ಸೀಟು ಖಾಲಿಯಿದೆ ಬೇಗ ರೈಲು ಹತ್ತಿಕೊಳ್ಳಿ


Team Udayavani, Jul 3, 2018, 6:00 AM IST

x-6.jpg

ಬ್ರಿಟೀಷರ ಆಡಳಿತ ಕಾಲದಲ್ಲಿ ದೊರಕಿದ ಅತ್ಯುತ್ತಮ ಸೌಲಭ್ಯಗಳಲ್ಲಿ ರೈಲ್ವೆ ಸರಿಗೆಯೂ ಒಂದು. ತಮ್ಮ ವ್ಯಾಪಾರ-ವಹಿವಾಟಿನ ಕೆಲಸಕ್ಕೆ ಅನುಕೂಲ ಮಾಡಿಕೊಳ್ಳುವ ಉದ್ದೇಶದಿಂದ ಅವರು ರೈಲ್ವೆ ವ್ಯವಸ್ಥೆಯನ್ನು ದೇಶದುದ್ದಕ್ಕೂ ವಿಸ್ತರಿಸಿದರು. ನಂತರದ‌ ದಿನಗಳಲ್ಲಿ ರಾಜ್ಯಗಳನ್ನು ಬೆಸೆಯುವ, ಮಹಾನಗರಗಳಿಗೆ  ಸಂಪರ್ಕ ಕಲ್ಪಿಸುವ ಕೊಂಡಿಯಾಗಿ ರೈಲ್ವೆ ವ್ಯವಸ್ಥೆ ರೂಪುಗೊಂಡಿತು.ಕ್ರಮೇಣ ಅದೇ ಒಂದು ಇಲಾಖೆಯಾಗಿ, ಸುಲಭ ಕಾರ್ಯ ನಿರ್ವಹಣೆಗೆ  ಅನುಕೂಲವಾಗುವಂತೆ ವಲಯಾವಾರು ಹಂಚಿಕೆಯೂ ನಡೆಯಿತು. ಪಶ್ಚಿಮ ರೈಲ್ವೆ, ನೈರುತ್ಯ ರೈಲ್ವೆ, ಸೌತ್‌ ಸೆಂಟ್ರಲ್‌ ರೈಲ್ವೆ ಎಂಬೆಲ್ಲ ವಿಭಾಗಗಳು ರೂಪುಗೊಂಡಿದ್ದು ನಂತರದ ಬೆಳವಣಿಗೆ.

                 ರೈಲು, ಒಂದೇ ಸಾಲಿನಲ್ಲಿ ಉದ್ದಕ್ಕೂ ಸಿದ್ಧವಾಗಿನಿಂತ ಮನೆಗಳ ಹಾಗೆ ಕೆಲವೊಂದು ರೈಲುಗಳು ಅರ್ಧ ಕಿಲೋಮೀಟರಿನಷ್ಟು ಉದ್ದ ಇರುವುದುಂಟು. ಮನೆಯಂತೆಯೇ ರೈಲಿಗೂ ಕೂಡ ಆಗಿಂದಾಗ್ಗೆ ರಿಪೇರಿ ಕೆಲಸ ಆಗುತ್ತಲೇ ಇರಬೇಕು. ಅದು ಪೇಂಟಿಂಗ್‌ ಇರಬಹುದು, ವೆಲ್ಡಿಂಗ್‌ ಇರಬಹುದು, ಎಲೆಕ್ಟ್ರಿಕಲ್‌ ವರ್ಕ್‌ ಆಗಿರಬಹುದು ಅಥವಾ ಎಂಜಿನ್‌ನ ಯಾವುದೋ ಒಂದು ಭಾಗ ಸರಿಪಡಿಸುವ ಮೆಕ್ಯಾನಿಕ್‌ ಕೆಲಸ ಆಗಿರಬಹುದು. ಎ.ಸಿ. ಮೆಶಿನ್‌ನ ರಿಪೇರಿ ಇರಬಹುದು ಅಥವಾ ಕಿಟಕಿ, ಬಾಗಿಲುಗಳನ್ನು  ಜೋಡಿಸುವ ಕಾರ್ಪೆಂಟರ್‌ನ ಕೆಲಸವೇ ಆಗಿರಬಹುದು, ಇಂಥವೇ ಹಲವು ಬಗೆಯ ರಿಪೇರಿಗಳು ರೈಲಿನಲ್ಲಿ ಆಗುತ್ತಲೇ ಇರುತ್ತವೆ. ಈ ಕೆಲಸಗಳನ್ನು ನಿರ್ವಹಿಸಲೆಂದೇ ಸೌತ್‌ ಸೆಂಟ್ರಲ್‌ ರೈಲ್ವೆ ವಿಭಾಗವು ಒಟ್ಟು 4103 ಅಪ್ರಂಟಿಸ್‌ ಹುದ್ದೆಗಳಿಗೆ ಅರ್ಜಿ ಕರೆದಿದೆ. ಈ ಹುದ್ದೆಗಳು, ಮೆಕಾನಿಕ್‌, ಕಾರ್ಪೆಂಟರ್‌, ಎಲೆಕ್ಟ್ರಿಷಿಯನ್‌….. ಹೀಗೆ ಹಲವು ವಿಭಾಗಗಳಲ್ಲಿ ಹಂಚಿಕೆಯಾಗಲಿವೆ.
 
