ಸ್ಮೈಲ್‌ ಕೊಟ್ರೆ ದೇವರಾಗ್ತೀರಿ…


Team Udayavani, Feb 20, 2018, 6:30 AM IST

smile-kotre.jpg

ಐದು ಸೆಕೆಂಡ್‌ ಸ್ಮೈಲ್‌ ಕೊಡೋದ್ರಿಂದ ಒಂದು ಫೋಟೋ ಚೆನ್ನಾಗಿ ಬರೋದಾದ್ರೆ, ಲೈಫ್ ಪೂರ್ತಿ ನಗ್ತಾ ಇದ್ರೆ ಜೀವನ ಎಷ್ಟು ಸುಂದರವಾಗಿರಬಹುದು ಅಲ್ವಾ? ಕೆಲವರು ಕಚಗುಳಿ ಇಟ್ಟಂತೆ ನಗು ಪಸರಿಸಿದ್ರೆ, ಇನ್ನು ಕೆಲವರು ಕಿರುನಗೆ ಬೀರುತ್ತಾರೆ. ನಗೋವಾಗ ಸಿಂಪಲ್ಲಾಗೊಂದು ಡಿಂಪಲ್‌ ಬಿದ್ರೆ ಹೇಳ್ಳೋದೇ ಬೇಡ. ಎಲ್ರೂ ಫಿದಾ ಆಗೋಗ್ತಾರೆ…

ನೀವು ನಗ್ತೀರಾ? ಹೇಗೆ ನಗ್ತೀರಾ? ಒಬ್ಬರೇ ನಗ್ತೀರಾ ಇಲ್ಲಾ ಗುಂಪಿನಲ್ಲಿ ಗೋವಿಂದ ಮಾಡ್ಕೊಂಡು ನಗ್ತೀರಾ? ನಗೋವಾಗ ಢಂ ಢಂ ಅಂತ ಸದ್ದು ಮಾಡ್ತೀರಾ? ಇಲ್ಲಾ ಒಳಗೊಳಗೆ ನಗ್ತೀರಾ? ಎಷ್ಟೇ ಬೇಡ ಅಂದರೂ ಫ‌ನ್ನಿ ಇನ್ಸಿಡೆಂಟ್‌ ಅನ್ನು ನೆನೆಸಿಕೊಂಡಾಗ ನಗು ಬಂದೇ ಬರುತ್ತೆ. ಆಗ ಎಲ್ಲರೂ ಹಾಯಾಗಿ, ಮನಃಪೂರ್ವಕವಾಗಿ, ಹೊಟ್ಟೆ ತುಂಬಾ ನಗ್ತೀವಿ. ಕೆಲವರ ಮುಗುಳುನಗೆಗೆ ಬೇಗನೆ ಬ್ರೇಕ್‌ ಬೀಳುತ್ತೆ.

ಮತ್ತೂಂದಿಷ್ಟು ಜನರ ನಗೆಗೆ ಸ್ಪೀಡ್‌ ಬ್ರೇಕರ್‌ ಇಲ್ಲವೇ ಇಲ್ಲ. ಇಂಥವರ ನಗೆಗೆ ಆ್ಯಕ್ಸಿಡೆಂಟ್‌ ಆಗೋದಂತೂ ನಿಜ. ಕೆಲವರು ಕಚಗುಳಿ ಇಟ್ಟಂತೆ ನಗು ಪಸರಿಸಿದ್ರೆ, ಇನ್ನು ಕೆಲವರು ಕಿರುನಗೆ ಬೀರುತ್ತಾರೆ. ನಗೋವಾಗ ಸಿಂಪಲ್ಲಾಗೊಂದು ಡಿಂಪಲ್‌ ಬಿದ್ರೆ ಹೇಳ್ಳೋದೇ ಬೇಡ. ಎಲ್ರೂ ಫಿದಾ ಆಗೋಗ್ತಾರೆ. ಮುದ್ದಾದ ಡಿಂಪಲ್‌ ನೋಡೋಕೆ ಕ್ಯೂ ನಿಂತರೂ ಅಚ್ಚರಿಪಡಬೇಕಿಲ್ಲ. 

