ಬೆಂಕಿಯಿಂದ ರಕ್ಷಣೆ ಮುಖ್ಯ 


Team Udayavani, Sep 10, 2018, 9:41 PM IST

15.jpg

ಮನೆಗಳಲ್ಲಿ ಶಾರ್ಟ್‌ ಸಕೂಟ್‌ ಆಗಲು ಮತ್ತೂಂದು ಕಾರಣ ನೀರು ಸೋರಿಕೆಯೇ ಆಗಿರುತ್ತದೆ. ಮನೆಯ ಹೊರಗೋಡೆಗಳು ಮಳೆಗಾಲದಲ್ಲಿ ತೇವಾಂಶದಿಂದ ಕೂಡಿದ್ದರೆ, ಅದೆಲ್ಲವೂ ಕಾಲಕ್ರಮೇಣ ಕಾಂಡ್ನೂಟ್‌ ಪೈಪ್‌ ಪ್ರವೇಶಿಸಿ, ಸ್ವಿಚ್‌ ಬಾಕ್ಸ್‌ನಲ್ಲಿ ಬೆಂಕಿ ಹೊತ್ತಿಕೊಳ್ಳಬಹುದು.

ಇತ್ತೀಚೆಗೆ ಬ್ರೆಜಿಲ್‌ನಲ್ಲಿ, ನೂರಾರು ವರ್ಷ ಹಳೆಯದಾದ ಬಹುಮುಖ್ಯ ಪ್ರಾಚ್ಯವಸ್ತು ಸಂಗ್ರಹಾಲಯ ಬೆಂಕಿಗೆ ಆಹುತಿಯಾಗಿದ್ದು ಸುದ್ದಿಯಾಗಿತ್ತು.  ಸಾವಿರಾರು ವರ್ಷಗಳ ಪರಂಪರೆಯನ್ನು ಸಂರಕ್ಷಿಸುವ ಜವಾಬ್ದಾರಿ ವಸ್ತುಸಂಗ್ರಹಾಲಯಗಳದ್ದು ಆಗಿದ್ದರೆ, ನಮ್ಮ ಮಟ್ಟಿಗೆ -ವೈಯುಕ್ತಿಕವಾಗಿ ಸಂರಕ್ಷಿಸಿಡಬೇಕಾದ್ದು ನಮ್ಮ ನಮ್ಮ ಮನೆಗಳಲ್ಲಿ ಸಾಕಷ್ಟು ಇರುತ್ತದೆ. ಅದು ಆಸ್ತಿಪಾಸ್ತಿಗೆ ಸಂಬಂಧಿಸಿದ ಕಾಗದ ಪತ್ರಗಳಿರಬಹುದು. ಓದು ಬರಹದ ಎಸ್‌ ಎಸ್‌ ಎಲ್‌ ಸಿ, ಡಿಗ್ರಿ ಇತ್ಯಾದಿಗಳ ಸರ್ಟಿಫಿಕೇಟ್‌ ಇರಬಹುದು. ಜೊತೆಗೆ ನಾನಾ ರೀತಿಯ ಅತ್ಯಮೂಲ್ಯ ಎನ್ನಿಸುವ ವಸ್ತುಗಳೂ ಕೂಡ ಆಗಿರಬಹುದು. ಒಂದು ರೀತಿಯಲ್ಲಿ ಮನೆಯೇ ವೈವಿಧ್ಯ ಭಾವನೆಗಳ ಸಂಗ್ರಹಾಲಯ ಆಗಿರುತ್ತದೆ. ಹಾಗಾಗಿ, ಮನೆಯನ್ನು ಅಗ್ನಿನಿರೋಧಕ ಮಾಡುವುದು ಬಹುಮುಖ್ಯ. 

