ನಿನ್ನನ್ನು ನಾನು ಅಕ್ಕಿಕಾಳಿನಷ್ಟು  ಪ್ರೀತಿಸುತ್ತೇನೆ!

Team Udayavani, Aug 28, 2018, 6:00 AM IST

11.jpg

ಪದೇ ಪದೆ ನಿನ್ನಲ್ಲಿ ಏಳುವ ಅನುಮಾನಗಳೇ ನನ್ನನ್ನು ಕ್ಷಣಕ್ಷಣಕ್ಕೂ ಚುಚ್ಚಿ ಚುಚ್ಚಿ ಕೊಲ್ಲುತ್ತಿವೆ. ನನ್ನನ್ನು ಹೀಗೆ ವಿಪರೀತ ಒತ್ತಡಕ್ಕೆ ಒಳಪಡಿಸಿ ಸಿಗುವುದಾದರೂ ಏನು? ನಾನು ಇನ್ನಷ್ಟು ದುಃಖಪಡುವುದು ನಿನಗಿಷ್ಟವೇ? 

ಹೃದಯ ದೇಗುಲದೊಡತಿಯೇ,
ನಮ್ಮಿಬ್ಬರ ಪ್ರೀತಿಯ ದೋಣಿ ಯಾವಾಗ ದಡ ಸೇರುತ್ತೋ ಗೊತ್ತಿಲ್ಲ! ಕಾರಣ; ಆಗಾಗ ಏಳುವ ಸಂಶಯ, ಅನುಮಾನವೆಂಬ ಬಿರುಗಾಳಿ ದೋಣಿಯನ್ನು ಮುಳುಗಿಸಿ, ತೇಲಿಸಿ ಹೊಯ್ದಾಡಿಸುತ್ತಲೇ ಇದೆ. ನಮ್ಮ ಮಧ್ಯೆ ಎಷ್ಟೆಲ್ಲ ನಡೆದಿದ್ದರೂ, ನೀನು ನಿಜದ ಪ್ರೀತಿಯ ಕುರಿತು ಪುರಾವೆ ಕೇಳುವುದು ಹಾಸ್ಯಾಸ್ಪದವೆನಿಸುತ್ತದೆ. “ನೀನು ನನ್ನನ್ನು ಎಷ್ಟು ಪ್ರೀತಿಸುತ್ತೀ?’ ಎಂದು ಕೇಳಿದರೆ ಏನು ಹೇಳಲಿ? ಅನಂತ ಸಾಗರದಷ್ಟು, ವಿಶಾಲ ಆಗಸದಷ್ಟು, ಸೂರ್ಯ-ಚಂದ್ರ ಇರುವವರೆಗೂ, ಅಸಂಖ್ಯ ತಾರೆಗಳು ಹೊಳಪು ನೀಡುವವರೆಗೆ.. ಎಂದೆಲ್ಲಾ ಆಗದ ಹೋಗದ ಸಂಗತಿಗಳಿಗೆ ನನ್ನ ಪ್ರೀತಿಯನ್ನು ಹೋಲಿಸಲಾರೆ. ಆದರೆ ಇಷ್ಟು ಮಾತ್ರ ಹೇಳಬಲ್ಲೆ; ನಾನು ನಿನ್ನನ್ನು ಅಕ್ಕಿಕಾಳಿನಷ್ಟು ಪ್ರೀತಿಸುತ್ತೇನೆ. ಅನ್ನವಿಲ್ಲದೇ ಬದುಕಿಲ್ಲ ಅಲ್ಲವೇ? ನನ್ನ ಎದೆಯಲ್ಲಿ ಎಳೆದೆಳೆದು ಹಿಂಡುವ ಹಿತವಾದ ನೋವಿನ ಮಿಡಿತ ನೀನಾಗಿರುವಾಗ ಬೇರೆ ಉಪಮೆ, ರೂಪಕ ಬೇಕಿಲ್ಲ ಎನಿಸುತ್ತೆ.

