ನೋವ ದಾಟಿ, ನಗೆಯ ಮೀಟಿ…


Team Udayavani, Sep 4, 2018, 6:00 AM IST

4.jpg

ಸೂರ್ಯ ಪುನಃ ಮೂಡುತ್ತಾನೆ, ಸಂಜೆ ಮುಳುಗುತ್ತಾನೆ. ಜಗತ್ತೇನೋ ಹಾಗೆಯೇ ಇದೆ. ಬದಲಾಗಿರುವುದು ನಿನ್ನ ಜಗ ಮಾತ್ರವೇ. ಹೌದು, ಮುಂದೆ ನಿನ್ನ ಬದುಕು ಏನಾಗಬಹುದು ಹೇಳು?

ಗೋಡೆಯನ್ನೇ ಅದೆಷ್ಟು ಹೊತ್ತಿನಿಂದ ದಿಟ್ಟಿಸುತ್ತಿದ್ದಳ್ಳೋ. ಅವಳು ಸೊನ್ನೆಯೊಳಗೆ ಹೋಗಿ ಸೊನ್ನೆಯಾಗಿ ಅವಿತಿದ್ದಳು. ಬೆಳಗೆದ್ದರೆ ಬಾಕ್ಸ್‌ನಲ್ಲಿ ಒಂದಷ್ಟು ಊಟ ತುರುಕಿಕೊಂಡು ಹೊರಬಿದ್ದರೆ ಮನೆ ಅಂತ ಕಾಣುವುದೇ ನಿದ್ದೆ ಸಮಯಕ್ಕೆ ಸ್ವಲ್ಪ ಮುಂಚೆ ಸಿಗುವ ಒಂದು ತಾಸಿನಲ್ಲಿ. ಇಲ್ಲಿ ಯಾರ ಗೋಳನ್ನೂ ಯಾರೂ ಕೇಳುವುದಿಲ್ಲವೆಂಬ ಅಳಲು. ಕೇಳಿಸುವುದು ಧಾವಂತದ ಹೆಜ್ಜೆಯ ಸಪ್ಪಳವಷ್ಟೇ; ಕಾಣುವುದು ಆತುರದ ಓಟಗಳು ಮಾತ್ರವೇ. ಬಿಡುವು ಮಾಡಿಕೊಂಡು ಇವಳನ್ನೇ ನೋಡಲೆಂದು ಟ್ರಾಫಿಕ್‌ ಮಹಾಸಾಗರವನ್ನು ಈಜಿ ಬಂದಿದ್ದೆ. ಇವಳ್ಳೋ ಗೋಡೆಗೆ ಕಣ್ಣು ಹಚ್ಚಿ ಕೂತಿದ್ದಾ ಳೆ.

  ಅವಳು ಹಾಗಿದ್ದಳೆಂದ ಮಾತ್ರಕ್ಕೆ ಚಿಕ್ಕಮ್ಮನೇನೂ ಸುಮ್ಮನೆ ಕೂತಿರಲಿಲ್ಲ. ನಾಲ್ಕಾರು ಸಲ ಕೌನ್ಸೆಲಿಂಗ್‌ ಮಾಡಿಸಿದ್ದಾಳೆ. ಒಂದಷ್ಟು ದೇಗುಲಗಳ ನೆಲಗಳಿಗೆ ಹಣೆಹಚ್ಚಿಸಿ ಬಂದಿದ್ದಾಳೆ. ತೀರಾ ಅಘಾತಗೊಂಡವಳು, ಇವೆಲ್ಲ ಕಾರಣಗಳಿಂದ ಶೇ.5ರಷ್ಟು ಗೆಲುವಿನಲ್ಲಿದ್ದಾಳೆ. ಇದೆಲ್ಲಾ  ಆಗಿ ನಾಲ್ಕಾರು ತಿಂಗಳೇ ಕಳೆದಿರಬೇಕು. ಬಿದ್ದ ಪೆಟ್ಟು ಬಲವಾದದ್ದೇ, ತೀರಾ ತೀರಾ ಬದುಕೆಂದು ಬಲವಾಗಿ ಅಂದುಕೊಂಡದ್ದು. ಜೀವನದುದ್ದಕ್ಕೂ ಜೊತೆ ಸಾಗುತ್ತೇವೆ ಅಂದುಕೊಂಡದ್ದು ನಿರ್ದಯವೆನಿಸುವ ರೀತಿಯಲ್ಲಿ ತಿರುವು- ಮುರುವಾಗಿದೆ. ಅದೊಂದು ರೀತಿಯ ಆಘಾತವಾದಂತಾಗಿ ಕಲ್ಲಾ ಗಿ ಕುಳಿತಿದ್ದಾಳೆ. ಅತ್ಯಾಪ್ತರೆಲ್ಲಾ  ಅದೆಷ್ಟೋ ಸಲ ಕದಲಿಸಲೆತ್ನಿಸಿದರೂ, ಆ ಕ್ಷಣಗಳಿಗೆ ಬಲವಂತದ ನಗೆ ಹೊಮ್ಮಿಸುತ್ತಾಳಷ್ಟೇ.

