CONNECT WITH US  

ಥ್ರಿಲ್ಲರ್‌ ಕತೆಗಳು

ಈ ಕಥೆಗಳನ್ನು ಓದುತ್ತಿದ್ದಂತೆಯೇ ನಿಮಗೆ ಭಯವಾದರೆ, ಮೈ ಜುಂ ಅಂದರೆ ನಾವದಕ್ಕೆ ಜವಾಬ್ದಾರರಲ್ಲ!

1. ಅದೊಂದು ನಿರ್ಜನ ದಾರಿ. ಅಂದು ರಾತ್ರಿ ಮುದುಕನೊಬ್ಬ ಅನಿವಾರ್ಯವಾಗಿ ಆ ಮಾರ್ಗದಲ್ಲಿ ಸಾಗಿದ್ದ. ಸ್ವಲ್ಪ ದೂರದಲ್ಲಿ ಇಬ್ಬರು ವಯಸ್ಕರು ಜೊತೆಯಾದರು. ಅವರು ಮುದುಕನಿಗಿಂತಲೂ ಭಯದಲ್ಲಿದ್ದರು. ಸ್ವಲ್ಪ ದೂರದಿಂದ ವಿಚಿತ್ರ ಆಕೃತಿಯೊಂದು ಎದುರಾಯಿತು. ಹುಡುಗರು ಹೆದರುತ್ತ "ಅಜ್ಜಾ, ಅಲ್ನೋಡು, ದೆವ್ವ ಬರ್ತಿದೆ. ನಿನಗೆ ಭಯ ಆಗ್ತಿಲ್ವಾ?' ಎಂದ್ರು. ಅಜ್ಜ ಶಾಂತಚಿತ್ತದಿಂದ 'ದೆವ್ವಕ್ಕೆ ದೆವ್ವ ಹೆದ್ರಲ್ಲ ಕಣೊ!' ಎಂದ.

2. ಅವನು ಕುಡಿದ ಮತ್ತಿನಲ್ಲಿ ಆ್ಯಕ್ಸಿಡೆಂಟ್‌ ಮಾಡಿದ. ಎರಡು ವರ್ಷದ ಮಗು ಸ್ಥಳದಲ್ಲೇ ಪ್ರಾಣ ಬಿಟ್ಟಿತು. ಅದರ ತಾಯಿ ತಲೆಗೆ ಪೆಟ್ಟು ತಿಂದು ನೀರು ನೀರು ಎನ್ನುತ್ತಿದ್ದರೂ ಕೇಳಿಸಿಕೊಳ್ಳದೇ ಅಲ್ಲಿಂದ ಪರಾರಿಯಾದ. ಹೇಗೋ ಕೇಸು ಮುಚ್ಚಿಹೋಯಿತು. ಅದೊಂದು ದಿನ ಅವನ ಮಗು ಗೊಂಬೆಯನ್ನು ಸಮಾಧಾನ ಮಾಡುತ್ತ ಆಟವಾಡುತ್ತಿತ್ತು. ಹತ್ತಿರ ಬಂದು ಗೊಂಬೆಯನ್ನು ನೋಡಿದ. ಗೊಂಬೆಯ ಕಣ್ಣಲ್ಲಿ ನೀರು ಜಿನುಗುತ್ತಿತ್ತು. 

3. ಅವಳು ಹಳೆಯದನ್ನು ಮರೆತು ಮದುವೆಯಾಗಿದ್ದಳು. ಗಂಡನ ಮನೆಗೆ ಹೋಗುವ ಮುಹೂರ್ತ ಮತ್ತೆ ಮತ್ತೆ ಮುಂದೂಡತ್ತಲೇ ಬಂತು. ಬೇಸರ ಕಳೆದುಕೊಳ್ಳಲು ಮದುವೆಯ ವಿಡಿಯೋ ನೋಡುತ್ತಿ¨ªಾಗ ತಾಳಿ ಕಟ್ಟುವ ದೃಶ್ಯವನ್ನು ಪದೇಪದೆ ನೋಡಿದಳು. ಅವಳಿಗೆ ತಾಳಿ ಕಟ್ಟಿದ ವರ ತನ್ನಿಂದ ಕೊಲ್ಲಲ್ಪಟ್ಟ ಹಳೆಯ ಪ್ರಿಯತಮನಾಗಿದ್ದನ್ನು ಕಂಡು ಶಾಕ್‌ ಆದಳು!

 ಅಶೋಕ ವಿ. ಬಳ್ಳಾ

Trending videos

Back to Top