ಕಲಿತ ಪಾಠಗಳು ಯಾವತ್ತೂ ವೇಸ್ಟ್‌ ಆಗೊಲ್ಲ!


Team Udayavani, Sep 5, 2017, 11:33 AM IST

05-JOSH-10.jpg

ಕಬಡ್ಡಿ ಆಟದಲ್ಲಿ ಗುರು ಶಿಷ್ಯ ಪರಂಪರೆಗೆ ಉನ್ನತ ಸ್ಥಾನವಿದೆ. ಮಿಕ್ಕ ಕ್ರೀಡೆಗಳಲ್ಲಿಲ್ಲ ಅಂತ ಹೇಳುತ್ತಿಲ್ಲ. ಆದರೆ ಗುರುವಿನ ಎದುರೇ ಎದುರಾಳಿಗಳೊಡನೆ ಕಾದಾಡುವ ಶಿಷ್ಯ, ಆತನ ತಪ್ಪುಗಳನ್ನು ಅಂಕಣದಲ್ಲೇ ತಿದ್ದಿ ಮುಂದಿನ ರೈಡ್‌ಗೆ ತಯಾರು ಮಾಡುವ ಗುರು…

ಇವೆಲ್ಲಾ ಕಬಡ್ಡಿಯ ರೋಚಕ ರಸನಿಮಿಷಗಳು. ಇಲ್ಲಿಯವರೆಗೆ ಹಲವಾರು ಆಟಗಾರರನ್ನು ತರಬೇತುಗೊಳಿಸಿದ್ದೇನೆ. ಶಿಷ್ಯ ತನ್ನನ್ನು ಮೀರಿಸುವಂತೆ ಬೆಳೆಯಬೇಕು ಎನ್ನುವ ಆಸೆ ಪ್ರತಿಯೊಬ್ಬ ಗುರುವಿನದ್ದು. ಹಾಗಾಗಿ ಶಿಷ್ಯಂದಿರಿಬ್ಬರು ಅಖಾಡದಲ್ಲಿ ಸಾಧನೆಗೈಯುತ್ತಿರುವುದನ್ನು ನೋಡಿದ್ದೇ ಗುರುವಾಗಿ ನಾನು ಅನುಭವಿಸಿದ ಸಾರ್ಥಕ ಕ್ಷಣಗಳು!

ಜೀವ ಕುಮಾರ್‌ ಮತ್ತು ರಾಜಗುರು, ಇವರೇ ಆ ಇಬ್ಬರು  ಆಟಗಾರರು. ರಾಜಗುರುವಿಗೆ ನನ್ನ ಟ್ರೇನಿಂಗ್‌ ಮೇಲೆ ಸ್ವಲ್ಪ ಅನುಮಾನವಿತ್ತು. ಹಳೇ ಕಾಲದವರು, ಈಗಿನ ಕಾಲಕ್ಕೆ ನಾನು ಕಲಿತ ತಂತ್ರ-ಪಟ್ಟುಗಳು ಹೊಂದುವುದಿಲ್ಲ ಅಂತ. ಕಡೆಗೊಂದು ದಿನ ಅವನು ಕಬಡ್ಡಿ ಮೇಲೆ ಆಸಕ್ತಿಯನ್ನೇ ಕಳೆದುಕೊಂಡು ತನ್ನೂರು ತಂಜಾವೂರಿಗೆ ಹೋಗಿಬಿಟ್ಟ. ನಾನು ಅವನನ್ನು ಓಲೈಸಿ ಮತ್ತೆ ಕರೆದುಕೊಂಡುಬಂದೆ. ಟ್ರೇನಿಂಗ್‌ ಮುಂದುವರಿಸಿದೆ. ಅವನು ಏಷ್ಯನ್‌ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಷ್ಟೇ ಅಲ್ಲದೆ ಚಿನ್ನವನ್ನೂ ತಂದ! 

