ನಿಮ್ಮನೆ ಅರಮನೆ


Team Udayavani, Jan 6, 2019, 1:33 PM IST

jayarama-1.jpg

ಮನೆ ಕಟ್ಟುವುದು ಬದುಕಿನ ದೊಡ್ಡ ಕನಸು. ಹೀಗಾಗಿ, ಎಲ್ಲರಿಗೂ ಅವರವರ ಮನೆ ಅರಮನೆಯಂತೆ ಇರಬೇಕು ಅನ್ನೋ ಆಸೆ ಇರುತ್ತದೆ. ನೀವು ಮನೆ ಕಟ್ಟುವಾಗ ಅರಮನೆಯ ಕಟ್ಟಡ ತಂತ್ರಗಳನ್ನು ಜಾರಿ ಮಾಡಿದರೆ ನಿಮ್ಮ ಮನೆ ನಿಜವಾಗಿಯೂ ಅರಮನೆಯಂತೆ ಕಾಣುತ್ತದೆ.  ಅದು ಹೇಗೆ? ಇಲ್ಲಿದೆ ಮಾಹಿತಿ. 

ಎಲ್ಲರಿಗೂ ಅವರವರ ಮನೆ ಒಂದು ರೀತಿಯಲ್ಲಿ ಅರಮನೆಯೇ. ಹಾಗಂತ ಇದೇನು ಅರಮನೆಯಂತೆಯೇ ಇರುತ್ತದೆ ಎಂದಲ್ಲ. ಅರಮನೆಯ ರೀತಿ ಫೀಲ್‌ ಕೊಟ್ಟರೆ ಸಾಕು. ಇದಕ್ಕಾಗಿ ನಮ್ಮ ಹಿಂದಿನವರು ಅರಮನೆಯನ್ನು ಕಟ್ಟುವಾಗ ಬಳಸಿದ  ಕಟ್ಟುವ ತಂತ್ರಗಾರಿಕೆಯನ್ನು, ಸೌಂದರ್ಯವನ್ನು ನಾವು ಕಟ್ಟುವ ಮನೆಗಳಿಗೂ ಅಳವಡಿಸಿಕೊಳ್ಳಬಹುದು.    ಹಾಗಾದರೆ, ಅರಮನೆಗಳನ್ನು ಆ ಮಟ್ಟಕ್ಕೆ ಕೊಂಡೊಯ್ಯುವ ಸಂಗತಿಗಳು ಯಾವುವು, ಅದರಲ್ಲಿರುವ ಯಾವ ಅಂಶಗಳನ್ನು ಸುಲಭದಲ್ಲಿ ನಮ್ಮ ಮನೆಯ ವಿನ್ಯಾಸಗಳಲ್ಲಿ ಅಳವಡಿಸಿಕೊಳ್ಳಬಹುದು? ಅನ್ನೋದಕ್ಕೆ ಇಲ್ಲಿದೆ ಮಾಹಿತಿ. 

ಅಳತೆಗೋಲು
ಅರಮನೆ ಎಂದರೆ ಅದರಲ್ಲಿ ಎಲ್ಲವೂ ದೊಡ್ಡದೊಡ್ಡ ದಾಗಿರುತ್ತದೆ. ಆಸನ ಎಂದರೆ ಸಿಂಹಾಸನದಂತಿರುತ್ತದೆ. ಆದರೆ ನಾವು ಎಲ್ಲವನ್ನೂ ನಕಲು ಮಾಡುವ ಅಗತ್ಯ ಇಲ್ಲ. ಮನೆಯ ಮಟ್ಟದಲ್ಲಿ ಕೆಲವೊಂದು ಸಂಗತಿಗಳು ಅಂದರೆ, ರೂಮ್‌, ಹಾಲ್‌ ಇವುಗಳು ದೊಡ್ಡದಾಗಿದ್ದರೆ ಚೆಂದವಾಗಿ ಕಾಣುತ್ತದೆ. ಬಚ್ಚಲು ಮನೆ, ದೇವರಮನೆಗಳಂಥವು ತೀರ ದೊಡ್ಡದಿದ್ದರೆ, ಮನೆ ಎಂದೆನಿಸುವ ಬದಲು ಛತ್ರ ದಂತೆ ಕಾಣಬಹುದು. ಆದುದರಿಂದ, ನಾವು ದೊಡ್ಡದಾಗಿ ಮನೆ ಕಟ್ಟುವ ಮೊದಲು ವಿಸ್ತ್ರೀರ್ಣಕ್ಕೆ ತಕ್ಕ ವಿನ್ಯಾಸವನ್ನು ಪರಿಶೀಲಿಸಬೇಕಾಗುತ್ತದೆ. ಇಲ್ಲವಾದರೆ ಮೂಗಿಗಿಂತ ಮೂಗುತಿ ಭಾರ ಎಂದಂತಾಗುತ್ತದೆ. 

