CONNECT WITH US  

ನೀ ಆಡಿದ್‌ ಮಾತೆಲ್ಲಾ ಬರೀ ಸುಳ್ಳಾ?

ನಿಂಗೋಸ್ಕರ ಇಷ್ಟ್ ದಿವಸ್‌ ಕಣ್ಣೀರಾಗ ಕೈ ತೊಳ್ದಿನಿ. ಆದ್ರೂ ನಿಂಗ್‌ ಅದರ್‌ ಅರಿವೇ ಇಲ್ಲ. ನಾನು ಬ್ಯಾರೇರ್‌ ಹಂಗ ಬರೀ ಟೈಂಪಾಸ್‌ಗೆ ನಿನ್ನ ಪಿರುತಿ ಮಾಡಿಲ್ಲ ತಿಳಿತಾ.. ನಾ ಬೇರೇರ್‌ ಹಂಗ್‌ ಬಣ್ಣ ಹಚ್ಕೊಂಡು ಪಿರುತಿ ಮಾಡಿದ್ರೆ ಮರ್ಥ್ ಬಿಡ್ತಿದ್ದೆ.

ನೋಡ್ಲಾ ಸಂತಾ.. ನೀ ಅಂದ್ರ ನಂಗ್‌ ಸಿಕ್ಕಾಪಟ್ಟೆ ಇಷ್ಟ ಅಂತ ನಿಂಗೂ ಗೊತ್ತದ. ನಿನ್ನ ನಾ ಎಷ್ಟ್ ಪಿರುತಿ ಮಾಡ್ತೀನಿ ಅಂತಾನು ನಿಂಗ್‌ ಗೊತ್ತು. ಆದ್ರೂ ನೀ ಇತ್ತಿತ್ಲಾಗಾ ಒಂಥರಾ ಆಡ್ತಿದಿ. ಯಾಕ್‌ ಅಂತ ನಂಗೂ ಗೊತ್ತಿಲ್ಲ. ನೋಡೂ, ಪಿರುತಿ ಅಂದ್ರೆ ಏನ್‌ ಅಂದ್ಕೊಂಡಿಯಾ? ಬಾ ಅಂದಾಗ ಬರೋಕೆ, ಹೋಗು ಅಂದಾಗ ಹೋಗೋಕ್‌ ಆದೇನು ಅದೇನ್‌ ಆಟದ್‌ ವಸ್ತು ಅಲ್ಲ. ನೀ ಆಡೋ ಮಾತ್‌ ಹೆಂಗ್‌ ಆದ ಅಂದ್ರೆ, ನೀ ಅಂತೂ ಸಾನೆ ಬ್ಯುಸಿ ಇದೀಯಾ. ನಂಗೇನೂ ಕ್ಯಾಮೆ ಇಲ್ಲ ಅನ್ನೋ ಹಂಗ್‌ ಆಡ್ತಿದೀಯಾ. ಯಾಕ್‌ ಇಷ್ಟು ದಿನ ನನ್ನ ಮ್ಯಾಲ ನಿಂಗ್‌ ಪಿರುತಿ ಇತ್ತು, ಈಗ್‌ ಇಲ್ವಾ? ಎಲ್‌ ಹೋತ್‌ ನಿನ್‌ ಪಿರುತಿ..,, ಏನೋ ಪಿಲಾನ್‌ ಮಾಡಿಯಾ ನೀನು ಅಂತ ಕಾಣಾ¤ದ. ಹೋಗ್ಲಿ ಬಿಡು.