“ನಾನು ನಿನಗೆ ಏನಾಗಬೇಕು?’ ಎಂಬ ಪ್ರಶ್ನೆಯೇ ಬಾಲಿಶವೆನಿಸುತ್ತದೆ. ಹೌದು! ಒಪ್ಪಿಕೊಳ್ಳುವೆ. ಇಲ್ಲಿಯವರೆಗೂ ನಾನು ನಿನಗೆ ಪುಟ್ಟ ಉಡುಗೊರೆಯನ್ನೂ ಕೊಟ್ಟಿಲ್ಲ. ನೀನು ಕೇಳಿದ ದುಡ್ಡಿನ ವ್ಯವಸ್ಥೆಯನ್ನು ಮಾಡಲಾಗಲಿಲ್ಲ. ಖಂಡಿತ ಆ ಕೊರಗು ನನ್ನನ್ನು ಇಂದಿಗೂ ಕಾಡುತ್ತಿದೆ. ನನ್ನ ಅಸಹಾಯಕ ಪರಿಸ್ಥಿತಿ, ಹತಾಶ ಸ್ಥಿತಿಯ ಕುರಿತು ನನಗೆ ಖೇದವಿದೆ. ಹಾಗಂತ ಎಲ್ಲರೆದುರು ಕೈಯೊಡ್ಡುವ ಜಾಯಮಾನದವನಲ್ಲ ನಾನು. ಉಡುಗೊರೆಗಳೇ ಪ್ರೀತಿಯನ್ನು ಗಟ್ಟಿಗೊಳಿಸುತ್ತವೆ ಎನ್ನುವುದಾದರೆ ಅದಕ್ಕೆ ನನ್ನ ಸಮ್ಮತಿಯಿದೆ. ಖಂಡಿತ ಕೊಡಿಸುವೆ. ಎಷ್ಟೋ ವರ್ಷಗಳ ನಿರಂತರ ಪ್ರೀತಿ ನಮ್ಮದು. ನನಗಾಗಿ ನೀನು ಹಗಲಿರುಳು ಕಾದದ್ದಿದೆ. ಹಾಗೆಯೇ ನಿನ್ನ ಒಂದು ಕರೆಗೋಸ್ಕರ ನಾನು ಚಡಪಡಿಸಿ ಪರಿತಪಿಸಿದ್ದಿದೆ. ನಮ್ಮಿಬ್ಬರ ಪ್ರೀತಿ ಅದೆಷ್ಟೋ ಅಗ್ನಿಕುಂಡಗಳ ಪರೀಕ್ಷೆಯನ್ನೂ ದಾಟಿ ಬಂದಿರುವುದುಂಟು. ಹಾಗೆಂದ ಮೇಲೆ ನಾನು ನಿನಗೆ ಏನಾಗಬೇಕು, ನೀನು ನನಗೆ ಏನಾಗಬೇಕು ಎಂದು ಇಬ್ಬರಿಗೂ ಚೆನ್ನಾಗಿ ಗೊತ್ತಿರುವಂಥದ್ದೇ ಆಗಿದೆ. 

ಪದೇ ಪದೆ ನಿನ್ನಲ್ಲಿ ಏಳುವ ಅನುಮಾನಗಳೇ ನನ್ನನ್ನು ಕ್ಷಣಕ್ಷಣಕ್ಕೂ ಚುಚ್ಚಿ ಚುಚ್ಚಿ ಕೊಲ್ಲುತ್ತಿವೆ. ನನ್ನನ್ನು ಹೀಗೆ ವಿಪರೀತ ಒತ್ತಡಕ್ಕೆ ಒಳಪಡಿಸಿ ಸಿಗುವುದಾದರೂ ಏನು? ನಾನು ಇನ್ನಷ್ಟು ದುಃಖಪಡುವುದು ನಿನಗಿಷ್ಟವೇ? ಒಂದು ಖುಷಿಯಾದರೂ ನನ್ನ ಜೊತೆಯಿದೆಯಲ್ಲ, ನನ್ನ ನೋವಿಗೆ ಸ್ಪಂದಿಸುತ್ತಿದೆಯಲ್ಲ ಎನ್ನುವ ಸಂತಸದಲ್ಲಿ ಬರವಣಿಗೆ, ಬದುಕನ್ನು ಇಷ್ಟಪಟ್ಟು ಅಪ್ಪಿಕೊಳ್ಳುತ್ತಿದ್ದೇನೆ. ಹೇಳು ಒಲವೇ… ನಾನು ಏನು ಮಾಡಲಿ? 

ನಾಗೇಶ್‌ ಜೆ. ನಾಯಕ 

ಟಾಪ್ ನ್ಯೂಸ್

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.