಣದ ದೃಢೀಕರಣವನ್ನು ಕಂಪ್ಯೂಟರ್‌, ಲ್ಯಾಪ್‌ಟಾಪ್‌ನ ಎಡಬದಿಯಲ್ಲಿ  ಕಂಡ ನಂತರವೇ ಮುಂದಿನ ದಾಖಲಾತಿಗೆ ಹೊರಡಬೇಕು. ಮೊಬೈಲ್‌ ಮೂಲಕ ಡಿಜಿ ಲಾಕರ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುವವರಂತೂ ಸಾವಿರ ಕಣ್ಣಾಗಿರಬೇಕು. digilocker.gov.in ಮೂಲಕ ಮೊಬೈಲ್‌ ಬ್ರೌಸರ್‌ನಲ್ಲಿ ತೆರಳಿ ಅಲ್ಲಿಂದ ಗೂಗಲ್‌ ಪ್ಲೇ ಅಥವಾ ಆ್ಯಪ್‌ ಸ್ಟೋರ್‌ಗೆ ನೇರವಾಗಿ ತೆರಳಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುವುದು ಸುರಕ್ಷಿತ. ಇದರಲ್ಲಿ ಮಾತ್ರ ಯಾಮಾರಿದರೆ ತೊಂದರೆ ದ್ವಿಗುಣವಾಗುತ್ತದೆ.

ನಾವು ದಾಖಲೆಗಳನ್ನು ಡಿಜಿಯಲ್ಲಿ ಸುರಕ್ಷಿತವಾಗಿ ಇಡಬಹುದು ಎಂಬ ಭರವಸೆಯ ಹೊರತಾಗಿ ಡಿಜಿಲಾಕರ್‌ನಲ್ಲಿನ ದಾಖಲೆ ಬೇರೆಯವರು ಕದ್ದು ನೋಡದಷ್ಟು ಸುರಕ್ಷಿತವೇ ಎಂಬ ಪ್ರಶ್ನೆಯನ್ನು ಇಡೀ ದೇಶ ಕೇಳುತ್ತಿದೆ. ಮೊನ್ನೆ ಮೊನ್ನೆ ಆಧಾರ್‌ ಸುರಕ್ಷಿತತೆಯನ್ನು ಪ್ರತಿಪಾದಿಸಲು ಹೊರಟ ದೂರವಾಣಿ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷ ಆರ್‌.ಎಸ್‌.ಶರ್ಮ, ತಮ್ಮ ಆಧಾರ್‌ ಸಂಖ್ಯೆಯನ್ನು ಬಹಿರಂಗಪಡಿಸಿ ಆಧಾರ್‌ ಸುರಕ್ಷತೆ ಪ್ರಶ್ನಿಸುವವರಿಗೆ ಸವಾಲು ಹಾಕಿದ್ದರು. ಈ ಸವಾಲು ಸ್ವೀಕರಿಸಿದ ಹ್ಯಾಕರ್‌ಗಳು ಅದರಿಂದ ಅವರ ಹತ್ತುಹಲವು ಮಾಹಿತಿಗಳನ್ನು ಬರಂಗಪಡಿಸಿ ಖುದ್ದು ಶರ್ಮ ಅವರೇ ಚಡಪಡಿಸುವಂತೆ ಮಾಡಿದ್ದರು.

2015ರ ಮೋದಿ ಸರ್ಕಾರದ ಕನಸಿನಂತೆ ಜಾರಿಗೆ ಬಂದಿರುವ ಡಿಜಿಲಾಕರ್‌ಗೆ 2011ರ ಜನಗಣತಿಯ ಆಧಾರದಲ್ಲಿ ಇರುವ 121 ಕೋಟಿ ಜನರಲ್ಲಿ ಕನಿಷ್ಠ 50 ಕೋಟಿ ಜನರಿಗೆ ಡಿಜಿ ಅಕೌಂಟ್‌ ಮಾಡಿಸುವ ಗುರಿಯನ್ನು ಕೇಂದ್ರ ಹೊಂದಿದೆ. ಆ ಲೆಕ್ಕದಲ್ಲಿ ಕೇವಲ 11 ಕೋಟಿ ಖಾತೆಗಳಷ್ಟೇ ಇರುವ ಹಿನ್ನೆಲೆಯಲ್ಲಿ ಗುರಿ ಗಾವುದ ದೂರದಲ್ಲಿದೆ. ಸುರಕ್ಷತೆಯ ಬಗ್ಗೆಯೂ ಯೋಚಿಸುವುದಾದರೆ, ಈಗಾಗಲೇ ಇರುವ ಡ್ರಾಪ್‌ಬಾಕ್ಸ್‌, ಗೂಗಲ್‌ನ ಗೂಗಲ್‌ ಡ್ರೆ„ವ್‌, ಒನ್‌ ಲಾಕರ್‌ ಅಥವಾ ಟ್ರೂ ಲಾಕರ್‌, ಬಿಟ್‌ ಲಾಕ್‌ ಆ್ಯಪ್‌ಗ್ಳ ಎದುರು ಡಿಜಿ ಲಾಕರ್‌ ಹೆಚ್ಚು ಸುರಕ್ಷಿತ. ಖಾಸಗಿ ವ್ಯವಸ್ಥೆಗಳು, ಗೂಗಲ್‌ ಕೂಡ ಸೇರಿದಂತೆ ಗ್ರಾಹಕನ ಮಾಹಿತಿಗಳನ್ನು ಕದಿಯುತ್ತಲೇ ಇವೆ. ಪ್ರತಿಯೊಬ್ಬನ ಮಾಹಿತಿಯನ್ನು ಕದ್ದು ಆತನ ಆಸಕ್ತಿಗಳ ಡಾಟಾ ಮಾರಿ ಹಣ ಸಂಪಾದಿಸುತ್ತಿರುವುದು ನಮಗೆ ಎದುರಾಗುವ ಜಾಹೀರಾತುಗಳಿಂದಲೇ ಅರ್ಥ ಮಾಡಿಕೊಳ್ಳಬಹುದು. ಆ ನಿಟ್ಟಿನಲ್ಲಿ ಭಾರತ ಸರ್ಕಾರವೇ ರೂಪಿಸಿರುವ ಡಿಜಿಲಾಕರ್‌ ಸಾಕಷ್ಟು ಸುರಕ್ಷಿತ. ಆರಂಭದ ದಿನಗಳಲ್ಲಿದ್ದ 10 ಎಂಬಿ ಸಾಮರ್ಥ್ಯದಿಂದ ಈಗ ಒಂದು ಜಿಬಿಗೆ ಸಂಗ್ರಹಣಾ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಸುರಕ್ಷತೆ ಮೀರಿ ದಾಖಲೆಗಳ ಮಾಹಿತಿಗಳು ಸೋರಿ ಗ್ರಾಹಕನಿಗೆ ಸಮಸ್ಯೆಯಾದರೆ ಸರ್ಕಾರ ಜನರಿಗೆ ಪರಿಹಾರ ಒದಗಿಸಬೇಕಾಗುತ್ತದೆ. ಅಂಥ ದಿನಗಳು ಬಾರದಿರಲಿ!
 
ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.