CONNECT WITH US  

​ಜಾತಕ ಫ‌ಲ

  ಪವಿತ್ರ, ಅಮಿನ ಬಾವಿ

  ಒಂದು ನಿಶ್ಚಿತವಾದ ಓದನ್ನು ಮುಗಿಸಬೇಕೆಂಬುದು ಮನಸ್ಸು. ಆದರೆ ನನ್ನ ಹೆತ್ತವರು ಮದುವೆಗಾಗಿ ಒತ್ತಡ ತರುತ್ತಿದ್ದಾಳೆ. ಓದು ನಂತರವೂ ಮುಂದುವರಿಸಲು ಸಾಧ್ಯವೇ? ಜಾತಕ ಇರಿಸಿದ್ದೇನೆ. ತಿಳಿಸಿ.

 ನಿಮಗೆ ಒಂದೂವರೆ ವರುಷದ ನಂತರದಲ್ಲಿ (ಸುಮಾರಾಗಿ) ಪಂಚಮ ಶನಿಕಾಟ ಶುರುವಾಗಲಿದ್ದು, ಆ ಒಂದೂವರೆ ವರುಷ ಸ್ವಲ್ಪ ತೊಡಕುಗಳಿರುತ್ತವೆ. ಹೆತ್ತವರು ಬಯಸಿರುವಂತೆ ಮದುವೆ ಈಗ ಸೂಕ್ತ. ಅಂತೆಯೇ ವರನೊಡನೆ ಜಾತಕ ಕೂಡುವುದೂ ಮುಖ್ಯ. ಓದನ್ನು ಮದುವೆ ನಂತರ ಮುಂದವರಿಸಬಹುದು. ಆರೋಗ್ಯದ ಬಗೆಗೆ ಎಚ್ಚರ ವಹಿಸಿ. ನಿಲಕ್ಷ್ಯದಿಂದ ತೊಂದರೆ ಸಾಧ್ಯ. 2016 ಮಾಚ°ಲ್ಲಿ ಶುಕ್ರಾದಿತ್ಯ ಸಂಧಿ ಶಾಂತಿ ಆಗಲೇ ಬೇಕು. ಸರಳವಾಗಿ ಪೂರೈಸಿಕೊಳ್ಳಿ. ಪ್ರತಿದಿನ ಶುಕ್ರ ಅಷ್ಟೋತ್ತರ, ರವಿ ಅಷ್ಟೋತ್ತರ ಓದಿ. ಮೃತ್ಯುಂಜಯ ಮಂತ್ರ ಓದಿ. 

ಶಿವರಂಜನಿ ಗಡದ, ಬೆಂಗಳೂರು

  ಮದುವೆಯಾಗಿ 9 ವರುಷಗಳು ಕಳೆದಿವೆ. ಸಂತಾನ ಭಾಗ್ಯವಿಲ್ಲ. ನಾವು ಜಾತಕ ಕುಂಡಲಿಗಳನ್ನು ಕಳುಹಿಸಿದ್ದೇವೆ. ದತ್ತು ಸ್ವೀಕರಿಸಲು ಮನೆಯವರಿಗೆ ಮನಸ್ಸಿಲ್ಲ. ಬಾಡಿಗೆ ತಾಯಿಯನ್ನು ಪಡೆಯುವ ಇಚ್ಛೆ ನನಗೆ ಇಲ್ಲ. ಹೇಗೆಂಬುದು ಅ‘¤ವಾಗುತ್ತಿಲ್ಲ. ಸುಖವೆಲ್ಲ ಇದೆ. ಆದರೆ ಈ ಕೊರತೆ. 

  ಮುಖ್ಯವಾಗಿ ಪೂವ ಪುಣ್ಯ ಸ್ಥಾನದ ವಿಷಯ ಗಮನಿಸಿದಾಗ ಇಬ್ಬರ ಜಾತಕದಲ್ಲೂ ದೋಷವಿದೆ. ಒಂದನ್ನು ಕೊಡುವ ವಿಧಿ ಇನ್ನೊಂದನ್ನು ಕಸಿದಿರುತ್ತದೆ. ಬಾಡಿಗೆ ತಾಯ್ತನ ಭಾರತàಯ ಜ್ಯೋತಿಷ್ಯ ಶಾಸ್ತ್ರ ಪರಿಧಿ ಮೀರಿದ್ದು. ದತ್ತು ಪಡೆಯುವ ವಿಧಾನ ನಿಮಗೆ ಸೇರಿದ್ದು. ಮಾನಸಿಕ ಶಾಂತಿಗೆ ಪೂರಕವಾದ ವತ ಮಾನವು ಸತ್ಯ.  ನಿಮ್ಮಿಬ್ಬರ ಜಾತಕಗಳಲ್ಲೂ ಕಷ್ಟದ ವಿಷಯ. ಕೇಸರಿಯ ದಳಗಳನ್ನು ಹಸುವಿನ ಹಾಲಿಗೆ ಸೇರಿಸಿ, (ನಾಗನನ್ನು ಜಲಾಭಿಷೇಕಗೊಳಿಸಿದ ನàರಿನ ಮೇಲೆ ಹಾಲಿರುವ ಲೋಟ ಇರಿಸಿ) ನಾಗರಬೆಳ್ಳಿ ಮೂರುತಿಗೆ ನೈವೇದ್ಯ  ಮಾಡಿ. ಹಾಗೆಯೇ ಹಾರಲು ಬಿಡಿ. ಮುವತ್ತು ನಿಮಿಷದ ನಂತರ ಹಾಲನ್ನು ಇಬ್ಬರೂ (ಸಮಪಾಲಿನಲ್ಲಿ) ಕುಡಿಯಿರಿ. ರಾಹು ಪ್ರಸನ್ನ ಸೂಕ್ತ ಪಠಿಸಿ. ಒಳಿತಿಗೆ ದಾರಿ ಇದೆ.

