ರೈಲ್ವೇಸ್‌ಗೆ ರೈಟ್‌ ಎನ್ನಿ!


Team Udayavani, Feb 13, 2018, 2:30 PM IST

railways.jpg

ನಮುª ಐಟಿಐ ಆಗಿದೆ. ಡಿಪ್ಲೊಮಾನೂ ಆಗಿದೆ. ಆದರೆ ನಾವು ಓದಿರುವ ಕೋರ್ಸ್‌ಗಳಿಗೆ ಸಂಬಂಧಿಸಿದ ನೌಕರಿಗಳೇ ಇಲ್ಲ ಎಂದು ಬೇಸರದಿಂದ ಹೇಳುವವರ ಸಂಖ್ಯೆ ದೊಡ್ಡದಿದೆ. ಅಂಥವರೆಲ್ಲ ಅಲರ್ಟ್‌ ಆಗಬೇಕಾದ ಸಂದರ್ಭವಿದು. ಏಕೆಂದರೆ ಹಲವು ಕೋರ್ಸ್‌ಗಳಿಗೆ ಸಂಬಂಧಿಸಿದ ಹುದ್ದೆಗಳಿಗೆ ಇಂಡಿಯನ್‌ ರೈಲ್ವೆ ಇದೀಗ ಅರ್ಜಿ ಕರೆದಿದೆ.  

“ನಾನು ಸೆಂಟ್ರಲ್‌ ಗವರ್ನಮೆಂಟ್‌ ಎಂಪ್ಲಾಯಿ’ ಎಂದು ಹಲವರು ಹೆಮ್ಮೆಯಿಂದ ಹೇಳಿಕೊಳ್ಳುವುದನ್ನು ಈಗಲೂ ನೋಡಬಹುದು. ಕೇಂದ್ರ ಸರ್ಕಾರಿ ನೌಕರಿಯಾದರೆ ಅಲ್ಲಿ ಹೆಚ್ಚು ಸಂಬಳ ಮಾತ್ರವಲ್ಲ, ಸೌಲಭ್ಯಗಳೂ ಚೆನ್ನಾಗಿರುತ್ತವೆ. ಈ ಕಾರಣದಿಂದಲೇ ಸೆಂಟ್ರಲ್‌ ಗವರ್ನಮೆಂಟ್‌ ಜಾಬ್‌ ಎಂದಾಕ್ಷಣ ಕೆಲವರು ಕಾಲರ್‌ ಹಾರಿಸುವುದು. ಹೀಗೆ ಹೆಚ್ಚು ಸೌಲಭ್ಯ ನೀಡುವ ಇಲಾಖೆಗಳ ಪೈಕಿ ರೈಲ್ವೆ ಇಲಾಖೆಯೂ ಒಂದು. ರೈಲ್ವೆ ಡಿಪಾರ್ಟ್‌ಮೆಂಟ್‌ನ ಉದ್ಯೋಗಿಯಾಗಬೇಕು ಎಂಬ ಆಸೆ ನಿಮಗಿದ್ದರೆ ಕೂಡಲೇ ಅರ್ಜಿ ಸಲ್ಲಿಸಲು ಸಿದ್ಧರಾಗಿ. ಅಸಿಸ್ಟೆಂಟ್‌ ಲೋಕೋ ಪೈಲಟ್‌ ಮತ್ತು ಟೆಕ್ನಿಶಿಯನ್‌ ಹುದ್ದೆಗಳೂ ಸೇರಿದಂತೆ ಒಟ್ಟು 26,502 ಹುದ್ದೆಗಳಿಗೆ ದೇಶಾದ್ಯಂತ ಅರ್ಜಿ ಆಹ್ವಾನಿಸಲಾಗಿದೆ. ಅದರಲ್ಲೂ ಅಸಿಸ್ಟೆಂಟ್‌ ಲೋಕೊ ಪೈಲಟ್‌ ಹುದ್ದೆಗಳಿಗೆ ಅತಿ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿದೆ. 