ಒಂದು ರೂಪಾಯಿಗೆ ಸಿಗೋ ಪೆಪ್ಪರ್‌ವೆುಂಟನ್ನು ಸ್ಕೂಲ್‌ಗೆ ಹೋಗೋ ಮಗುವಿಗೆ ಕೊಟ್ಟುಬಿಡಿ. ಅದಕ್ಕಾಗೋ ಖುಷಿ ನೋಡಿದ ಮೇಲಂತೂ ನೀವು ಈ ಲೋಕವನ್ನು ಮರೆತು ಖುಷಿಯಲ್ಲೇ ತೇಲಾಡ್ತೀರಿ. ನಾವು ಮೊಬೈಲ್‌ಗೆ ಬಂದ ಎಷ್ಟೋ ಮೆಸೇಜ್‌ಗಳನ್ನು ಫಾರ್ವರ್ಡ್‌ ಮಾಡ್ತೇವೆ. ಆದ್ರೆ ಸ್ಮೈಲನ್ನು ಫಾರ್ವರ್ಡ್‌ ಮಾಡೋಕೆ ಮಾತ್ರ ಜ್ಯೂಸ್‌ ಜ್ಯೂಸ್‌ ಚಿಕ್ಕು ಜ್ಯೂಸ್‌ ಅಲ್ಲ… ಕಂಜೂಸ್‌ ಬುದ್ಧಿ ತೋರಿಸ್ತೇವೆ.

ಕೆಲವು ದಿನಗಳಿಂದ ಕೋಳಿಜಗಳವಾಗಿ ಮಾತು ಬಿಟ್ಟವರು ಸಿಕ್ಕಿದರೆ ಹಾಗೇ ಶುಭ್ರ ನಗೆಯನ್ನು ಅವರೆಡೆಗೆ ಚೆಲ್ಲಿ. ಹೊಚ್ಚ ಹೊಸ ನಗು ಹಳೆಯ ನೋವಿನ ಕನ್ನಡಿಯನ್ನು ಒಡೆಯುವುದರಲ್ಲಿ ಎರಡು ಮಾತಿಲ್ಲ. ಒಂದಿಷ್ಟು ಜನ, ಸ್ಮೈಲ್‌ ಕೊಟ್ರೆ ಸ್ಮೈಲ್‌ ಅನ್ನೇ ಗುಳುಂ ಮಾಡಿ ನೋಡ್ತಾರೆ. ಸ್ಮೈಲ್‌ಗೆ ಪ್ರಮೋಶನ್‌ ಕೊಡಲ್ಲ. ಕಡೇಪಕ್ಷ ಆ ನಗುವಿನ ಮಹಿಮೆಯನ್ನು ಅರಿಯುವ ಗೋಜಿಗೂ ಅವರು ಹೋಗುವುದಿಲ್ಲ. ಇಂಥ ನಗುವನ್ನು “ಒನ್‌ ವೇ’ ಗುಂಪಿಗೆ ಸೇರಿಸಬಹುದು. 

ಈ ನಗುವನ್ನೇ ಮುಂದಿಟ್ಟುಕೊಂಡು ಟಾಸ್ಕ್ಗಳನ್ನೂ ಆಯೋಜಿಸಬಹುದು. ನೀವು ನಿತ್ಯ ಹೋಗುವ ಬಸ್ಸಿನಲ್ಲಿ ಇದನ್ನು ಕಾರ್ಯರೂಪಕ್ಕೆ ತರಬಹುದು. ಸಹಪ್ರಯಾಣಿಕರೊಬ್ಬರಿಗೆ ಇವತ್ತು ನೀವು ಮೊದಲು ಸ್ಮೈಲ್‌ ಕೊಟ್ರೆ, ನಾಳೆ ಅವರು ಮೊದಲು ಸ್ಮೈಲ್‌ ಕೊಡ್ಬೇಕು. ಒಂದಿನ ನೀವು, ಮತ್ತೂಂದು ದಿನ ಅವರು. ದೆಹಲಿಯಲ್ಲಿದ್ದಂತೆ ಸಮ- ಬೆಸ ವ್ಯವಸ್ಥೆ. ಅಲ್ಲಿನ ವಾತಾವರಣದಂತೆ, ನಮ್ಮ ವಾತಾವರಣದಲ್ಲಿನ ನಗುವಿಗೇನೂ ದಕ್ಕೆ ಬಂದಿಲ್ಲ.

