ಸಿಬ್ಬಂದಿಗಳ ಮಾಲೀಕತ್ವ ಯೋಜನೆ ಬಗ್ಗೆ ಗೊತ್ತಾ?


Team Udayavani, Jan 21, 2019, 12:30 AM IST

leed-2.jpg

ಸಿಬ್ಬಂದಿಗಳ ಮಾಲೀಕತ್ವ ಯೋಜನೆಯನ್ನು “ಉಳುವವನೇ ನೆಲದೊಡೆಯ’ ಕಾನೂನಿನ ಆಧುನಿಕ ರೂಪ ಎನ್ನಬಹುದೇನೋ. ಈ ಯೋಜನೆಯಂತೆ, ಕಂಪನಿಯಲ್ಲಿ ನೌಕರರೂ ಸ್ವಲ್ಪ ಮಟ್ಟಿಗೆ ಮಾಲೀಕರಾಗುತ್ತಾರೆ. ಮಾಲೀಕನಾಗಿ ಕೆಲಸ ಮಾಡಲು ಹೊರಟಾಗ ಸಹಜವಾಗಿಯೇ ನೌಕರನಲ್ಲಿ ಬದ್ಧತೆ ಹೆಚ್ಚಾಗಿರುತ್ತದೆ. 

ಕಂಪನಿಗಳಿಗಳಲ್ಲಿ ಸರಿಯಾದ  ಸಿಬ್ಬಂದಿಗಳನ್ನು  ಆಯ್ಕೆ ಮಾಡುವುದು, ಅವರನ್ನು ಉಳಿಸಿಕೊಳ್ಳವುದು ಕಷ್ಟ. ಹೆಚ್ಚಿನ ಸಂಬಳ- ಸೌಲಭ್ಯ, ಇನ್ನೂ ಅನುಕೂಲಕರ ಕಾರ್ಯ ಕ್ಷೇತ್ರ, ಶೀಘ್ರ ಪದೋನ್ನತಿ, ವಿದೇಶಿ ಪೋಸ್ಟಿಂಗ್‌ ಮುಂತಾದ ಸೌಲಭ್ಯಗಳಿಗಾಗಿ ಸಿಬ್ಬಂದಿಗಳು   ತ್ವರಿತ ಗತಿಯಲ್ಲಿ ಕಂಪನಿಗಳನ್ನು  ಬದಲಿಸುವುದು ಈ ದಿನಗಳಲ್ಲಿ ತೀರಾ ಸಾಮಾನ್ಯ. ವೃತ್ತಿಯಲ್ಲಿ  ನೈಪುಣ್ಯತೆ ಮತ್ತು ಅನುಭವ ಇದ್ದರೆ, ಬೇಡಿಕೆ ಪೂರೈಕೆ ಅನ್ವಯ  ಈ ರೀತಿಯ ವಲಸೆ ಇನ್ನೂ ಹೆಚ್ಚಾಗುತ್ತದೆ. ಅಂತೆಯೇ, ಕಂಪನಿಗಳು ತಮ್ಮ ಸಿಬ್ಬಂದಿಗಳನ್ನು ಉಳಿಸಿಕೊಳ್ಳಲು ಮತ್ತು ಅವರಿಂದ ಹೆಚ್ಚಿನ  ಕೆಲಸ ನಿರೀಕ್ಷಿಸಲು ಅವರಿಗೆ  ಮಾಮೂಲು ಸಂಬಳ- ಸೌಲಭ್ಯದ ಜೊತೆಗೆ  ಬೋನಸ್‌,ವಸತಿ, ಪ್ರಯಾಣ ಸೌಲಭ್ಯ, ಪ್ರವಾಸ  (ಎಲ್‌ಟಿಎ), ಮಕ್ಕಳಿಗೆ ಶಿಕ್ಷಣ ಭತ್ತೆ, ಗೃಹಸಾಲ  ಸೌಲಭ್ಯ ಮುಂತಾದವುಗಳನ್ನು ಹೆಸರಿನಲ್ಲಿ  ನೀಡುತ್ತವೆ. ಸೂರತ್‌ ನಗರದಲ್ಲಿ ಒಬ್ಬ ವಜ್ರದ ಉದ್ಯಮಿ  2018 ರಲ್ಲಿ ತನ್ನ ಸಿಬ್ಬಂದಿಗಳಿಗೆ 600 ಕಾರ್‌ಗಳನ್ನು ದೀಪಾವಳಿ ಉಡುಗೊರೆಯಾಗಿ ನೀಡಿದ್ದ. 2015 ರಲ್ಲಿ 491 ಕಾರ್‌  ಮತ್ತು  200 ಫ್ಲಾಟ್‌ಗಳನ್ನು ಕೊಟ್ಟ.  2016 ರಲ್ಲಿ 400 ಫ್ಲಾಟ್ಸ್‌ ಮತ್ತು 1260 ಕಾರುಗಳನ್ನು ವಿತರಿಸಿದ. 

