CONNECT WITH US  

​ಜಾತಕ ಫ‌ಲ

  ಶರಣಯ್ಯ, ಗುಳೇದಗುಡ್ಡೆ

  ಸ್ವಾಮಿ, ನನ್ನ ಮಗನ ಜಾತಕ ಕುಂಡಲಿ ಇಟ್ಟಿದ್ದೇನೆ. ಈಗ 31 ವರ್ಷಗಳು. ಮದುವೆಯಾಗುತ್ತಿಲ್ಲ. ತುಂಬಾ ಸಂಬಂಧಗಳನ್ನು ಹುಡುಕಾಡಿದೆವು. ಪ್ರಯೋಜನವಾಗಿಲ್ಲ. ಇವನಿಗೆ ಮದುವೆ ಯೋಗವಿದೆಯೇ? ದುಬೈನಲ್ಲಿ ಕೆಲಸ ಸಿಗುತ್ತದೆ. ಹೋಗುತ್ತೇನೆ ಎಂದನ್ನುತ್ತಿದ್ದಾನೆ. ಹೋಗಬಹುದೆ? ತಿಳಿಸಿ.

 ನಿಮ್ಮ ಮಗನಿಗೆ ಈಗ ಸಾಡೇಸಾತಿ ಕಾಟ ನಡೆಯುತ್ತಿದ್ದು ಮದುವೆಗೆ ಶನೈಶ್ಚರ ತೊಂದರೆ ತರುತ್ತಿದ್ದೇನೆ. ಚಂದ್ರನು ಕ್ಷೀಣನಾಗಿರುವುದೂ ವಿಳಂಬದ ಮದುವೆಯನ್ನು ಸೂಚಿಸುತ್ತಿದೆ. ದುಬೈಗೆ ಕೆಲಸ ಅರಸಿ ಹೋಗುವುದು ತೊಂದರೆ ಏನಿಲ್ಲ. ಆದರೆ ಸುಮಾರು ಒಂದೂವರೆ ವರ್ಷದ ನಂತರ ಕೆಲಸದ ವಿಚಾರವಾಗಲೀ, ವಿವಾಹದ ಸಮಸ್ಯೆಯಾಗಲೀ ಒಂದು ಗಟ್ಟಿಯಾದ, ಸುರಕ್ಷಿತವಾದ ದಡವನ್ನು ತಲುಪುತ್ತದೆ. ಪ್ರತಿ ದಿನ ತುಳಸೀ ದಳಗಳನ್ನು (ಒಂದೆರಡು) ತಾಮ್ರದ ಲೋಟ (ನೀರಿನೊಂದಿಗೆ)ದಲ್ಲಿರಿಸಿ. ಶಿವ ಪಾರ್ವತಿಯರನ್ನು ಪೂಜಿಸಲಿ. ವಿವಾಹಕ್ಕೆ ಚಾಲನೆ ಸಿಗುತ್ತದೆ. ಪ್ರತಿ ದಿನ ದತ್ತಾತ್ರೇಯ ಅರ್ಷಕೂಡ ಓದಲಿ. ತಾಪತ್ರಯದಾಯಕವಾದ ದಿನದ ರಗಳೆಗಳಿಂದ ಸದ್ಗುರು ಮುಕ್ತಿ ಒದಗಿಸುತ್ತಾನೆ. 

 ಅಂಜಲಿ ಸುಖದೇವಪ್ಪ, ಪುಣೆ

  ನಮ್ಮ ಮಗಳ ಮದುವೆಯಾಗಿ ಒಂದು ಮಗುವಿದೆ. ಅಳಿಯ ಕುಡುಕ ಎಂದು ನಂತರವೇ ತಿಳಿಯಿತು. ಇವಳ ಸಹಪಾಠಿಯೊಬ್ಬ ಗಂಡನನ್ನು ಬಿಟ್ಟು ಬಾ, ನಾನು ಮದುವೆಯಾಗುತ್ತೇನೆ ಎಂದು ಅನ್ನುತ್ತಿದ್ದಾನೆ. ಬಗೆ ಹರಿಯದ ಕಗ್ಗಂಟಿನಂತೆ ಬದುಕು ಒತ್ತಡ ತಂದಿದೆ. ಏನು ಪರಿಹಾರವಿದೆಯೇ?

  ನಿಮ್ಮ ಮಗಳ ಕುಂಡಲಿಯಲ್ಲಿ ಮರುಮದುವೆ ಯೋಗವಿದೆ. ಆದರೆ ಈಗ ಅಂಟಿಕೊಂಡು ಬಿಸಿಕೆಂಡ ಸುಲಭವಾಗಿ ದೂರವಾಗುವಂತಿಲ್ಲ. ಕೇತು ದಶಾ ಮೂರು ವರ್ಷಗಳಷ್ಟು ಕಾಲದ ಅವಧಿಕೆ ಇನ್ನೂ ಚಾಚಿಕೊಂಡಿದೆ. ಗಡಿಬಿಡಿ, ಆತುರುಗಳಿಂದ ತೊಂದರೆಗಳಿವೆ. ಮುಳ್ಳಿನ ಮೇಲಿನ ಅರಿವೆ ತೆಗೆಯಬಹುದು ಮೆಲ್ಲಗೆ. ಆದರೆ ಬದುಕಿನ ಚಿತ್ರಗಳು ಕಾಯ್ದೆ ಕಾನೂನುಗಳು ಚೌಕಟ್ಟಿಗೆ ಒಳಪಡುತ್ತವೆ. ಶನೈಶ್ಚರನ ಬೆಂಬಲ ಸಿಗಲಿದೆ. ಆದರೆ ತುಸು ವಿಳಂಬವಾಗುತ್ತದೆ. ಚಂದ್ರಾಷ್ಟಕ ಹಾಗೂ ಶನಿ ಅಷ್ಟೋತ್ತರಗಳನ್ನು ಮಗಳು ಓದಲಿ. ಒಳಿತಿಗೆ ದಾರಿ ಸಾಧ್ಯ. 

