CONNECT WITH US  

ಹಚ್ಚೆಯ ಹಸಿರಿನಲಿ ಉಸಿರು ಬೆರೆಸುವ ಮುನ್ನ..

ಈ ಸಲ ಮಲ್ಲಿಗೆ ಹೂವ ತರಾಂವ ನಾ. ಇಷ್ಟು ದಿನ ಚಾಕ್ಲೇಟು ಪಾಕ್ಲೇಟು ತಂದು ನನಗೂ ಬ್ಯಾಸರಗೇತಿ. ರೆಡಿಮೇಡ್‌ ಪ್ಯಾಕ್ಡ್ ಪ್ರೀತಿ ಮ್ಯಾಲೆ ನನಗ ನಂಬಿಕೆ ಇಲ್ಲ.

ಡಿಯರ್‌ ಡಾಕ್ಟರ್‌,
ಏನ್‌ ಇಂವ, ನನ್ನನ್ನೇನು ಟಿವಿ ಪ್ರೋಗ್ರಾಮರ್‌ ಅನ್ಕೋಂಡಾನಾ ಏನ್‌ ಕಥಿ? ಅನ್ನಬ್ಯಾಡ. ನಿನ್ನ ನೆನಪಾದರ ಸಾಕು, ಎದಿಯೊಳಗ ಬಡಿದಾಟ ಒಮ್ಮೊಮ್ಮಿ ಹೆಚ್ಚಾದಂಗ, ಒಮ್ಮೊಮ್ಮಿ ನಿಂತಂಗ ಆಗುತ್ತ. ಈ ಪರಿ ಆಗಾಕುಂತೈತಿ ಅಂದ್ರ ಅದು ಪ್ರೀತಿ ಇರಬಹುದು ಇಲ್ಲಾಂದ್ರ ವಿರಹ ಕಾಡಿರಬಹುದು ಅನಿಸುತ್ತ ನನಗ. ಸದ್ಯಕ್ಕ ಇವೆರಡರ ನಡುವೆ ಸಿಕ್ಕಾಂಡಾಂವನಾ ಅಥವ ನಿನ್ನೊಳಗೆ ಕಳುª ಹೋದಾಂವನಾ ಅನ್ನೂದು ತಿಳಿವಲ್ದಾಗಿ ಈ ಪತ್ರ ಬರದೇನಿ. ನನ್ನ ಎದಿಬ್ಯಾನಿಗೆ ನೀನ ಡಾಕುó ಅನ್ನೂದು ನನ್ನ ಬಲವಾದ ನಂಬಿಕೆ. ಇಷ್ಟ ನಂಬಿಕೆ ನಿನ್ನ ಮ್ಯಾಲ ಇಟ್ಟಿನಂದ್ರ ನೀನ ತಿಳಕೊ ನಾ ಏನಾಗಿರಬೇಕ?

  ಅಲ್ಲ, ಈ ಹುಡುಗೀರಿಗೆ ಯಾಕಿಂತ ಬುದ್ಧಿ ಅನ್ನೂದ ತಿಳಕೊಂಡ ಗಣಮಗ ನಾನನ್ನಾಂವ ಈ ಭೂಮಿ ಮ್ಯಾಲೆ ಇಲ್ಲ ಬಿಡು. ಹಂಗಂತ ನೀನು ನನ್ನ ಮ್ಯಾಲ ಜೀವಾನ ಇಟಗೊಂಡಿಯಲ್ಲ, ಅದು ಸುಳ್ಳು ಅನ್ನಾಕ ನನಗ ಮನಸಿಲ್ಲ. ಏನಾರ ಆಗಲಿ, ಈ ಸಲ ಸುಬ್ರಮಣ್ಯ ಷಷ್ಟಿ ಜಾತ್ರಾಗೆ ನಿನ್ನ ಹೆಸರು ನನ್ನ ಎದಿ ಮ್ಯಾಲೆ ಹಚ್ಚಿ ಹಾಕಿಸ್ಕೊನಾಂವ ಇದೀನಿ. ಯಾಕ? ಒಳಗಿಲ್ಲೇನು ಅಂತ ಅನುಮಾನ ಪಡಬ್ಯಾಡ. ಜೀವಕ್ಕ ತ್ರಾಸಾಕ್ಕೆ„ತಿ. ಏನಪ ಎಡವಟ್‌ ಸಿದ್ಲಿಂಗ ಟ್ಯಾಟೂ ಹಾಕೊಸ್ಕೋಳ್ಳೊ ಕಾಲ್ದಾಗ ಇರಾಕಿ ನಾ. ನೀನು ನೋಡಿದ್ರ ದ್ವಾಪರದ ಕೃಷ್ಣನಂಗ ಅದೀಯಲ್ಲ ಅಂತೀ ಅಂತಾನೂ ಗೊತ್ತು ನನಗ. ಆದ್ರ ನನ್ನ ಮನಸ್ಸಿನ್ಯಾಗ ಹಚ್ಚ ಹಸಿರಾಗಿ ಇರಬೇಕ ನೀ. ಅಲ್ಲಿ ಅರಳ್ಳೋ ಮಲ್ಲಿಗ ಹೂವಿನ ಪರಿಮಳದಂಗ ನನ್ನ ಪ್ರೀತಿ ಅಂತ ಹೇಳಾಂವ ನಾ. ತಿಳಿತಾ ಇಲ್ಲ ಹೇಳು. ತಿಳಿಲಿಲ್ಲ ಅಂದ್ರ ಖುದ್ದು ಭೇಟಿ ಆಗಿ ನಿನ್ನ ಕಣ್ಣಗಿ ಕಟ್ಟುವಂಗ ಹೇಳೆ¤àನಿ.