  ನಾವೆಲ್ಲಾ  ಸೋದರ ಸಂಬಂಧಿಗಳು ಸೇರಿದರೆ ರಾತ್ರಿ ಮೂರಾದರೂ ಮುಗಿಯವುದಿಲ್ಲ, ನಮ್ಮ ಕಾಡುಹರಟೆಗಳು. ಹೊಟ್ಟೆ ಹಿಡಿದು ಹೊರಳಾಡಿ ನಕ್ಕ ಕ್ಷಣಗಳು, ಅದೇನೋ ಗಾಸಿಪ್‌ಗ್ಳು, ಯಾರ ಮುಂದೆಯೂ ಬೈದುಕೊಳ್ಳಲಾಗದವರನ್ನು ಮನಸಾ ಬೈದುಕೊಂಡು ಹಗುರಾಗುತ್ತಿದ್ದ ದೃಶ್ಯಗಳು ಕಣ್ಮುಂದೆ ಬಂದವು. ಅಷ್ಟು ದೊಡ್ಡದಾಗಿ ನಗುತ್ತಿದ್ದವಳು ಇವಳೇನಾ ಎನ್ನುವಷ್ಟು ಕಲ್ಲಾ ಗಿ ಕುಳಿತಿದ್ದಳು.

  ಇವಳನ್ನು ಮೃದು ಮಾಡುವುದಾದರೂ ಹೇಗೆ? ಇವಳನ್ನು ಮಾತಾಡಿಸುವ ಶಕ್ತಿ ನನಲ್ಲಿರಲಿಲ್ಲ. ಮಾತಾಡಿಸಿದರೆ ಅವಳಿಗಿಂತ ಹೆಚ್ಚು ನಾನೇ ಕುಸಿದುಹೋಗುವುದಂತೂ ನಿಶ್ಚಿತ. ಅಲ್ಲೇ ಇದ್ದ ಪೇಪರ್‌- ಪೆನ್‌ ಹಿಡಿದು ಸುಮಾರು ಇಪ್ಪತ್ತೈದು ನಿಮಿಷ ತೋಚಿದ್ದನ್ನು ಗೀಚಿ ಅವಳ ಕೈಗಿತ್ತು, “ಓದಿ ಕೆಳಗೆ ಬಾ… ಒಟ್ಟಿಗೆ ಟೀ ಕುಡಿಯಲು ಹಾಲ್‌ನಲ್ಲಿ ಕಾಯುತ್ತಿರುತ್ತೇನೆ’ ಎಂದು ಹೇಳಿ ರೂಮ್‌ನಿಂದ ಹೊರಬಂದೆ.

ನಾನು ಅದರಲ್ಲಿ ಬರೆದದ್ದು ಇಷ್ಟಿತ್ತು…
ದೇವರು ಮನುಷ್ಯನನ್ನು ಸೃಷ್ಟಿಸಿದ ಹೊಸತರಲ್ಲಿ ಮನುಷ್ಯನಿಗೂ ದೇವರಷ್ಟೇ ಶಕ್ತಿಯಿತ್ತು. ಎಷ್ಟಾದರೂ ಮನುಷ್ಯ ನೋಡಿ… ತನ್ನ ಶಕ್ತಿಯನ್ನು ದುರುಪಯೋಗ ಮಾಡಲು ಆರಂಭಿಸಿದ. ಯೋಚಿಸಿದ ದೇವರು ಸ್ವಲ್ಪ ಶಕ್ತಿ ಹಿಂಪಡೆದು ಅಡಗಿಸಿಡಲು ನಿರ್ಧರಿಸಿದ. ಪರ್ವತದ ಒಡಲು, ಭೂಗರ್ಭ, ಸಾಗರದ ಒಡಲಾಳ… ಹೀಗೆ ಅದರಲ್ಲಿ ಅಡಗಿಸಿದರೂ ಮನುಷ್ಯ ಅದನ್ನು ತಲುಪಿಯೇ ತೀರುತ್ತಾನೆ. ಹಾಗಾಗಿ, ಆ ಶಕ್ತಿಯನ್ನು ಮನುಷ್ಯನ ಮನಸಿನಲ್ಲಿ ಅಡಗಿಸಿದ. ಈ ಶಕ್ತಿಯ ಹರಿವಿಗೆ ಎರಡೇ ರಹದಾರಿಗಳು. ಒಂದು ಒಬ್ಬರಿಗಾಗಿ ಅಥವಾ ಯಾವುದೊ ಒಂದು ಗಹನವಾದ ಉದ್ದೇಶಕ್ಕಾಗಿ ಆಳವಾಗಿ ಮಿಡಿಯುವ ಮನಸ್ಸು ಮತ್ತು ಇನ್ನೊಂದು ಒಡೆದ ಮನಸ್ಸು.

