CONNECT WITH US  

ಬೆಂಜ್‌ ಕ್ಲಾಸ್‌; ಐಷಾರಾಮಿ ಹಾಗೂ ಕ್ರೇಜಿ ಡ್ರೈವ್‌ವೂ ಸೈ

ಬೆಂಜ್‌ ಕಂಪನಿಯ ಸೆಡಾನ್‌ ಸೆಗ್ಮೆಂಟ್ ಕಾರು, ಕೆಲ ತಿಂಗಳ ಹಿಂದಷ್ಟೇ ಮಾರುಕಟ್ಟೆ ಪ್ರವೇಶಿಸಿದೆ. ಸುರಕ್ಷತೆಯ ದೃಷ್ಟಿಯಿಂದ ಇದರಲ್ಲಿ 7 ಏರ್‌ ಬ್ಯಾಗ್‌ಗಳನ್ನು ಅಳವಡಿಸಲಾಗಿದೆ. ಮಕ್ಕಳ ಸುರಕ್ಷತೆಗೆ ವಿಶೇಷ ಏರ್‌ಬ್ಯಾಗ್‌ ಹಾಗೂ ಸೀಟ್‌ ಬೆಲ್ಟ್ ಕೂಡ ಇದೆ. 

ಆಟೋಮೊಬೈಲ್‌ ಕ್ಷೇತ್ರದಲ್ಲಿ ಡಿಜಿಟಲ್‌ ತಂತ್ರಜ್ಞಾನ ಅಳವಡಿಕೆ ಪ್ರತಿದಿನವೂ ಬದಲಾಗುತ್ತಲೇ ಇದೆ. ಹೊಸದೊಂದು ಕ್ರಾಂತಿಯನ್ನೇ ಮೂಡಿಸಿದೆ. ಪ್ರತಿ ಸ್ಪರ್ಧಿಗಳಿಗಿಂತ ನಾವು ಯಾವುದರಲ್ಲಿ ಕಡಿಮೆ ಎನ್ನುವಂತೆ ಪ್ರತಿಯೊಂದು ಕಂಪನಿಯೂ ಹೊಸ ಹೊಸ ಟ್ರೆಂಡ್‌ ಹುಟ್ಟು ಹಾಕುವಲ್ಲಿ ನಿರತವಾಗಿವೆ. ಮಾಡೆಲ್‌, ವೇರಿಯಂಟ್‌, ವಿನ್ಯಾಸ ಅಥವಾ ಇನ್ನಾವುದೋ ಬದಲಾವಣೆ ಆದಾಗಲೆಲ್ಲ, ಕಂಪನಿಗಳು ಬ್ರಾಂಡ್‌ಗಾಗಿ ಟ್ರೆಂಡ್‌ ಹುಟ್ಟು ಹಾಕುವ ಪ್ರಯತ್ನ ನಡೆಸುವುದು ಸಾಮಾನ್ಯವಾಗಿದೆ.

ಇದೆಲ್ಲ ಸ್ಪರ್ಧೆಗಳ ನಡುವೆಯೂ ದುಬಾರಿ ಕಾರುಗಳು ಮಾರುಕಟ್ಟೆಗೆ ಬರುವಾಗ ಸಹಜವಾಗಿ ಒಂದು ಕುತೂಹಲ ಸೃಷ್ಟಿಯಾಗಿರುತ್ತದೆ. ಈ ಹೊಸ ಉತ್ಪನ್ನದಲ್ಲಿ ಹೊಸ ತಂತ್ರಜ್ಞಾನವನ್ನೇನಾದರೂ ಅಳವಡಿಸಲಾಗಿದೆಯೇ ಎಂದು ನೋಡಲಾಗುತ್ತದೆ. ಹಾಗೆ ನೋಡಿದರೆ ಇಂಥ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯಲ್ಲಿ ಜರ್ಮನಿಯ ಮರ್ಸಿಡಿಸ್‌ ಬೆಂಜ್‌ ಕೂಡ ಸದಾ ಒಂದು ಹೆಜ್ಜೆ  ಮುಂದಿರುತ್ತದೆ. ಬೆಂಜ್‌ನ ಇತ್ತೀಚಿನ ಹೈ ಎಂಡ್‌ ಕಾರುಗಳಲ್ಲಿ ಇಂಥ ಅನೇಕ ಹೊಸ ತಂತ್ರಜ್ಞಾನಗಳನ್ನು ಕಾಣಲು ಸಾಧ್ಯ.