ನಮ್ಮ ಮನೆಗಳಲ್ಲಿ ಸಾಮಾನ್ಯವಾಗಿ ಸೂರಿನ ಎತ್ತರ ಹತ್ತು ಅಡಿ ಇರುತ್ತದೆ. ಇದಕ್ಕಿಂತ ಹೆಚ್ಚು ಎತ್ತರ ಇಡಲು ಹೋದರೆ, ಖರ್ಚು ಹೆಚ್ಚಾಗುವುದು ಖಂಡಿತ. ಇರುವ ಸಣ್ಣ ಗೆರೆಯನ್ನು ಉದ್ದ ಮಾಡಲು ಅದರ ಪಕ್ಕ ಅದಕ್ಕಿಂತ ಸಣ್ಣದೊಂದು ಗೆರೆಯನ್ನು ಎಳೆಯುವ ರೀತಿಯಲ್ಲಿ, ಮನೆಯ ಕೆಲವೊಂದು ಭಾಗಗಳನ್ನು ಮಾಮೂಲಿ ಎತ್ತರಕ್ಕಿಂತ ಕಡಿಮೆ ಮಾಡಿಕೊಂಡರೂ ಅಡ್ಡಿ ಇಲ್ಲ! ಹೀಗೆ ಮಾಡುವ ಮೂಲಕ ನಮ್ಮ ಮನೆಯನ್ನು ಮಾಮೂಲಿ ಎತ್ತರಕ್ಕಿಂತ ಮತ್ತಷ್ಟು ಹೆಚ್ಚಾಗುವಂತೆ ಮಾಡಬಹುದು. 

ಮನೆಗೆ ಪ್ರವೇಶ ಕಲ್ಪಿಸುವ ವರಾಂಡ, ಇಲ್ಲವೇ ಪೊರ್ಟಿಕೊ ಸಣ್ಣ ಸ್ಥಳವಾದ ಕಾರಣ ಇವುಗಳ ಎತ್ತರವನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯವಿಲ್ಲ.  ಏಳು ಇಲ್ಲವೇ ಎಂಟು ಅಡಿ ಎತ್ತರ ಇದ್ದರೂ ಸಾಕಾಗುತ್ತದೆ. 

ಹೀಗೆ ಮನೆಯ ಸಣ್ಣ ಸ್ಥಳದ ಪಕ್ಕದಲ್ಲಿ ಎತ್ತರದ ಸ್ಥಳವಿದ್ದರೆ ಅದು ಹೋಲಿಕೆಯಿಂದಾಗಿ ದೊಡ್ಡದಾಗಿ ಕಾಣುತ್ತದೆ.  ಈ ಮಾದರಿಯ ಕಾಂಟ್ರಾಸ್ಟ್‌ ಅನ್ನು ನಾವು ಮನೆಯ ಇತರೆ ಕಡೆಗಳಲ್ಲೂ ಬಳಸಬಹುದು. ಮನೆಗೆ ಮೆಟ್ಟಿಲಿದ್ದರೆ, ಅದರ ಮಧ್ಯದ ಲ್ಯಾಂಡಿಂಗ್‌ ಅಂದರೆ ಮೆಟ್ಟಿಲುಗಳ ಮಧ್ಯೆ ಇರುವ ಸುಧಾರಿಸಿಕೊಳ್ಳುವ ಸ್ಥಳದ ಮಟ್ಟವನ್ನು ಏಳು ಇಲ್ಲವೇ ಎಂಟು ಅಡಿಗೆ ಇಟ್ಟರೆ ಆಗ ವೈವಿಧ್ಯವಾಗಿರುತ್ತದೆ. ಹೀಗೆ ಮನೆ ಕಟ್ಟುವಾಗ ವಿಸ್ತಾರಗಳಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಿದರೆ ನಮ್ಮ ಮನೆ ವಿಶಾಲವಾಗಿದೆ ಅನ್ನೋವ ಭಾವ ಮೂಡುತ್ತದೆ. 

