CONNECT WITH US  

ಮೋಸ ಮಾಡಲೆಂದೆ ನೀನುಬಂದೆಯಾ 

ಈ ಕಾಲದ ಪ್ರೀತಿಯಲ್ಲಿ ನಂಬಿಕೆಗಿಂತಲೂ ಅನುಮಾನವೇ ಹೆಚ್ಚು. ಅನುಮಾನಕ್ಕೆ ಅನೇಕ ರೀತಿಯ ಕಾರಣಗಳನ್ನು ನಾವು ಪಟ್ಟಿ ಮಾಡಬಹುದು. ಅದರಲ್ಲೂ ಮುಖ್ಯವಾದದ್ದು ಇಗೋ ಪ್ರಾಬ್ಲಿಮ್‌ ಮತ್ತು ಇನ್‌ಸೆಕ್ಯುರಿಟಿ. ಎಲ್ಲಿ ಈ ನಂಬಿಕೆಯೆಂಬ ಬುನಾದಿ ಅಲುಗಾಡುವಂತಿರುತ್ತದೋ ಅಲ್ಲಿ ಈ ಚೀಟಿಂಗ್‌ ಕಾಣಿಸಿಕೊಳ್ಳುತ್ತದೆ. 

ಈ ಚೀಟಿಂಗ್‌ ಅನ್ನೋದರ ನಿಜವಾದ ಅರ್ಥ ರಿಲೇಷನ್‌ಶಿಪ್‌ನಲ್ಲಿರೋರ ಮೇಲೆ ಅವಲಂಬಿತವಾಗಿರತ್ತೆ. ಕೆಲವರಿಗೆ ಬೇರೆಯವರ ಜೊತೆ ಫ್ಲರ್ಟ್‌ ಮಾಡೋದು ಮತ್ತು ಬೇರೆಯವರೊಂದಿಗೆ ಜಾಸ್ತಿ ಟೈಮ್‌ ಸ್ಪೆಂಡ್‌ ಮಾಡೋದು ಚೀಟಿಂಗ್‌ ಅಂತ ಅನ್ನಿಸಿದ್ರೆ, ಮತ್ತೆ ಕೆಲವರಿಗೆ ಬೇರೆಯವರ ಮೇಲಿನ ಆಕರ್ಷಣೆ ಮತ್ತು ಪ್ರೀತಿ ಕೂಡ ಚೀಟಿಂಗ್‌ ಅಂತ ಅನ್ಸೋದಿಲ್ಲ. ಇದಕ್ಕೆ ಕಾರಣ ತನ್ನ ಸಂಗಾತಿಯ ಮೇಲೆ ತಾನು ಇರಿಸಿರುವ ನಂಬಿಕೆ.

ಅದಿರಲಿ ಒಟ್ಟಾರೆ ಯಾರಾದರೂ ಚೀಟಿಂಗ್‌ ಮಾಡೋಕೆ ಕಾರಣಗಳು ಏನೇನೂ ಅಂತಯೋಚಿಸಿದಾಗ ಹೊಳೆದ ಪಾಯಿಂಟ್‌ಗಳು ಇಲ್ಲಿವೆ. „ ಹಣದ ಮೋಹ: ಕೆಲವರಿಗೆ ಹಣವೇ ಮುಖ್ಯ ಆಗಿರುತ್ತೆ. ಆದ್ರಿಂದ ರಿಲೇಷನ್‌ ಶಿಪ್‌ಗ್ಳನ್ನ ಬೆಳೆಸಿಕೊಳ್ಳೋರಿ¨ªಾರೆ. ತನ್ನನ್ನ ಪ್ರೀತಿಸುವವನ ಶ್ರೀಮಂತಿಕೆಯೇ ಆ ಪ್ರೀತಿಗೆ ಆಧಾರಸ್ತಂಭ. ಇಂತಹ ರಿಲೇಷನ್‌ಶಿಪ್‌ನಲ್ಲಿ ಸಂಗಾತಿಯನ್ನ ಹೊಗಳುತ್ತಿರುವುದು, ಅವರು ಮೆಚ್ಚುವಂತಹ ಕೆಲಸ ಮಾಡುವುದು ಹೀಗೆ
ಒಟ್ಟಿನಲ್ಲಿ ಅವರ ಮನಸ್ಸನ್ನು ಗೆಲ್ಲುವ ಪ್ರಯತ್ನದಲ್ಲೇ ಇರುತ್ತಾರೆಯೇ ಹೊರತು, ಪ್ರೀತಿಯ ಮಹತ್ವ ಅವರಿಗೆ ಗೊತ್ತಿರುವುದಿಲ್ಲ. ಇವೆಲ್ಲ ಕೆಲವು ದಿನಗಳು ಸಾಗುತ್ತವೆ. ಆದ್ರೆ ಆಮೇಲೆ? ಎಲ್ಲವೂ ಬೋರಿಂಗ್‌ ಆಗಿ, ಪ್ರೀತಿಯ ಬಗ್ಗೆ ಕೇರ್‌ಲೆಸ್‌ನೆಸ್‌ ಹುಟ್ಟಿಕೊಳ್ಳುತ್ತದೆ. ಆಗಲೇ ಚೀಟಿಂಗ್‌ ಶುರುವಾಗೋದು. „ ಆನ್‌ಲೈನ್‌ ರಿಲೇಷನ್‌ಶಿಪ್‌: ಈ ಫೇಸ್‌ಬುಕ್‌, ವಾಟ್ಸಾಪ್‌ನಲ್ಲಿ ಚಾಟಿಂಗ್‌ ಮಾಡುತ್ತ ಕೆಲವರಿಗೆ ಪ್ರೀತಿ ಹುಟ್ಟುತ್ತದೆ. ವ್ಯಕ್ತಿಯ ಮುಖ ಪರಿಚಯವೂ ಇಲ್ಲದೆ ಪ್ರೀತಿಯ ಬಲೆಯಲ್ಲಿ ಬಿದ್ದವರು ಬೇಕಾದಷ್ಟು ಮಂದಿ ಇ¨ªಾರೆ. ಒಂಟಿತನ, ಆಸೆ ಎಲ್ಲವೂ ಇದಕ್ಕೆ ಕಾರಣ. ಇದರಿಂದಲೇ ನೋವು.

