ಕಾದಿರುವೆ ನಿನಗಾಗಿ ಬರುವೆಯಾ ಹಾಡಾಗಿ..?

Team Udayavani, Aug 21, 2018, 6:00 AM IST

10.jpg

ಇದು ಪ್ರೀತಿಯೋ, ಸ್ನೇಹವೋ ಅಥವಾ ಮಾಯೆಯೋ ನನಗೆ ಗೊತ್ತಿಲ್ಲ. ಆದಷ್ಟು ಬೇಗ ನಿನ್ನನ್ನು ನೋಡಬೇಕು, ನಿನ್ನ ಮಾತುಗಳನ್ನು ಕೇಳಬೇಕು ಎಂದು ಮನಸ್ಸು ಹಂಬಲಿಸುತ್ತಿದೆ. ಆ ದಿನಗಳು ಬೇಗ ಬರಲಿ.

ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಹೊರಗೆ ಕಾಲಿಡಲೂ ಆಗುತ್ತಿಲ್ಲ. ಮನಸ್ಸಿಗೇಕೋ ಮಂಕು ಕವಿದಂತಾಗಿದೆ. ಕೆನ್ನೆಯ ಮೇಲೆ ಕೈಯೂರಿ ಕುಳಿತು, ತೊಟ್ಟಿಕ್ಕುವ ಮಳೆಯ ಹನಿಗಳನ್ನೇ ನೋಡುತ್ತಾ ಕುಳಿತಿದ್ದೆ. ಹೀಗಿದ್ದಾಗಲೇ ನನ್ನ ಕಣ್ಮುಂದೆ ಬಂದಿದ್ದು ನೀನು… ನಿನ್ನೊಂದಿಗೆ ಕಳೆದೆನಲ್ಲ; ಅವೆಲ್ಲಾ ಸುಂದರ ಬಾಲ್ಯದ ನೆನಪುಗಳು, ಜೊತೆ ಕಳೆದ ಸಮಯಗಳು, ಕೂಡಿ ಆಡಿದ ಆಟಗಳು… ಆ ನೆನಪೇ ಒಂದು ಮಧುರ ಭಾವಗೀತೆ. ಆದರೆ ಇಂದು ನೀನೆಲ್ಲೋ, ನಾನೆಲ್ಲೋ. ನನ್ನಿಂದ ಅದೆಷ್ಟೇ ದೂರವಿದ್ದರೂ ಕೂಡ, ನಿನ್ನ ನೆನಪುಗಳು ಆಗಾಗ ಬಂದು ಮನಸಿನ ಕದ ಬಡಿಯುತ್ತವೆ. ಅಂದು ಮಾವಿನ ಮರದಡಿ ಬಿದ್ದಿದ್ದ ಪಕ್ಷಿ ಯಾವುದೆಂದು ತಿಳಿಯಲು, ಅದನ್ನು ಕೋಲಿನಿಂದ ಆ ಕಡೆ ಈ ಕಡೆ ಹೊರಳಾಡಿಸಿ, ಅದು ಸತ್ತ ಕಾಗೆಯೆಂದು ತಿಳಿದಾಗ ಹೊಳೆಗೆ ಹೋಗಿ ತಲೆಯವರೆಗೂ ಮುಳುಗೆದ್ದು ಬಂದಿದ್ದೆ ನೋಡು; ಅದನ್ನಂತೂ ನನ್ನಿಂದ ಮರೆಯಲು ಸಾಧ್ಯವೇ ಇಲ್ಲ. 

ಹೇಗಿದ್ದೀಯಾ ನೀನು? ನನ್ನ ನೆನಪಿದೆಯಾ? ಇಂದಲ್ಲಾ ನಾಳೆ ನಿನ್ನನ್ನು ನೋಡುತ್ತೇನೆ ಎಂಬ ಭರವಸೆ ನನಗಿದೆ. ನಿನಗೂ ಹಾಗನ್ನಿಸಿರಬಹುದು ಅಂತ ಮನಸು ಹೇಳುತ್ತಿದೆ. ಒಂಟಿಯಾಗಿ ಕುಳಿತಾಗಲೆಲ್ಲಾ ಕಣ್ಮುಂದೆ ಬರುವುದು ನಿನ್ನ ನೆನಪುಗಳೇ. ಅದು ಯಾಕೆಂದು ನಾನರಿಯೆ. ಮನದಲ್ಲಿ ಮರೆಯಾಗಿ ಕುಳಿತ ನಿನ್ನ ನೆನಪುಗಳು ಎಂದೂ ಅಳಿಸಿ ಹೋಗುವುದಿಲ್ಲ.

