ಬರ್ಬಾದ್‌ ಆಗಿದ್ದ ಬಾಳು ನೀ ಬಂದ್ಮೇಲೆ ಬೊಂಬಾಟಾಗೈತಿ…

Team Udayavani, Jan 9, 2018, 1:15 PM IST

09-34.jpg

ಅದೇನ್‌ ಕಣ್ಣು ಅಂತೀವ್ನಿ ನಿಂದು! ಅಬಾಬಬಬ, ಇಲಿ ಬೋನಂಗೆ ನನ್ನ ಲಬುಕ್‌ ಅಂತ ಒಂದೇ ನೋಟುಕ್ಕೆ ಕ್ಯಾಚಾಕೋಬುಡ್ತು. ರವಷ್ಟೇ ಇರೋ ನಿನ್‌ ಮೂಗ್ಬಟ್ಟು ನನ್ನ ಮಕಾಡೆ ಮಲಗಿಸಿಡ್ತು. ಖುಷೀಲಿ ಗೊಳ್ಳನೆ ನಗ್ವಾಗ ನಿನ್ನ  ಕೆನ್ನೆಮೇಲೆ ಠಿಕಾಣಿ ಹೂಡೋ ಗುಂಡಿಗೇ ನಾ ಏಕªಂ ಬಿದ್ಬುಟಿದ್ದು. 

ಜಾತ್ರೆಯ ಹುಡುಗಿಯೇ…
ಯಾವ ದಿಕ್ಕಿಂದ ಮಾತು ಶುರು ಮಾಡ್ಬೇಕಂತ ಒಂದೂ ತಿಳಿವೊಲ್ದು ಕಣಮ್ಮಿ. ನಿನೂಡ ಸಿಕ್ಕಾಪಟ್ಟೆ ಮಾತಾಡ್ಬೇಕಂತ ಏಟೇ ತಿಣಾಡುದ್ರೂ ನೀ ಎದುರ್ಗಡೆ ಕಂಡಾಗ ತುಟಿಕ್‌ ಪಿಟಿಕ್‌ ಅಂತ ಕೂಡ ಉಸ್ರೆತ್ತಕ್ಕಾಗಾಕಿಲ್ಲ. ಮಾತೆಲ್ಲಾ ಗಂಟ್ಲಲ್ಲೇ ಸಿಕ್ಕಾಕೊಂಡು ಗರ ಬಡಿªರೋ ಹಂಗೆ ಮೂಕಾಗಿºಡ್ತೀನಿ. ಅದೇನ್‌ ಮೋಡಿ ಮಾಡಿದ್ಯೋ ಸಿವೆ° ಬಲ್ಲ. ಅದ್ಕೆ, ಮಾತಾಡೋ ಉಸಾಬ್ರಿನೇ ಬ್ಯಾಡ ಅಂತ. ನಂಗೆ ಚೂರುಪಾರು ಅಕ್ಷರ ಒಲಿದಿರೋದ್ರಿಂದ ಎದೆಯ ಸರಕನ್ನೆಲ್ಲಾ ಈ ಚೀಟಿಗೆ ದಾಟಿಸಿ ತರಾತುರಿಯಲ್ಲೇ ನಿಂಗೆ ಟಪಾಲು ಕಳಿಸ್ತಿದೀನಿ. ಪ… ಕಿತ ಬರ್ದಿರೋ ಪ್ರೇಮಪತ್ರಾನಾ ಚಕ್‌ ಅಂತ ಓಧ್ಕುಟ್ಟು ಪಟ್‌ ಅಂತ ನನ್ನ ಒಪ್ಕೋಬುಡು, ಯಂಗೋ ಬದುಕ್ಕೋಂತೀನಿ…

