CONNECT WITH US  

ಜತಕಾ ಫಲ

 ಸುಬ್ಬಯ್ಯ ಶೆಟ್ಟಿ, ಮೈಸೂರು
ನನ್ನ ಚಿಕ್ಕಂದಿನ ಸಮಯದಲ್ಲಿ ಒಂದು ಹಾವನ್ನು (ಸರ್ಪ) ನನ್ನ ತಂದೆಯವರು ಹೊಡೆದು ಸಾಯಿಸಿದ್ದರು. ನನ್ನ ಮಗ ಈಗ ಅಮೇರಿಕಾದಲ್ಲಿದ್ದಾನೆ. ಮದುವೆ ಆಗಿದೆ. ಮಕ್ಕಳಿಲ್ಲ. ಮದುವೆ ಆಗಿ ಐದು ವರ್ಷಗಳಾದವು. ನಾನು ನನ್ನ ತಂದೆ ಹಾವು ಹೊಡೆದ ವಿಷಯ ಮರೆತೇ ಬಿಟ್ಟಿದ್ದೆ. ಆದರೆ ನನ್ನ ಮಗನಿಗೆ ಒಬ್ಬ ವಯಸ್ಸಾದವರು ಸರ್ಪ ಹೊಡೆದ ಕನಸು ಬೀಳುತ್ತಿದೆ ಎಂದು ಅನ್ನುತ್ತಿದ್ದಾನೆ. ಇದು ಆಕಸ್ಮಕವೋ? ನನ್ನ ತಂದೆ ಸಾಯಿಸಿದ ಹಾವಿ ಸಂದರ್ಭಕ್ಕೂ, ಮಗನ ಸಮಸ್ಯೆಗೂ ಸಂಬಂಧ ಇದೆಯೋ? ಇದ್ದರೆ ಪರಿಹಾರ ಏನು? 
-  ನಮ್ಮ ಆಷೇìಯ ನಂಬಿಗೆಗಳಿಗೆ ಒಂದು ಸಿದ್ಧಾಂತವಿದೆ. ಅದು ಶಬ್ದಗಳ ಮೂಲಕ ಸಿಗುವ ಸ್ವರೂಪದ್ದಲ್ಲ. ಹಾವು ಮತ್ತು ಮನುಷ್ಯನ ನಡುವಣ ಬಂಧ ಅಮೃತತ್ವನ್ನು, ವಿಷ ತತ್ವವನ್ನು ವಿಭಜಿಸುವ ಸೂಕ್ಷ್ಮ ಅರಿತದಲ್ಲಿದೆ. ಈ ವಸುಂಧರೆಯಲ್ಲಿ ಎಲ್ಲವೂ ಮಣ್ಣು. ಆದರೂ ಹೊನ್ನು ಅವಿತಿದೆ. ಅಮೃತ ಬೆರೆತಿದೆ. ಶಾಪವೂ ಅಡಗಿದೆ. ಪಿತೃಪಿತಾಮಹರ ಸ್ವರೂಪವನ್ನು ಅವರ ಸಾವಿನ ನಂತರ ಊಹಿಸಲಾಗದು. ಆದರೆ ಸರ್ಪ ನಮ್ಮನ್ನು ಅವರೊಂದಿಗೆ ಬೆಸೆದಿದೆ. ಅದು ಪ್ರಜನನ ಶಕ್ತಿಗೆ ಆಧಾರ. ಪ್ರಶ್ನೆಗೆ ಉತ್ತರ ರೂಪವಾಗಿ ಇಷ್ಟೇ ಹೇಳಬಹುದು. ಸರ್ಪದ ವಿಷ ಸರ್ಪಕ್ಕೆ ವಿಷವಲ್ಲ. ಆದರೆ ಮಿಕ್ಕ ಪ್ರತಿಯೊಂದಕ್ಕೂ ವಿಷ. ವಿಜ್ಞಾನ ಉತ್ತರಿಸುವುದಕ್ಕಿಂತ ಮೊದಲೇ ಅನೇಕ ಉತ್ತರಗಳು ನಮ್ಮ ಭಾರತೀಯ ಪರಂಪರೆಯಲ್ಲಿ ಉತ್ತರಿಸಿಯಾಗಿದೆ. ನಮ್ಮ ಪರಂಪರೆ ಪೂರ್ತಿ ವೈಜ್ಞಾನಿಕ. ನಾವು ದಾರಿ ತಪ್ಪಿದ್ದೇವೆ ಎಂಬುದು ಬೇರೆ. ರಾಹು ಕವಚವನ್ನು ಮಗ ಓದಲಿ. ಇನ್ನೊಮ್ಮೆ ಪ್ರಶ್ನೆ ಕಳುಹಿಸುವಾಗ ಜಾತಕ ತಿಳಿಸಿ.