ಅಲ್ಲ ಕಣ ಸಂತಾ, ಏನ್‌ ಅಂದೆ ನೀ ಅವತ್ತು? ನೀ ನನ್ನ ಪ್ರಾಣ ಕಣೆ ಜಾನು. ನಿನ್‌ ಬಿಟ್‌ ಇರಂಗಿಲ್ಲ ನಾನು. ನೀ ಚೆಲೋ ಇರ್ಬೇಕು ಅಂತ ಅಂದ್ಯೋ, ಇಲ್ವೋ? ಆ ಮಾತೆಲ್ಲ ಈಗ್‌ ನಿಂಗ್‌ ನೆನಪಿಲ್ವಾ ದೊರೆ. ಎಷ್ಟ್ ಸಲೀಸಾಗಿ ಹೇಳಾಕತ್ತಿ ನೋಡು ನನ್ನ ಬಿಟ್‌ ಬಿಡು, ನಿನ್‌ ದಾರಿ ನೀ ನೋಡ್ಕೊà ಅಂತಾ.. ಯಾಕ್‌ ನಿಂಗ್‌ ಇಷ್ಟ್ ಬೇಗ ನಾ ಬೇಡಾದ್ನಾ? ಹಂಗದ್ರ ನೀ ಆಡಿದ್‌ ಮಾತೆಲ್ಲ ಬರೇ ಸುಳ್ಳ? 

ನನ್ನ ಜೀವನದಾಗ್‌ ಯಾಕ್‌ ಬಂದೆ ನೀ. ನಾ ಎಷ್ಟ್ ಅರಾಮಾಗಿದ್ದೆ ಗೊತ್ತಾ ನಿಂಗ್‌. ನೀ ಬಂದ್ಮೇಲೆ ಎಷ್ಟೆಲ್ಲ ಕನ್ಸ್‌ ಕಟ್ಟಿàನ್‌ ನಾ. ಅದೆ°ಲ್ಲ ನುಚ್ಚುನೂರ್‌ ಮಾಡೋಕ್‌ ಹೊರಿr ನೀನು. ನಿಂಗೇನು ಅನ್ಸಂಗಿಲ್ವಾ.. ನೋಡೂ ನಂಗೆ ನಿನ್‌ ಮರೆಯೋಕ್‌ ಆಗಲ್ಲ ಅಂತೇನೂ ಅಲ್ಲ. ಆ ದ್ಯಾವ್ರು ಎಲ್ಲರಿಗೂ ಮರೆವು ಅನ್ನೋ ವರಾನ ಕೊಟ್ಟಾನಾ ತಿಳ್ಕೊ.. ನಿನ್ನ ಮರಿತೀನಿ ನಾ, ಆದ್ರೆ ನೀ ನಂಗ್‌ ಇಷ್ಟೆನ್ನ ನಂಬ್ಸಿ ಮೋಸ ಮಾಡಿ ಅಲಾ ಅದ್ನ ನಾ ಯಾವತ್ತು ಮರೆಯಲ್ಲ. ತಿಳೀತಾ? ನಿಂಗೆ ಖರೇನಾ ಮನ್ಸು ಅನ್ನೋದು ಇದ್ದಿದ್ರ ನೀ ಈ ಥರ ಎಲ್ಲನೂ ಸಲೀಸಾಗಿ ಮರಿತಾ ಇರ್ತಿರಲಿಲ್ಲ. ನಿನ್‌ ಆಡಿದ್‌ ಬಣ್‌ಬಣ್ಣದ ಮಾತ್‌ ನೆಸ್ಕೊಂಡ್ರ ಕರುಳ್‌ ಕಿತ್ಕೊಂಡ್‌ ಬರುತ್ತಾ.