  ಹೋದ್ವಾರ ಎಳ್ಳಮವಾಸೆ  ಜಾತ್ರೆನಾಗೆ ಮಟಮಟ ಮದ್ಯಾಹ್ನದ  ಘಳಿಗೇಲಿ  ನೀ ಆ ಕಡೆಯಿಂದ ನಡ್ಕೊàತಾ ಬಬೇìಕಾದ್ರೆ ನಿನ್ನೋಡಿ ನನ್ನ ಎದೆಯೊಳ್ಗೆ ಠಣ್‌ ಅಂತ ಗಂಟೆ ಬಾರುಸªಂಗಾಯ್ತು. ನೋಡ್‌ ನೋಡ್ತಿದಂಗೆ ಕೋಟಿ ನಕ್ಷತ್ರ ಮಿಂಚ್‌ ಮಿಂಚೊಡು ಫ‌ಳೆ° ಎದೆಯೊಳ್ಗೆ ಹೊಳªಂಗಾಯ್ತು. ಸಾಕ್ಷಾತ್‌ ದೇವತೆ ಏನಾದ್ರು ಅಡ್ರಸ್‌ ಮಿಸ್ಸಾಗಿ ಭೂಲೋಕಕ್ಕೆ ಇಳಿದ್ಬುಟ್ಲಾ ಅಂತ ಗುಮಾನಿ ಬೇರೆ ಶುರುವಾಯ್ತು. ತೇರ್‌ ನೋಡೋದ್‌ ಮರ್ತೋಗಿ ತಿರ್ಗಾಮುರ್ಗಾ ನಿನೆ ಜಪ ಮಾಡ್ಕೊತಾ ನಿಂತುºಟ್ಟೆ. ಅದೇನ್‌ ಪವಾಡ್ವೋ ಗೊತ್ತಿಲ್ಲಾ, ಪುಸುಕ್ಕಂತ ನಿನ್‌ ಮ್ಯಾಲೆ ಸ್ಯಾನೆ ಲವ್ವಾಗೋಯ್ತು.

ಅದೇನ್‌ ಕಣ್ಣು ಅಂತೀವ್ನಿ ನಿಂದು! ಅಬಾಬಬಬ, ಇಲಿ ಬೋನಂಗೆ ನನ್ನ ಲಬುಕ್‌ ಅಂತ ಒಂದೇ ನೋಟುಕ್ಕೆ ಕ್ಯಾಚಾಕೋಬುಡ್ತು. ರವಷ್ಟೇ ಇರೋ ನಿನ್‌ ಮೂಗ್ಬಟ್ಟು ನನ್ನ ಮಕಾಡೆ ಮಲಗಿಸಿಡ್ತು. ಖುಷೀಲಿ ಗೊಳ್ಳನೆ ನಗ್ವಾಗ ನಿನ್ನ  ಕೆನ್ನೆಮೇಲೆ ಠಿಕಾಣಿ ಹೂಡೋ ಗುಂಡಿಗೇ ನಾ ಏಕªಂ ಬಿದ್ಬುಟಿದ್ದು. ಗಡೆಲಿರೋ ಕೆನೆ ಮೊಸ್ರಂಗೆ ನೀ ಫ‌ಳಫ‌ಳ ಅಂತ ಫ‌ಳಗುಡ್ವಾಗ್ಲೆ ಇಲ್ದೇರೋ ಆಸೆಯಲ್ಲೇ ಎದೆತುಂಬ ಎರ್ಚಾಡೋದೋ. ಆ ಘಳ್ಗೆàಲಿ ನನ್‌ ದಿಲ್ಲೊಳಾಗಿರೋ ಐಭೋಗನಾ ವರ್ಣಿಸಕ್ಕೆ ಎಲ್ಲಿಂದಾ ಎಳ್ಕೊಬರ್ಲಿ ಪದ್ಗಳ್ನಾ ಅಂತ?

ತಕ್ಲು ಬಿದ್ದಿದ್ದ ನನ್ನ ಎದೆಹೊಲದಲ್ಲಿ ನಿನ್ನ ನೆನಿ³ನ ಗುಳ ಸೋಕ್ತಿದ್ದಂಗೇ ಭರ್ಜರಿ ಫ‌ಸಲು ಬುಟ್ಟಿರೋ ಭತ್ತದ ಗದ್ದೆ ನಾಟಿ ಪೈರಂಗೆ ಬೋ ಪಸಂದಾಗಾಗಿವ್ನಿ. ಬರ್ಬಾದ್‌ ಆಗಿದ್ದ ಬಾಳು ನೀ ಬಂದ್ಮೇಲೆ ಬೊಂಬಾಟಾಗೈತಿ. ಹಿತ್ತಲ ಗಿಡ ಜೋಡಿ ಬಾಳೆಗೊನೆ ಬುಟುºಟ್ಟದೇನೋ ಅನ್ವಂಗೆ ಬೋ ಖುಷಿಯಿಂದಿವ್ನಿ. ಮಟಮಟ ಮದ್ಯಾಹ್ನ ನಿನ್ನ ಸುಮ್ಗೆ ನೆನೆಸ್ಕೋಬುಟ್ರೂ ಸಾಕು; ಕೆಂದೆಳ್ನೀರ್‌ ಕುಡªಷ್ಟೇ ಜೀವ ತಂಪಾಯ್ತುದೆ.!