ಬೇರೆಯವರ ಮೇಲಿನ ಆಕರ್ಷಣೆ: ರಿಲೇಷನ್‌ಶಿಪ್‌ ನಲ್ಲಿರುವವರು ತಮಗೇ ಆಗಲಿ ಅಥವಾ ತಮ್ಮ ಪಾರ್ಟ್‌ನರ್‌ಗೆ
ಆಗಲಿ ಬೇರೆಯವರ ಮೇಲೆ ಆಕರ್ಷಣೆ ಹುಟ್ಟಿದಾಗ ಈ ಬ್ರೇಕಪ್‌ಗಾಗಿ ಕಾರಣಗಳನ್ನು ಹುಡುಕುತ್ತಿರುತ್ತಾರೆ. ಅಂತಹ
ಸಂದರ್ಭದಲ್ಲಿ ಚಿಕ್ಕ ತಪ್ಪು ದೊಡ್ಡದಾಗಿ, ಚೀಟಿಂಗ್‌ಗೆ ದಾರಿ ಮಾಡಿಕೊಡುತ್ತದೆ. ಇದ್ರಲ್ಲಿ ಮುಖ್ಯವಾಗಿ ಅನುಮಾನ
ಅನ್ನೋ ಭಯ ಕಾಡೋದ್ರಿಂದ ಚೀಟಿಂಗ್‌ಗೆ ಕಾರಣ. 

ಸತ್ಯದ ಕಣ್ಣೊರೆಸುವ ಸುಳ್ಳಿನ ಕಂತೆ: ರಿಲೇಷನ್‌ಶಿಪ್‌ ನಲ್ಲಿರುವವರು ನಂಬಿಕೆಯನ್ನು ನಂಬಿ ಸಾಗ್ತಿರ್ತಾರೆ. ಆದ್ರಿಂದ
ತನ್ನ ಪಾರ್ಟ್‌ನರ್‌ ಏನು ಹೇಳಿದರೂ ನಂಬುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ, ಈ ನಂಬಿಕೆಯನ್ನುತನ್ನ ಪ್ರಿಯತಮ/ಮೆ ಅಡ್ವಾಂಟೇಜಾಗಿ ಪರಿಗಣಿಸಿ, ಅವನಿಗೆ/ ಅವಳಿಗೆ ಸುಳ್ಳುಗಳನ್ನೇ ಹೇಳುತ್ತಾ, ಫೇಕ್‌ ಪ್ರಾಮಿಸ್‌ಗಳನ್ನು
ಮಾಡುತ್ತಾರೆ. 

ಸ್ವಲ್ಪ ಒಳ್ಳೆಯವರಾಗಿ
ಚೀಟಿಂಗ್‌ ಅಂತ ಭಾವಿಸಿಕೊಂಡು ಕೆಲವು ಸಂಬಂಧಗಳು ಮುಗಿಯುತ್ತವೆ. ಅದು ಯಾಕಾಗುತ್ತದೆ, ಹೇಗಾಗುತ್ತದೆ ಅಂತ
ಯೋಚಿಸಿದಾಗ ಹೊಳೆದದ್ದಿಷ್ಟು. „

