CONNECT WITH US  

 ಜಾತಕ ಫ‌ಲ

  ಅದಿತಿ ಶಿವಪುತ್ರ ಕಲಾಲ, ಮಂಗಳೂರು
 ನನ್ನ ಪತಿ ಸರಿಯಾಗಿಯೇ ಇದ್ದವರು ಮತ್ತೋರ್ವ ಹೆಣ್ಣಿನ ಮೋಹ ಪಾಶಕ್ಕೆ ಸಿಲುಕಿದ್ದಾರೆ. ಯಾರು ಬುದ್ಧಿ ಹೇಳಿದರೂ ಕೇಳಿಸಿಕೊಳ್ಳುತ್ತಿಲ್ಲ. ಪರಹೆಣ್ಣಿನ ಸಹವಾಸಕ್ಕೆ ನಾನು ಬಲಿಯಾಗಿಲ್ಲ ಎಂದೇ ಸಾಧಿಸುತ್ತಿದ್ದಾರೆ. ಅವರ ಮೇಲೆ ವಶೀಕರಣ ನಡೆದಿದೆಯೇ? ನನಗೆ ಕನಸಿನಲ್ಲಿ ರಕ್ತದ ಹೊಳೆಯಲ್ಲಿ ಈಜಿದಂತೆನಿಸುತ್ತದೆ. ಭಯವಾಗುತ್ತದೆ. ನಾನು ಸಂಕಟದಿಂದ ಹೇಗೆ ಸರಾಗವಾಗಿ ಹೊರಬರಬಲ್ಲೆ? ಡೈವರ್ಸ್‌ ಪಡೆಯಲೆ? ಪರಿಹಾರಗಳೇನು?
ಹಲವು ಸಲ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡುವುದು ಕಷ್ಟ ನಿಮ್ಮ ಪ್ರಶ್ನೆಗಳು ನಿಮ್ಮ ನೋವನ್ನು ಪ್ರತಿನಿಧಿಸುತ್ತಿವೆ. ನೀವು ಕಳುಹಿಸಿದ ಜಾತಕಗಳು ಕೆಲವು ಅನ್ಯ ಪ್ರಶ್ನೆಗಳನ್ನು ಕೇಳಲು ಜ್ಯೋತಿಷಿಗೆ ಒತ್ತಡ ತರುತ್ತಿವೆ. ಕೃಷ್ಣಪಕ್ಷದಲ್ಲಿ ಕರವೀರ ಹೂವಿಗೆ ಅರಿಷಿಣ ಕುಂಕುಮ ಸವರಿ ತಾಯಿ ದುರ್ಗೆಗೆ ಸಮರ್ಪಿಸಿ. ಪ್ರತಿ ದಿನ ಶ್ರೀ ಭದ್ರಕಾಳಿ ಅಷ್ಟೋತ್ತರ ಪಠಿಸಿ. ಮನೆಯ ಒಲೆಯಲ್ಲಿ ( ಈಗ ಒಲೆಗಳು ಕಷ್ಟ. ಗ್ಯಾಸ್‌ಸ್ಟೌವಿನಲ್ಲಿ ಬೇಡ) ಬೆಂಕಿ ಉರಿಯುವಾಗ ಉಪ್ಪು (ಸಮುದ್ರ) ಹರಳು (ಏಳೆಂಟು ಹಾಕಿ) ತೆಂಗಿನ ಎಲೆ (ಒಂದೆಳೆ)ಯನ್ನು ಬೆಂಕಿಗಿಟ್ಟು ಮನೆಯೆದುರು ಹತ್ತಡಿ ದೂರಕ್ಕಿರಿಸಿ. ಏಳುದಿನಗಳ ನಂತರ ವಿಷ್ಣು ಸಹಸ್ರ ನಾಮಾವಳಿ ಪಠಿಸಿ. ಕಷ್ಟ ದೂರವಾಗುತ್ತದೆ. 

ಶಿವಶೇಖರ, ಕೋಣನಕುಂಟೆ, ಬೆಂಗಳೂರು
 ಕೆಲಸದಲ್ಲಿ ಸೋಲು, ಅವಮಾನ, ಸಾಲ, ಮನೆಯಲ್ಲಿ ಅಶಾಂತಿ ತಾಂಡವ ಇತ್ಯಾದಿಗಳಿಂದ ರೋಸಿ ಹೋಗಿದ್ದೇನೆ. ಯಾವ ಪೂಜೆ ಪುನಸ್ಕಾರಗಳಿಂದಲೂ ಮಾನಸಿಕ ಶಾಂತಿ ಸಿಗುತ್ತಿಲ್ಲ. ಮಗನೂ ಕೆಟ್ಟವರ ಸಹವಾಸಕ್ಕೆ ಬಿದ್ದಿದ್ದಾನೆ. ಹೆಂಡತಿಯ ನಡತೆ ಸರಿ ಇಲ್ಲ. ಒಟ್ಟಿನಲ್ಲಿ ಎಲ್ಲ ಕಡೆ ಸೋಲು. ಹೇಗೆ ಈ ಚಕ್ರವ್ಯೂದಿಂದ ಹೊರಬರಲಿ. ಒಂದೆಡೆಯಾದರೂ ಪ್ರಕಾಶ ಬಂದರೆ ಗೆಲುವಿನ ಆಸೆ ಮನಸ್ಸಿಗೆ. ಆದರೆ ಬರೇ ಕತ್ತಲು. 
ಪ್ರತಿ ಹುಣ್ಣಿಮೆಯಂದು (16 ತಿಂಗಳು) ಸಮುದ್ರ ತೀರದ ಮಳಲನ್ನು ತೆಂಗಿನ ಮರದ ತಳಕ್ಕೆ (ನಾಲ್ಕೈದು ಕೆ.ಜಿ ಅನ್ನಿ) ಸುರಿಯಿರಿ. ಶ್ರೀ ಮಂಗಳ ಚಂಡಿಕಾ ಸ್ತೋತ್ರ ಪಠಿಸಿ. 108 ಬಾರಿ ಮಾಡಿದರೆ ಕ್ಷೇಮ. ಹಾಲು (ಹಸುವಿನ) ಮತ್ತು ಕೇಸರಿಯ ಜೊತೆ ಲವಂಗದ ಪುಡಿ ಬೆರೆಸಿ ನರಸಿಂಹ ವಿಗ್ರಹಕ್ಕೆ ಕ್ಷೀರಾಭಿಷೇಕ, ಮಂಗಳಾರತಿ ಮಾಡಿ ಆರಾಧಿಸಿ. ನರಸಿಂಹ ಕವಚ ಓದಿ. ಚೇತರಿಕೆಗೆ ಅವಕಾಶವಿದೆ. ಪತ್ನಿಯ ನೆರವಿಂದ ಹರ್ಷ. 

