ಈಸಬೇಕು, ಈಸಿ ಜೈಸಬೇಕು; ಇವರ ಹಾಗೆ…


Team Udayavani, Mar 17, 2019, 12:18 PM IST

s-3.jpg

ಕೃಷಿಯಲ್ಲಿ ಲಾಭವಿಲ್ಲ, ಕೃಷಿ ಎಂದರೆ ಸಂಕಟಗಳ ಸರಮಾಲೆ ಎನ್ನುವವರು ಬಹಳ ಜನ. ಇಂತಹ ಸನ್ನಿವೇಶದಲ್ಲಿ ಕೃಷಿಯಿಂದಲೇ ಕೋಟಿಗಟ್ಟಲೆ ವಹಿವಾಟು ಮಾಡುತ್ತಿರುವ ಈ ಮೂವರ ಸಾಧನೆ ಗಮನಾರ್ಹ.

1) ಆಟೋಮೊಬೈಲ್ ಎಂಜಿನಿಯರ್‌ ಆಗಿದ್ದ ಪ್ರಮೋದರಿಗೆ 2006ರಲ್ಲಿ ಕೃಷಿ ಮಾಡಬೇಕೆನಿಸಿತು. ಉದ್ಯೋಗ ತೊರೆದು, ಹಿರಿಯರಿಂದ ಬಳುವಳಿಯಾಗಿ ಬಂದಿದ್ದ 26 ಎಕರೆ ಜಮೀನಿನಲ್ಲಿ ಕೃಷಿ ಮಾಡತೊಡಗಿದರು. ಆರಂಭದಲ್ಲಿ ಹಲವು ಸವಾಲುಗಳನ್ನು ಎದುರಿಸಬೇಕಾಯಿತು. ನೆಲಗಡಲೆ ಮತ್ತು ಅರಿಶಿನ ಬೆಳೆಸಿ, ಕೊನೆಗೆ ಲೆಕ್ಕಾಚಾರ ಮಾಡಿದಾಗ ಲಾಭವೇ ಇರಲಿಲ್ಲ.  ಕೃಷಿ ಕೆಲಸಗಾರರ ಅಲಭ್ಯತೆ ಅವರು ಎದುರಿಸಿದ ಇನ್ನೊಂದು ಸಮಸ್ಯೆ. (ಹತ್ತಿರದ ನಗರಕ್ಕೆ ವಲಸೆ ಹೋಗಿ, ಅಲ್ಲಿನ ಕಾರ್ಖಾನೆಗಳಲ್ಲಿ ದುಡಿಯುವುದಕ್ಕೆ ಹಳ್ಳಿಯ ಕೆಲಸಗಾರರಿಗೆ ಉತ್ಸಾಹ) ಇದರ ಪರಿಹಾರಕ್ಕಾಗಿ, ಸಾಂಪ್ರದಾಯಿಕ ಬೆಳೆಗಳ ಬದಲಾಗಿ ಕಡಿಮೆ ಶ್ರಮ ಸಾಕಾಗುವ ಬೇರೆ ಬೆಳೆಗಳನ್ನು ಬೆಳೆಯಲು ಪ್ರಮೋದ್‌ ನಿರ್ಧರಿಸಿದರು. ಜೊತೆಗೆ, ಚಾಲಕನಿಲ್ಲದ ಟ್ರ್ಯಾಕ್ಟರಿನಂತಹ ವಿನೂತನ ತಂತ್ರಜ್ಞಾನವನ್ನು ತನ್ನ ಹೊಲದಲ್ಲಿ ಬಳಸಿದರು.

ಚಾಲಕನಿಲ್ಲದ ಟ್ರ್ಯಾಕ್ಟರ್‌, ಮಹೀಂದ್ರ ಕಂಪೆನಿ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನ. ಆ ಟ್ರ್ಯಾಕ್ಟರನ್ನು ಕೃಷಿಕರು ಖರೀದಿಸ ಬೇಕಾಗಿಲ್ಲ. ಟ್ರಿಂಗೋ ಎಂಬ ಮೊಬೈಲ್ ಫೋನ್‌ ಆಪ್‌ ಬಳಸಿ, ಅದನ್ನು ಬಾಡಿಗೆಗೆ ಪಡೆಯಬಹುದು. ಅಂದರೆ, ಕೃಷಿಕರ ಜಮೀನಿನಲ್ಲಿ ಕಡಿಮೆ ವೆಚ್ಚದಲ್ಲಿ ತಂತ್ರಜ್ಞಾನ ಆಧಾರಿತ ಟ್ರ್ಯಾಕ್ಟರ್‌ ಬಳಕೆ ಸಾಧ್ಯ.

