“ಇನ್‌ ಸೈಟ್‌’ ಇಲ್ಲದ ಗ್ರಾಹಕ ಚಳವಳಿ ಅತಂತ್ರ !


Team Udayavani, Dec 17, 2018, 6:00 AM IST

mavemsa-1.jpg

ಗ್ರಾಹಕ ಆಂದೋಲನ ಕ್ಲಿಷ್ಟಕರ ಆರೋಗ್ಯ ಸಮಸ್ಯೆಯನ್ನು ಅನುಭವಿಸುತ್ತಿದೆ. ನಿಜ ಹೇಳಬೇಕೆಂದರೆ, ಜನಸಂಖ್ಯೆ ಮತ್ತು ಜನರ ಜಾಗೃತಿಯ ಶೇಕಡಾವಾರು ಹೆಚ್ಚುವುದರ ಜೊತೆಗೆ ಗ್ರಾಹಕ ಪ್ರಜ್ಞೆ ಇನ್ನಷ್ಟು ವಿಸ್ತರಿಸಬೇಕಿತ್ತು. ಗ್ರಾಹಕ ಪರ ಸಂಘಟನೆಗಳಿಗೆ ಸುವರ್ಣ ಕಾಲ ಎದುರಾಗಬೇಕಿತ್ತು. ಆದರೆ ಕರ್ನಾಟಕ ಹಾಗೂ ಇಡೀ ದೇಶದ ವಿದ್ಯಮಾನ ಗಮನಿಸಿದರೆ ಬಳಕೆದಾರರ ಹಿತವನ್ನಿಟ್ಟುಕೊಂಡು ಸರ್ಕಾರೇತರ ಸಂಸ್ಥೆಗಳು ಬೆಳೆಯುತ್ತಿಲ್ಲ. ಅವು ತಮ್ಮ ಕಾರ್ಯಕ್ಷೇತ್ರ ಬದಲಿಸುತ್ತಿರುವ ಅಥವಾ ಸ್ಥಗಿತದ ಹಂತಕ್ಕೆ ಹೋಗುತ್ತಿರುವುದನ್ನು ಕಾಣುತ್ತಿದ್ದೇವೆ.  ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ಹೊಸ ಸಂಸ್ಥೆಗಳು ಅವತರಿಸಿದ್ದರೂ, ಅವುಗಳು ಗ್ರಾಹಕ ಕಾನೂನಿನ ಅರಿವು ಮೂಡಿಸುವುದನ್ನು ಮುಖ್ಯ ವಿಷಯವಾಗಿಸಿಕೊಂಡಿಲ್ಲ ಮತ್ತು ಗ್ರಾಹಕ ಜಾಗೃತಿ ಎಂಬುದು ಪ್ರಚಾರಾಂದೋಲನ ಬೇಡ ಎಂಬ ಹಂತವನ್ನು ತಲುಪಿಲ್ಲ. ಎಲ್ಲೋ ಒಂದು ಕಡೆ, ಗ್ರಾಹಕ ಚಳವಳಿಯೇ ಮಂದವಾಗಿದೆ ಅನಿಸುವುದೂ ಸುಳ್ಳಲ್ಲ. 

ಜಾಗೃತಿಯ ನಿಶ್ಯಕ್ತಿ!
ಅಹ್ಮದಾಬಾದ್‌ನಲ್ಲಿ 1978ರಲ್ಲಿ ಸ್ಥಾಪನೆಯಾದ ಗ್ರಾಹಕ ಶಿಕ್ಷಣ ಹಾಗೂ ಸಂಶೋಧನಾ ಕೇಂದ್ರ (ಸಿಇಆರ್‌ಸಿ) ಈಗ ಗ್ರಾಹಕ ಹೋರಾಟಗಳ ಮುಂಚೂಣಿಯ ನಾಯಕನಾಗಿರಬೇಕಿತ್ತು. 10 ಸಾವಿರ ಚದರ ಮೀಟರ್‌ ಜಾಗದಲ್ಲಿ ವ್ಯಾಪಿಸಿರುವ ಸಂಸ್ಥೆಯ ಆಂತರಿಕ ಪ್ರಯೋಗಾಲಯ ಏಷ್ಯಾ ಮಟ್ಟದಲ್ಲಿಯೇ ಅಪರೂಪವಾದದ್ದು. ಇಲ್ಲಿ ಆಹಾರ, ಸೌಂದರ್ಯವರ್ಧಕ, ಮನೆಯ ಎಲೆಕ್ಟ್ರಿಕಲ್‌ ಉಪಕರಣಗಳು, ಪಂಪ್‌ಸೆಟ್‌, ಫ್ಯಾನ್‌…. ಹೀಗೆ ಹಲವು ವಸ್ತುಗಳ ಗುಣಮಟ್ಟವನ್ನು ಪರಿಶೀಲಿಸುವ ವ್ಯವಸ್ಥೆಯನ್ನು ಹೊಂದಲಾಗಿದೆ. 