ಬೆಂಕಿಯಿಂದ ರಕ್ಷಣೆ 
ನಮ್ಮಲ್ಲಿ ಬಹುತೇಕ ಕಡೆ ಮನೆಗಳನ್ನು ಬೆಂಕಿ ಅಂಟದ ವಸ್ತುಗಳಾದ ಇಟ್ಟಿಗೆ, ಗಾರೆ, ಕಲ್ಲು, ಕಾಂಕ್ರಿಟ್‌ಗಳಿಂದ ಕಟ್ಟಲಾಗಿರುತ್ತದೆ. ಹೀಗಾಗಿ, ಸುಲಭದಲ್ಲಿ ಅಗ್ನಿದುರಂತಗಳು ಸಂಭವಿಸುವುದಿಲ್ಲ. ಎಲ್ಲಾದರೂ ಬೆಂಕಿಬಿದ್ದಿತು ಎಂದರೆ ಅದು ಆ ಮನೆಯಲ್ಲಿ ಶೇಖರಿಸಿಟ್ಟಿದ್ದ ಮರಮುಟ್ಟುಗಳಿಂದ ಮಾಡಿದ ಪೀಠೊಪಕರಣ, ಕರ್ಟನ್‌, ಹಾಸಿಗೆ ಇತ್ಯಾದಿಗೇ ಬೆಂಕಿಬಿದ್ದು ಸುಟ್ಟುಹೋಗಿದೆ ಎಂದೇ ಅರ್ಥ. ಆದರೆ,  ಇಡೀ ಮನೆ ಸುಟ್ಟು ಹೋಗಿ ನೆಲಸಮ ಆಗುವುದು ಅಪರೂಪ. ಪಾಶ್ಚಾತ್ಯ ದೇಶಗಳಲ್ಲಿ ಹಾಗಲ್ಲ, ಅವರು ಮನೆಯನ್ನು ಬಹುತೇಕ ಮರದಿಂದಲೇ ಕಟ್ಟಿರುತ್ತಾರೆ.  ಹಾಗೂ ಒಂದು ಕಡೆ ಸ್ವಲ್ಪ ಬೆಂಕಿ ತಗುಲಿದರೂ ನೋಡುನೋಡುತ್ತಿದ್ದಂತೆ ಇಡಿ ಮನೆಯೇ ಸುಟ್ಟು ಬೂದಿಯಾಗಿಬಿಡುತ್ತದೆ. ಬೆಂಕಿ ಬೆಂಕಿಯೇ, ಒಂದು ಕಿಡಿ ಮೈಗೆ ತಾಗಿದರೂ ನೋವಾಗುವ ರೀತಿಯಲ್ಲೇ, ಒಂದು ಕಿಡಿ ನಮ್ಮ ಅಷ್ಟೂ ವರ್ಷಗಳ ಶ್ರಮವನ್ನು ಸುಟ್ಟು ಕರಕಲಾಗಿಸಬಹುದು. ಆದುದರಿಂದ, ನಮ್ಮ ಮನೆಗಳಲ್ಲಿ ಕನಿಷ್ಠ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ.

ಬೆಂಕಿಯ ಮೂಲ
ಶಾರ್ಟ್‌ ಸರ್ಕ್ನೂಟ್‌ -“ಅಡ್ಡ ಹರಿವು’ ಎನ್ನಬಹುದಾದ ವಿದ್ಯುತ್‌ ಸಂಪರ್ಕದಿಂದ ಕಿಡಿ ಹತ್ತಿತು ಎಂಬುದು ಬೆಂಕಿ ಅವಗಢಗಳು ಆದಾಗ ಸಾಮಾನ್ಯವಾಗೇ ಕೇಳಿಬರುವ ವಿವರಣೆ. ವಿದ್ಯುತ್‌ ಶಕ್ತಿ, ನಿಯೋಜಿತ ದಾರಿಯಲ್ಲಿ ಸಾಗಿ ಎಲ್ಲಿ ಪೂರೈಕೆಯಾಗಬೇಕಿತ್ತೋ ಅಲ್ಲಿ ಮಾತ್ರ ಕಾರ್ಯ ಎಸಗಬೇಕಾಗುತ್ತದೆ. ಅದನ್ನು ಬಿಟ್ಟು ಅಡ್ಡಾದಿಡ್ಡಿಯಾಗಿ ಹರಿದರೆ, ಕಿಡಿಗಳ ಉತ್ಪತ್ತಿ, ಇಲ್ಲವೇ ಅತಿಯಾದ ಶಾಖ ಉಂಟಾಗಿ ವಯರ್‌ – ತಂತಿಗಳೇ ಅವುಗಳ ಇನ್ಸುಲೇಷನ್‌ ವಿದ್ಯುತ್‌ ನಿರೋಧಕ ಪದರಗಳನ್ನು ಸುಟ್ಟುಹಾಕಿಬಿಡುತ್ತವೆ. ವಿದ್ಯುತ್‌ ಶಕ್ತಿ ಅಡ್ಡ ಹರಿಯಲು ನಾನಾ ಕಾರಣಗಳಿರಬಹುದು. ಇವುಗಳಲ್ಲಿ ಮುಖ್ಯವಾದದ್ದು ವೈರ್‌ಗಳ ಗುಣಮಟ್ಟ ಕಡಿಮೆ ಆಗಿರುವುದೇ ಬೆಂಕಿ ಅವಘಡಗಳಿಗೆ ಕಾರಣವಾಗಿರುತ್ತದೆ. ಹಾಗಾಗಿ, ಉತ್ತಮ ಗುಣಮಟ್ಟದ ವಿದ್ಯುತ್‌ ವಾಹಕಗಳನ್ನು ಬಳಸುವ ಮೂಲಕ ನಾವು ಸಾಕಷ್ಟು ಬೆಂಕಿ ಅವಘಡಗಳನ್ನು ತಡೆಯಬಹುದು. 