ಹುದ್ದೆಯ ವಿಂಗಡನೆ
ಎ.ಸಿ ಮೆಕಾನಿಕ್‌- 249
ಕಾರ್ಪೆಂಟರ್‌-16
ಡೀಸೆಲ್‌ ಮೆಕಾನಿಕ್‌-640
ಎಲೆಕ್ಟ್ರಿಕಲ್‌/ಎಲೆಕ್ಟ್ರಾನಿಕ್ಸ್‌- 18
ಎಲೆಕ್ಟ್ರಿಷಿಯನ್‌-871
ಎಲೆಕ್ಟ್ರಾನಿಕ್‌ ಮೆಕಾನಿಕ್‌-102
ಫಿಟ್ಟರ್‌- 1460
czಮೆಶಿನಿಸ್ಟ್‌-74
ಪೇಂಟರ್‌- 40
ವೆಲ್ಡರ್‌- 594
ಇತರೆ- 36
ಒಟ್ಟು 4103 ಹುದ್ದೆಗಳನ್ನು ವಿಂಗಡಿಸಲಾಗಿದೆ. ರೈಲ್ವೆಯ ವಿವಿಧ ಯೂನಿಟ್‌ಗಳಿಗೆ ಎಸ್ಸಿ, ಎಸ್ಟಿ, ಒಬಿಸಿ, ಯುಆರ್‌ ಹೀಗೆ ವಿಂಗಡನೆ ಮಾಡಲಾಗಿದೆ. 

ವಯೋಮಿತಿ, ವಿದ್ಯಾರ್ಹತೆ
ಈ ಎಲ್ಲ ಹುದ್ದೆಗಳಿಗೂ ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಹಾಗೂ ಆಯಾ ವಿಷಯಕ್ಕೆ ಸಂಬಂಧಿತ ಐಟಿಐ ವಿದ್ಯಾಭ್ಯಾಸ ಮಾಡಿರಬೇಕು. ಕನಿಷ್ಠ 15 ರಿಂದ ಗರಿಷ್ಠ 24 ವರ್ಷ ವಯೋಮಿತಿ ಹೊಂದಿರಬೇಕು. ಪರಿಶಿಷ್ಟರಿಗೆ ಐದು ವರ್ಷ ವಯೋಮಿತಿಯಲ್ಲಿ ಸಡಿಲಿಕೆಯಿದೆ. ಎಂಜಿನಿಯರಿಂಗ್‌ ಗ್ರಾಜುಯೇಟ್‌ ಮತ್ತು ಹುದ್ದೆ ಸಂಬಂಧಿತ ಡಿಪ್ಲೊಮಾ ಹೊಂದಿರುವವರೂ ಈ ಅಪ್ರಂಟಿಸ್‌ಶಿಪ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಆಯ್ಕೆ ಹೇಗೆ?
ರೈಲ್ವೆ ಇಲಾಖೆಯ 1961ರ ಅಪ್ರಂಟಿಸ್‌ ಆಕ್ಟ್ ಪ್ರಕಾರ ಸೆಂಟ್ರಲ್‌ ಅಪ್ರಂಟಿಸ್‌ ಕೌನ್ಸಿಲ್‌ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದು, ದೈಹಿಕ ಆರೋಗ್ಯ ಪರೀಕ್ಷೆ, ದಾಖಲಾತಿಗಳ ಪರಿಶೀಲನೆ ನಡೆಸಲಾಗುತ್ತದೆ. 