ಈ ಮೊದಲು ದೇಶದ ಎಲ್ಲ ಭಾಗಗಳಿಂದ ವಿವಿಧ ಬ್ರಾಂಡ್‌ಗಳ ಉತ್ಪನ್ನಗಳನ್ನು ಖರೀದಿಸಿ ತಂದು ಲ್ಯಾಬ್‌ನಲ್ಲಿ ಐಎಸ್‌ಐ, ಬಿಎಸ್‌ಐ ಮೊದಲಾದ ಮಾನಕಗಳ ಅಳತೆಗೋಲಿನಿಂದ ಪರಿಶೀಲಿಸಲಾಗುತ್ತಿತ್ತು. ಅಲ್ಲಿನ ಸಂಶೋಧನೆಯಿಂದ ವ್ಯಕ್ತವಾದ ಅಂಶಗಳ ಆಯಾ ಕಂಪನಿಗಳ ಪ್ರಾಡಕ್ಟ್ ವರದಿಯನ್ನು ಆಯಾ ಕಂಪನಿಗೆ ತಲುಪಿಸಿ ಅವರ ಅಭಿಪ್ರಾಯ ಕೇಳಲಾಗುತ್ತಿತ್ತು. ಅವರ ಪ್ರತಿಕ್ರಿಯೆಯನ್ನೂ ಸೇರಿಸಿ ಅವರದೇ ಪ್ರತಿಷ್ಟಿತ ದ್ವೆ„ಮಾಸಿಕ ಆಂಗ್ಲ ಪತ್ರಿಕೆ “ಇನ್‌ಸೈಟ್‌’ನಲ್ಲಿ ಜನರ ಮಾಹಿತಿಗಾಗಿ ಪ್ರಕಟಿಸಲಾಗುತ್ತಿತ್ತು. ಪತ್ರಿಕೆ ಇಂಗ್ಲೀಷ್‌ನಲ್ಲಿರುವ ಹಿನ್ನೆಲೆಯಲ್ಲಿ ಮತ್ತು ಅದು ಅತ್ಯುಪಯುಕ್ತ ಮಾಹಿತಿಗಳನ್ನು ಪ್ರಕಟಿಸುತ್ತಿದ್ದುದರಿಂದ ಅದು ಗ್ರಾಹಕ ಜಾಗೃತಿಯ ಬಹುದೊಡ್ಡ ಶಕ್ತಿಯಾಗಿತ್ತು. ಅದರ ಲೇಖನಗಳು ಪ್ರಾದೇಶಿಕ ಭಾಷೆಗಳಲ್ಲಿ ಭಾಷಾಂತರಗೊಳ್ಳುತ್ತಿದ್ದವು. ಈ ಮೂಲಕ ಪತ್ರಿಕೆ ಸಾಕಷ್ಟು ಪ್ರಭಾವಯುತವಾಗಿತ್ತು.