ವೈರ್‌ಗಳನ್ನು ಕಾಂಡ್ನೂಟ್ಸ್‌ -ಪೈಪ್‌ಗ್ಳಲ್ಲಿ ರಕ್ಷಣೆಗೆಂದು ಹಾಕಲಾಗುತ್ತದೆ. ಹೀಗೆ ಹಾಕುವಾಗ ಒಂದು ಕೊಳವೆಯಲ್ಲಿ ಅತಿ ಹೆಚ್ಚು ವೈರ್‌ಗಳು ಬಂದು ಇಕ್ಕಟ್ಟಾಗದಂತೆ ನೋಡಿಕೊಳ್ಳಬೇಕು. ನಾನಾ ಕಾರಣಗಳಿಂದಾಗಿ ವಿದ್ಯುತ್‌ ವಾಹಕಗಳಲ್ಲಿ ಒಂದಷ್ಟು ಶಾಖ ಉತ್ಪತ್ತಿ ಆಗಿಬಿಡುತ್ತದೆ. ಸುತ್ತಲೂ ಒಂದಷ್ಟು ತೆರೆದ ಸ್ಥಳ ಇದ್ದರೆ, ಈ ಶಾಖ ಒಂದರಿಂದ ಮತ್ತೂಂದಕ್ಕೆ ಹರಿದು ಇನ್ಸುಲೇಷನ್‌ -ವಿದ್ಯುತ್‌ ನಿರೋಧಕ ಪ್ಲಾಸ್ಟಿಕ್‌ ಪದರ ಕರಗಿ ಶಾರ್ಟ್‌ ಸಕ್ಯೂಟ್‌ ಆಗದಂತೆ ತಡೆಯುತ್ತದೆ. ವಿದ್ಯುತ್‌ ವಾಹಕಗಳನ್ನು ಬಳಸುವಾಗ ಇಡೀ ಮನೆಯನ್ನು ನಾಲ್ಕಾರು ಸರ್ಕ್ನೂಟ್‌- “ಸುತ್ತು ಭಾಗ’ ಗಳಾಗಿ ವಿಂಗಡಿಸಿ ತಂತಿಗಳ ಮೇಲೆ ಹೆಚ್ಚು ಒತ್ತಡ ಬಾರದಂತೆ ನೋಡಿಕೊಳ್ಳಬೇಕು. ಒಂದೇ ವೈರಿಗೆ ಹತ್ತಾರು ಕನೆಕ್ಷನ್‌ -ವಿದ್ಯುತ್‌ ದೀಪಗಳು, ಫ್ಯಾನ್‌, ಟಿವಿ,ಕಂಪ್ಯೂಟರ್‌ ಇತ್ಯಾದಿ ಕನೆಕ್ಷನ್‌ ನೀಡಿ ಓವರ್‌ ಲೋಡ್‌ -ಅತಿ ಒತ್ತಡ ಹೇರಿದರೂ ತಂತಿಗಳು ಬಿಸಿಯೇರಿ ಇನ್ಸುಲೇಷನ್‌ ಕರಗಿ ಶಾರ್ಟ್‌ ಸರ್ಕ್ನೂಟ್‌ ಆಗಬಹುದು. ಹಾಗಾಗಿ, ಮನೆಗೆ ವಿದ್ಯುತ್‌ ಕೊಳವೆಗಳನ್ನು ಅಳವಡಿಸುವ ಮೊದಲು, ನುರಿತ ಆರ್ಕಿಟೆಕ್ಟ್ ಇಂಜಿನಿಯರ್‌ ಗಳಿಂದ ಸರ್ಕ್ನೂಟ್‌ ಡಯಾಗ್ರಮ್‌ -ವಿದ್ಯುತ್‌ ಮಂಡಲದ ವಿನ್ಯಾಸ ಮಾಡಿಸಿ ಮುಂದುವರೆಯುವುದು ಉತ್ತಮ.

