ಹೇಳದೆ ಉಳಿದಿಹ ಮಾತು ನೂರಿದೆ


Team Udayavani, May 29, 2018, 1:26 PM IST

ulidiha.jpg

ಈ ವರ್ಷಾರಂಭದ ಮಳೆಯಲ್ಲಿ ನಿನ್ನನ್ನು ತೋಯಿಸಿ, ನೆನಪುಗಳನ್ನು ಕೊಚ್ಚಿ ಕೆಡವಬೇಕೆಂದುಕೊಂಡಿದ್ದೆ. ಆಗಲೇ ಇಲ್ಲ… ಕಣ್ಣ ಹನಿಗಳು ಜಾರಿದವೇ ವಿನಃ, ಮನದೆಡೆಗಳಲ್ಲಿ ಭದ್ರವಾಗಿ ನೆಲೆನಿಂತ ನೀನು ಚೂರೂ ಕದಲಲಿಲ್ಲ.. 

ಈಗ ನನ್ನ ಮನೆಯ ಎತ್ತರಕ್ಕೆ ವರ್ಷಾರಂಭದ ಮಳೆ ಎಗ್ಗಿಲ್ಲದೆ ಸುರಿಯುತ್ತಿದೆ. ಎಷ್ಟು ಚೆನ್ನಾಗಿದೆ ಗೊತ್ತಾ ಪ್ರಕೃತಿ? ನೆಲ್ಲಿಕಾಯಿ ಮರದಡಿಯಲ್ಲಿ ನೀರು ಕಳೆದ ವರ್ಷಕ್ಕಿಂತಲೂ ಮೆದುವಾಗಿ ತೊಟ್ಟಿಕ್ಕುತ್ತಿದೆ. ನೀನು ಅಲ್ಲೆಲ್ಲಾ ಬರಬೇಕಾಗಿತ್ತು. ನೀನು ಕಳೆದ ವರ್ಷ ಹೇಳಿದ್ದ ಮಾತು ನೆನಪಿದೆಯಾ? “ಹೀಗೆ ಮಳೆಬಂದರೆ ನನ್ನ ನೀಳ ಜಡೆಯನ್ನು ಮಳೆಯಲ್ಲಿ ತೋಯಿಸುತ್ತೇನೆ’ ಅಂದಿದ್ದೆಯಲ್ಲಾ… ನಿನ್ನ ಮಾತುಗಳನ್ನು  ಸೋನೆಯೂ ಕೇಳಿಸಿಕೊಂಡಿದೆ ಇರಬೇಕು; ಅದಕ್ಕೇ ಮಳೆ ಇಷ್ಟೊಂದು ಲಹರಿಯಲ್ಲಿ ಸುರಿಯುತ್ತಿದೆ. ನೆಲ್ಲಿ ಮರದಡಿಯಲ್ಲಿ ತುಂಬೆ, ನೆಲನೆಲ್ಲಿ, ಪಸುಪಸಿರು ಗಿಡಗಳು ಹೂಗಳನ್ನು ಅರಳಿಸಿ ಎಷ್ಟು ಚೆನ್ನಾಗಿ ನಳನಳಿಸುತ್ತಿವೆ. ಒಮ್ಮೊಮ್ಮೆ ನಾನು ಕದ್ದು ಕದ್ದು ಅದನ್ನೆಲ್ಲ ನೋಡುತ್ತಿದ್ದೆ. “ದೊಡ್ಡ ಲೂಸು ನೀನು. ನಿಜ್ವಾಗ್ಲೂ ಲೂಸು’ ಅಂತ ಮಳೆಯಲ್ಲಿ ಗಂಟಲು ಹರಿವಂತೆ ಕೂಗಿ ಹೇಳಬೇಕು ಅನಿಸುತ್ತಿತ್ತು. ದೇವರಾಣೆಗೂ ಹೇಳ್ತೀನಿ, ನಿಂಗೆ ಬಯ್ಯೋದಂದ್ರೆ ನಂಗೆಷ್ಟು ಇಷ್ಟ ಗೊತ್ತಾ. ನಾನು ನಿನ್ನನ್ನು ಅವತ್ತೇ ಕೇಳಬೇಕೆಂದುಕೊಂಡಿದ್ದೆ. ನಾನು ಅಷ್ಟೆಲ್ಲ ಬೈದರೂ ನೀನು ಪೆದ್ದು ಪೆದ್ದಾಗಿ ಸುಮ್ಮನೆ ಕುಳಿತಿರುತ್ತಿದ್ದೆಯಲ್ಲಾ.. ನಿನಗೆ ಕೋಪವೇ ಬರುವುದಿಲ್ಲವೇನು? ನಂಗೆ ಗೊತ್ತು, ನೀನು ನಂಗೆ ಮನಸ್ಸಲ್ಲೇ ಬೈದುಕೊಂಡಿರಿ¤àಯಾ ಅಂತ. ನಾನಂತೂ ಕಂಯ ಕಂಯ ಅಂತ ದಿನ ಪೂರ್ತಿ ಮಾತಾಡ್ತಿದ್ದೆ ಅಲ್ವಾ? ನಂಗೆ ನೀನಲೆª ಬೇರೆ ಯಾರು ಹೇಳ್ಕೊಳ್ಳಕ್ಕೆ ಸಿಗ್ತಿದ್ರು ಹೇಳು?