ವೆಬ್‌ ಇದೆ, ಸೈಟ್‌ ಇಲ್ಲ!
ಈ ರೀತಿಯ ಪತ್ರಿಕಾ ಪ್ರಕಟಣೆ, ಕಾರ್ಯಾಗಾರಗಳು, ವ್ಯವಸ್ಥಿತ ಲ್ಯಾಬ್‌ ನಿರ್ವಹಣೆಗಳು ಅತಿ ಹೆಚ್ಚಿನ ವೆಚ್ಚಗಳನ್ನು ಬಯಸುತ್ತವೆ. ಪರೀಕ್ಷೆಗೆ ಒಳಪಡುವ ಒಂದು ತಯಾರಿಕೆಯನ್ನು ಸಿಇಆರ್‌ಸಿ ಸಾಗರದಿಂದಲೂ ಖರೀದಿಸುತ್ತಿತ್ತು. ಸಾಗರದ ಬಳಕೆದಾರರ ವೇದಿಕೆ ಅದನ್ನು ಮಾರುಕಟ್ಟೆಯಲ್ಲಿಯೇ ಖರೀದಿಸಿ ಕಳುಹಿಸಿದರೆ ಅದರ ಎಲ್ಲ ವೆಚ್ಚಗಳನ್ನು ಸಿಇಆರ್‌ಸಿ ಭರಿಸುತ್ತಿತ್ತು. ಈ ರೀತಿ ದೇಶಾದ್ಯಂತ ನಡೆಸುವ ಚಟುವಟಿಕೆಗೆ ಬೇಕಾಗುವ ಹಣಕಾಸು ಸಾಕಷ್ಟು ದೊಡ್ಡ ಮೊತ್ತದ್ದಾಗಿರುತ್ತದೆ. ಎಲ್ಲೋ ಒಂದು ಕಡೆ, ಆ ನಿರ್ವಹಣೆ ಸಾಧ್ಯವಾಗದೆ ಇಂಗ್ಲೀಷ್‌ನಲ್ಲಿ ಪ್ರಕಟವಾಗುತ್ತಿದ್ದ ಇನ್‌ಸೈಟ್‌ ಪತ್ರಿಕೆ ಕಣ್ಣು ಮುಚ್ಚಿತು. 37 ವರ್ಷಗಳ ಸೇವೆ, 53 ಉದ್ಯೋಗಿಯ ಬಲ ಪಡೆದಿರುವ ಸಂಸ್ಥೆ ಈಗಲೂ ಕಾರ್ಯಾಚರಣೆಯಲ್ಲಿದೆ ಎಂಬುದನ್ನು ಅವರ ವೆಬ್‌ ಸೈಟ್‌k ಘಜಠಿಠಿಟ://cಛಿrcಜಿnಛಜಿಚ.ಟ್ಟಜ/] ಹೇಳುತ್ತದೆ. ಗ್ರಾಹಕ್‌ ಸಾಥಿ ಎಂಬ ಹಿಂದಿ ಪತ್ರಿಕೆಯನ್ನು ಪ್ರಕಟಿಸುತ್ತಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ. ಅದರ ಪ್ರಾಡಕ್ಟ್ ಲ್ಯಾಬ್‌ ರಿಪೋರ್ಟ್‌ಗಳ ವಿಭಾಗವನ್ನು ಪರಿಶೀಲಿಸಿದರೆ 2017ರವರೆಗಿನದ್ದು ಮಾತ್ರ ಕಾಣಿಸುತ್ತದೆ.

