CONNECT WITH US  

ಜಾತಕ ಫ‌ಲ

ರಾಜ ಪ್ರಸಾದ, ಹ್ಯೂಸ್ಟನ್‌, ಅಮೇರಿಕಾ

ನಾನು ಅಮೇರಿಕಾಕ್ಕೆ ಬಂದು ಏಳು ವರ್ಷಗಳಾಗಿವೆ. ಮಕ್ಕಳಿಗೀಗ ಕ್ರಮವಾಗಿ 3 ಹಾಗೂ 5 ವಯಸ್ಸು. ಭಾರತಕ್ಕೆ ಹಿಂದಿರುಗೋಣ ಎಂಬುದು ನನ್ನವಳ ಅಭಿಪ್ರಾಯ. ದೇಶದ ಬಗೆಗೆ ಗೌರವವಿದೆ. ಆದರೆ ಬಿಟ್ಟು ಬರುವ ಕೆಲಸದಲ್ಲಿ ಆತಂಕವಿದೆ. ಏನು ಮಾಡಬಹುದು? ಸಲಹೆ ನೀಡಿ. 

- ನಿಮ್ಮ ಜಾತಕದ ಪಂಚಮ ಭಾವ ಮತ್ತು ಪಂಚಮಾಧಿಪತಿಗಳ ಸಂಬಂಧ ನೇರವಾಗಿ ಜಲ ತತ್ವಗಳಿಗೆ ಸಂಬಂಧ ಪಡೆದು ಸಿದ್ಧಿ ಯೋಗದಲ್ಲಿ ಗಟ್ಟಿಗೊಂಡಿದ್ದರಿಂದ ನಿಮಗೆ ಮಕ್ಕಳ ವಿಚಾರದಲ್ಲಿ ತೊಂದರೆ ಬರದು. ಉತ್ತಮ ಸಂಸ್ಕಾರಗಳು ಕೌಟುಂಬಿಕ ವಲಯಕ್ಕೆ ಶ್ರೀರಕ್ಷೆಯಾಗಲು ಧರ್ಮ ಭಾವವು ಶುಕ್ರನಿಂದ ಬಲಗೊಂಡಿದೆ. ಅಮೇರಿಕಾದಲ್ಲೇ ಇದ್ದರೂ ತೊಂದರೆ ಆಗದು.

 ಜಾನ್‌ ಜಯಶೀಲ, ಗೋಣಿಕೊಪ್ಪ

ನನಗೆ ದೇವರ ದಯದಿಂದ ಹ ಣಕಾಸಿನ ತೊಂದರೆ ಇಲ್ಲ. ಸಂಜೆಯ ಹೊತ್ತು ಮಾದಕ ದ್ರವ್ಯ ಸೇವಿಸದೆ ನಿದ್ದೆ ಹತ್ತುವುದಿಲ್ಲ. ಲಿವರ್‌ ಕೊಂಚ ಘಾಸಿಗೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.  ಏಕ ನಿಷ್ಠೆಯಿಂದ ಮದ್ಯಪಾನದಿಂದ ದೂರವಾಗಲು ದಾರಿ ತಿಳಿಸಿ.

ರಾಹು ಗ್ರಹವು ಲಗ್ನಸ್ಥವಾಗಿ ದುಷ್ಟಕುಜನ ಪೈಶಾಚಿಕ ಮುಷ್ಟಿಯಲ್ಲಿ ಬಂಧಿತವಾಗಿದೆ. ಚಂದ್ರನ ನಿಮ್ನ ಹಾಗೂ ನೀಚ ಸ್ಥಿತಿ ಮಾನಸಿಕ ದುರ್ಬಲತೆಯನ್ನು ಸೂಚಿಸುತ್ತಿದೆ. ಪ್ರತಿದಿನ ನೆರವೇರಿಸುವುದಾದರೆ, ಸಂಜೆ 6ರ ಹೊತ್ತಿಗೆ ಸ್ನಾನ ಪೂರೈಸಿ, ಆಲದ ಅಥವಾ ಅರಳಿ ಮರದ ಎಲೆಯೊಂದರಲ್ಲಿ 5 ಅವರೆಕಾಳನ್ನು ಜೇನು ತುಪ್ಪದಲ್ಲಿ ಬೆರೆಸಿ ಮನೆಯ ನೈಋತ್ಯ ಮೂಲೆಯಲ್ಲಿರಿಸಿ ಏಕಾಗ್ರತೆಯಿಂದ ಏಸುವಿನ ಧ್ಯಾನದಲ್ಲಿ ಒಂದು ತಾಸು ಕಳೆಯಿರಿ. ಈ ಅವರೆ ಕಾಳನ್ನು ನಿಂಬೆ ಹಣ್ಣಿನ ಜೊತೆ, ನಂತರ ಶುದ್ಧ ಹಾಲಿನೊಂದಿಗೆ ಸೇವಿಸಿ. ಪರಿಣಾಮ ಉತ್ತಮ.