ಬೆಂಕಿ ಹತ್ತುವ ಪದಾರ್ಥ ದೂರವಿರಲಿ
ಸಾಮಾನ್ಯವಾಗಿ, ವಾರ್ಡ್‌ರೋಬ್‌ ಜೊತೆ ಡ್ರೆಸ್ಸಿಂಗ್‌ ಮಿರರ್‌ ಹಾಗೂ ಅದಕ್ಕೊಂದು ದೀಪಗಳ ವ್ಯವಸ್ಥೆ ಮಾಡಲಾಗುತ್ತದೆ. ಇಡೀ ಗೋಡೆ ವಾರ್ಡ್‌ರೋಬ್‌ ನಿಂದ ಆವರಿಸಿದ್ದರೆ, ಡ್ರೆಸ್ಸಿಂಗ್‌ ಜಾಗದಲ್ಲೂ ಗೋಡೆಗೆ ಪ್ಯಾನೆಲಿಂಗ್‌ ಮಾದರಿಯಲ್ಲಿ ಮರದಲ್ಲೇ ಮಾಡಲಾಗುತ್ತದೆ. ಹೇಳಿ ಕೇಳಿ ಇತ್ತೀಚಿನ ದಿನಗಳಲ್ಲಿ ಮನೆಯ ಅತ್ಯಮೂಲ್ಯ ವಸ್ತುಗಳ ಶೇಖರಣೆ ವಾರ್ಡ್‌ ರೋಬ್‌ನಲ್ಲೇ  ಆಗುತ್ತದೆ. ಆದುದರಿಂದ, ಆದಷ್ಟೂ ಡ್ರೆಸ್ಸಿಂಗ್‌ ಜಾಗವನ್ನು ವಾರ್ಡ್‌ರೋಬ್‌ ನಿಂದ ದೂರ ಇಡುವುದು ಉತ್ತಮ. ಡ್ರೆಸ್ಸಿಂಗ್‌ ಜಾಗದಲ್ಲಿ ಹೇರ್‌ ಡ್ರೆ„ಯರ್‌ ಇತ್ಯಾದಿ ಶಾಖ ಉತ್ಪಾದಿಸುವ ಸಲಕರಣೆಗಳು ಇದ್ದು ಇವೆಲ್ಲ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ವಾರ್ಡ್‌ರೋಬ್‌ ಜೊತೆ ಡ್ರೆಸ್ಸಿಂಗ್‌ ಅನಿವಾರ್ಯ ಆದಲ್ಲಿ, ಈ ಸ್ಥಳದಲ್ಲಿ ಆದಷ್ಟೂ ತೆಳ್ಳನೆಯ ಪ್ಯಾನೆಲಿಂಗ್‌ ಬಳಸಿ, ಅದಕ್ಕೆ ಬೆಂಕಿನಿರೋಧಕ ಲ್ಯಾಮಿನೇಟ್‌ ಮಾಡುವುದು ಉತ್ತಮ. ಯಾವುದೇ ಕಾರಣಕ್ಕೂ ವಾರ್ಡ್‌ರೋಬ್‌ ಒಳಗೆ ತೆರೆದ ರೀತಿಯಲ್ಲಿ ವಿದ್ಯುತ್‌ ವಾಹಕಗಳನ್ನು ಹರಿಸಬಾರದು. ಸ್ವಲ್ಪ ಸುತ್ತಿ ಬಳಸಿ ಬಂದರೂ ಪರವಾಗಿಲ್ಲ ಎಂದು ಡ್ರೆಸ್ಸಿಂಗ್‌ ವೈರಿಂಗ್‌ಅನ್ನು ಸೂರಿನಿಂದ ಗೋಡೆಗಳ ಮೂಲಕ ನೇರ ಸಾಗಿಸುವುದು ಉತ್ತಮ. 