2007-8ರಲ್ಲಿ ಸಾಂಪ್ರದಾಯಿಕ ಬೆಳೆಗಳ ಬದಲಾಗಿ ತೋಟಗಾರಿಕಾ ಬೆಳೆಗಳ ಕೃಷಿಗೆ ಮುಂದಾದರು.  ಪ್ರಮೋದ್‌. ಕಿತ್ತಳೆ, ಪೇರಳೆ, ನಿಂಬೆ, ಮೂಸಂಬಿ, ಬಾಳೆ ಮತ್ತು ತೊಗರಿ ಬೆಳೆಗಳ ಕೃಷಿಗೆ ಕೈ ಹಾಕಿದರು.  ಜೊತೆಗೆ, ತನ್ನದೇ ಮಿಲ… ಸ್ಥಾಪಿಸಿದರು. ಅನಂತರ, ಸಂಸ್ಕರಿಸಿದ ಹಾಗೂ ಪಾಲಿಷ್‌ ಮಾಡದ ದ್ವಿದಳಧಾನ್ಯಗಳನ್ನು ವಂದನ ಎಂಬ ಬ್ರಾಂಡ್‌ ಹೆಸರಿನಲ್ಲಿ ಮಾರಾಟ ಮಾಡಲು ಮುಂದಾದರು. ಈಗ ಪ್ರಮೋದರ ತೊಗರಿ ಮಿಲ್ಲಿನ ವಾರ್ಷಿಕ ವಹಿವಾಟು ಒಂದು ಕೋಟಿ ರೂಪಾಯಿ ದಾಟಿದೆ! ಇದರ ಜೊತೆಗೆ ತೋಟಗಾರಿಕಾ ಬೆಳೆಗಳ ಫ‌ಸಲಿನ ಮಾರಾಟದಿಂದ ಪ್ರತಿ ವರ್ಷ 10 ರಿಂದ 20 ಲಕ್ಷ$ ಗಳಿಸುತ್ತಿದ್ದಾರೆ. ಇವೆರಡೂ ಸೇರಿದಾಗ ಪ್ರಮೋದರ ಈಗಿನ ಆದಾಯ ಎಂಜಿನಿಯರ್‌ನ ಸಂಬಳಕ್ಕಿಂತ ಜಾಸ್ತಿ.

2) ಇನ್ನೊಬ್ಬ ಕೃಷಿ ಸಾಧಕ, ಮೆಕಾನಿಕಲ್ ಇಂಜಿನಿಯರ್‌ ಸಚಿನ್‌ ಕಾಳೆ. ವಿದ್ಯುತ್‌ ಉತ್ಪಾದನಾ ಘಟಕವೊಂದರಲ್ಲಿ ಉದ್ಯೋಗಕ್ಕೆ ಸೇರಿ, ಬೇಗನೇ ಉನ್ನತ ಹುದ್ದೆಗೇರಿದವರು. 2013ರಲ್ಲಿ ಗುರು ಗ್ರಾಮದಲ್ಲಿ ಪುಂಜ… ಲಾಯ್ಡ್ ಕಂಪೆನಿಯಲ್ಲಿ ಮ್ಯಾನೇಜರ್‌ ಆಗಿ ಐಷಾರಾಮಿ ಜೀವನ ನಡೆಸುತ್ತಿದ್ದ ಸಚಿನ್‌ರ ವಾರ್ಷಿಕ ವೇತನ ರೂ.24 ಲಕ್ಷ.

