CONNECT WITH US  

ಜಾತಕ ಫ‌ಲ

 ಅರವಿಂದ ಗುಂಡ್ಮೂಪುರ
ಗುರೂಜಿ, ನನ್ನ ಮತ್ತು ನನ್ನ ಪತ್ನಿಯ ಜಾತಕಗಳನ್ನು ಕಳುಹಿಸಿದ್ದೇನೆ. ನನ್ನ ಪತಿನನ್ನನ್ನು ಸಂಶಯಿಸುತ್ತಾಳೆ. ಎಷ್ಟೇ ತಿಳಿಸಿ ಹೇಳಿದರೂ ಅರ್ಥವಾಗುವುದಿಲ್ಲ. ಯಾರ ಕಿಡಿಗೇಡಿತನವೋ ತಿಳಿಯದು. ಒಂದು ದಿನ ನನ್ನ ಪ್ಯಾಂಟಿನ ಜೇಬಿನಲ್ಲಿ ಒಂದು ನಿರೋಧ್‌ ಇತ್ತು. ನನ್ನಾಣೆ ನನಗಿದು ಹೇಗೆ ತಿಳಿಯದು. ಈಕೆ ( ನನ್ನ ಪತ್ನಿ)ಯದು ಒಂದು ಹಟ. ಡೈವರ್ಸ ಕೊಡಿ. ಪರಿಹಾರ ಏನು?

-  ಪರಿಸ್ಥಿತಿ ವಿಚಿತ್ರವಾಗಿದೆ. ನಿಮಗೆ ತಿಳಿಯದೇ ನಿಮ್ಮ ಜೇಬಿನಲ್ಲಿ ವಸ್ತು ಪತ್ನಿಯ ವಿವಂಚನೆಗೆ ಕಾರಣವಾಗಬಾರದು ಎಂದು ಹೇಳುವುದೂ ಕಷ್ಟ. ನಿಮಗೀಗ ಕಳತ್ರ (ಬಾಳ ಸಂಗಾತಿ) ಸ್ಥಳದಲ್ಲಿ 
ಶನಿ ಕಾಟವಿದೆ. ಇತ್ತೀಚೆಗೆ ನೀವೂ ಯಾವಾಗಲಾದರೂ ನಿಮ್ಮ 
ಮನೆಯ ಜೊತೆ ಜಗಳ ಮಾಡಿದ್ದಾಗಲೀ, ನೀವು ಯಾವ ಕಾರಣಕ್ಕಾದರೂ ನಿಮ್ಮ ಕೆಲಸದ ಸ್ಥಳದಲ್ಲಿ ಯಾರೊಡನೆ ಯಾದರೂ ಜಗಳವಾಡಿದ್ದು, ಮನಸ್ತಾಪದಿಂದ ಕಾವು ಎದ್ದೇಳುತ್ತ ಚರ್ಚೆ ಬಿಸಿಯಾದದ್ದು ಇದೆಯೇ? ಒಮ್ಮೆ ಖುದ್ದಾಗಿ ನನ್ನನ್ನು ಸಂಪರ್ಕಿಸುತ್ತೀರಾ?

  ಸುರಗೀಕಟ್ಟೆ ಶೇಷಯ್ಯ, ಶಿರಿಬೀಡು
ನನ್ನ ಮಗ ವಿದೇಶದಲ್ಲಿದ್ದಾನೆ. ಮನಿಲಾ ದೇಶದ ಒಂದು ಕಡೆ. ಹುಣ್ಣಿಮೆ, ಆಮವಾಸ್ಯೆ ಬಂದಾಗ ಅವನ ಮಕ್ಕಳಿಬ್ಬರಿಗೂ ಮೂಛೆìರೋಗ ಬರುತ್ತದಂತೆ. ಮನೆಯ ದೇವರಿಗೆ ಸೂಕ್ತವಾದ 
ಪೂಜೆ ಪುನಸ್ಕಾರ ನಡೆಯದ ಕಾರಣ ಇಂಥ ತೊಂದರೆಗಳು 
ಉದ್ಬವಿಸಿವೆ ಎಂದು ಜ್ಯೋತಿಷಿಗಳು ತಿಳಿಸಿದರಂತೆ. ಇದು ನಿಜವೇ? ಪರಿಹಾರ ತಿಳಿಸಿ.

-   ಮನೆ ದೇವರಿಗೆ ಸಂದರ್ಶಿಸುವ ಕೆಲಸ ನೀವೀಗ ಮಾಡಿ. ಪೂಜೆ ಸಲ್ಲಿಸಿ. ಮಗ ಊರಿಗೆ ಬಂದಾಗ ಮನೆ ದೇವರನ್ನು ಸಂದರ್ಶಿಸಲಿ. ಮೊದಲು ವೈದ್ಯರನ್ನು ಕಾಣಲು ತಿಳಿಸಿ. ಮಕ್ಕಳು ಅವಳಿ ಜವಳಿ ಇದ್ದು ರಾಹು ಹಾಗೂ ಚಂದ್ರರ ವಿಷಮ ಸಂಯೋಜನೆ ಅಷ್ಟಮದಲ್ಲಿದೆ. ಲಗ್ನಾಧಿಪತಿ ಗ್ರಹವು ಬಲಾಡ್ಯವಾದರೂ ಸದ್ಯದ ಶನಿಕಾಟದಿಂದ ಕಿರಿಕಿರಿಗೆ ದಾರಿ ಇದೆ. ಶನಿಕಾಟದ ಕಿರಿಕಿರಿಯು ಈಗಿರುವುದು ಆರೋಗ್ಯಕ್ಕೆ ತುಸು ಧಕ್ಕೆಯ ವಿಚಾರವಾಗಿದೆ. ಯಾವ ಕಾರಣಕ್ಕೂ ಕನಕ ಪುಷ್ಯರಾಗದ ಹರಳನ್ನು  ಧರಿಸದಿರಲಿ. ಗೋಮೇಧಕ ಕೂಡ ಬೇಡ. ಪಚ್ಛೆಯನ್ನು ಧರಿಸಲಿ. ಮಂಗಳ ಚಂಡಿಕಾ ಸ್ತೋತ್ರವನ್ನು ಮಗ ಪಠಿಸಲಿ. ನಿಮ್ಮ ಮೊಮ್ಮಕ್ಕಳು ಈ ಬಾಧೆಯಿಂದ ಹೊರಬರುತ್ತಾರೆ. ಊರಿಗೆ ಬಂದಾಗ ಸಪ್ತಶತಿ ಪಾರಾಯಣದ ಸಹಿತ ದುರ್ಗಾದೇವಿಗೆ ಕುಂಕುಮಾರ್ಚನೆ ನಡೆಸಬೇಕು. ಪ್ರತಿ ದಿನ ಕರ್ಪೂರದ ಚಿಕ್ಕ ತುಂಡನ್ನು ನೀವು ಆಗ್ನೇಯ ದಿಕ್ಕಿಗೆ 6 ತಿಂಗಳ ಕಾಲ ಎಸೆಯಿರಿ. ಅದು ರಸ್ತೆಗೆ ಬೀಳುವಂತಿರಲಿ. 

ಮೊ: 8147824707

ಇಂದು ಹೆಚ್ಚು ಓದಿದ್ದು

Trending videos

Back to Top