ನಿಂಗೋಸ್ಕರ ಇಷ್ಟ್ ದಿವಸ್‌ ಕಣ್ಣೀರಾಗ ಕೈ ತೊಳ್ದಿನಿ. ಆದ್ರೂ ನಿಂಗ್‌ ಅದರ್‌ ಅರಿವೇ ಇಲ್ಲ. ನಾನು ಬ್ಯಾರೇರ್‌ ಹಂಗ ಬರೀ ಟೈಂಪಾಸ್‌ಗೆ ನಿನ್ನ ಪಿರುತಿ ಮಾಡಿಲ್ಲ ತಿಳಿತಾ.. ನಾ ಬೇರೇರ್‌ ಹಂಗ್‌ ಬಣ್ಣ ಹಚ್ಕೊಂಡು ಪಿರುತಿ ಮಾಡಿದ್ರೆ ಮರ್‌¤ ಬಿಡ್ತಿದ್ದೆ. ಆದ್ರೆ ನಾ ಹಂಗ್‌ ಯಾವತ್ತೂ ಮಾಡಿಲ್ಲ. ನನ್ನ ಅವ್ವ ಅಪ್ಪಯ್ಯಗಿಂತ ಜಾಸ್ತಿ ನಿನ್‌ ಪಿರುತಿ ಮಾಡೀನ್‌ ಕಣಾ.. ನೋಡೂ ಕಾಲ ಯಾವಾಗ್ಲೋ ಹಿಂಗ ಇರಲ್ಲ. ನಾಳೆ ನಂಗೂ ಒಂದೂ ಒಳ್ಳೆ ಕಾಲ ಬರುತ್ತಾ ಅಂತ ಕಾಯಾಕತ್ತಿನಿ. ಪ್ರಪಂಚನೆ ಹಿಂಗ್‌ ಅನ್ಸುತ್ತಾ ಬದಲಾವಣೆ ಕೇಳ್ತಾದ. ಬದಲಾವಣೆ ಜಗದ ನಿಯಮ ಐತಿ ಒಪ್ಕೋತೀನಿ. ಆದ್ರ ಪಿರುತಿನು ಕಾಲ ಕಾಲಕ್ಕೆ ಬದಲಾಗ್‌ತೈತಿ ಅಂತ ನಂಗ್‌ ಗೊತ್ತಿರ್ಲಿಲ್ಲ.

ನನ್ನ ಹೃದಯದ ತುಂಬಾ ಯಾರು ಅಳಿಸೋಕ್‌ ಆಗೆª ಇರೋ ಅಷ್ಟ್ ನೋವ್‌ ತುಂಬೊRàಡ್‌ ಹೊಂಟಿನಿ. ಅಳ್‌ ಬಾರೊªà ಅಂತ ಅಂದಕೊಂಡ್ರು ಕಣ್ಣಾಗ್‌ ಮಾತ್ರ ನೀರು ನಿಲ್ತಿಲ್ಲ. ಅದೆಷ್ಟ್ ಅಳ್ಬೇಕೋ ಇವತ್ತಿಗ ಅತ್ತು ಸುಮ್ನಾಗಿºಡನಾ ಅಂತ ಅನ್‌ಸೈತಿ. ನಂಗ್‌ ಅನ್ಸಿದಂಗೆ ನಾ ನಿನ್ನ ಸಾನೆ ಪಿರುತಿ ಮಾಡಿದ್ದೇ ತಪ್ಪಾತೇನೋ. ಆ ನಮ್ಮಪ್ಪ ದ್ಯಾವ್ರಿಗೂ ನನ್‌ ಮ್ಯಾಲ್‌ ಕ್ವಾಪ ಬಂತ್‌ ಅನ್ಸುತ್‌. ಅದ್ಕೆà ನನ್ನಿಂದ ನಿನ್ನ ದೂರ ಮಾಡಕತ್ತಾನೆ. ಮಾಡ್ಲಿà ಬುಡು. ಯಾರ್‌ ಯಾರ್‌ ಹಣೇಲಿ ಏನೇನ್‌ ಆಗ್ಬೇಕು ಅದೇ ಆಗ್ತದಾ.. ಕಡೆದಾಗೂ ಒಂದ್‌ ಮಾತ್‌ ಹೇಳೈತಿ ಕೇಳ್‌ಸ್ಕೋ ದೊರೆ, ನನ್‌ ಕಣ್ಣಾಗ ಸುರಿತಿರೋ ಒಂದ್‌ ಒಂದ್‌ ಹನಿ ಕಣ್ಣೀರು ನಿನ್‌ ಹೆಸ್ರ ಹೇಳ್‌ತೈತಿ ಕಣ. ಅದೇನೋ ಇಂಗ್ಲಿಷ್‌ನಾಗ್‌ ಅಂತಾರಲ, ಐ ಲವ್‌ ಯು. ಐ ಮಿಸ್‌ ಯು ಸಂತಾ...

ಇಂತಿ ನಿನ್‌ ಪಿರುತಿಯಾ 

ಜಾನು ಸುನೀತ ರಾಥೋಡ್‌
 


Trending videos

Back to Top