ನನ್ನ ಪ್ರಕಾರ ಯಾವುದೇ ಕ್ರೀಡೆಯಲ್ಲಿ ಆಧುನಿಕತೆ, ತಂತ್ರಜ್ಞಾನದ ಬಳಕೆ ಎಷ್ಟೇ ಸಹಕರಿಸಬಹುದು,  ಕೆಲಸ ಸುಲಭವಾಗಿಸಬಹುದು. ಆದರೆ ಆಟದ ಮೂಲ ಬೇರು  ಅಡಗಿರುವುದು ಸಾಂಪ್ರದಾಯಿಕತೆಯಲ್ಲಿಯೇ. ಹಳೆಯದರ ಜೊತೆ ಹೊಸತನ್ನೂ ಮೈಗೂಡಿಸಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಜೀವ ಕುಮಾರ್‌ ಮುಂಚೆ ರೈಲ್ವೇಸ್‌ ತಂಡದಲ್ಲಿ ಆಡುತ್ತಿದ್ದ. ನಾನು ಅವನನ್ನು ನಮ್ಮ ಎಸ್‌ಬಿಎಂ ತಂಡಕ್ಕೆ ಕರೆದುಕೊಂಡು ಬಂದೆ. ಬೆಂಗಳೂರಿನ ಸೆಂಟ್ರಲ್‌ ಕಾಲೇಜು ಮೈದಾನದಲ್ಲಿ ಪ್ರತಿದಿನ ಸಂಜೆ ಕೆಲಸ ಮುಗಿಸಿ ಅವರಿಗೆ ಅಲ್ಲಿ ತರಬೇತಿ ನೀಡುತ್ತಿದ್ದೆ. ಆಮೇಲೆ ಕಚೇರಿಯಲ್ಲಿ ಕೆಲ ಸಮಸ್ಯೆಗಳು ತಲೆದೋರಿ ಜೀವನಿಗೆ ಆಡಲು ಅವಕಾಶವೇ ಇಲ್ಲದಂತಾಗಿತ್ತು. ಅವನು ನನ್ನ ಮೇಲೆ ತುಂಬಾ ಬೇಜಾರು ಮಾಡ್ಕೊಂಡ. “ನಿಮ್ಮ ಮಾತು ಕೇಳಿ ಬಂದೆ. ಇಲ್ಲಿ ಗೇಮ್‌ ಆಡೋಕೆ ಅವಕಾಶ ಇಲೆ ಹೋಯ್ತು’ ಅಂತ. ನನಗೂ ಬೇಜಾರಾಯ್ತು. “ತರಬೇತಿ, ಕಲಿತ ಪಾಠಗಳು ಯಾವತ್ತೂ ವೇಸ್ಟ್‌ ಆಗೊಲ್ಲ. ಪ್ರಾಕ್ಟೀಸ್‌ ಮಾಡುತ್ತಿರು’ ಅಂತ ಸಮಾಧಾನಿಸಿದೆ. ಅದೇ ವರ್ಷ ಅವನು ಏಷ್ಯನ್‌ ಗೇಮ್ಸ್‌ ಆಡಿದ. ಭಾರತಕ್ಕೆ ಗೋಲ್ಡ್‌ ಮೆಡಲ್‌ ಅನ್ನೂ ತಂದ. ಅವನನ್ನು ರಿಸೀವ್‌ ಮಾಡೋಕೆ ನಾನು ಏರ್‌ ಪೋರ್ಟಿಗೇ ಹೋಗಿದ್ದೆ. ಕಂಡ ತಕ್ಷಣವೇ ಅವನನ್ನು ಹೆಮ್ಮೆಯಿಂದ ಆಲಂಗಿಸಿದೆ. ಇಬ್ಬರೂ, ವಿದೇಶಿ ಆಟಗಾರರ ಟ್ಯಾಕ್ಟಿಕ್ಸ್‌, ತಂತ್ರ- ಪ್ರತಿತಂತ್ರಗಳ ಕುರಿತು ತುಂಬಾ ಹೊತ್ತು ಮಾತಾಡಿದೆವು. ಸಾರ್ಥಕತೆ ಅಂದರೆ ಇದೇ ಅಲ್ಲವೇ?

ಬಿ.ಸಿ. ರಮೇಶ್‌ ಭಾರತ ಕಬಡ್ಡಿ ತಂಡದ ಮಾಜಿ ಕಪ್ತಾನ

ಟಾಪ್ ನ್ಯೂಸ್

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.