ಕೆಲವು ಕಂಪನಿಗಳು  ತನ್ನ ಸಿಬ್ಬಂದಿಗಳಿಗೆ ಕಂಪನಿ ಮಾಲೀಕತ್ವದ ಕೆಲವು ಭಾಗಗಳನ್ನು ನೀಡುತ್ತಿವೆ. ಇದನ್ನು  ನೌಕರರು ಅಥವಾ ಸಿಬ್ಬಂದಿಗಳಿಗೆ ಕಂಪನಿಯ ಕೆಲವುನಿರ್ದಿಷ್ಟ ಶೇರುಗಳನ್ನು ಕಡಿಮೆ ದರದಲ್ಲಿ ಅಥವಾ  ಕೆಲವು ವಿನಾಯತಿಗಳೊಂದಿಗೆ ನೀಡಲಾಗುತ್ತಿದೆ. ಇದನ್ನು ಸಿಬ್ಬಂದಿಗಳ ಮಾಲೀಕತ್ವ ಯೋಜನೆ ಅಥವಾ  Employees Stock Ownership Plan    ಎಂದು ಕರೆಯತ್ತಾರೆ.   ಇದನ್ನು ತನ್ನ ಸಿಬ್ಬಂದಿಗಳಿಗೆ  ಕೆಲವು ಕಟ್ಟಳೆಯೊಂದಿಗೆ ಉಚಿತವಾಗಿ ಕೊಡುವ ನಿದರ್ಶನಗಳೂ ಇವೆ.  ಇದನ್ನು ಜನಸಾಮಾನ್ಯರ ಭಾಷೆಯಲ್ಲಿ “ಉಳುವವನೇ ಒಡೆಯ’ ಅನ್ನುವುದೂ ಉಂಟು. ಇದರನ್ವಯ ಕಂಪನಿಯಲ್ಲಿ ಸಿಬ್ಬಂದಿಗಳು ಸ್ವಲ್ಪ ಮಟ್ಟಿಗೆ  ಮಾಲೀಕರಾಗುತ್ತಾರೆ. ಕೇವಲ ನೌಕರನಾಗಿ ಕೆಲಸ ಮಾಡುವುದಕ್ಕಿಂತ, ಸ್ವಲ್ಪ ಮಟ್ಟಿಗೆ  ಮಾಲೀಕನಾಗಿ ಕೆಲಸಮಾಡುವಾಗ ನೌಕರನಲ್ಲಿ ಬಧœತೆ  ಹೆಚ್ಚಾಗಿರುತ್ತದೆ.   ಹೆಚ್ಚಿನ productivity ಯನ್ನು ನಿರೀಕ್ಷಿಸಬಹುದು ಎಂಬ ಮಾಲೀಕರ ಮತ್ತು ಆಡಳಿತವರ್ಗದ  ಚಿಂತನೆ ಇದರಲ್ಲಿ ಇರುತ್ತದೆ. 