 ದಿನದಿಂದ ದಿನಕ್ಕೆ ಮನಸು ನಿನ್ನದೇ ನೆನಪುಗಳೊಂದಿಗೆ ಚಿಗುರುತ್ತಿದೆ. ಕನಸಲ್ಲಿ ಅದೆಷ್ಟು ಬಾರಿ ಬಂದಿರುವೆಯೋ ಲೆಕ್ಕವೇ ಇಲ್ಲ. ಆದರೆ ಕಣ್ಮುಂದೆ ಮಾತ್ರ ಗೋಚರವಾಗುತ್ತಿಲ್ಲ. ಯಾಕೆ ಹಾಗೆ ಕಾಡುತ್ತಿರುವೆ? ಇದಕ್ಕೆಲ್ಲಾ ಉತ್ತರ ಸಿಗುವುದು ಯಾವಾಗ? ಕೆಲವೊಮ್ಮೆ ನಿನ್ನ ನೆನೆಯುತ್ತಾ ಮಂಕಾಗಿ ಕುಳಿತು ಗೆಳತಿಯರೆದುರು ಅವಮಾನವಾಗಿದೆ. ಕ್ಲಾಸಲ್ಲಿ ಲೆಕ್ಚರರ್‌ ಪಾಠ ಮಾಡುತ್ತಿರುವಾಗಲೂ ನಿನ್ನದೇ ಲೋಕದಲ್ಲಿ ಮುಳುಗಿರುತ್ತೇನೆ. ಇತ್ತೀಚೆಗಂತೂ ನಿನ್ನ ನೆನಪುಗಳ ಕಾಡುವಿಕೆಯಿಂದ ನಿದ್ದೆಗೂ ಕೊರತೆ ಬಂದಿದೆ. ದಿನದ ಕೆಲಸಗಳೂ ಸಾಗುತ್ತಿಲ್ಲ.

ಇದು ಪ್ರೀತಿಯೋ, ಸ್ನೇಹವೋ ಅಥವಾ ಮಾಯೆಯೋ ನನಗೆ ಗೊತ್ತಿಲ್ಲ. ಆದಷ್ಟು ಬೇಗ ನಿನ್ನನ್ನು ನೋಡಬೇಕು, ನಿನ್ನ ಮಾತುಗಳನ್ನು ಕೇಳಬೇಕು ಎಂದು ಮನಸ್ಸು ಹಂಬಲಿಸುತ್ತಿದೆ. ಆ ದಿನಗಳು ಬೇಗ ಬರಲಿ. ನನ್ನ ಮನಸ್ಸಿನಲ್ಲಿ ಸುಳಿದಾಡುತ್ತಿರುವ ಪ್ರಶ್ನೆಗಳಿಗೆಲ್ಲಾ ಉತ್ತರ ಸಿಗಬೇಕೆಂದರೆ ನೀನೇ ಬರಬೇಕು. ಇಷ್ಟು ದಿನ ಕಾಯಿಸಿರುವುದೇ ಸಾಕು. ನನ್ನ ಮನಸ್ಸಿನ ಈ ಮಾತುಗಳನ್ನಾದರೂ ಕೇಳಿ ಆದಷ್ಟು ಬೇಗ ಬಂದು, ನನ್ನ ಗೊಂದಲಗಳಿಗೆ, ಪ್ರಶ್ನೆಗಳಿಗೆ ಉತ್ತರ ನೀಡುವೆಯಾ?

 ಇಂತಿ
 ನಿನಗಾಗಿ ಕಾಯುತ ಕುಳಿತಿರುವ

ಗೀತಾ ಕೆ ಬೈಲಕೊಪ್ಪ

ಟಾಪ್ ನ್ಯೂಸ್

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

19-kushtagi

Kushtagi:ವಿದ್ಯುತ್‌ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.