ಹೀಗೆ ನಿತ್ಯವೂ ನಗುವಿನ ವಿನಿಮಯವಾದರೆ, ನಿಮ್ಮಿಬ್ಬರ ನಡುವೆ ಸ್ನೇಹದ ಸೇತುವೆಯೊಂದು ನಿರ್ಮಾಣವಾಗುತ್ತದೆ. “ಅಪರಿಚಿತ’ ಪದದ ಮೊದಲ ಅಕ್ಷರ “ಅ’ ಅಳಿಸಿಹೋಗಿ, ಬಾಂಧವ್ಯ ಚಿಗುರುತ್ತದೆ. ಇನ್ನು ಈ ನಗು ಅನೇಕ ಸಲ ಆರ್ಟಿಫಿಶಿಯಲ್ಲು ಅಂತನ್ನಿಸಿಕೊಳ್ಳುವುದೂ ಇದೆ. ವಿಮಾನದಲ್ಲಿ ಗಗನಸಖೀ ನಗುತ್ತಾಳೆ ನೋಡಿ, ಹಾಗೆ. ಆಕೆಗೆ ನಗು ಎನ್ನುವುದು ಕರ್ತವ್ಯದ ಒಂದು ಭಾಗ.

ಅವಳ ಒಂದೊಂದು ನಗುವೂ ಒಳಗೆಷ್ಟೇ ನೋವಿರಲಿ, ಸಂಕಟವಿರಲಿ, ಇಷ್ಟವಿರಲಿ- ಇಲ್ಲದಿರಲಿ, ನಗುತ್ತಲೇ ಇರಬೇಕು. ಇದು ಯಾವತ್ತೂ ನೈಸರ್ಗಿಕ ನಗು ಅಂತನ್ನಿಸಿಕೊಳ್ಳುವುದೇ ಇಲ್ಲ. ಈಗ ಎಲೆಕ್ಷನ್‌ ಬೇರೆ ಹತ್ತಿರ ಬರುತ್ತಿದೆ. ನಮ್ಮೆಲ್ಲರ ವೋಟ್‌ ಅನ್ನು ನಿರೀಕ್ಷಿಸುತ್ತಿರುವ ರಾಜಕಾರಣಿ ನಮ್ಮತ್ತ ಕೈಮುಗಿಯುತ್ತಾ ನಗುತ್ತಾನಲ್ಲ, ಆ ನಗು ಕೂಡ ಆರ್ಟಿಫಿಶಿಯಲ್ಲೇ. ಆತನ ನಗುವಿನಲ್ಲಿ ಸ್ವಾರ್ಥ ಮಿಸುಕಾಡುತ್ತಿರುತ್ತದೆ. 

ಸದಾಕಾಲ ಮಂದಹಾಸ ಬೀರುವವರನ್ನು ನೋಡಿದಾಗ ನಾವು ಕೂಡ ಅವರ ಹಾಗೆಯೇ ಇರಬೇಕು ಅಂತ ಅನ್ನಿಸುತ್ತೆ. ಆದ್ರೆ ಹುಟ್ಟುಬುದ್ಧಿ ಬೆಟ್ಟ ಹತ್ತಿದರೂ ಹೋಗದೆಂಬಂತೆ ನಾವು ಮೂತಿ ಸಿಂಡರಿಸಿಕೊಳ್ಳುವುದನ್ನು ಎಂದೂ ನಿಲ್ಲಿಸಲ್ಲ. ಐದು ಸೆಕೆಂಡ್‌ ಸ್ಮೈಲ್‌ ಕೊಡೋದ್ರಿಂದ ಒಂದು ಫೋಟೋ ಚೆನ್ನಾಗಿ ಬರೋದಾದ್ರೆ, ಲೈಫ್ ಪೂರ್ತಿ ನಗ್ತಾ ಇದ್ರೆ ಜೀವನ ಎಷ್ಟು ಸುಂದರವಾಗಿರಬಹುದು ಅಲ್ವಾ? ಇದನ್ನು ಕೇಳಿದಾಗ ನನಗೂ ನಗೋಣ ಅಂತ ಅನ್ಸುತ್ತೆ. ನನ್‌ ಜೊತೆ ನೀವೂ ನಗ್ತೀರಿ ತಾನೆ?

* ಸೋನಿಕಾ ಆರ್‌. ನಾವೇಲ್‌ಕಾರ್‌

ಟಾಪ್ ನ್ಯೂಸ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.