ಈ ಯೋಜನೆಯ ಹಿಂದಿನ ಮೂಲ ಉದ್ದೇಶವೇನು?
ಇದು ಸಿಬ್ಬಂದಿಗಳಿಗೆ, ಅವರ ಸಾಧನೆಗೆ  ನೀಡುವ ಪ್ರೋತ್ಸಾಹ ಧನವಾಗಿದ್ದು,  ವಾರ್ಷಿಕವಾಗಿ  ನೀಡುವ  ಬೋನಸ್‌ ಪರಿಕಲ್ಪನೆಯಿಂದ ಸಂಪೂರ್ಣವಾಗಿ ಪ್ರತ್ಯೇಕವಾಗಿರುತ್ತದೆ. ಬೋನಸ್‌ ಅನ್ನು ಸರ್ಕಾರದ  ಬೋನಸ್‌ ಕಾಯ್ದೆಗನುಗುಣವಾಗಿ ನೀಡಲಾಗುವುದು. ಇದಕ್ಕೊಂದು  ಮಿತಿ ಇರುತ್ತದೆ. ಅದರೆ, ESOP  (Employees Stock Ownership)  ಯಾವುದೇ ಕಾಯ್ದೆಯ ಅಡಿಯಲ್ಲಿ ಬರದೇ, ಇದು ಸಂಪೂರ್ಣವಾಗಿ  ಮಾಲೀಕರ,  ಆಡಳಿತವರ್ಗದ ವಿವೇಚನೆ ಮತ್ತು  ನಿರ್ಣಯಕ್ಕೆ ಬಿಟ್ಟ ವಿಷಯವಾಗಿರುತ್ತದೆ. ಇದನ್ನು ಸಿಬ್ಬಂದಿಗಳು  ತಮ್ಮ ಬೇಡಿಕೆಯಲ್ಲಿ ಸೇರಿಸಲಾಗದು. ಆದರೆ, ಬೋನಸ್ಸನ್ನು ಕೇಳುವ ಹಕ್ಕು   ಸಿಬ್ಬಂದಿಗಳಿಗೆ ಇರುತ್ತದೆ. ಇದನ್ನು ಕಂಪನಿಗಳಲ್ಲಿ ಸಿಬ್ಬಂದಿಗಳನ್ನು ಉಳಿಸಿಕೊಳ್ಳಲು ಮತ್ತು   ಅವರ ಬಧœತೆಗೆ ನೀಡುವ ಕಾಣಿಕೆ ಎನ್ನಲಾಗುತ್ತದೆ. 

ESOP ಗಳನ್ನ ನೀಡುವುದು  ಆಡಳಿತವರ್ಗ ಆಥವಾ ಮಾಲೀಕರ  ಮರ್ಜಿ. ಕಂಪನಿಯ ಹಣಕಾಸು ಪರಿಸ್ಥಿತಿ,  ನಗದು ಪ್ರಮಾಣ, ಸಿಬ್ಬಂದಿಗಳನ್ನು ಉಳಿಸಿಕೊಳ್ಳುವ  ಸೂತ್ರ, ಸಿಬ್ಬಂದಿಗಳನ್ನು ಪ್ರೋತ್ಸಾಹಿಸುವ ಬಗೆ, ಕಂಪನಿಯ ಭವಿಷ್ಯ ಹೀಗೆ ಹಲವಾರು ವಿಷಯಗಳನ್ನು ಕೂಲಂಕಷವಾಗಿ ಚರ್ಚಿಸಿ ಆಡಳಿವರ್ಗ ಈ ನಿಟ್ಟಿನಲ್ಲಿ ನಿರ್ಧರಿಸುತ್ತದೆ. ಹಾಗೆಯೇ, ಎಷ್ಟು ಶೇರುಗಳನ್ನು ಈ ರೀತಿ ನೀಡಬಹುದು ಎನ್ನುವುದು ಕೂಡಾ ಅವರ ವಿವೇಚನೆಗೆ ಬಿಟ್ಟ ವಿಷಯ. ವಿಸ್ತೃತವಾದ  ವರದಿಯನ್ನು  ಸೆಬಿ(Security Exchange Board Of India) ಗೆ ಕೂಡಲೇ ಮಾಹಿತಿ ನೀಡಬೇಕಾಗುತ್ತದೆ. ಕೆಲವು  ಸಾಫ್ಟ್ವೇರ್‌ ಕಂಪನಿಗಳಲ್ಲಿ,ಈ ಯೋಜನೆಯನ್ವಯ ಚಾಲಕರು,ಕ್ಲರ್ಕ್‌ಗಳು ಸೆಕ್ರೆಟರಿಗಳು  ಲಕ್ಷಾಧಿಪತಿಗಳಾಗಿರುವ ಉದಾಹರಣೆಗಳು ಕಾರ್ಪೋರೇಟ್‌ ವಲಯಗಳಲ್ಲಿ ಆಗಾಗ ಕೇಳಿ ಬರುತ್ತವೆ.  ಹೀಗೆ ಮಾಡುವುದರಿಂದ ಇಂಥ ಕಂಪನಿಗಳಿಗೆ ಕೆಲವು ತೆರಿಗೆ ವಿನಾಯಿತಿಗಳು ದೊರಕುತ್ತವೆ.