  ಯಾವುದೋ ಒಂದು ಗಹನವಾದ ಉದ್ದೇಶಕ್ಕಾಗಿ ಅಥವಾ ಒಬ್ಬರಿಗಾಗಿ ಸಂಪೂರ್ಣವಾಗಿ ಅರ್ಪಿತವಾದಾಗ ನಮ್ಮೊಳಗೆ ಅಪಾರ ಶಕ್ತಿ ಬಿಡುಗಡೆಯಾಗುತ್ತದೆ. ಅವರಿಗಾಗಿ ಅಥವಾ ಆ ಉದ್ದೇಶಕ್ಕಾಗಿ ಚಂದ್ರನನ್ನು ಭೂಮಿಗಿಳಿಸುವ ಪ್ರಯಾಸವೂ, ಅಸಾಧ್ಯಗಳೂ ಸುಲಭಸಾಧ್ಯವೆನಿಸುವುದು… ಇದು ಶಕ್ತಿಯ ಬಿಡುಗಡೆಯ ಸ್ವರೂಪ. ಸಂಬಂಧದಲ್ಲಿರುವವರಿಗೆ ಮಾತ್ರ ಸೀಮಿತವಾಗದೆ, ಇತರರಿಗೂ ಹರಡುವುದು ಇನ್ನೂ ಅದ್ಭುತ… ಇದು ಸಾಧ್ಯವಾ ಎಂದು ಶಂಕಿಸುವವರಿಗೆ ಸಂಶೋಧನೆಗಳು ಶಕ್ತಿಯ ಪ್ರಸಾರವನ್ನು ಸಾಬೀತುಪಡಿಸಿವೆ ಎಂದು ಹೇಳಬಹುದು.

  ಎರಡನೆಯದು ಒಡೆದ ಮನಸ್ಸು. ಮುರಿದ ಪ್ರೇಮದಿಂದಲೇ ಮನಸ್ಸು ಛಿದ್ರವಾಗಬೇಕಂದೇನೂ ಇಲ್ಲ. ಆಳವಾದ ಸ್ನೇಹ, ನಂಬಿಕೆಯೇ ಜೀವಾಳವಾದ ಬಂಧಗಳು ಮುರಿದಾಗ ಮನಸ್ಸು ಛಿದ್ರವಾಗುತ್ತವೆ. ನಂಬಿದವರ ಮೇಲೆ ಗೌರವ ಕಳೆದುಹೋಗುತ್ತದೆ. ಆ ಹೊತ್ತಿನಲ್ಲಿ ಮನಸ್ಸು, ಕಡಿದಾದ ತುತ್ತ ತುದಿಯಲ್ಲಿ ನಿಂತಿರುತ್ತದೆ. ಅಲ್ಲಿಂದ ಬೀಳಲೂಬಹುದು; ಹಾರಲೂಬಹುದು! ಏಕೆಂದರೆ, ಕಳೆದುಕೊಳ್ಳಲು ಇನ್ನೇನೂ ಉಳಿದಿರುವುದಿಲ್ಲ. 

  ನಮ್ಮ ಮುಂದೆ ಏನೂ ಉಳಿದಿರುವುದಿಲ್ಲ, ಸಂಪೂರ್ಣ ಖಾಲಿ. ಹುಟ್ಟಿದಾಗಿನಿಂದ ಲೋಕರೂಢಿಗಳಲ್ಲಿ ಹೂತುಹೋದ ಆತ್ಮವನ್ನು ಕಂಡುಕೊಳ್ಳುವ ಮತ್ತು ತೊಳೆದು ಹೊಳೆಸಬಹುದಾದ ಪ್ರಯತ್ನಗಳು ಸಾಗುತ್ತಿರಬೇಕಷ್ಟೇ. ಏಕೆ ಹೀಗಾಯಿತು? ನಿಜವಾಗಿ ನನಗೇನು ಬೇಕು? ಎಂದು ಆತ್ಮಾವಲೋಕನ ಮಾಡಿಕೊಳ್ಳುವ, ಅಪರಿಮಿತ ಭಾವನಾತ್ಮಕ ಶಕ್ತಿಯೊಂದು ಬೇಕು.