ಅದನ್ನೆಲ್ಲ ತೊರೆದು 2014ರಲ್ಲಿ ಛತ್ತೀಸ್‌ಘಡದ ಬಿಲಾಸ್‌ಪುರ ಜಿಲ್ಲೆಯ ಮೇಧಾಪುರ ಗ್ರಾಮದಲ್ಲಿ ಕೃಷಿಯಲ್ಲಿ ತೊಡಗಿಕೊಂಡರು. ಹಿರಿಯರಿಂದ ಪಡೆದ 25 ಎಕರೆ ಜಮೀನಿನಲ್ಲಿ ಶುರುವಾದ ಕೃಷಿಯ ಆರಂಭದ ದಿನಗಳನ್ನು ಹೀಗೆ ನೆನಪಿಸಿಕೊಳ್ಳುತ್ತಾರೆ: “ಆಗ ಪ್ರತಿಯೊಂದೂ ನನಗೆ ಸವಾಲಾಗಿ ತೋರುತ್ತಿತ್ತು. ಏಕೆಂದರೆ, ಕೃಷಿ ಎಂದರೆ ಏನು ಅನ್ನೋದೇ ನನಗೆ ಗೊತ್ತಿರಲಿಲ್ಲ. ಹೊಲದ ಉಳುಮೆಯಿಂದ ಶುರು ಮಾಡಿ, ಬೀಜ ಬಿತ್ತುವ ತನಕ ಕೃಷಿಯ ಪ್ರತಿಯೊಂದು ಕೆಲಸವನ್ನೂ ನಾನು ಹೊಸತಾಗಿ ಕಲಿತೆ. ನನ್ನ ಹದಿನೈದು ವರ್ಷಗಳ ಭವಿಷ್ಯನಿಧಿಯ ಉಳಿತಾಯವನ್ನೆಲ್ಲ ಕೃಷಿಯಲ್ಲಿ ಹೂಡಿದೆ.  ಆರಂಭದ ವರ್ಷಗಳಲ್ಲಿ ನಷ್ಟವಾದರೂ, ಕ್ರಮೇಣ ಕೃಷಿಯಿಂದ ಲಾಭ ಗಳಿಸತೊಡಗಿದೆ.’ 

  2014ರಲ್ಲಿ ಇನ್ನೊವೇಟಿವ್‌ ಅಗ್ರಿಲೈಫ್ ಸಲ್ಯೂಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಎಂಬ ಹೊಸ ಕಂಪೆನಿಯನ್ನೇ ಸ್ಥಾಪಿಸಿದರು. ಒಪ್ಪಂದ ಕೃಷಿ, ಈ ಕಂಪೆನಿಯ ವಹಿವಾಟು. ಈಗ 165ಕ್ಕಿಂತ ಅಧಿಕ ರೈತರು 300 ಎಕರೆ ಜಮೀನಿನಲ್ಲಿ ಲಾಭದಾಯಕವಾಗಿ ಕೃಷಿ ಮಾಡಲು ಸಹಕರಿಸುತ್ತಿರುವ ಸಚಿನ್‌ರ ಕಂಪೆನಿಯ ವಾರ್ಷಿಕ ವಹಿವಾಟು ಎರಡು ಕೋಟಿ ರೂಪಾಯಿ ದಾಟಿದೆ!

3) ಮತ್ತೂಬ್ಬ ಕೃಷಿ ಸಾಧಕ, ಸರಕಾರಿ ಉದ್ಯೋಗಿಯಾಗಿದ್ದ ಹರೀಶ್‌. ತನ್ನ ಉದ್ಯೋಗಕ್ಕೆ ರಾಜೀನಾಮೆ ಇತ್ತು ಅವರು ಶುರು ಮಾಡಿದ್ದು ಲೋಳೆಸರದ ಕೃಷಿಯನ್ನು. ರಾಜಸ್ಥಾನದ ಜೈಸಲ್ಮೇರಿನಲ್ಲಿ  ಹಿರಿಯರಿಂದ ಬಂದ ಜಮೀನಿನಲ್ಲಿ ಕೃಷಿ ಮಾಡಲು ನಿರ್ಧರಿಸಿದಾಗ, ಮೊದಲು ಅವರು ಮಾಡಿದ ಕೆಲಸ: ಮಣ್ಣು ಪರೀಕ್ಷೆ.

“ಕೃಷಿ ಇಲಾಖೆಯವರು ನನಗೆ ಸಲಹೆ ಮಾಡಿದ್ದು ಸಣ್ಣಜೋಳ, ಉದ್ದು ಅಂತಹ ಬೆಳೆಗಳ ಕೃಷಿ ಮಾಡಬೇಕೆಂದು. ಜೈಸಲ್ಮೇರ್‌ ಪ್ರದೇಶದಲ್ಲಿ ಲೋಳೆಸರಕ್ಕೆ ಬೇಡಿಕೆಯಿಲ್ಲ ಎಂಬ ಕಾರಣಕ್ಕಾಗಿ ಅವರು ಅದರ ಕೃಷಿ ಮಾಡಲು ಹೇಳಲಿಲ್ಲ ‘ ಎಂದು ನೆನಪು ಮಾಡಿಕೊಳ್ಳುತ್ತಾರೆ ಹರೀಶ್‌.