ಈ ಯೋಜನೆಯ ಲಾಭ ಪಡೆಯಲು ಯಾರು ಅರ್ಹರು?
ದೇಶದ ಹೊರಗೆ ಅಥವಾ  ದೇಶದೊಳಗೆ  ಕಾರ್ಯ ನಿರ್ವಹಿಸುತ್ತಿರುವ ಕಂಪನಿಯ  ಖಾಯಂ ಸಿಬ್ಬಂದಿಗಳು ಈ ಯೋಜನೆಗೆ ಅರ್ಹರು.

ಕಂಪನಿಯ ಪೂರ್ಣಾವಧಿ ಅಥವಾ ಅಲ್ಪಾವಧಿ ನಿರ್ದೇಶಕರುಗಳು. ಕಂಪನಿಯ ಉಪ  (subsidary)ಮತ್ತು ಅಂಗ
(Associate)  ಕಂಪನಿಗಳ ಸಿಬ್ಬಂದಿಗಳು.

ಯಾರು ಅರ್ಹರಲ್ಲ?ಇದನ್ನು ಹೇಗೆ ನೀಡುತ್ತಾರೆ?
ಶೇ. 10 ಕ್ಕಿಂತ  ಹೆಚ್ಚು ಇಕ್ವಿಟಿ ಶೇರು ಹೊಂದಿರುವ  ಕಂಪನಿಯ ಪ್ರವರ್ತಕರು ಮತ್ತು  ನಿರ್ದೇಶಕರುಗಳು ಈ ನೀಡಿಕೆಗೆ ಅರ್ಹರಲ್ಲ. 

ಕಂಪನಿಯು ತನ್ನ ಅಂತರಿಕ ನಿರ್ಣಯದಂತೆ, ಸಂಬಂಧಪಟ್ಟ  ಶೇರು ಮತ್ತು ಡಿಬೆಂಚರ್‌ ನೀತಿ ನಿಯಮಾವಳಿ ಅನ್ವಯ (Capital  Debenture Act 2014) ತನ್ನ ಸಿಬ್ಬಂದಿಗಳಿಗೆ ಮೊದಲೇ ನಿರ್ದರಿಸಿದ ದರದಲ್ಲಿ (ಇದು ಸಾಮಾನ್ಯವಾಗಿ ಮಾರುಕಟ್ಟೆ ದರಿಕ್ಕಿಂತ ಕಡಿಮೆ ಇರುತ್ತದೆ) ತನ್ನ ಶೇರು ಖರೀದಿಸಲು ಅವಕಾಶ ನೀಡುತ್ತದೆ. ಸಿಬ್ಬಂದಿಗಳಿಗೆ ಇದನ್ನು ಖರೀದಿಸುವಂತೆ ಕಡ್ಡಾಯ ಮಾಡಲಾಗುವುದಿಲ್ಲ. ಸಿಬ್ಬಂದಿಗಳಿಗೆ ಆಯ್ಕೆ ಮಾಡಿ ಖರೀದಿಸಲು ಒಂದು ವರ್ಷ ದ  ಲಾಕ್‌ ಇನ್‌ ಪಿರಿಯಡ್‌ ಇದ್ದು, (ಲಾಕ್‌ ಇನ್‌ ಪಿರಿಯಡ್‌  ಒಂದು ವರ್ಷದ್ದಾಗಿರುತ್ತದೆ) ಒಂದು ವರ್ಷದ ನಂತರ ಅವರು ಅದನ್ನು  ಖರೀದಿಸಬಹುದು. ಅದನ್ನು ಒಂದೇ  ಲಾಟ್‌ನಲ್ಲಿ ಖರೀದಿಸದೇ , ಒಂದು  ಕಾಲ ಮಿತಿಯಲ್ಲಿ,  ಕಾಲ ಘಟ್ಟದಲ್ಲಿ ಹಂತ ಹಂತವಾಗಿಯೂ  ಖರೀದಿಸಬಹುದು.  ಆಯ್ಕೆಯನ್ನು (option) ನೀಡಿ  ಹಣ ಪಾವತಿಸಿದ ನಂತರ ಇದು ಶೇರ್‌ ಆಗಿ ಪರಿವರ್ತಿತವಾಗುತ್ತದೆ. ಆಯ್ಕೆಯನ್ನು ನೀಡಿ ಶೇರುಗಳನ್ನು ಖರೀದಿಸುವವರೆಗೂ ಈ ESOP ಮೊತ್ತ,  ESOP ಟ್ರಸ್ಟ್‌ ಖಾತೆಯಲ್ಲಿ ಇರುತ್ತದೆ. ಸಿಬ್ಬಂದಿಗಳು ಇಂತಿಷ್ಟೇ  ಶೇರುಗಳನ್ನು ತೆಗೆದುಕೊಳ್ಳಬೇಕು ಎನ್ನುವ ನಿರ್ಬಂಧ ಇರುವುದಿಲ್ಲ.ಅವರ ಹಣಕಾಸು  ಶಕ್ತಿಗೆ ಅನುಗುಣವಾಗಿ, ಮಾಲೀಕರು ಮತ್ತು ಆಡಳಿತವರ್ಗ ನೀಡುವ    ಲಿಮಿಟ್‌ಗೆ ಸಮೀಕರಿಸಿ ತೆಗೆದುಕೊಳ್ಳಬಹುದು.