ವಿಶೇಷ ವಿನ್ಯಾಸ
ಮನೆಯ ಎಲ್ಲ ಭಾಗಗಳೂ ಬರೀ ದೊಡ್ಡದಾಗಿದ್ದರೆ ಅರಮನೆ ಆಗುವುದಿಲ್ಲ. ಏಕೆಂದರೆ ಗೋಡೌನ್‌ಗಳೂ ದೊಡ್ಡದಾಗಿರುತ್ತವೆ. ಪ್ರಯೋಜನ ಏನು? ಆದುದರಿಂದ, ನಮ್ಮ ಮನೆಗೊಂದಷ್ಟು ವಿಶೇಷ ವಿನ್ಯಾಸ ಮಾಡಬೇಕಾಗುತ್ತದೆ. ಅರಮನೆಗಳು ತಮ್ಮತನವನ್ನು ಪ್ರತಿಪಾಧಿಸುವುದು ಒಂದಷ್ಟು ವಿನ್ಯಾಸಗಳಿಂದ. ನೋಡಗರಿಗೆ ಅರಮನೆಯ ಫೀಲ್‌ ಕೊಡುವುದು ಇಂಥ ವಿನ್ಯಾಸಗಳೇ. 

ಅದು ವಿಶೇಷ ಮಾದರಿಯ ಆರ್ಚ್‌  ಇರಬಹುದು ಇಲ್ಲವೇ ಸೂರು, ಅದಕ್ಕೆ ಹೊಂದಿದಂತೆ ಇರುವ ಗುಮ್ಮಟ ಆಗಿರಬಹುದು. ಇವೆಲ್ಲವೂ ನೋಡುಗರಿಗೆ ಅರಮನೆಯ ಫೀಲ್‌ ಕೊಡುತ್ತದೆ.  ಮನೆಗಳಿಗೆ ಕಮಾನುಗಳನ್ನು ಅಳವಡಿಸುವುದು ಕಷ್ಟವೇನಲ್ಲ. ಕೆಲವು ವಿನ್ಯಾಸಗಳು ಹಲವು ದಶಕಗಳ ಕಾಲ ಹಾಗೇ ಇರುತ್ತದೆ. ಅವುಗಳಲ್ಲಿ ಆರ್ಚ್‌ಗಳೂ ಒಂದು. ಎಲ್ಲೆಲ್ಲಿ ಬೇಕೋ ಅಲ್ಲೆಲ್ಲ ಅಳತೆ ಸರಿಹೊಂದುವಂತೆ ಅಳವಡಿಸಿಕೊಂಡರೆ, ಮನೆಯ ಅಂದ ಹೆಚ್ಚುವುದರಲ್ಲಿ ಸಂಶಯವಿಲ್ಲ. ಕಮಾನುಗಳು ನಾನಾ ರೀತಿಯಲ್ಲಿ ಲಭ್ಯ. ಮಾಮೂಲಿ ಅರ್ಧ ಚಂದ್ರಾಕೃತಿಯ  ಆರ್ಚ್‌ನಿಂದ ಹಿಡಿದು ಕಮಲದ ದಳದಂತಿರುವ ಬಹು ಕೇಂದ್ರಗಳನ್ನು ಹೊಂದಿರುವ ಲೋಟಸ್‌ ಆರ್ಚ್‌ಗಳವರೆಗೂ ನಾನಾ ವಿನ್ಯಾಸ ಮಾಡಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಕುಶಲ ಕರ್ಮಿಗಳ ಅಭಾವ ಇರುವುದರಿಂದ, ನಿಮಗೆ ವಿಶೇಷವಾದ ಕಮಾನುಗಳನ್ನು ಮಾಡಿಸಬೇಕು ಎಂದಿದ್ದರೆ, ಬಡಗಿಗಳಿಂದ ಟೆಂಪ್ಲೆಟ್‌ಗಳನ್ನು ಮಾಡಿಸಿ ಗಾರೆಯವರಿಗೆ ಕೊಡುವುದು ಉತ್ತಮ.   