ಕೆಲವು ತಿಂಗಳುಗಳ ಹಿಂದಷ್ಟೇ ಮಾರುಕಟ್ಟೆ ಪ್ರವೇಶಿಸಿರುವ ಸಿ-43 ಆಟೋ ಟ್ರಾನ್ಸ್‌ಮಿಷನ್‌ ಸೆಡಾನ್‌ ಸೆಗೆ¾ಂಟ್‌ನ ಕಾರು, ಐಷಾರಾಮಿ ಮತ್ತು ನ್ಪೋರ್ಟಿವ್‌ ಡ್ರೈವ್‌ಗೂ ಸೈ. ಕಾರಿನ ವಿನ್ಯಾಸವೂ ಅಷ್ಟೇ ಸೊಗಸಾಗಿದ್ದು, ಕ್ರೇಜಿಗಳೂ ಇಷ್ಟಪಡುವಂತಿದೆ. ಮೊದಲು ಮ್ಯಾನ್ಯುವಲ್‌ ಗೇರ್‌ ವೇರಿಯಂಟ್‌ ಕಾರುಗಳನ್ನು ಪರಿಚಯಿಸಿದ್ದ ಕಂಪನಿ, ಇದೀಗ ಆಟೋ ಗೇರ್‌ ವೇರಿಯಂಟ್‌ ಕಾರುಗಳನ್ನು ಪರಿಚಯಿಸಿದೆ. ಆಟೋ ಟ್ರಾನ್ಸ್‌ಮಿಷನ್‌ ಸಹಜವಾಗಿ ಚಾಲಕ ಸ್ನೇಹಿಯಾಗಿದೆ.

ವಿ6 ಬಿಟಬೊì ಎಂಜಿನ್‌
ರಸ್ತೆಯ ಸ್ಥಿತಿ ಹೇಗಿದ್ದರೂ ಸಲೀಸಾಗಿ ಓಡಿಸುವಂತೆ ವಿನ್ಯಾಸಗೊಳಿಸಲಾಗಿರುವ ಸಿ-43ಯಲ್ಲಿ ಎ362ಎಚ್‌ಪಿ 3.0ಲೀಟರ್‌ ವಿ6 ಬಿಟಬೊì ಎಂಜಿನ್‌ ಬಳಸಿಕೊಳ್ಳಲಾಗಿದೆ. ಡಾಮರ್‌, ಮಣ್ಣು ಹಾಗೂ ಮರಳು ರಸ್ತೆಗಳಲ್ಲಿ ಓಡಿಸುವಾಗ ಅದಕ್ಕೆ ತಕ್ಕಂತೆ ಮೋಡ್‌ ಬದಲಾಯಿಸಿಕೊಳ್ಳುವ ಆಪ್ಶನ್‌ ನೀಡಲಾಗಿದೆ. ಈ ಮೋಡ್‌ನ‌ಲ್ಲಿ ಎಂಜಿನ್‌ ದಹನ ಶಕ್ತಿಯ ಒತ್ತಡವೂ ಬದಲಾಗಲಿದೆ. 362ಎಚ್‌ಪಿ ಸಾಮರ್ಥ್ಯದ ಎಂಜಿನ್‌ ಅತ್ಯಧಿಕ ಗುಣಮಟ್ಟದ್ದಾಗಿದೆ. ಇದಲ್ಲದೇ ಇಂಧನ ಬಳಕೆಯಲ್ಲಿಯೂ ವ್ಯತ್ಯಾಸ ಮಾಡಿಕೊಳ್ಳುವ ಅತ್ಯಾಧುನಿಕ ಎಂಜಿನ್‌ ತಂತ್ರಜ್ಞಾನವನ್ನು ಬೆಂಜ್‌ ಅಭಿವೃದ್ಧಿಪಡಿಸಿ ಈ ಕಾರಿನಲ್ಲಿ ಅಳವಡಿಸಿದೆ. 4 ವೀಲ್‌ ಡ್ರೈವ್‌ ಇದಾಗಿರುವುದರಿಂದ ಸಲೀಸಾಗಿ ಆಫ್ರೋಡ್‌ನ‌ಲ್ಲೂ ಓಡಿಸಲು ಸಾಧ್ಯ.