  ವಿಶ್ವಾದ್ಯಂತ ಕಲಾವಿದರೆಲ್ಲರೂ ಆ್ಯಮಿ ವೈನ್‌ ಹೌಸ್‌, ಅಲೆಕ್ಸಾಂಡರ್‌, ಷೇಕ್ಸ್‌ಪಿಯರ್‌, ಅಡೀಲ್‌ ಮುಂತಾದವರು ತಮ್ಮ ನೋವಿನ ಕಲೆಗಳನ್ನು ತೋರಿಸಿದ್ದಾರೆ. ನೋವನ್ನು ಅಪ್ಪಿಕೊಂಡು, ಆ ಭಾವನಾತ್ಮಕ ಶಕ್ತಿಯಿಂದಾಗಿಯೇ ತಮ್ಮ ಕಲೆ ಅರಳಿರುವ ಬಗ್ಗೆ ತಮ್ಮ ಪ್ರತಿಯೊಂದು ಕಾರ್ಯದಲ್ಲೂ ಜಗತ್ತಿಗೆ ಹೇಳಿದ್ದಾರೆ. ಅಷ್ಟೇ ಏಕೆ, ದ.ರಾ. ಬೇಂದ್ರೆ, ಕೆಎಸ್‌ನ ಅವರಂಥ ನಮ್ಮ ನೆಲದ ಕವಿಗಳೂ ಅಂಥ ನೋವನ್ನು ನುಂಗಿಕೊಂಡೇ, ಕಾವ್ಯದ ಬೆಳಕನ್ನು ನಾಡಿಗೆ ಕೊಟ್ಟವರು. 

  ಸೂರ್ಯ ಪುನಃ ಮೂಡುತ್ತಾನೆ, ಸಂಜೆ ಮುಳುಗುತ್ತಾನೆ. ಜಗತ್ತೇನೋ ಹಾಗೆಯೇ ಇದೆ. ಬದಲಾಗಿರುವುದು ನಿನ್ನ ಜಗ ಮಾತ್ರವೇ. ಹೌದು, ಮುಂದೆ ನಿನ್ನ ಬದುಕು ಏನಾಗಬಹುದು ಹೇಳು? ಮುಂದಿರುವುದು, ಎರಡೇ ಆಯ್ಕೆಗಳು ಮಾತ್ರವೇ: ಹೀಗೆ ನೋವಿನಲ್ಲೇ ಬದುಕು ಸವೆಸುವುದು, ಎರಡನೆಯದು ನೋವನ್ನು ಅಪ್ಪಿಕೊಂಡು ಕಣ್ಮುಂದೆ ಛಿದ್ರಗೊಂಡು ಬಿದ್ದಿರುವ ಬದುಕನ್ನು ಮತ್ತೆ ಕಟ್ಟಿ ಮುನ್ನಡೆಯುವುದು.

   ನೀನು ಇಚ್ಛಿಸಿದ ಫ್ಯಾಷನ್‌ ಡಿಸೈನಿಂಗ್‌ ನಿನಗಾಗಿ ಕಣ್ತೆರೆದು ಕಾದಿದೆ. ಮಡುಗಟ್ಟಿರುವ ಭಾವನಾತ್ಮಕ ಶಕ್ತಿಯ ಹರಿವಿಗೆ ಅವಕಾಶ, ಅರ್ಥ ಕಲ್ಪಿಸುವ ಸದಾವಕಾಶ ನಿನ್ನ ಮುಂದಿದೆ. ಅದೊಂದು ಕಡಿಮೆ, ನಿನ್ನನ್ನು ಪದೇಪದೆ ಏಳಿಸುತ್ತಲೇ ಇರಲಿ ಬಿಡು…

  ನಿನ್ನೊಂದಿಗೆ ಟೀ ಕುಡಿದು ಹೊರಡಲು ಹಾಲಿನಲ್ಲಿ ಕಾಯುತ್ತಿರುತ್ತೇನೆ…

ಎರಡು ತಾಸಾಯಿತು…
  ರೂಮಿನ ಬಾಗಿಲು ತೆರೆದ ಸಪ್ಪಳವಾಯಿತು. ಇಬ್ಬರೂ ಆ ಕಡೆ ದಿಟ್ಟಿಸಿದೆವು. ನನ್ನ ನಿರೀಕ್ಷೆಯಂತೆ ಆಕೆ ಒಟ್ಟಿಗೆ ಟೀ ಕುಡಿಯಲು ಬಂದಿದ್ದಳು. ಚಿಕ್ಕಮ್ಮ ಟೀ ತರಲು ಅಡುಗೆ ಕೋಣೆಗೆ ಓಡಿದಳು. ಸೆರಗು ಕಣ್ಣಿಗೆ ಒತ್ತಿದ್ದು ಮಾತ್ರ ಸ್ಪಷ್ಟವಾಗಿತ್ತು.

– ಮಂಜುಳಾ ಡಿ.

ಟಾಪ್ ನ್ಯೂಸ್

Hubli; Dingaleshwar Swamiji received payment to compete: Yatnal alleges

Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Hubli; Dingaleshwar Swamiji received payment to compete: Yatnal alleges

Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.