  ಶಿವನಂಜುಂಡಪ್ಪ ಗುಳೇಗುಡ್ಡ

  ನಾನು, ನನ್ನ ಪತ್ನಿ ಇಬ್ಬರೂ ಕೆಲಸದಲ್ಲಿದ್ದೇವೆ. ಒಬ್ಬನೇ ಮಗ. ಈಗ ಎಂಟನೇ ತರಗತಿ. ತುಂಬಾ ತುಂಟ. ಶಾಲೆಯಲ್ಲಿ ತಕರಾರು. ಸಾಕಾಗಿ ಹೋಗಿದೆ. ತಲೆ ತಗ್ಗಿಸುವುದೇ ಆಗುತ್ತದೆ. ಶಿಕ್ಷಕಿಯರು ಒಬ್ಬ ಕ್ರಿಮಿನಲ್ನಂತೆ ನನ್ನ ಮಗನ ಬಗ್ಗೆ ಕೀಳಾಗಿ ಮಾತನಾಡುತ್ತಾರೆ. ಸುಮ್ಮನೆ ಕುಳಿತಿರಲಾಗದ ನಮ್ಮ ಮಗ ಸಹ ಗೆಳೆಯ, ಗೆಳೆಯತಿರ ಜೊತೆ ಆಟವಾಡುವಾಗ ಅವರುಗಳ ಪೆನ್ನು, ಪುಸ್ತಕ ಯಾವನೋ ಒಂದನ್ನು ಅಡಗಿಸಿಟ್ಟು ಕಾಡುತ್ತಾನೆ. ನಂತರ ಕೊಡುತ್ತಾನೆ. ಮಾಡಬೇಡ ಎಂದರೆ ಕೇಳಲಾರ. ಪರಿಹಾರ ಇದೆಯೇ?

  ನಿಮ್ಮ ಮಗನ ಜಾತಕ ಪರೀಕ್ಷೆ ಮಾಡಲಾಗಿ ತೊಂದರೆಯು ಜನ್ಮ ಭಾವದಲ್ಲಿ ಉದಯಿಸಿದೆ. ನಿಮ್ಮ ಮಗ ಖಂಡಿತ ಕೆಟ್ಟವನಲ್ಲ. ಆದರೆ ಹೈಪರ ಆಕ್ಟಿವ. ಅವನಿಗೆ ಸುಮ್ಮನೆ ಕುಳಿತಿರಲಾಗದು. ಒಂದೇ ಕಡೆ ಗಮನ ಕೇಂದ್ರೀಕರಿಸಲಾಗದು. ಕ್ಲಾಸಿನಲ್ಲಿ ಒಂದೇ ಕಡೆ ಕುಳಿತು ಉಸಿರುಗಟ್ಟಿದ ಸ್ಥಿತಿ ಅವನನ್ನು ಅಸ್ತವ್ಯಸ್ತಗೊಳಿಸಿರುತ್ತದೆ. ಇದಕ್ಕೆ ಸರಿಯಾಗಿ ನಮ್ಮ ಶಿಕ್ಷಣ ವ್ಯವಸ್ಥೆ ಮಕ್ಕಳ ಸೈಕಾಲಜಿಯ ಬಗೆಗೆ ತಲೆ ಕೆಡಿಸಿಕೊಂಡಿರುವುದಿಲ್ಲ. ಸ್ತುಪ್ತ ಮನಸಿನಲ್ಲಿ ಮಕ್ಕಳಿಗೆ ಕೆಲವು ಬಾರಿ ಇದರಿಂದ ಕಿಲಾಡಿತನ (ಕೆಲವರದ್ದು ಅಪಾಯಕಾರಿ ಹಂತಕ್ಕೆ ಹೋಗುವಂಥದ್ದು . ನಿಮ್ಮ ಮಗನಿಗೆ ಸುದೈವದಿಂದ ಅಪಾಯಕಾರಿ ಮಟ್ಟ ಇಲ್ಲ) ಹುಟ್ಟಿಕೊಳ್ಳುತ್ತದೆ. ಇದರಿಂದ ರೋಮಾಂಚನ, ಮನರಂಜನೆ, ಚಲನಶೀಲತೆ ಒದಗುತ್ತದೆ. ಏಕತಾನತೆ ನೀಗುತ್ತದೆ. ಧನ್ವಂತರಿ , ಕಾಲಭೈರವಾಷ್ಟಕ, ಚಂದ್ರ ಕವಚ ಕೂಡ ಒಳಿತು. ಮೃದುವಾಗಿ ತಿಳಿಸಿ ಹೇಳಿ. 


Trending videos

Back to Top