ಇದಕ್ಕೆ ತೆರಿಗೆ ಇದೆಯೇ?
ಕಂಪನಿಗಳು ತನ್ನ ಸಿಬ್ಬಂದಿಗಳಿಗೆ ನೀಡುವ  ಈ ಕಾಣಕೆಗೆ ತೆರಿಗೆ ಇದ್ದು, ಎರಡು  ಬಾರಿ ತೆರಿಗೆಗೆ ಒಳಪಡುತ್ತದೆ. ಈ ಯೋಜನೆಯನ್ವಯ  ಕಂಪನಿಗಳು ತನ್ನ ಸಿಬ್ಬಂದಿಗಳಿಗೆ  ಶೇರುಗಳನ್ನು ನೀಡಿದಾಗ, ಹೆಚ್ಚಿನ ಗಳಿಕೆ ಅಥವಾ ಸೌಕರ್ಯದ ಹೆಸರಿನಲ್ಲಿ ಸಿಬ್ಬಂದಿಗಳು  ತೆರಿಗೆ ನೀಡಬೇಕಾಗುತ್ತದೆ. ನಂತರದ ದಿನಗಳಲ್ಲಿ ಈ ಶೇರುಗಳನ್ನು ಮಾರಿದಾಗ,  ಕ್ಯಾಪಿಟಲ್‌ ಗೇನ್ಸ್‌  ಹೆಸರಿನಲ್ಲಿ ತೆರಿಗೆ ವಿಧಿಸಲಾಗುವುದು. ತೆರಿಗೆ ತಜ್ಞರ ಪ್ರಕಾರ  ESOP ಗಳ ಮೇಲೆ ತೆರಿಗೆ   ಸರಳವಾಗಿರದೆ, ತುಂಬಾ  ಕ್ಲಿಷ್ಟಕರವಾಗಿದೆ. ಈ ವಿಷಯವಾಗಿ ನ್ಯಾಯಾಲಯಗಳಲ್ಲಿ ಏಕ ರೂಪದ ಆಭಿಪ್ರಾಯವಿಲ್ಲ ಎಂದು ಹೇಳಲಾಗುತ್ತದೆ.  ಇದನ್ನು perquisite ಎಂದು ತೆರಿಗೆ ವಿಧಿಸದೇ , ಕ್ಯಾಪಿಟಲ್‌ ಗೇನ್ಸ್‌ ಎಂದು ಸಿಬ್ಬಂದಿಗೆ ತೆರಿಗೆ ವಿಧಿಸಬೇಕು.  ಶೇರು ಪಡೆಯಲು ESOP ನೀಡಿದ ದಿನದಿಂದ ಅಥವಾ ಶೇರುಗಳನ್ನು ನೀಡಿದ ದಿನದಿಂದ… ಈ ರೀತಿ ಹಲವಾರು  ಜಿಜ್ಞಾಸೆ ಇದ್ದು ತೆರಿಗೆ ತಜ್ಞರ ಸಹಾಯ ಬೇಕಾಗುತ್ತದೆ.  ವಿದೇಶಿ ಕಂಪನಿಗಳು   ESOP  ನೀಡಿದಾಗ, ಫ‌ಲಾನುಭವಿಗಳು  ಆ ದೇಶದೊಂದಿಗಿನ Double Tax Avoidence  Treaty   ಪ್ರಕಾರ  ತೆರಿಗೆಯನ್ನು ನೀಡಬೇಕಾಗುತ್ತದೆ.

