CONNECT WITH US  

ಜಾತಕ ಫ‌ಲ

ಜಾತಕ ಫ‌ಲ

 ವೆಂಕಟರಮಣಪ್ಪ ದೇಸಾಯಿ, ರೋಣ
ವಯಸ್ಸಿಗೆ ಬಂದ ಮಗಳು, ಕುಡಿದು ಮನೆಗೆ ಬರುತ್ತಿರುವ ಜವಾ ಬ್ದಾರಿ (ಆದರೆ ಬೇಜವಾಬ್ದಾರಿಯಿಂದಲೇ ಇರುತ್ತಾನೆ) ಅರಿಯದ ಮಗ. ಬದುಕು ಸಾಕಾಗಿ ಹೋಗಿದೆ. ಮಕ್ಕಳು ಬದುಕು ಸರಿ ಹೋದೀತೆ? ನನ್ನ ಪತ್ನಿ ಹಾಗೂ ನನ್ನ ಮಕ್ಕಳ ಜಾತಕ ಕಳುಹಿಸಿದ್ದೇನೆ. ಪರಿಹಾರ ತಿಳಿಸಿ. 
- ದೈವ ಬಲವೆಂಬುದೊಂದು ದೀಪದ ಬೆಳಕು. ಕತ್ತಲನ್ನು ನಿವಾರಿಸಲು ಬೆಳಕು ಬೇಕು. ಕ್ಷೀಣವಾಗಿರುವ ಇಂದಿನ ಗ್ರಹಬಲ ಸಂವರ್ಧನೆಯ ದಾರಿಗೆ ಸಾಗಬೇಕಾಗಿದೆ. ನಿಮ್ಮ ಅಣ್ಣ ಅಥವಾ ಅಕ್ಕ ಇದ್ದಾರೆಯೇ? ಇಲ್ಲಾ, ಅಕ್ಕ, ಅಣ್ಣಂದಿರ ಸ್ವರೂಪದ ಬಂಧು ವಲಯವನ್ನು ಮುಖ್ಯವಾಗಿಸಿಕೊಳ್ಳಿ. ನಮ್ಮ ಪಾಲಿಗೆ ಇನ್ನು ಹತ್ತು ತಿಂಗಳಲ್ಲಿ ಶನೈಶ್ಚರ ಸ್ವಾಮಿಯ ಕಾಟ ಮುಗಿಯುತ್ತದೆ. ಮಗನ ರಾಹು ದಶಾ ಅಪಾಯದ ಕಾಲವಾಗಿದೆ. ಮಗಳ ಮದುವೆ ಸಾಧ್ಯವಾಗುತ್ತದೆ. ಬರುವ ಆಗಸ್ಟ್‌ ಕೊನೆಯ ಹೊತ್ತಿಗೆ ಅಥವಾ ಅದರೊಳಗೆ ಕಂಕಣ ಬಲ ಲಭ್ಯವಿದೆ. ಹಿರಿಯರು ನಿಮ್ಮ ಸಹಾಯಕ್ಕೆ ಬರುತ್ತಾರೆ. ನೀವು ದಂಪತಿ ವಿರೋಧ, ಸಿಡುಕು, ಅಸಹನೆ ಬಿಡಬೇಕು. ಬರುವ ದಿನಗಳು ಒಳಿತಿಗಾಗಿನ ದಾರಿ ತೋರುವಂಥವು. ಮಗನನ್ನು ಹಿರಿಯರ ಮೂಲಕ ನಿಯಂತ್ರಿಸಿ.