ಸತ್ಯವತಿ ತಡಸಲಕೊಪ್ಪ

ಕನಸಲ್ಲಿ  ಬಾಧೆಯಾಗುತ್ತಿದೆ. ನಿರ್ಜನ ಪ್ರದೇಶ ಒಂದರಲ್ಲಿ ಹುಲಿ, ಸಿಂಹ, ಕರಡಿಗಳು ಮೈಮೇಲೆ ಎರಗಿ ಬಂದಂತಾಗುತ್ತವೆ. ಕಷ್ಟಪಟ್ಟು ಓಡಿ ಅವುಗಳಿಂದ ತಪ್ಪಿಸಿಕೊಂಡಂತೆ ಅನಿಸಿದಾಗ ಎಚ್ಚರವಾಗುತ್ತದೆ. ಎಚ್ಚರವಾದಾಗ ಕೂಗದೇ ಇರಲಾಗದು. ಮನೆಯಲ್ಲಿ ಪತಿ ಹಾಗೂ ಮಕ್ಕಳಿಗೆ ಯಕ್ಷ ಪ್ರಶ್ನೆಯಾಗಿದ್ದೇನೆ. ಈ ಗೊಂದಲದಿಂದ ಹೊರಬರಲು ಏನು ಮಾಡಲಿ?

ಕುಜನು ಅಷ್ಟಮ ಭಾವದಲ್ಲಿ ನೀಚ ಗುರುವಿನೊಂದಿಗೆ ಇದ್ದಿರುವುದು, ಗುರುವಿನ ಕೇಂದ್ರಾಧಿಪತ್ಯ ದೋಷಕ್ಕೆ ಇನ್ನಿಷ್ಟು ದುರ್ಬಲತೆ ತುಂಬಿದೆ. ಎಳ್ಳೆಣ್ಣೆಯಿಂದ ಪಂಚಮುಖೀ ಹನುಮಂತನನ್ನು ಪ್ರತಿ ಶನಿವಾರ ಹಾಗೂ ಮಂಗಳವಾರ ಪೂಜಿಸಿ. ಈ ಎಣ್ಣೆಯ ನಯವನ್ನು ಪ್ರತಿ ದಿನ ತುಸುವೇ ಕಣ್ಣಿಗೆ ಲೇಪಿಸಿಕೊಂಡು ಪ್ರತಿ ದಿನ ನಿದ್ದೆ ಮಾಡಿ. ಪೂಜೆಯ ಸಮಯದಲ್ಲಿ ಮಹಾಕಾಳಿಯ ಸ್ತುತಿ ಮಾಡಿ.

ಜಾಸಫ್ ಫ‌ರೀದಾ, ಉಡುಪಿ

ನಾನು ಮತ್ತು ನನ್ನನ್ನು ಮದುವೆಯಾಗುವ ಆಕ್ಟೇವಿಯಾ ಜಾನ್‌ ಇಬ್ಬರೂ ದುಬೈನಲ್ಲಿದ್ದು ಸದ್ಯವೇ ಮದುವೆಯಾಗಲಿದ್ದೇವೆ. ಯಾವ ಹರಳುಗಳನ್ನು ನಾವು ಧರಿಸಬಹುದು? ಇಬ್ಬರ ಜಾತಕಗಳನ್ನು ಕಳುಹಿಸಿದ್ದೇನೆ. ಉತ್ತಮವಾದ ಭವಿಷ್ಯಕ್ಕೆ ದಾರಿ ಇದೆಯೇ? ತೊಂದರೆ ಇದ್ದರೆ ಪರಿಹಾರವೇನು?

- ತೊಂದರೆಯ ಬಗೆಗೆ ಯೋಚಸದಿರಿ. ಬದುಕಿನ ದಾರಿಯಲ್ಲಿ ಒಂದಾಗುವ ನಿರ್ಧಾರ ತಳೆದಿದ್ದೀರಿ. ನಿಮ್ಮ ನಂಬಿಕೆಯ ಧೈವ ನಿಮ್ಮನ್ನು ಕಾಪಾಡುತ್ತದೆ. ಇಬ್ಬರೂ ಬಂಗಾರದಲ್ಲಿ ಉಂಗುರ (ನೀವು ಬಲಗೈ ಕಿರು ಬೆರಳಿಗೆ, ಪತ್ನಿಯಾಗಲಿರುವವರು ಬಲಗೈ ಮಧ್ಯದ ಬೆರಳಿಗೆ) ಧರಿಸಿ. ಈ ಉಂಗುರಗಳಿಗೆ ಕ್ರಮವಾಗಿ 2 ಕ್ಯಾರಟ್‌ ಪಚ್ಚೆ (ನೀವು), 2 ಕ್ಯಾರಟ್‌ ಮಾಣಿಕ್ಯ (ನಿಮ್ಮ ವಧು) ಹರಳುಗಳನ್ನು ಧರಿಸಿ. ಶುಭವಿದೆ.

Trending videos

Back to Top