CONNECT WITH US  

ಥ್ರಿಲ್ಲರ್‌ ಕತೆಗಳು

ಈ ಕಥೆಗಳನ್ನು ಓದುತ್ತಿದ್ದಂತೆಯೇ ನಿಮಗೆ ಭಯವಾದರೆ, ಮೈ ಜುಂ ಅಂದರೆ ನಾವದಕ್ಕೆ ಜವಾಬ್ದಾರರಲ್ಲ!

1. ಮೈ ಕೊರೆಯುವ ಚಳಿಯಲ್ಲಿ ರಾತ್ರಿ ಒಬ್ಬನೇ ಬೈಕ್‌ನಲ್ಲಿ ಬರುತ್ತಿದ್ದ. ಹಾಗೆ ಬರುವಾಗ ಕಾಲೇಜಿನ ಪಕ್ಕದಲ್ಲಿ ಒಂದು ಟೀ ಸ್ಟಾಲ್‌ ಕಂಡಿತು. ಬೈಕ್‌ ಸವಾರನಿಗೆ ಖಡಕ್‌ ಚಹಾ ಕುಡಿಯಬೇಕೆನಿಸಿತು. ಸಿದಾ ಅಂಗಡಿಗೆ ಹೋದ. ಅಲ್ಲಿ ಸುತ್ತ ಗೆಜ್ಜೆ ಸದ್ದು ಕೇಳಿಸತೊಡಗಿತು. "ಏನಿದು ಸದ್ದು?' ಎಂದು ಅಂಗಡಿಯಾತನಲ್ಲಿ ವಿಚಾರಿಸಿದ. "ಅದಾ..? ಏನೂ ಇಲ್ಲ' ಎಂದು ಉತ್ತರಿಸಿದ ಚಾಯ್‌ವಾಲಾ. ಬೈಕ್‌ ಸವಾರನಿಗೆ ಯಾಕೋ ಭಯ. ಏನೋ ವಿಚಿತ್ರ ವಾತಾವರಣ ಇದೆ ಇಲ್ಲಿ. ಇವರ ಟೀನೂ ಬೇಡ, ಏನೂ ಬೇಡ ಎಂದು ನಿರ್ಧರಿಸಿ, ಅಲ್ಲಿಂದ ಕಾಲ್‌ಕೀಳಬೇಕೆಂದು, ತನ್ನ ಬೈಕ್‌ನತ್ತ ಓಡಿಬಂದ. ಬೈಕ್‌ ಸ್ಟಾರ್ಟ್‌ ಮಾಡಿ, ಹಿಂತಿರುಗಿ ನೋಡಿದರೆ, ಆ ಚಹಾದ ಅಂಗಡಿಯಲ್ಲಿ ಚಾಯ್‌ವಾಲನ ಜತೆಗೆ ಒಬ್ಬಳು ಹುಡುಗಿ ನಿಂತು, ಗಹಗಹಿಸಿ ನಗುತ್ತಿದ್ದಳು. ಮರುದಿನ ಆತ ಕಾಲೇಜಿನಲ್ಲಿ ವಿಚಾರಿಸಿದಾಗಲೇ ಸತ್ಯ ಗೊತ್ತಾಗಿದ್ದು; ಒಂದು ವರ್ಷದ ಕೆಳಗೆ ಕಾಲೇಜಿನ ವಿದ್ಯಾರ್ಥಿನಿ, ಆ ಚಾಯ್‌ವಾಲಾನನ್ನು ಪ್ರೀತಿಸುತ್ತಿದ್ದಳಂತೆ. ಅವರ ಪ್ರೀತಿಗೆ ಮನೆಯಲ್ಲಿ ಸಮ್ಮತಿ ಸಿಗದ ಕಾರಣ, ಟೀ ಸ್ಟಾಲ್‌ನಲ್ಲೇ ನೇಣು ಹಾಕಿಕೊಂಡಿದ್ದರಂತೆ!