ಅನಂತರ ಹರೀಶ್‌ ಅಂತರ್ಜಾಲದಲ್ಲಿ ಮಾಹಿತಿ ಸಂಗ್ರಹಕ್ಕೆ ಶುರುವಿಟ್ಟರು. ರೈತರನ್ನು ಪರಿಣಿತರ ಜೊತೆ ಸಂಪರ್ಕಿಸುವ ಮೈ ಅಗ್ರಿಗುರು ಇತ್ಯಾದಿ ಜಾಲತಾಣ/ ಮಾಹಿತಿಮೂಲಗಳ ಮೂಲಕ ಸೂಕ್ತ ಮಾಹಿತಿ ಪಡೆದರು. ವೆಬ…-ಸೈಟ್‌ಗಳ ಮೂಲಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆ ಬಗ್ಗೆ ಸಮರ್ಪಕ ಮಾಹಿತಿ ಸಂಗ್ರಹಿಸಿದರೆ ತನ್ನ ಕೃಷಿ ಉತ್ಪನ್ನಗಳನ್ನು ಸುಲಭವಾಗಿ ಮಾರಬಹುದೆಂದು ತಿಳಿದುಕೊಂಡರು.

ಅವರು ಆರಂಭದಲ್ಲಿ ನೆಟ್ಟದ್ದು 80,000 ಲೋಳೆಸರದ ಸಸಿಗಳನ್ನು. ಕೆಲವೇ ವರ್ಷಗಳಲ್ಲಿ ಅವರು ಬೆಳೆಸಿದ ಸಸಿಗಳ ಸಂಖ್ಯೆ ಏಳು ಲಕ್ಷಕ್ಕೆ ಏರಿತು. ಆರು ತಿಂಗಳಲ್ಲಿ, ಲೋಳೆಸರ ಖರೀದಿಸುವ ಹತ್ತು ಜನರನ್ನು ರಾಜಸ್ಥಾನದಲ್ಲಿಯೇ ಪತ್ತೆ ಮಾಡಿದರು ಹರೀಶ್‌. ಅವರೆಲ್ಲರೂ ಲೋಳೆಸರದ ತಿರುಳು ಬೇರ್ಪಡಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆಂದು ತಿಳಿದುಕೊಂಡು, ತನ್ನ ಕೆಲಸಗಾರರಿಗೇ ಅದರ ಬಗ್ಗೆ ತರಬೇತಿ ನೀಡಿದರು.

ವರ್ಷಗಳು ದಾಟಿದಂತೆ ಇನ್ನಷ್ಟು ಜಮೀನು ಖರೀದಿಸಿ, ಈಗ ಸುಮಾರು 100 ಎಕರೆಯಲ್ಲಿ ಹರೀಶ್‌ ಲೋಳೆಸರ ಬೆಳೆಯುತ್ತಿ¨ªಾರೆ. ಧನದೇವ್‌ ಗ್ಲೋಬಲ್ ಗ್ರೂಪ್‌ ಪ್ರೈ.ಲಿ. ಎಂಬ ಅವರ ಕಂಪೆನಿ ಜೈಸಲ್ಮೇರಿನಲ್ಲಿದೆ. ಇದು ಲೋಳೆಸರದ ವಿವಿಧ ಉತ್ಪನ್ನಗಳನ್ನು ತಯಾರಿಸಿ ರಫ್ತು ಮಾಡುತ್ತಿದೆ. ಅದರ ವಾರ್ಷಿಕ ವಹಿವಾಟು ಈಗ ಸುಮಾರು ಎರಡು ಕೋಟಿ ರೂಪಾಯಿ!

ಈಸಬೇಕು, ಈಸಿ ಜೈಸಬೇಕು ಎಂಬುದನ್ನು ನಾವೆಲ್ಲ ಕೇಳಿದ್ದೇವೆ. ಪ್ರವಾಹದ ವಿರುದ್ಧ ಸಾಗಿದ ಈ ಮೂವರು ಕೃಷಿಸಾಧಕರು ಹಾಗೆ ಮುನ್ನಡೆದು ಗೆಲ್ಲಲು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಇದು ರೈತಾಪಿ ಜನರೆಲ್ಲರಿಗೂ ದಾರಿ ದೀಪ. 

ಅಡ್ಡೂರು ಕೃಷ್ಣ ರಾವ್‌

ಟಾಪ್ ನ್ಯೂಸ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.