ಗೊಮ್ಮಟಗಳ ಅಳವಡಿಕೆ
ಮನೆಗಳಿಗೆ ಗುಮ್ಮಟಗಳನ್ನು ಅಳವಡಿಸುವುದು ಅಷ್ಟು ಸುಲಭವಲ್ಲ. ಮೆಟ್ಟಿಲುಗಳ ಮೇಲೆ ಬೆಳಕಿಗೆಂದು ಸ್ಕೈಲೈಟ್‌ ಮಾದರಿಯಲ್ಲಿ ನಾಲ್ಕಾರು ಅಡಿ ಅಗಲದ ಗುಮ್ಮಟಗಳು ಜನಪ್ರಿಯವಾಗಿದ್ದರೂ, ಇದನ್ನು ಸಿಮೆಂಟ್‌ ಇಲ್ಲವೇ ಕಲ್ಲಿನಲ್ಲಿ ಕಟ್ಟುವುದು ಅಷ್ಟು ಸುಲಭವಲ್ಲ. ಆದರೆ ನಮಗೆ ಕೆಲ ಮಾದರಿಯ ಗುಮ್ಮಟಗಳು ಇಷ್ಟವಾಗಿದ್ದರೆ, ಅವುಗಳನ್ನು ಇಡಿಯಾಗಿ ನಕಲು ಮಾಡುವ ಬದಲು, ಕೆಲವೊಂದು ಭಾಗಗಳನ್ನು ಮಾತ್ರ, ಅತಿ ಸುಲಭದಲ್ಲಿ ಅದರ ಅರ್ಧ ಭಾಗವನ್ನು ಪೋರ್ಟಿಕೊಗಳಿಗೆ ಅಳವಡಿಸಿಕೊಳ್ಳಬಹುದು. ಇವು ನೋಡಲು ಕಮಾನುಗಳಂತೆಯೇ ಕಂಡರೂ, ಒಳಗೆ ಇವು ಗುಂಡಗೆ ತಿರುಗುವುದರಿಂದ, ಮನೆಯ ಮುಂಭಾಗಕ್ಕೆ ವಿಶೇಷ ಮೆರುಗನ್ನು ನೀಡಬಲ್ಲವು.

ಬಣ್ಣ ಬೇಡದ ಮನೆಗಳು
ಸಾಮಾನ್ಯವಾಗಿ ಅರಮನೆಗಳನ್ನು ನೂರಾರು ವರ್ಷ ಬಾಳಿಕೆ ಬರುವಂತೆ ಕಲ್ಲು ಇಲ್ಲವೇ ಇತರೆ ದೀರ್ಘ‌ಕಾಲ ಬಾಳಿಕೆ ಬರುವ ವಸ್ತುಗಳಿಂದ ಕಟ್ಟಿರುತ್ತಾರೆ. ನಿಮ್ಮ ಮನೆಗೂ ಇದೇ ತಂತ್ರವನ್ನು ಜಾರಿ ಮಾಡಬಹುದು. ಅದಕ್ಕಾಗಿ ಮನೆಯ ಆಸುಪಾಸಿನಲ್ಲಿ ಸಿಗುವ ಕಲ್ಲು, ಜಂಬಿಟ್ಟಿಗೆ ಮುಂತಾದ ವಸ್ತುಗಳಿಂದ ಮನೆಯನ್ನು ಕಟ್ಟಿದರೆ ಎರಡು ಮೂರು ವರ್ಷಗಳಿಗೊಮ್ಮೆ ಬಣ್ಣಬಳಿಯುವ ತಲೆ ಬೇನೆ ಇರುವುದಿಲ್ಲ. ಇದರಿಂದ ಮನೆಗೂ ಆ ಒಂದು ರಾಯಲ್‌ ಲುಕ್‌ ಬರುತ್ತದೆ. ಬರೀ ಕಲ್ಲಿನಲ್ಲೆ ಇಡೀ ಮನೆಯನ್ನು ಕಟ್ಟಬೇಕು ಎಂದೇನೂ ಇಲ್ಲ. ಮುಖ್ಯವಾಗಿ ಮನೆಯ   ಹೊರಗೆ, ಒಳಗೆ ಎದ್ದು ಕಾಣುವ ಒಂದಷ್ಟು ಭಾಗಗಳನ್ನು ಕಲ್ಲಿನಿಂದ ಕಟ್ಟಿದರೆ ಮನೆಗೆ ಶ್ರೀಮಂತ ಗಾಂಭೀರ್ಯ ಬರುವುದರಲ್ಲಿ ಸಂಶಯಲ್ಲ. 