ಹುದ್ದೆಗಳು
ಅಸಿಸ್ಟೆಂಟ್‌ ಲೋಕೊ ಪೈಲೆಟ್‌ –
17,673
ಟೆಕ್ನೀಶಿಯನ್‌- 8,829

ಈ ಹುದ್ದೆಗಳನ್ನು ದೇಶಾದ್ಯಂತ ಅಹಮದಾಬಾದ್‌, ಅಜ್ಮಿàರ್‌, ಅಲಹಾಬಾದ್‌ ಸೇರಿದಂತೆ 21 ರೈಲ್ವೆ ವಿಭಾಗಗಳಿಗೆ ವಿಂಗಡಿಸಲಾಗಿದೆ. ಅದರಲ್ಲಿ ಬೆಂಗಳೂರು ವಿಭಾಗಕ್ಕೆ 1,054 ಹುದ್ದೆಗಳಿವೆ. ಇದರಲ್ಲಿ ಲೋಕೊ ಪೈಲೆಟ್‌ ಮತ್ತು ಟೆಕ್ನೀಶಿಯನ್‌ ಹುದ್ದೆಗಳನ್ನು ವಿಂಗಡಿಸಿ, ಪರಿಶಿಷ್ಟರು, ಅಂಗವಿಕಲರು, ಸಾಮಾನ್ಯರಿಗೆ ಹುದ್ದೆಗಳನ್ನು ನೀಡಲಾಗುತ್ತದೆ.

ವಿದ್ಯಾರ್ಹತೆ, ವಯೋಮಿತಿ
ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಯ ವಯೋಮಿತಿ ಜ.7 ಕ್ಕೆ ಅನುಗುಣವಾಗಿ 18-28 ವರ್ಷ ಆಗಿರಬೇಕು. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಅಂಗವಿಕಲರಿಗೆ 3 ವರ್ಷ ವಯೋಮಿತಿಯಲ್ಲಿ ಸಡಿಲಿಕೆಯಿದೆ.

ಇನ್ನು ಲೋಕೊ ಪೈಲೆಟ…, ಟೆಕ್ನೀಶಿಯನ್‌ ಹುದ್ದೆಗಳಲ್ಲಿ ಕಾಯಿಲ… ವೆಂಡರ್‌, ಎಲೆಕ್ಟ್ರಿಶಿಯನ್‌, ಮೆಕಾನಿಕಲ… ಇತ್ಯಾದಿ ಅನೇಕ ವಿಭಾಗಗಳಿಗೆ ಹುದ್ದೆಯಲ್ಲಿ ಅವಕಾಶ ನೀಡಲಾಗಿದೆ. ಈ ಹುದ್ದೆಗಳನ್ನು ಬಯಸುವವರು ಪ್ರಮಾಣೀಕೃತ ವಿದ್ಯಾಸಂಸ್ಥೆಗಳಿಂದ ಐಟಿಐ ಪದವಿ ಪಡೆದಿರಬೇಕು. ನಿರ್ದಿಷ್ಟ ಹುದ್ದೆ ಆಯ್ಕೆ ಮಾಡಿಕೊಳ್ಳುವ ಅಭ್ಯರ್ಥಿಗಳು ಆಯಾ ವಿಷಯಗಳಲ್ಲಿ ಡಿಪೊÉàಮಾ ಅಥವಾ ಎಂಜಿನಿಯರಿಂಗ್‌ ಮಾಡಿದ್ದರೆ ಹುದ್ದೆ ಪಡೆಯಲು ಅನುಕೂಲ.

ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳ ಆಯ್ಕೆ ಪರೀಕ್ಷೆಯ ಮುಖಾಂತರವೇ ನಡೆಯುತ್ತದೆ. ಪರೀಕ್ಷೆಯು ಎರಡು ಹಂತದಲ್ಲಿ ನಡೆಯಲಿದ್ದು, ಮೊದಲನೇ ಸಿಬಿಟಿ ಹಂತದಲ್ಲಿ ಗಣಿತ, ವಿಜ್ಞಾನ, ಸಾಮಾನ್ಯಜ್ಞಾನ ಸಂಬಂಧಿತ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಮೊದಲ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರಿಗೆ ಎರಡನೇ ಹಂತದ ಸಿಬಿಟಿ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗುತ್ತದೆ. ಇಲ್ಲಿ ಎರಡು ಪರೀಕ್ಷೆ ನಡೆಯುತ್ತದೆ. ಮೊದಲು 100 ಅಂಕಗಳಿಗೆ ಲಿಖೀತ ಪರೀಕ್ಷೆ ಬಳಿಕ ಗಣಕ ಜ್ಞಾನ ಸಂಬಂಧಿತ ಪರೀಕ್ಷೆ ನಡೆಯುತ್ತದೆ. ಪರೀಕ್ಷೆಯಲ್ಲಿ 1/3 ನಕಾರಾತ್ಮಕ ಅಂಕಗಳನ್ನು ತೆಗೆಯಲಾಗುತ್ತದೆ. ದೈಹಿಕ ಸಾಮರ್ಥ್ಯ ಮತ್ತು ನೇತ್ರದೃಷ್ಟಿಯ ಪರೀಕ್ಷೆ ಮಾಡುವುದುಂಟು. ಜೊತೆಗೆ ಅಗತ್ಯ ದಾಖಲೆಗಳ ಪರಿಶೀಲನೆಯನ್ನೂ ನಡೆಸಲಾಗುತ್ತದೆ.

ಅರ್ಜಿ ಸಲ್ಲಿಕೆ ಹೇಗೆ
ಅಭ್ಯರ್ಥಿ ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬೇಕಾಗಿದ್ದು, ದೇಶವ್ಯಾಪಿ ಅರ್ಜಿಗಳನ್ನು ಆಹ್ವಾನಿಸಿರುವುದರಿಂದ ಆಯಾ ವಿಭಾಗದ ಜಾಲ ತಾಣದಲ್ಲೇ ಅರ್ಜಿ ಸಲ್ಲಿಸಬಹುದಾಗಿದೆ. ಬೆಂಗಳೂರಿನಿಂದ ಅರ್ಜಿ ಸಲ್ಲಿಸಲು  www.rrbbnc.gov.in ವೀಕ್ಷಿಸಬೇಕಾಗಿದ್ದು, ಅರ್ಜಿ ಸಲ್ಲಿಸುವ ಮುನ್ನ ಅಗತ್ಯ ದಾಖಲೆಗಳ ಸಾ±r… ಕಾಪಿಯನ್ನು( ಅಂಕಪಟ್ಟಿ, ಭಾವಚಿತ್ರ, ಸಹಿ ಇತ್ಯಾದಿ) ಒಂದೆಡೆ ಸಂಗ್ರಹಿಸಿಟ್ಟುಕೊಳ್ಳುವುದು ಉತ್ತಮ. ಅರ್ಜಿಸಲ್ಲಿಕೆಗೆ goo.gl/WWR5Lm  ಲಾಗ್‌ ಆನ್‌ ಆಗಿ. ಅರ್ಜಿಶುಲ್ಕ ಸಾಮಾನ್ಯರಿಗೆ 500 ರೂ. ಪರಿಶಿಷ್ಟರಿಗೆ 250 ರೂ. ಇದೆ. ಅರ್ಜಿ ಸಲ್ಲಿಸಲು ಮಾ.5 ಕಡೆಯ ದಿನ.

ಹೆಚ್ಚಿನ ಮಾಹಿತಿಗೆ 080- 23330378, 080-  23334147 ಸಂಪರ್ಕಿಸಿ.

– ಎನ್‌. ಅನಂತನಾಗ್‌

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.