ಗಡದ್ದಾಗ್‌ ಉಂಡುºಟ್‌ ನಿದ್ದೆ ಹೊಡಿತಿದ್ದ ಆಸಾಮಿಗೆ ಇವತ್‌ ನಿದ್ದೇನೇ ಬತ್ತಿಲ್ಲ, ಉಣ್ಣಾಕೂ ಆಗ್ತಿಲ್ಲ. ಒಂದ್‌ ಚಟಾಕು ನೀರ್‌ ಕೂಡ ವಳಿಕ್‌ ಇಳೀತಿಲ್ಲ. ನೀನೊಸಿ ಮರೆ ಆದ್ರೂ ಸಾಕು; ದಿಕ್ಸೂಚಿ ಕಳಕೊಂಡ ಹಡಗಂಗೆ ಜೀವ ತಳಮಳುಸ್ತದೆ. ಈಚೀಚ್ಗೆ ನೀ ಸಿಕ್ಕಾಪಟ್ಟೆ ಗೆಪ್ತಿ ಆಗೋಗುºಡ್ತಿ ಹುಡ್ಗಿ. ಸರೊತ್ತಲ್ಲಿ ನಿನ್ನ ನೆನ್ಪು ಜೇನುಳ ಮುತ್ಕೊಂಡಂಗೆ ಮುತ್ಕೊಂಡು ಎದೆವೊಳ್ಗೆ ಗುಯ್‌ ಗುಟªಂಗಾಯ್ತದೆ. ಏರಿ ಪಕಾªಗಿರೋ ಕೆಬ್ಬೆಮಣ್ಣಿನ ವಸ್ತಿಯಿರೋ ಹೊಲದಂಗೆ ಕಣ್ಣಿನ ಪಸೇಲಿ ಯಾವಾಗೂ ನೀರಾಡ್ತಿರ್ತದೆ. ಮೇಯಕ್ಕೋಗಿರೋ ಆಕಳನ್ನ ಕೊಟ್ಟಿಗೇಲಿ ಕಟ್ಟಾಕಿರೋ ಎಳರ ವಾಪಸ್‌ ಬರ್ಲಿ ಅಂತ ಕಾಯ್ತಾ  ಚಡಪಡಿಸ್ತದಲ್ಲಾ, ಹಂಗೆ ರಚ್ಚೆ ಹಿಡ್ಕೊಂಡ್‌ ನೀನೇ ಬೇಕು ಅಂತ ನನ್‌ ಮನ್ಸು ತುದಿಗಾಲಲ್‌ ನಿಂತದೆ….

ತಡಮಾದ್ದೆ ಲಗೂನೆ ಈ ಹೈದನ್‌ ಬದ್ಕೋಳ್ಗೆ ಬಂದ್ಬುಡಮ್ಮಿ. ಕಾಯ್ತಿದೀನಿ…
  ಇಂತಿ 
ಸುದ್ದ ಮನಸಿನ ಸುಂದ್ರ

ಹೃದಯರವಿ

ಟಾಪ್ ನ್ಯೂಸ್

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

10

ದ.ಕ: ಬಿಜೆಪಿ ಜತೆಗಿನ ಮೈತ್ರಿಗೆ ವಿರೋಧ: 42 ಮಂದಿ ಜೆಡಿಎಸ್ ಪದಾಧಿಕಾರಿಗಳು ‘ಕೈʼ ಸೇರ್ಪಡೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

10

ದ.ಕ: ಬಿಜೆಪಿ ಜತೆಗಿನ ಮೈತ್ರಿಗೆ ವಿರೋಧ: 42 ಮಂದಿ ಜೆಡಿಎಸ್ ಪದಾಧಿಕಾರಿಗಳು ‘ಕೈʼ ಸೇರ್ಪಡೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.