ಇತ್ತೀಚೆಗೆ ಮನೆಯಲ್ಲಿ ಫ‌ಂಕ್ಷನ್‌ ಇಟ್ಕೊಂಡಿದ್ರು. ಪೂಜೆಗೆ ಕೇಪುಳದ ಹೂ ಕೊಯ್ಯಲು ಅಮ್ಮನ ಜೊತೆ ಜಡಿಮಳೆಯಲ್ಲಿ ನೆಲ್ಲಿಕಾಯಿ ಮರದ ಹತ್ತಿರ ಹೋಗಿದ್ದೆ. ನೀನೆಷ್ಟು ಬಾರಿ ಮನಸ್ಸಲ್ಲಿ ಬಂದುಬಿಟ್ಟೆ ಗೊತ್ತಾ? ನಿನ್ನ ನೆನಪುಗಳು ಮನದಂಚಿನಲ್ಲಿ ಆಗಾಗ ಒತ್ತರಿಸಿ ಬಂತು. ಮಳೆಯಲ್ಲಿ ದುಃಖದ ಹೊನಲು ಉಕ್ಕಿ ಹರಿದು ಅಮ್ಮನ ಸೀರೆ ತೋಯಿಸಿತ್ತು ಗೊತ್ತಾ? ನೀನಿದ್ದರೆ, ಜೀವಕ್ಕೆ ಜೀವ ಎಂಬಂತಿದ್ದೆ. ನಿನ್ನ ಆಸೆಯಂತೆ ನಮ್ಮಿಬ್ಬರ ಹೆಸರನ್ನು ಪಸುರೆಲೆಗಳ ಮೇಲೆ ಬರೆಯಬೇಕೆಂದು ಮನಸ್ಸು ತಹತಹಿಸಿತ್ತು. 

ಛೇ! ಈ ಅಂತರ್ಮುಖೀ ಭಾವಗಳು ಎಲ್ಲಿಂದ ಕೊನರುತ್ತವೋ ಗೊತ್ತಿಲ್ಲ. ಕೊಡೆ ಹಿಡಿದ ಕೈಗಳು ಮರಗಟ್ಟಿ ನಿಂತಿದ್ದವು. ನಿಂಗೆ ಹೇಳಿದ್ರೆ ಹುಚ್ಚು ಮನಸ್ಸು ಅಂತ ಬಯ್ತಿàಯೋ, ಇಲ್ಲ ಗುಗ್ಗು ಅಂತೀಯೋ ಗೊತ್ತಿಲ್ಲ. ದಿಗಂತದಾಚೆಗೆ ಲಂಗರು ಹಾಕಿದ ಮೋಡಗಳೆಡೆಯಲ್ಲಿ ನೀನೆಷ್ಟು ಬಾರಿ ಕಂಡಿದ್ದೀಯಾ ಗೊತ್ತಾ.. ಅದೇ ದುಂಡಗಿನ ಮುಖ, ನವಿನವಿರು ನಗೆ, ಇಳಿಬಿಟ್ಟಿರುವ ಕೂದಲು, ವಿಶಾಲವಾದ ಹಣೆ, ಪ್ರೀತಿಯ ಅಕ್ಷಯಪಾತ್ರೆಯಂತಿರುವ ಬಟ್ಟಲುಗಣ್ಣು… ಉಹೂn, ಕಲ್ಪಿಸಿಕೊಳ್ಳಲು ಹೊಟ್ಟೆಕಿಚ್ಚಿನ ಮಾರುತ ಅವಕಾಶವನ್ನೇ ಕೊಡುವುದಿಲ್ಲ, ಗೊತ್ತಾ?

ನೀನೇಕೆ ಸುಳಿವೂ ಕೊಡದೆ ದೂರವಾಗಿದ್ದೀಯಾ ಎಂದು ಯೋಚಿಸಿದಾಗೆಲ್ಲ ಕಣ್ಣಾಲಿಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ಮೊನ್ನೆ ಮಳೆ ಸುರಿವಾಗ ಅಂಗಳದಲ್ಲಿ ಕೈಗಳನ್ನು ಗಾಳಿಯಲ್ಲಿ ತೇಲಾಡಿಸಿಕೊಂಡು ಮಳೆಹನಿಗಳೊಂದಿಗೆ ಮೀಯುತ್ತಿದ್ದೆ. ನೀನೇ ಮಳೆ ಹನಿಯಾಗಿ ಬಂದೆಯೇನೋ ಗೊತ್ತಿಲ್ಲ! ಮಳೆಯಲ್ಲಿ ನೆನೆದಷ್ಟೂ ಮನಸ್ಸು ಹಗುರಾಗಿದೆ. ಈ ವರ್ಷಾರಂಭದ ಮಳೆಯಲ್ಲಿ ನಿನ್ನನ್ನು ತೋಯಿಸಿ, ನೆನಪುಗಳನ್ನು ಕೊಚ್ಚಿ ಕೆಡವಬೇಕೆಂದುಕೊಂಡಿದ್ದೆ. ಆಗಲೇ ಇಲ್ಲ…ಕಣ್ಣ ಹನಿಗಳು ಜಾರಿದವೇ ವಿನಃ, ಮನದೆಡೆಗಳಲ್ಲಿ ಭದ್ರವಾಗಿ ನೆಲೆನಿಂತ ನೀನು ಚೂರೂ ಕದಲಲಿಲ್ಲ.. 

ನಿನ್ನ ಜೀವದೊಡೆಯ
– ವಶಿ ಸುರ್ಯ ಉಜಿರೆ

ಟಾಪ್ ನ್ಯೂಸ್

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

26

ಅಮೆರಿಕ ತಂಡಕ್ಕೆ ಸ್ಟುವರ್ಟ್‌ ಕೋಚ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.