 ಮಹಾಬಲಿ ಸುರ ವೆಂಕಯ್ಯ ರೆಡ್ಡಿ
 ಸ್ವಾಮಿ, ನನಗೆ ಪ್ರತಿ ದಿನ ವಿಚಿತ್ರ ಅನುಭವ ವೇದ್ಯ. ರಾತ್ರಿ ಯಾರೋ ಕಾಪಾಡಿ, ಕಾಪಾಡಿ ಎಂದು ಕೂಗಿದಂತೆ ರೋಧನ ಕೇಳಿಸುತ್ತದೆ. ಹೆಣ್ಣು ಧ್ವನಿ ಮೊದಲು. ನಂತರ ಪುರುಷನ ಅಳು. ಪಕ್ಕದ ಮನೆಯಿಂದ ಕೇಳಿ ಬರುತ್ತದೆ. ಪಕ್ಕದ ಮನೆಯಲ್ಲಿ ವಾಸವಿರುವ  ವ್ಯಕ್ತಿ ನೈಟ್‌ ಡ್ನೂಟಿಗೆ ಹೋಗಿರುತ್ತಾರೆ. ಯಾರೋ ಬರುತ್ತಾರೆ ಮನೆ ಒಳಗೆ. ಹೊರಗಿಂದ ಬೀಗ ಇರುತ್ತದೆ. ಒಂದೆರಡು ತಾಸಿನ ನಂತರ ಗಿಳಿಯೊಂದರ ಕೂಗಿನಂತೆ ಉಲಿತ ಕೇಳಿ, ಏನೋ ಒಂದು ಹಾರಿ ಹೋದಂತೆ ಅನಿಸುತ್ತದೆ. ಯಾವ ಕಾಟವಿದು? ತೊಂದರೆ ಇದೆಯೋ?

 ಮನೋವೈದ್ಯರ ಬರೆ ಭೇಟಿ ನಡೆಸಿ. ಲಗ್ನ ಭಾವದಲ್ಲಿನ ರಾಹು ಭ್ರಮೆ ತರುತ್ತಾನೆ. ಛಿದ್ರಸ್ಥಾನ ಸಕಲ ಭ್ರಷ್ಟತನದಿಂದ ಕುಜ ಶನೈಶ್ಚರರ ಜೋಡಣೆಯಲ್ಲಿ ನಲುಗುತ್ತಿದೆ. ರಾಹು ಪೀಡಾ ನಿವಾರಣಾ ಸ್ತೋತ್ರ, ನಿರ್ವಿಘ್ನ ಕೈಂಕರ್ಯ ( ಗಣಪತಿಯ ಕುರಿತು, ನಡೆಸಿ ನೀರು ಮಜ್ಜಿಗೆಗೆ ಬೆಲ್ಲ ಸೇರಿಸಿ ಹತ್ತು ದಿನ ಕುಡಿಯಿರಿ. ಭಾರೀ ತೊರೆಗಳ ಕೆಳಗೆ ಮಲಗದಿರಿ. ಉತ್ತರ ದಿಕ್ಕಿಗೆ ತಲೆ ಮಾಡಿ ಮಲಗದಿರಿ. ಪ್ರತಿ ದಿನ ಶ್ರೀದೇವಿ ಲಲಿತಾಷ್ಟಕ, ಖಡ್ಗ ಮಾಲಿನಿ ಅಷ್ಟಕ ಓದಿ. ( ಪ್ರತಿ ದಿನ ಎರಡು ಬಾರಿ ಉತ್ತಮ) ಪಂಚದುರ್ಗಾಜಪ, ಶ್ರೀ ಮಹಾಕಾಳಿ ಸ್ತೋತ್ರ ಮಾಲಾ ಪಠಿಸಿ. ಆಗ್ನೇಯ ದಿಕ್ಕಿನ ಕಿಟಕಿಗಳಿದ್ದರೆ ರಾತ್ರಿಯ ಸಮಯ ಬಾಗಿಲು ತೆರೆದಿಡಬೇಡಿ. ನಿಮ್ಮ ಆತ್ಮಸ್ಥೈರ್ಯದ ಎದುರು ಎಲ್ಲಾ ದುಷ್ಟ ಶಕ್ತಿ ತಲ್ಲೆ ಎತ್ತಿ ನಿಲ್ಲಲಾರದು ಎಂಬು ಸಕಾರಾತ್ಮಕ ಯೋಚನೆ ದೃಢವಾಗಲಿ. 


Trending videos

Back to Top