ಇದೇ ರೀತಿ ಕರ್ನಾಟಕದಲ್ಲೂ ಆಗಿದೆ. ದಕ್ಷಿಣ ಕನ್ನಡದಲ್ಲಿ ಗಮನಾರ್ಹ ಸಾಧನೆ ಮಾಡಿದ್ದ ಬಸೂÅರಿನ ಗ್ರಾಹಕ ಸಂಘಟನೆ, ಗ್ರಾಹಕ ಸಂರಕ್ಷಣೆಯ ವಿಷಯ ವ್ಯಾಪ್ತಿಯನ್ನು ಬಿಟ್ಟು ಮಾನವೀಯ ವಿಚಾರಗಳನ್ನು ಆಧರಿಸಿ ಚಟುವಟಿಕೆ ಮಾಡಲು ತೀರ್ಮಾನಿಸಿ ದಶಕಗಳೇ ಕಳೆದಿವೆ. ಉಡುಪಿಯ ಬಳಕೆದಾರರ ವೇದಿಕೆ ಹಾಗೂ ಅದರ ಪತ್ರಿಕೆ, ಮೈಸೂರಿನ ಗ್ರಾಹಕ ಪರಿಷತ್‌ ಮೊದಲಾದವು ಒಂದೋ ಕೆಲಸ ಮಾಡುತ್ತಿಲ್ಲ ಅಥವಾ ಕಾರ್ಯಕ್ಷೇತ್ರವನ್ನು ವಿಸ್ತರಿಸುವುದು ಬಿಡಿ, ಇಡುವ ಹೆಜ್ಜೆಗಳನ್ನೇ ಗಟ್ಟಿಯಾಗಿ ಇಡಲಾಗುತ್ತಿಲ್ಲ. ಕನ್ನಡದಲ್ಲಿ ಪ್ರಕಟವಾಗುತ್ತಿದ್ದ ಬಹುತೇಕ ಗ್ರಾಹಕ ಪತ್ರಿಕೆಗಳು ಪ್ರಕಟಣೆಯನ್ನು ಸ್ಥಗಿತಗೊಳಿಸಿವೆ. ಬಸೂÅರಿನ ಬಳಕೆದಾರರ ಶಿಕ್ಷಣ ಈಗಿಲ್ಲ, ಉಡುಪಿಯ ಬಳಕೆದಾರರ ವೇದಿಕೆ ಹೆಸರಿನ ಪಾಕ್ಷಿಕ ಪ್ರಕಟಗೊಳ್ಳುತ್ತಿಲ್ಲ. ಮೈಸೂರಿನ ಗ್ರಾಹಕ ಪತ್ರಿಕೆ ಕಾಣಿಸುತ್ತಿಲ್ಲ. ಈ ರೀತಿಯ ಛಾಪು ಮೂಡಿಸಿದ ಸಂಸ್ಥೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಅತಿ ಮುಖ್ಯ ಪಾತ್ರ ವಹಿಸಬೇಕಾಗಿತ್ತು. ಅದಕ್ಕಾಗಿ ಸರ್ಕಾರ ತನ್ನ ಕೈಯಿಂದ ಹಣ ವೆಚ್ಚ ಮಾಡಬೇಕಾದ ಅಗತ್ಯವೂ ಇರಲಿಲ್ಲ!

ಹೋರಾಟದ ಸಂಸ್ಥೆಗಳಿಗೆ ಆರ್ಥಿಕ ಚೇತನ
ಬಳಕೆದಾರರ ದಂಢಿ ಹಣ ವಿವಿಧ ಸೇವಾದಾತರಲ್ಲಿ ಸಂಗ್ರಹವಾಗಿದೆ. ಬ್ಯಾಂಕ್‌ಗಳಲ್ಲಿ ಬಳಕೆಯಾದ ಬ್ಯಾಂಕ್‌ ಖಾತೆಗಳಲ್ಲಿ ಉಳಿದ ಹಣ, ಅವಧಿ ಮುಗಿಸಿದ್ದರೂ ಮರಳಿ ಪಡೆಯದ ಠೇವಣಿ ಹಣ, ನಗದೀಕರಣಕ್ಕೆ ಸಲ್ಲಿಸಿದ ಚೆಕ್‌ ಪಾವತಿಯಾಗದ ಬ್ಯಾಂಕ್‌ನ ಖಾತೆಯಲ್ಲಿರುವ ಪ್ರಕರಣ… ಇವುಗಳಿಂದ ಕೋಟಿ ಕೋಟಿ ರೂ.ಗಳ ಸಂಗ್ರಹವಿದೆ. 