ತೇವಾಂಶದ ಬಗ್ಗೆ ಜಾಗೃತಿ ಇರಲಿ
 ಮನೆಗಳಲ್ಲಿ ಶಾರ್ಟ್‌ ಸಕೂಟ್‌ ಆಗಲು ಮತ್ತೂಂದು ಕಾರಣ ನೀರು ಸೋರಿಕೆಯೇ ಆಗಿರುತ್ತದೆ. ಮನೆಯ ಹೊರಗೋಡೆಗಳು ಮಳೆಗಾಲದಲ್ಲಿ ತೇವಾಂಶದಿಂದ ಕೂಡಿದ್ದರೆ, ಅದೆಲ್ಲವೂ ಕಾಲಕ್ರಮೇಣ ಕಾಂಡ್ನೂಟ್‌ ಪೈಪ್‌ ಪ್ರವೇಶಿಸಿ, ಸ್ವಿಚ್‌ ಬಾಕ್ಸ್‌ನಲ್ಲಿ ಬೆಂಕಿ ಹೊತ್ತಿಕೊಳ್ಳಬಹುದು. ಆದುದರಿಂದ ಮನೆ ಗೋಡೆಗಳು ತೇವವಾದರೆ, ಬಣ್ಣದಲ್ಲಿನ ವ್ಯತ್ಯಾಸ ಕಂಡಕೂಡಲೆ ಸೋರಿಕೆಯ ಮೂಲ ಪತ್ತೆಮಾಡಿ ಸೂಕ್ತ ಕ್ರಮ ಕೈಗೊಳ್ಳುವುದು ಉತ್ತಮ. 

ವಿದ್ಯುತ್‌ ಬಳಸಿದ ಸ್ಥಳದಲ್ಲಿ ಒಂದಷ್ಟು ಶಾಖದ ಉತ್ಪತ್ತಿ ಆಗೇ ಆಗುತ್ತದೆ. ಹಾಗಾಗಿ, ಎಲ್ಲೆಲ್ಲಿ ವಿದ್ಯುತ್‌ ಸಲಕರಣೆಗಳನ್ನು ಬಳಸಲಾಗುತ್ತದೋ ಅಲ್ಲೆಲ್ಲ ಸಾಕಷ್ಟು ತೆರೆದ ಸ್ಥಳಗಳನ್ನು ನೀಡಬೇಕಾಗುತ್ತದೆ. ರೆಫ್ರಿಜರೇಟರ್‌ ಹಿಂಭಾಗ – ಮುಖ್ಯವಾಗಿ ಅತಿ ಹೆಚ್ಚು ಶಾಖ ಉತ್ಪಾದಿಸುವುದರಿಂದ ನಾಲ್ಕಾರು ಇಂಚಿನಷ್ಟು ಓಪನ್‌ ಸ್ಪೇಸ್‌ – ತೆರೆದ ಸ್ಥಳ ನೀಡುವುದು ಉತ್ತಮ. ಅದೇ ರೀತಿಯಲ್ಲಿ ಟಿವಿ, ಕಂಪ್ಯೂಟರ್‌ಗಳೂ ಒಂದಷ್ಟು ಶಾಖವನ್ನು ಉಂಟುಮಾಡುತ್ತವೆ. ಹಾಗಾಗಿ, ಇವನ್ನು ಮರದ ಮೇಲೆ ಅಥವಾ ತಗುಲಿದಂತೆ ಇಡಬಾರದು. ಬೆಂಕಿ ನಿರೋಧಕ ಗುಣ ಹೊಂದಿರುವ ಲ್ಯಾಮಿನೇಟ್‌ಗಳನ್ನು ಬಳಸಿ ಒಂದಷ್ಟು ಗಾಳಿ ಆಡಲು ಸ್ಥಳ (ಏರ್‌ ಗ್ಯಾಪ್‌) ಬಿಟ್ಟು ತಗುಲಿ ಹಾಕಬಹುದು.

ಹೆಚ್ಚಿನ ಮಾತಿಗೆ ಫೋನ್‌    98441 32826 

ಆರ್ಕಿಟೆಕ್ಟ್ ಕೆ.ಜಯರಾಮ್‌

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.