ವಿನ್ಯಾಸ ಅತ್ಯುತ್ತಮ
ಎಸ್‌ಯುವಿ ಕಾರುಗಳನ್ನೇ ಹೆಚ್ಚೆಚ್ಚು ಇಷ್ಟಪಡುವ ಈ ದಿನಗಳಲ್ಲಿ ಐಷಾರಾಮಿ ಕಾರನ್ನು ಸೆಡಾನ್‌ ಸೆಗೆ¾ಂಟ್‌ನಲ್ಲಿ ಪರಿಚಯಿಸಿರುವ ಮರ್ಸಿಡಿಸ್‌ ಬೆಂಜ್‌, ಸ್ಮಾರ್ಟ್‌ ಟಚ್‌ ನೀಡಿದೆ. ಅದರಲ್ಲೂ ಇಂಟೀರಿಯರ್‌ ಅಚ್ಚುಮೆಚ್ಚು. ಡ್ಯಾಶ್‌ಬೋರ್ಡ್‌ ಚಾಲಕ ಸ್ನೇಹಿಯಾಗಿದ್ದು, ಕಾರಿನಲ್ಲಿ ಅಳವಡಿಸಲಾದ ಬಹುತೇಕ ಡಿಜಿಟಲ್‌ ಮತ್ತು ಎಲೆಕ್ಟ್ರಾನಿಕ್‌ ಉಪಕರಣಗಳನ್ನು ನಿಯಂತ್ರಿಸುವ ಎಲ್ಲಾ ಆಪ್ಶನ್‌ಗಳನ್ನೂ ಡ್ಯಾಶ್‌ಬೋರ್ಡ್‌ನಲ್ಲೇ ಅಳವಡಿಸಲಾಗಿದೆ.
ಎಕ್ಸ್‌ ಶೋ ರೂಂ ಬೆಲೆ: 77.72 ಲಕ್ಷ ರೂ.

ಸುರಕ್ಷತೆಗೆ ಹೆಚ್ಚಿನ ಒತ್ತು
ಸುರಕ್ಷತೆ ದೃಷ್ಟಿಯಿಂದ ಕಾರಿನಲ್ಲಿ ಒಟ್ಟು 7 ಏರ್‌ಬ್ಯಾಗ್‌ಗಳ ಅಳವಡಿಸಲಾಗಿದ್ದು, ಮಕ್ಕಳಿದ್ದಲ್ಲಿ ಅವರ ಸುರಕ್ಷತೆಗೂ ವಿಶೇಷ ಏರ್‌ಬ್ಯಾಗ್‌, ಸೀಟ್‌ ಬೆಲ್ಟ್‌ಗಳನ್ನು ಅಳವಡಿಸಲಾಗಿದೆ. ಇನ್ನು, ಆ್ಯಂಟಿ ಲಾಕ್‌ ಬ್ರೇಕ್‌ ಸಿಸ್ಟಮ್‌(ಎಬಿಎಸ್‌), ಎಲೆಕ್ಟ್ರಾನಿಕ್‌ ಬ್ರೇಕ್‌ ಫೋರ್ಸ್‌ ಡಿಸ್ಟ್ರೆಬ್ಯೂಷನ್‌ (ಇಬಿಡಿ), ಬ್ರೇಕ್‌ ಅಸಿಸ್ಟ್‌(ಬಿಎ), ಹಿಲ್‌ ಹೋಲ್ಡ್‌ ಕಂಟ್ರೋಲ್‌, ಟ್ರಾಕ್ಷನ್‌ ಕಂಟ್ರೋಲ್‌ ಸಿಸ್ಟಮ್‌ಗಳನ್ನು ಅಳವಡಿಸಲಾಗಿದೆ.

- ಗಣಪತಿ ಅಗ್ನಿಹೋತ್ರಿ


Trending videos

Back to Top