ಬ್ಯಾಂಕುಗಳಲ್ಲಿ   ESOP
2017 ರಲ್ಲಿ ಕೇಂದ್ರ ಸರ್ಕಾರ ಬ್ಯಾಂಕುಗಳಲ್ಲಿ ಕೂಡಾ  ESOP ನೀಡಲು  ಅನುಮತಿ ನೀಡಿದೆ . ಬ್ಯಾಂಕುಗಳು discounted ದರದಲ್ಲಿ  ತನ್ನ ಸಿಬ್ಬಂದಿಗಳಿಗೆ ಇವುಗಳನ್ನು ನೀಡುತ್ತಿವೆ.  ಈ ನಿಟ್ಟಿನಲ್ಲಿ ಅಲಹಾಬಾದ್‌ ಬ್ಯಾಂಕ್‌ ಮೊದಲನೆಯದಾಗಿದ್ದು, 25% discount ನಲ್ಲಿ  5 ಕೋಟಿ  ಶೇರುಗಳನ್ನು  53.94 ದರದಲ್ಲಿ ನೀಡಿತ್ತು. ಆದರೆ,  4.38 ಕೋಟಿ ಶೇರುಗಳನ್ನಷ್ಟೇ  ನೀಡಿ 315 ಕೋಟಿಯನ್ನು ಸಂಗ್ರಹಿಸಲು ಸಾಧ್ಯವಾಯಿತು. ಆನಂತರ ಯುನೈಟೆಡ್‌ ಬ್ಯಾಂಕ್‌   ತನ್ನ ಶೇರುಗಳನ್ನು ಈ ಯೋಜನೆ ಅಡಿಯಲ್ಲಿ ತನ್ನ  ಸಿಬ್ಬಂದಿಗಳಿಗೆ  ನೀಡಿತು. ಕೆನರಾಬ್ಯಾಂಕ್‌ ಮತ್ತು ಪಂಜಾಬ್‌ ನ್ಯಾಷನಲ್‌ ಬ್ಯಾಂಕುಗಳೂ  ತಲಾ  6 ಮತ್ತು 10 ಕೋಟಿ ಶೇರುಗಳನ್ನು ನೀಡಲು ಚಿಂತನೆ ನಡೆಸಿದ್ದವು. ಬ್ಯಾಂಕ್‌ ಸಿಬ್ಬಂದಿಗಳು ವೇತನ ಪರಿಷ್ಕರಣೆ ಮತ್ತು ವೇತನ ಹೆಚ್ಚಳದಲ್ಲಿ ಹೆಚ್ಚಿನ  ಆಸಕ್ತಿ ತೋರಿಸಿದರೇ ವಿನಃ ಶೇರುಗಳ  ಮೂಲಕ ನೀಡುವ  ಹಣಕಾಸು ವಿಚಾರದಲ್ಲಿ ಹೆಚ್ಚಿನ ಅಸಕ್ತಿ ತೋರಿಸದಿರುವುದರಿಂದ ಪ್ರಗತಿ ಕಾಣಲಿಲ್ಲ.

– ರಮಾನಂದ ಶರ್ಮಾ

ಟಾಪ್ ನ್ಯೂಸ್

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.