  ಪದ್ಮ ಪ್ರಿಯಾ, ಬೆಳಗಾವಿ
ಕಣ್ಣಿನ ದೋಷಕ್ಕೆ ಸೂರ್ಯ ಚಂದ್ರರು ಕಾರಣನಾ?
- ಚಂದ್ರನು ಹಾಗೂ ಸೂರ್ಯರಿಬ್ಬರುಊ ಕಣ್ಣನ ಕಾರಕರಾಗಿದ್ದಾರೆ. ಕಣ್ಣಿನ ಆರೈಕೆ ಈ ಎರಡೂ ಗ್ರಹಗಳೂ ತಮ್ಮ ಸುಪರ್ದಿಯಲ್ಲಿಟ್ಟುಕೊಂಡಿವೆ. ಸೂರ್ಯ ದೋಷ, ಚಂದ್ರ ದೋಷ ಕಣ್ಣಿ ಬಾಧೆಗೆ ಕಾರಣವಾದೀತು. ಆದರೆ ಕಣ್ಣಿನ ತೊಂದರೆಗೆ ಕೇವಲ ಇವರಿಬ್ಬರೇ ಕಾರಣರಾಗರು. ಉಳಿದ ಗ್ರಹಗಳೂ ಕಣ್ಣುಗಳ ಮೇಲೆ ಗದಾ ಪ್ರಹಾರ ಮಾಡಬಲ್ಲರು.

 ಸುಮಂಗಲಾ ಕಾರ್ಕಳ
ಸದಾ ಎಡಬಿಡದೆ ನಮ್ಮ ಮನೆಯವ ರೊಂದಿಗೆ ಮನಸ್ತಾಪ ಎದುರಾಗುತ್ತಿದೆ. ಆತ್ಮಹತ್ಯೆ ಕೂಡ ಯೋಚನೆಗೆ ಬರುತ್ತದೆ. ಏನು ಮಾಡಲಿ?
- ನಿಮ್ಮ ಜಾತಕದಲ್ಲಿ ವಿವಾಹ ಸೌಖ್ಯ ಕಡಿಮೆ. ಪುತ್ರ ಸ್ಥಾನಕ್ಕೆ ಶಕ್ತಿ ಇದೆ. ಮಹತ್ತರವಾದ ಭವಿಷ್ಯ ಅವನಿಗೆ ಒದಗಿ ಒರಲಿವೆ. ಮಗನ ಅಭಿವೃದ್ಧಿಯಲ್ಲಿ ಸಂತೋಷ ಪಡೆಯಿರಿ. ಅಷ್ಟಮದ ಕೇತು ನಿಮಗೆ ಆತ್ಮಹತ್ಯೆಗೆ ಪ್ರೇರೇಪಣೆ ನೀಡುತ್ತಿದ್ದಾನೆ. ಈ ಕೆಳಗಿನ ಮಂತ್ರ ಪಠಿಸಿ. 
ಓಂ ಪ್ರಾಂ ಪ್ರೀಂ ಪ್ರೌಂ ಸ: ಶ್ರೀ ಕೇತವೇ ನಮ:
ಈ ಬೀಜಾಕ್ಷರ ಮಂತ್ರ ಪ್ರತಿ ದಿನ 108ಕ್ಕೂ ಕಡಿಮೆ ಇರದಂತೆ, ಎಷ್ಟು ಹೇಳಿಕೊಳ್ಳುತ್ತೀರೋ ಅಷ್ಟು ಉತ್ತಮ.

ಮೊ: 8147824707

ಜ್ಯೋತಿಷ  ಕುರಿತಾದ ಪ್ರಶ್ನೆಗಳನ್ನು ನಮ್ಮ ವಿಳಾಸಕ್ಕೆ ಅಥವಾ ಕೆಳಗಿನ ಇ-ಮೇಲ್‌ಗೆ ಕಳುಹಿಸಿ:  Email: bahumukhi@manipalmedia.com


Trending videos

Back to Top