ಸುಬ್ಬಯ್ಯ ಶೆಟ್ಟಿ, ಮೈಸೂರು

  ನನ್ನ ಚಿಕ್ಕಂದಿನ ಸಮಯದಲ್ಲಿ ಒಂದು ಹಾವನ್ನು ನನ್ನ ತಂದೆಯವರು ಹೊಡೆದು ಸಾಯಿಸಿದ್ದರು. ನನ್ನ ಮಗ ಈಗ ಅಮೇರಿಕಾದಲ್ಲಿದ್ದಾನೆ. ಮದುವೆ ಆಗಿದೆ. ಮಕ್ಕಳಿಲ್ಲ. ಮದುವೆಯಾಗಿ ಐದು ವರ್ಷಗಳಾದವು. ನಾನು ನನ್ನ ತಂದೆ ಹಾವು ಹೊಡೆದ ವಿಷಯ ಮರೆತೇ ಬಿಟ್ಟಿದೆ. ಆದರೆ ನನ್ನ ಮಗನಿಗೆ ಒಬ್ಬ ವಯಸ್ಸಾದವರು ಸರ್ಪ ಹೊಡೆದ ಕನಸು ಬೀಳುತ್ತಿದೆ ಎಂದು ಅನ್ನುತ್ತಿದ್ದಾರೆ. ಇದು ಆಕಸ್ಮಿಕವೋ? ನನ್ನ ತಂದೆ ಸಾಯಿಸಿದ ಹಾವಿನ ಸಂದರ್ಭಕ್ಕೂ, ಮಗನ ಸಮಸ್ಯೆಗೂ ಸಂಬಂಧ ಇದೆಯೋ? ಇದ್ದರೆ ಪರಿಹಾರ ಏನು?

  ನಮ್ಮ ಆಷೇìಯ ನಂಬಿಗೆಗಳಿಗೆ ಒಂದು ಸಿದ್ಧಾಂತವಿದೆ. ಅದು ಶಬ್ದಗಳ ಮೂಲಕ ಸಿಗುವ ಸ್ವರೂಪದ್ದಲ್ಲ. ಹಾವು ಮತ್ತು ಮನುಷ್ಯನ ನಡುವಣ ಬಂಧ. ಅಮೃತತ್ವವನ್ನು, ವಿಷ ತತ್ವವನ್ನು ವಿಭಜಿಸುವ ಸೂಕ್ಷ್ಮ ಅಂತರದಲ್ಲಿದೆ. ಈ ವಸುಂಧರೆಯಲ್ಲಿ ಎಲ್ಲವೂ ಮಣ್ಣು. ಆದರೂ ಹೊನ್ನು ಅವಿತಿದೆ. ಅಮೃತ ಬೆರೆತಿದೆ. ವಿಷವೂ ಅಡಗಿದೆ. ಪಿತೃಪಿತಾಮಹರ ಸ್ವರೂಪವನ್ನು ಅವರ ಸಾವಿನ ನಂತರ ಊಹಿಸಲಾಗದು. ಆದರೆ ಸರ್ಪ ನಮ್ಮನ್ನು ಅವರೊಂದಿಗೆ ಬೆಸೆದಿದೆ. ಅದು ಪ್ರಜನನ ಶಕ್ತಿಗೆ ಆಧಾರ. ಪ್ರಶ್ನೆಗೆ ಉತ್ತರ ರೂಪವಾಗಿ ಇಷ್ಟೇ ಹೇಳಬಹುದು. ಸರ್ಪದ ವಿಷ ಸರ್ಪಕ್ಕೆ ವಿಷವಿಲ್ಲ. ಆದರೆ ಮಿಕ್ಕ ಪ್ರತಿಯೊಂದಕ್ಕೂ ವಿಷ. ವಿಜ್ಞಾನ ಉತ್ತರಿಸುವುದಕ್ಕಿಂತ ಮೊದಲೇ ಅನೇಕ ಉತ್ತರಗಳು ನಮ್ಮ ಭಾರತೀಯ ಪರಂಪರೆಯಲ್ಲಿ ಉತ್ತರಿಸಿಯಾಗಿದೆ. ನಮ್ಮ ಪರಂಪರೆ ಪೂರ್ತಿ ವೈಜ್ಞಾನಿಕ. ನಾವು ದಾರಿ ತಪ್ಪಿದ್ದೇವೆ ಎಂಬುದು ಬೇರೆ. ರಾಹು ಕವಚವನ್ನು ಮಗ ಓದಲಿ. ಇನ್ನೊಮ್ಮೆ ಪ್ರಶ್ನೆ ಕಳಿಸುವಾಗ ಜಾತಕ ಕಳುಹಿಸಿ. 


Trending videos

Back to Top