ಅರ್ಜಿ ಸಲ್ಲಿಕೆ ಹೇಗೆ?
1.     ಮೊದಲು ಸೌತ್‌ ಸೆಂಟ್ರಲ್‌ ರೈಲ್ವೆ ಜಾಲತಾಣ www.scr.indianrailways.gov.in ವನ್ನು ಪ್ರವೇಶಿಸಿ ನೋಟಿಫಿಕೇಷನ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು.

2.     ನಿಮ್ಮ ವಯೋಮಿತಿ ಅರ್ಹತೆಯನ್ನು ಪರೀಕ್ಷಿಸಿಕೊಂಡು ಅದರಲ್ಲಿರುವ ಅಪ್ಲಿಕೇಷನ್‌ನ ಪ್ರಿಂಟ್‌ ಔಟ್‌ ಪಡೆಯುವುದು. 

3.     ನಿಮ್ಮ ಹೆಸರು, ತಂದೆ ಹೆಸರು, ಜನ್ಮದಿನಾಂಕ ಸೇರಿದಂತೆ ಎಲ್ಲ ವಿವರವನ್ನೂ ತುಂಬಬೇಕು.

4.    ಭಾವಚಿತ್ರವನ್ನು ಅಂಟಿಸಿ, ಸಹಿ ಹಾಕುವುದು. ಅಟೆಸ್ಟ್‌ ಮಾಡಿರುವ ಅಗತ್ಯ ದಾಖಲಾತಿಗಳನ್ನು ಜೊತೆಯಲ್ಲಿ ಸೇರಿಸಬೇಕು.

5.     ಅಗತ್ಯ ಸ್ಥಳಗಳಲ್ಲಿ ನಿಮ್ಮ ಸಹಿ ಹಾಕುವುದನ್ನು ಮರೆಯದಿರಿ

6.    ಸಾಮಾನ್ಯ ಅಭ್ಯರ್ಥಿಗಳು ನೂರು ರೂ.ಗಳನ್ನು ರಾಷ್ಟ್ರೀಯ ಬ್ಯಾಂಕಿನಲ್ಲಿ ಡಿಡಿ ಅಥವಾ ಅಂಚೆ ಕಚೇರಿಯ ಪೋಸ್ಟಲ್‌ ಆರ್ಡರ್‌ ಡ್ರಾ ಮೂಲಕ ಶುಲ್ಕ ಪಾವತಿಸಬೇಕು. ಪರಿಶಿಷ್ಟ ಜಾತಿ/ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ.

7.     ಅಪ್ಲಿಕೇಷನ್‌ಅನ್ನು ಕವರ್‌ ಮಾಡಿ ನೋಟಿಫಿಕೇಷನ್‌ನಲ್ಲಿ ನೀಡಿರುವ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸುವುದು.

ಅರ್ಜಿ ಸಲ್ಲಿಕೆಗೆ ಜುಲೈ 17 ಕಡೆ ದಿನವಾಗಿದ್ದು, ಹೆಚ್ಚಿನ ಮಾತಿಗೆ goo.gl/dcyP4K
 

ಎನ್‌. ಅನಂತನಾಗ್‌

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.