2. ಮುಂಬೈನಲ್ಲಿದ್ದ ಆ ವ್ಯಕ್ತಿ 4 ವರ್ಷದ ನಂತರ ಊರಿಗೆ ಹೊರಟಿದ್ದª. ಅಂದು ಕಗ್ಗತ್ತಲ ಅಮವಾಸ್ಯೆ. ರಾತ್ರಿ 10 ಗಂಟೆಗೆ ತನ್ನ ಊರಿಗೆ ಹೊರಡುವ ಕೊನೆ ಬಸ್‌ನಿಂದ ಇಳಿದು ಅವನು ಅರ್ಧ ದೂರ ಕ್ರಮಿಸುವಾಗ ಹಿಂದಿನಿಂದ "ಹ್ವಾಯ್‌' ಎಂಬ ಧ್ವನಿ ಕೇಳಿತು. ಇವನು ನಿಂತ. ಹಿಂದಿನಿಂದ ಬಂದಾತ, "ಒಬ್ಬರೇ ಹೊರಟಿದ್ದೀರಲ್ಲಾ... ನಾನು ನಿಮ್ಮ ಜತೆ ಬರುತ್ತೇನೆ' ಎಂದಾಗ, ಇವನಿಗೆ ಜತೆಗಾರರು ಸಿಕ್ಕರಲ್ಲ ಎಂಬ ಧೈರ್ಯ ಬಂತು. ಟಾರ್ಚ್‌ ಬೆಳಕಿನಲ್ಲಿ ಇಬ್ಬರೂ ಹೊರಟರು. ಲೋಕದ ಸಮಾಚಾರಗಳನ್ನು ಮಾತಾಡುತ್ತಾ ಬರುವಷ್ಟರಲ್ಲಿ ಊರನ್ನು ತಲುಪಿಯಾಗಿತ್ತು. ಜತೆಗೆ ಬಂದವ, "ನನ್ನ ಮನೆ ಇಲ್ಲೇ ಬಂತು. ನಾನು ಹೋಗ್ತಿàನಿ' ಎಂದು ಪಕ್ಕದ ಹಾದಿಯಲ್ಲಿ ಹೊರಟ. "ಎಲ್ಲಿ ಮನೆ ಹೇಳಿ... ಅಲ್ಲಿಯ ತನಕ ಟಾರ್ಚ್‌ ಹಿಡಿದು ಬರುತ್ತೇನೆ' ಎಂದು ಮುಂಬೈವಾಲ ಹೇಳಿದಾಗ, "ಬೇಡ ಪರ್ವಾಗಿಲ್ಲ... ಈ ಹಾದಿಗೆ ಟಾರ್ಚ್‌ ಬಿಡಿ, ನಾನು ಹೋಗುತ್ತೇನೆ' ಎಂದ ಆತ. ಬಹುಶಃ ಆತ ಹತ್ತು ಮೀಟರ್‌ ನಡೆದಿದ್ದನಷ್ಟೇ. ಅಷ್ಟರಲ್ಲೇ ಆ ಆಕೃತಿ ಮರೆಯಾಗಿತ್ತು. ಅಸಲೀಗೆ ಈತ ಟಾರ್ಚ್‌ ಬಿಟ್ಟ ಕಡೆಯಲ್ಲಿ ಹಾದಿಯೇ ಇರಲಿಲ್ಲ. ಕೆಲ ತಿಂಗಳ ಕೆಳಗೆ, ಅದೇ ಲಾಸ್ಟ್‌ ಬಸ್‌ನಿಂದ ಅಲ್ಲೊಬ್ಬ ವ್ಯಕ್ತಿ ಮಡಿದಿದ್ದನಂತೆ.

ಲಕ್ಷ್ಮಿಕಾಂತ್‌ ಕುಲಕರ್ಣಿ

Trending videos

Back to Top