ಅನುಮಾನ ಮತ್ತು ಭಯ: ಈ ರಿಲೇಷನ್‌ ಶಿಪ್‌ನಲ್ಲಿರುವವರಿಗೆ ಮುಖ್ಯವಾಗಿ ಇರಬೇಕಾದದ್ದು ನಂಬಿಕೆ. ಆದ್ರೆ ಈಗಿನ ಕಾಲದಲ್ಲಿ ಬದಲಾಗ್ತಿರೋ ಜಗತ್ತಿನ ವೇಗ ನೋಡಿದ್ರೆ, ನಂಬಿಕೆ ಅನ್ನೋ ಪದಕ್ಕೆ ಇರಬೇಕಾದ ಮಹತ್ವ ಕಳ್ಕೊಂಡಿದೆ. ಅನುಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇಇದೆ. ರಿಲೇಷನ್‌ಶಿಪ್‌ನಲ್ಲಿ ಇರುವವರಲ್ಲಿ ಕಾಡುವ ಇನ್‌ಸೆಕ್ಯೂರಿಟಿ ಇದಕ್ಕೆ ಮುಖ್ಯ ಕಾರಣ. 

„ ಮಿಸ್‌ ಅಂಡರ್‌ಸ್ಟಾಂಡಿಂಗ್‌: ಇನ್‌ಸೆಕ್ಯೂರಿಟಿ ಭಯದಿಂದ ಈ ಮಿಸ್‌ಅಂಡರ್‌ಸ್ಟಾಡಿಂಗ್‌ಗಳು ಜಾಸ್ತಿ ಆಗ್ತವೆ. ಈಗಾಗಲೇ ಅನುಮಾನದಿಂದ ಕುಗ್ಗಿರೋ ರಿಲೇಷನ್‌ಶಿಪ್‌ನಲ್ಲಿ ಮತ್ತಷ್ಟು ಬಿರುಕು ಮೂಡುತ್ತದೆ. ಈ ಹಂತದಲ್ಲಿ ಸಂಗಾತಿಯು ತನ್ನ ಗೆಳೆಯ/ತಿಯ ಫೋನ್‌ಚೆಕ್‌ ಮಾಡೋದು, ಅವನ/ಳ ಮೇಲೆ ಕಣ್ಣಿಡುವುದು, ಇವೆಲ್ಲ ಹೆಚ್ಚಾಗಿ ತನ್ನ ಸಂಗಾತಿಗೆ ಕಿರಿಕಿರಿಯನ್ನ ಉಂಟುಮಾಡ್ತವೆ. ಇದ್ರಿಂದ ಬ್ರೇಕಪ್‌ ಕೂಡ ಆಗಬಹುದು. „ ಬೇರೊಂದು ವ್ಯಕ್ತಿಯ ಜೊತೆಗಿನ ಫ್ರೆಂಡ್‌ಶಿಪ್‌:
ರಿಲೇಷನ್‌ಶಿಪ್‌ನಲ್ಲಿರುವವರು ತಮ್ಮ ಫ್ರೆಂಡ್ಸ್‌ಗೆ ಜಾಸ್ತಿ ಪ್ರಾಮುಖ್ಯತೆ ಕೊಡ್ತಿ¨ªಾರೆ ಅಂತ ಅನ್ಸಿದ್ರೆ, ಅದ್ರಲ್ಲೂ ತನ್ನ
ಹುಡುಗನ ಬೆಸ್ಟ್‌ಫ್ರೆಂಡ್‌ ಹುಡುಗಿಯಾಗಿದ್ದರೆ ಅಥವಾ ಒಂದು ಹುಡುಗಿಗೆ ಹುಡುಗನ ಸ್ನೇಹವಿದ್ದರೆ ಅದನ್ನ
ಚೀಟಿಂಗ್‌ ಎಂದು ಭಾವಿಸೋರು ಸಾಕಷ್ಟು ಜನ ಇ¨ªಾರೆ. ಅದ್ರಲ್ಲೂ ಪರ್ಸನಲ್‌ ವಿಚಾರಗಳನ್ನ ಮತ್ತು ಮೆಸೇಜುಗಳನ್ನ
ಹಂಚಿಕೊಳ್ಳೋ ಸ್ನೇಹಿತರಿದ್ದಲ್ಲಿ ಆ ರಿಲೇಷನ್‌ಶಿಪ್‌ನ ಕತೆಗೆ ಇತಿಶ್ರೀ ಹಾಡಿದಂತೆಯೇ ಸರಿ.

ಅರ್ಥ ಮಾಡ್ಕೊಳಿ
ಲೈಫ‌ು ದೊಡ್ಡದು. ಖುಷಿ ದೊಡ್ಡದು. ಕ್ಷುಲ್ಲಕ ಕಾರಣಕ್ಕೆ ಸಂಬಂಧ ಹಾಳು ಮಾಡಿಕೊಂಡು ಒದ್ದಾಡಬೇಡಿ. ಅರ್ಥೈಸಿಕೊಂಡು ಖುಷಿಯಾಗಿ ಬಾಳಿ

ಆಶಾ ಅನಂತರಾಮು


Trending videos

Back to Top