 ಅರವಿಂದ ಕರುಣಾಕರನ್‌, ಕಾಂಜಿಗಾಡು
ಸ್ವಾಮಿ, ಮೂರು ವರ್ಷಗಳಿಂದಲೂ ಕೈ ಕಾಲುಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ನಾನಿನ್ನೂ ಕೇವಲ 32 ವಯಸ್ಸಿನವರು. ಯಾವನೋ ಒಬ್ಬ ಬೈರಾಗಿ ಬಂದವನು ಹೋಗುತ್ತಿದ್ದ (ರಸ್ತೆಯಲ್ಲಿ ಸುಮ್ಮನೆ ನನ್ನ ಪಾಡಿಗೆ) ನನ್ನನ್ನು ಕರೆದು ಈಗ ಮೂರು ವರ್ಷಗಳ ಹಿಂದೆ ಐದು ನೂರು ರೂಪಾಯಿ ಕೇಳಿದನು. ನಾನು ಆಗದು ಎಂದು ಹೇಳಿದೆ ಅಷ್ಟೇ. ಆ ಕೆಲವೇ ದಿನಗಳಲ್ಲಿ ನನ್ನ ಕೈಕಾಲುಗಳು ಸೋತಿವೆ. ಏನು ಪರಿಹಾರ? ಬೈರಾಗಿ ಏನನ್ನಾದರೂ ಮಾಡಿರಬಹುದೆ?
-  ನೀವು ತಪ್ಪು ಮಾಡಿದ್ದೀರಿ ಎಂಬುದನ್ನು ಯಾರೂ ಅನ್ನಲಾರರು. ಯಾರೇ ಆಗಲಿ ಹೆಚ್ಚು ಎಂದರು ಐವತ್ತು ರೂಪಾಯಿ ಕೊಡಬಹುದು. 500 ದೊಡ್ಡ ಮೊತ್ತ. ಪಾಪ ಪ್ರಜ್ಞೆ ಬಿಡಿ. ಪ್ರತಿ ನಿತ್ಯ ಭೋಜನದ ಸಂದರ್ಭದಲ್ಲಿ ಒಂದು ತುತ್ತನ್ನು ಕಾಗೆಗಾಗಿ ರಸ್ತೆಯಲ್ಲಿಡಿ. ಕಾಗೆಗಾಗಿ ಕಾಯುವುದು ಬೇಡ. ಆದಿತ್ಯ ಹೃದಯ, ಸುದರ್ಶನ ಅಷ್ಟೋತ್ತರ ನಾಮಾವಳಿ ಓದಿ. ವೈದ್ಯರ ಬಳಿ ಹೋಗಲು ಹಿಂಜರಿಯದಿರಿ. 2017ರ ಜನವರಿ ಒಳಗಡೆ ನಿಮಗೆ ಮಾಮೂಲಿನ ಸ್ಥಿತಿ ಒದಗಿಬರುತ್ತದೆ. ಚಿಂತೆ ಬೇಡ. 

  ಸೌಭಾಗ್ಯ ಶೆಟ್ಟಿ, ಲಖನೌ
 ನನ್ನ ಮಗಳ ಬಗೆಗೆ ಕೇಳುವುದು ನನಗೇ ಮುಜುಗರದ ಸಂಗತಿ. ಮದುವೆ ಆಗಿದೆ. ಹುಡುಗ ಒಳ್ಳೆಯವನು. ಆದರೆ ಈಕೆ ಯಾರದೋ ಬೇರೆಯವನ ಬಳಿ ಸಂಬಂಧ ಇಟ್ಟುಕೊಂಡಿದ್ದಾಳೆ. ಬುದ್ಧಿ ಹೇಳಿದರೆ ಅಳುತ್ತಾಳೆ. ಅಳಿಯ ಡೈವರ್ಸ್‌ಗಾಗಿ ಪ್ರಯತ್ನ ಮಾಡುತ್ತಿದ್ದಾನೆ. ನನಗೆ ಧರ್ಮಸಂಕಟ. ನಮ್ಮದು ಬಡ ಸಂಸಾರ. ಅದೂ ಒಂದು ಕಥೆ. ಇದರ ನಡುವೆ ಇದೊಂದು. ಪರಿಹಾರ ಇದೆಯೇ? 
- ನಿಮ್ಮ ಹುಡುಗಿಯ ಜಾತಕದಲ್ಲಿ ಕೆಲವು ದೋಷಗಳಿವೆ. ದೋಷಗಳ ವಿವರ ಬೇಡ. ಇರುವುದನ್ನು ಬಿಟ್ಟು ಇರದಿರುವುದರೆಡೆಗೆ ಯೋಚನೆ ಹಾಕುವ ದುರ್ಭರತೆ, ಇದು ಪ್ರಾರಬ್ದ. ಮನುಷ್ಯನ ಶಿಸ್ತು, ನೈತಿಕತೆ ಕೆಲವು ಸಲ ಶಬ್ದಗಳಲ್ಲಿ ಕಟ್ಟಿಡುವ ಬಗೆಯಲ್ಲಿರದೆ ಆಚೆಗೆ ಇರುತ್ತದೆ. ನೋಡಿ, ಕಷ್ಟವಿದೆ ಎಂದು ಹೇಳಿ. ಅರಿಷಿಣದ ಪುಡಿಯನ್ನು ತುಳಸಿ ರಸದಲ್ಲಿ ಬೆರೆಸಿ ನಾಗರ ಬೆಳ್ಳಿ ಮೂರ್ತಿಗೆ ಹಚ್ಚಿ. ಮಂಗಳ ತಂಡಿಕಾಸ್ತೋತ್ರ ಪಠಿಸಲು ಮಗಳಿಗೆ ತಿಳಿಸಿ. ಹಣೆಯಲ್ಲಿ ಬರೆದದ್ದು ಮೀರಿ ದೈವ ಬೆಂಬಲಕ್ಕೆ ಬರುವಂತಾಗಲಿ.

ಇಂದು ಹೆಚ್ಚು ಓದಿದ್ದು

ಬೆಂಗಳೂರಿನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಬಂಧಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವ ರಮೇಶ ಜಾರಕಿಹೊಳಿ.

Nov 19, 2018 06:00am

ಬಾಗಲಕೋಟೆಯಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ ಬೆಂಕಿಗೆ ಆಹುತಿ.

Nov 19, 2018 06:00am

Trending videos

Back to Top