ಇತ್ತೀಚಿನ ಮಾಹಿತಿಯಂತೆ 64 ಬ್ಯಾಂಕ್‌ಗಳಲ್ಲಿ ಹಕ್ಕುದಾರಿಕೆ ಮಂಡಿಸದೆ ಸಂಗ್ರಹದಲ್ಲಿರುವ ಮೊತ್ತ 11,300 ಕೋಟಿ ರೂ. ಈವರೆಗೆ 3 ಕೋಟಿ ಖಾತೆಗಳು ತಟಸ್ಥವಾಗಿವೆ. ಈ ಮೊತ್ತ ಬ್ಯಾಂಕ್‌ಗಳ ಕೇಂದ್ರ ಶಾಖೆಯ ಖಾತೆಗೆ ವರ್ಗಾವಣೆಗೊಳ್ಳಬೇಕು. ಇದಕ್ಕೆ ಬ್ಯಾಂಕ್‌ ಉಳಿತಾಯ ಖಾತೆಯ ಬಡ್ಡಿದರವನ್ನು ಲಾಗೂ ಮಾಡಿ ಬಡ್ಡಿಯನ್ನೂ ಸೇರಿಸಬೇಕು ಎಂಬ ಆರ್‌ಬಿಐ ನಿಯಮವಿದೆ. ಹಣವನ್ನು ಬ್ಯಾಂಕಿಂಗ್‌ ಕ್ಷೇತ್ರದ ಫ‌ಲಾನುಭಗಳ ಜಾಗೃತಿಗಾಗಿ ಬಳಸಬೇಕೆಂಬ ಷರತ್ತಿನಡಿಯಲ್ಲಿ ಬ್ಯಾಂಕಿಂಗ್‌ ನಿಯಮಗಳಿಗೆ 2012ರಲ್ಲಿ ತಿದ್ದುಪಡಿ ತಂದು ಡಿಪಾಸಿಟರ್‌ ಎಜುಕೇಷನ್‌ ಎಂಡ್‌ ಅವೇರ್‌ನೆಸ್‌ ಫ‌ಂಡ್‌ ರೂಪಿಸಲಾಗಿದೆ.

ಈ ಹಣ ಸರಿಯಾದ ಕಾರಣಕ್ಕೆ ಬಳಕೆಯಾಗುತ್ತಿಲ್ಲ ಎಂದು ನಂಬಲು ಕಾರಣಗಳಿವೆ. ಕಾಟಾಚಾರಕ್ಕೆ ನಡೆಯುವ ಜಾಗೃತಿ ಸಮಾವೇಶಗಳು, ಕಾರ್ಯಾಗಾರಗಳಿಗಿಂತ ಸಿಇಆರ್‌ಸಿಯಂತಹ ಸಂಸ್ಥೆಗಳನ್ನು ಮುನ್ನಡೆಸಲು ಇಂಥ ಹಣ ಬಳಕೆಯಾಗಬೇಕು. ಈ ಥರಹದ ಸಂಸ್ಥೆಗಳು ಪೂರ್ಣ ಪ್ರಮಾಣದ ಕಾರ್ಯಾಚರಣೆಯಲ್ಲಿದ್ದರೆ ಗ್ರಾಹಕ ಆಂದೋಲನ ಹೊಸ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಟೆಲಿಕಾಂ ಕ್ಷೇತ್ರದಲ್ಲಿಯೂ ನಿರ್ಜೀವ ಸಿಮ್‌ನಲ್ಲಿ ಬಳಕೆಯಾಗದೆ ಉಳಿಯುವ ಮೊತ್ತವೂ ಸಾವಿರಾರು ಕೋಟಿಗಳಾಗುತ್ತವೆ. ಈ ಕುರಿತ ಅಂಕಿಅಂಶ ಲಭ್ಯವಿಲ್ಲ. ಆದರೆ ಒಂದಂತೂ ಸ್ಪಷ್ಟ, ಈ ಮೊತ್ತ ಗ್ರಾಹಕ ಜಾಗೃತಿಯ ಚಟುವಟಿಕೆಗಳಿಗಾಗಿಯೇ ವಿನಿಯೋಗವಾಗಬೇಕಾಗಿದೆಯೇ ವಿನಃ ಮೊಬೈಲ್‌ ಸೇವಾದಾತರ ಅಕೌಂಟ್‌ಗೆ ಸೇರಬಾರದು.

