CONNECT WITH US  

ಪ್ಲೀಸ್‌ ಕಣ್ರೀ, ಇದೊಂದ್ಸಲ ಕ್ಷಮಿಸಿ ಬಿಡ್ರಿ....

ಗಲ್ಲುಶಿಕ್ಷೆಗೆ ಗುರಿಯಾದವರಿಗೂ ಒಂದು ಕೊನೆಯ ಛಾನ್ಸ್‌ ಅಂತ ಕೊಟ್ಟು ರಾಷ್ಟ್ರಪತಿಗಳೇ ಕ್ಷಮೆ ನೀಡಿದ ಉದಾಹರಣೆಗಳಿವೆ. ಹಾಗಿರುವಾಗ ಯೌವನದ ಹುಮ್ಮಸ್ಸಿನಲ್ಲಿ ಅವಸರದಲ್ಲಿ ನಾನು ಮಾಡಿದ ತಪ್ಪಿಗೆ ಕ್ಷಮೆ ಇಲ್ಲವೇನ್ರಿ?

ಹಾಯ್‌ ಹುಚ್ಚಿ!
ಹೀಗಂದಿದ್ದಕ್ಕೆ ತಾನೇ ನೀವು ನನ್ನನ್ನು ಎಫ್.ಬಿಯಲ್ಲಿ ಅನ್‌ಫ್ರೆಂಡ್‌ ಮಾಡಿದ್ದು? ನಿಜ ಹೇಳ್ಬೇಕಂದ್ರೆ ಆ ಮೆಸೇಜ್‌ನ ನಿಮ್ಗೆ ಕಳಿಸೋ ಉದ್ದೇಶ ಖಂಡಿತ ನಂಗಿರ್ಲಿಲ್ಲ. ಫ್ರೆಂಡ್‌ಗೆ ಕಳೊÕàಕೆ ಹೋಗಿ ಮಿಸ್‌ ಆಗಿ ನಿಮ್ಗೆ ಬಂದಿºಡು¤. ಮೊದೆÉà ನಿಮ್ಗೆ ನಾನು ಅಂದ್ರೆ ತುಂಬಾ ಸಿಟ್ಟು. ಇನ್ನು ಈ ಥರ ಮೆಸೇಜ್‌ ನೋಡಿದ್ಮೇಲೆ ಸುಮ್ನೆ ಹೆಂಗಿರ್ತೀರ ಅಲ್ವಾ? ಮರುಕ್ಷಣವೇ ನನ್ನ ಅನ್‌ಫ್ರೆಂಡ್‌ ಮಾಡಿºಟ್ರಿ. ಅದೂ ಸಾಲ್ದೂ ಅಂತ ಅನ್‌ಫ್ರೆಂಡ್‌ ಮಾಡಿದ್ದು ಗೊತ್ತಾದ ತಕ್ಷಣ ಸಾರಿ ಕಣ್ರೀ ಅಂತ ಇವನು ಮೆಸೇಜ್‌ ಮಾಡಿ ಗೋಗರೆಯಲು ಶುರು ಮಾಡ್ತಾನೆ ಅಂದೊRಂಡು ಬ್ಲಾಕ್‌ ಮಾಡಿºಡೋದಾ? ನಂಗಂತೂ ಎಷ್ಟು ಬೇಜಾರಾಯ್ತು ಗೊತ್ತಾ?

ಹಳೆಯ ದಿನಗಳನ್ನು ನೆನಪು ಮಾಡಿಕೊಳ್ಳಿ. ನಂಗೆ ನೀವು ಯಾರು ಅಂತ ಗೊತ್ತಿರ್ಲಿಲ್ಲ. ನೀವೇ ರಿಕ್ವೆಸ್ಟ್‌ ಕಳಿÕದ್ರೋ ಇಲ್ಲಾ ನಾನೇ ಕಳಿÕದೊ°à ಒಂದೂ ನೆನಪಾಗ್ತಾ ಇಲ್ಲ. ಒಟ್ನಲ್ಲಿ ಇಬ್ರೂ ಫ್ರೆಂಡ್ಸ್‌ ಆದ್ವಿ. ದಿನಾ ಅಲೆªà ಇದ್ರೂ ವಾರಕ್ಕೊಂದ್ಸಲ ಆದ್ರೂ ಮೆಸೇಜ್‌ ಮಾಡ್ತಾ ಇದ್ರಿ. ನಾನಂತೂ ಅದಕ್ಕೋಸ್ಕರ ಚಾತಕ ಪಕ್ಷಿ ಥರ ಕಾಯ್ತಾ ಇದ್ದೆ. ಅದಕ್ಕೂ ಮೊದುÉ ನೀವು ಎಲ್ಲೋ ಇದ್ರಿ, ನಾನು ಎಲ್ಲೋ ಇದ್ದೆ. ಈ ಮುಖಪುಸ್ತಕ ನಮ್ಮಿಬ್ಬರ ಸ್ನೇಹಕ್ಕೆ ಕೊಂಡಿಯಾಯ್ತು, ಹಾಗೇ ನೀವು ನನ್ನ ಬಿಟ್ಟು ಹೋಗೋಕೂ ಇದೇ ಮುಖಪುಸ್ತಕ ವೇದಿಕೆಯಾಯ್ತು ಅನ್ನೋದೆ ದುರಂತ. ಈ ಮೊದಲೂ ಒಂದ್ಸಲ ಏನೋ ಅಂದೆ ಅಂತ ಅನ್‌ಫ್ರೆಂಡ್‌ ಮಾಡಿದ್ರಿ. ಹಾಗೋ ಹೀಗೋ ದಮ್ಮಯ್ಯಗುಡ್ಡೆ ಹಾಕಿ ನಿಮ್ಮ ಫ್ರೆಂಡ್‌ಶಿಪ್‌ ಮರಳಿ ಪಡೆಯುವಲ್ಲಿ ಯಶಸ್ವಿಯೂ ಆಗಿದ್ದೆ. ಆದ್ರೆ ಎರಡನೇ ಸಲ ನೀವು ನನ್ನನ್ನ ಅನ್‌ಫ್ರೆಂಡ್‌ ಮಾಡಿದಾಗಿಂದ "ನನ್ನನ್ನ ಕ್ಷಮಿಸಿ' ಅಂತ ಅದೆಷ್ಟು ಸಲ ಕೇಳಿದ್ದೀನೋ ಗೊತ್ತಿಲ್ಲ. ಗಲ್ಲುಶಿಕ್ಷೆಗೆ ಗುರಿಯಾದೋರಿಗೂ ಕೊನೆಯ ಚಾನ್ಸ್‌ ಅಂತ ನೀಡಿ, ರಾಷ್ಟ್ರಪತಿಗಳು ಅವರನ್ನು ಕ್ಷಮಿಸಿರೋದನ್ನ ಕೇಳಿದ್ದೀನಿ. ಆದ್ರೆ ನನ್ನ ತಪ್ಪಿಗೆ ಕ್ಷಮೆ ಇಲ್ವಾ ಫ್ರೆಂಡ್‌? ಇವತ್ತಲ್ಲ ನಾಳೆ ನೀವು ನನ್ನ ರಿಕ್ವೆಸ್ಟ್‌ ಅಕ್ಸೆಪ್ಟ್ ಮಾಡ್ತೀರ ಅಂತ ಕಾಯ್ತಾ ಇರ್ತೀನಿ. ಮಾಡ್ತೀರಾ ತಾನೆ?

ಇಂತಿ ನಿಮ್ಮವ
ಪುರು

Trending videos

Back to Top