ಇದೆಲ್ಲ ಗೊತ್ತಿರಲಿ
ಅರಮನೆಯಲ್ಲಿರುವ ಎಲ್ಲ ತಂತ್ರಗಳನ್ನೂ ಮನೆ ಕಟ್ಟುವಾಗ ಜಾರಿ ಮಾಡಲು ಆಗುವುದಿಲ್ಲ. ಗಮನಿಸಬೇಕಾದ ವಿಚಾರ ಎಂದರೆ, ಅರಮನೆಯ ಹೊರ ನೋಟ ಅಂದರೆ ರಾಯಲ್‌ ಲುಕ್‌,  ಅದನ್ನು ಬಣ್ಣಗಳು, ಕಂಬಗಳು, ಚಿತ್ತಾರಗಳು ತಂದುಕೊಡುತ್ತವೆ.  ಮನೆ ಕಟ್ಟುವಾಗ ನಾವು ಕೂಡ ಇವುಗಳ ಕಡೆ ಗಮನ ಹರಿಸಬೇಕು. ಆದರೆ,  ಅರಮನೆಯಲ್ಲಿ ಬಳಸಿದಂತೆ ಹೆಚ್ಚು ರಿಚ್‌ ಆದ ಬಣ್ಣಗಳನ್ನು ಇಲ್ಲಿ ಬಳಸುವುದು ಕಷ್ಟ. ಹೀಗೆ ಮಾಡಿದರೆ ಖರ್ಚು ಹೆಚ್ಚಾಗುತ್ತದೆ.  ಎಲ್ಲಕ್ಕಿಂತ ಮುಖ್ಯವಾಗಿ ಯಾವ್ಯಾವ ಸ್ಥಳದಲ್ಲಿ, ಏನೇನು ಬರಬೇಕು ಅನ್ನೋದನ್ನು ಮೊದಲೆ ನಿಗದಿಪಡಿಸಿ. ಉದಾಹರಣೆಗೆ- ಅರಮನೆ ಕಮಾನನ್ನು ಹೋಲುವ ಆರ್ಚ್‌ ಅನ್ನು ನಮ್ಮ ಮನೆಯಲ್ಲಿ ಅಡುಗೆ ಮನೆಯಲ್ಲಿ ನಿರ್ಮಿಸಿದರೆ ಅದು ರಾಯಲ್‌ ಲುಕ್‌ ಕೊಡಲಾರದು. ಬದಲಾಗಿ ವರಾಂಡವೋ, ಮುಂಬಾಗಿಲ ಬಳಿ ನಿರ್ಮಿಸಿದರೆ ಒಳಿತು. 

ಮಾಹಿತಿಗೆ- 98441 32826

– ಆರ್ಕಿಟೆಕ್ಟ್ ಕೆ.ಜಯರಾಮ್‌

ಟಾಪ್ ನ್ಯೂಸ್

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

9-fusion

Drama: ಪ್ರೇಕ್ಷಕರ ಮನಗೆದ್ದ “ಸೀತಾರಾಮ ಚರಿತಾ”

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.