ಗ್ರಾಹಕ ನಿಧಿಯ ಬಳಕೆ
1944ರ ಸೆಂಟ್ರಲ್‌ ಎಕ್ಸೆ„ಸ್‌ ಎಂಡ್‌ ಸಾಲ್ಟ್ ಆ್ಯಕ್ಟ್‌ನು° 1991ರಲ್ಲಿ ತಿದ್ದುಪಡಿ ಮಾಡಿ ಗ್ರಾಹಕ ಹಿತರಕ್ಷಣಾ ನಿಧಿಯನ್ನು ರೂಪಿಸಲಾಯಿತು. ಈ ನಿಧಿಯಲ್ಲಿಯೂ ಸಾವಿರಾರು ಕೋಟಿ ಹಣವಿದೆ. ಗ್ರಾಹಕ ನ್ಯಾಯಾಲಯಗಳಲ್ಲಿ ಸೇವಾ ನ್ಯೂನತೆ ಎಸಗುವ ಅಪರಾಧಿ ಸಂಸ್ಥೆ, ವ್ಯಕ್ತಿಗಳಿಗೆ ವಿಧಿಸುವ ದಂಡಗಳು ಗ್ರಾಹಕ ನಿಧಿಗೆ ಸಲ್ಲುತ್ತವೆ. ಇತ್ತೀಚಿನ ಒಂದು ಪ್ರಕರಣವನ್ನು ಉಲ್ಲೇಖೀಸುವುದಾದರೆ, ದೆಹಲಿಯ ಜಾನ್ಸನ್‌ ಎಂಡ್‌ ಜಾನ್ಸನ್‌ ತಯಾರಿಕೆಯ ಡೀಲರ್‌ ಒಬ್ಬರು ಶೇ. 18ರಷ್ಟು ಬಡ್ಡಿ ಸಮೇತ 5 ಲಕ್ಷ ರೂ.ಗಳನ್ನು ಜಿಎಸ್‌ಟಿ ವಂಚನೆಯ ಪ್ರಕರಣದಲ್ಲಿ ಗ್ರಾಹಕ ನಿಧಿಗೆ ಪಾವತಿಸಿದ್ದಾರೆ. 

ಈ ರೀತಿಯ ಹಣ ನುಂಗಿ ನೀರು ಕುಡಿಯಲೆಂದೇ ನೂರಾರು ಲೆಟರ್‌ಹೆಡ್‌ ಸಂಘಟನೆಗಳು ಹುಟ್ಟಿಕೊಳ್ಳುತ್ತವೆ. ಬಹುಪಾಲನ್ನು ಅಧಿಕಾರದಲ್ಲಿದ್ದವರೇ ಬೇನಾಮಿ ಸಂಘಟನೆಗಳು, ಟ್ರಸ್ಟ್‌ಗಳನ್ನು ಹುಟ್ಟುಹಾಕಿ ಜನರ ದುಡ್ಡಿಗೆ ಕೈಹಾಕಿವೆ. ನಿಜಕ್ಕೂ ಸೇವೆ ಸಲ್ಲಿಸುತ್ತಿರುವ, ಹಣ ಮಾಡುವ ದಂಧೆ ಗೊತ್ತಿಲ್ಲದ ಪ್ರಾಮಾಣಿಕರು ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡಿದ್ದಾರೆ! ಸರ್ಕಾರ ಎಂಬುದಕ್ಕೆ ಅಪಾರ ಶಕ್ತಿ ಇದೆ. ಅದು ಗ್ರಾಹಕ ಕ್ಷೇತ್ರದಲ್ಲಿ ಅಸಲಿಯತ್ತಾಗಿ ಕೆಲಸ ಮಾಡುವ ಸಂಸ್ಥೆಗಳ ಮಾಹಿತಿಯನ್ನು ಸಂಗ್ರಹಿಸಿ ತಾನೇ ಯೋಜನೆ ರೂಪಿಸಿ ಅವುಗಳನ್ನು ಪುನರುಜ್ಜೀವನಗೊಳಿಸುವ ಸಾಮರ್ಥ್ಯ, ಸಾಧ್ಯತೆಗಳನ್ನು ಹೊಂದಿದೆ. ಅದಾಗಲಿ.

– ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು,
ಬಳಕೆದಾರರ ವೇದಿಕೆ, ಸಾಗರ

ಟಾಪ್ ನ್ಯೂಸ್

ಸಚಿವ ಜೋಶಿ

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಸಚಿವ ಜೋಶಿ

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.