ಈ ಸಲ ಮಲ್ಲಿಗೆ ಹೂವ ತರಾಂವ ನಾ. ಇಷ್ಟು ದಿನ ಚಾಕ್ಲೇಟು ಪಾಕ್ಲೇಟು ತಂದು ನನಗೂ ಬ್ಯಾಸರಗೇತಿ. ರೆಡಿಮೇಡ್‌ ಪ್ಯಾಕ್ಡ್ ಪ್ರೀತಿ ಮ್ಯಾಲೆ ನನಗ ನಂಬಿಕೆ ಇಲ್ಲ. ತಾಜಾತಾಜಾ ಕಂಪಿನ ಇಂಪಿನ ಮಲ್ಲಿಗೆ ಹೂವ ಕೂಡ ನಿನ್ನ ಮುಂಗುರುಳನ್ಯಾಗ ನನ್ನ ಹೃದಯದ ಜೋಕಾಲಿ ಆಡಬೇಕ, ಮತ್ತ ನಿನ್ನ ಗಲ್ಲದ ಗುಳಿಯಾಗ ನನ್ನ ಮನಸ್ಸುಬೆಚ್ಚಗ ಕುಂತುಬಿಡಬೇಕು ಅನ್ನೂ ಮನಸಾಗೇತಿ, ಏನಂತಿ? ಲಗೂನ ಹೇಳು. ಥೋ ತಲಿ ಕೆಟ್ಟವ°ಂಗ ಮಾತಾಡಕತ್ತೀನಿ, ಬ್ಯಾಸರ ಮಾಡ್ಕಬ್ಯಾಡ. ಮೊದಲಾ ಬರದೇನಿ ನನಗೇನೂ ತಿಳಿವಲ್ದಾಗೇದ ಅಂತ. ನಿನ್ನ ಬಿಟ್ಟು ದೂರ ಅದೀನಲ್ಲ, ಅದಕ್ಕ ಹಿಂಗಾಗಕತ್ತೆçತಿ ಅಂದ್ರ ಅದು ವಿರಹಾನಾ ಅಲ್ಲದ ಮತ್ತಿನ್ನೇನು? ವಿರಹ ಆಗೇತಿ ಅಂದ್ರ ಅದರ ಹಿಂದ ಪ್ರೀತಿ ಐತಿ ಅಂತಾನಾ ಅಲ್ಲೇನು? ಹಂಗಿದ್ಮಾಲೆ ನೀನರ ನಮ್ಮೂರಿಗೆ ನಾನರ ನಿಮ್ಮೂರಿಗೆ ಬರ್ತಿನಿ. ಒಮ್ಮೆ ನಿನ್ನನ್ನು ಕಣ್ತುಂಬ ಕಾಣುವಾಸೆ ಎಲ್ಲಿರುವೆ ಅನ್ನುವ ಹಾಡಿಗೆ ಎದೆ ತಾಳ ಹಾಕಾಕುಂತೈತಿ. ನೀನು ಸೇರಿದರ ನಿನ್ನ ಹೆಜ್ಜೆಯ ಗೆಜ್ಜ ನಾದ ಸೇರುತೈತಿ. ಹಾಡಿಗೆ ಮ್ಯೂಸಿಕ್‌ ಸಿಕ್ಕಂಗಾಗುತ್ತ. ಲಗೂನ ಪತ್ರ ಬರೀ, ಪೋಸ್ಟ್‌ಮ್ಯಾನ್‌ ಜೀಂವಾ ತಿನ್ಕೋತಾ ಕಾಯುವ ನಿನ್ನಾಂವ.

-ಸೋಮು ಕುದರಿಹಾಳ
ಶಿಕ್ಷಕರು

Back to Top