ಚಿನ್ಮಯಿ ಕೀ ಬಾತ್‌


Team Udayavani, Sep 4, 2018, 6:00 AM IST

11.jpg

“ನಮಸ್ಕಾರ ಪ್ರಧಾನಿಯವರೇ, ನನ್ನ ಹೆಸರು ಚಿನ್ಮಯಿ…’ ಎಂದು ಈ ಹುಡುಗಿ “ಮನ್‌ ಕೀ ಬಾತ್‌’ನಲ್ಲಿ ಆಡಿದ ಮಾತುಗಳು ಸಾಕಷ್ಟು ಸಂಚಲನ ಸೃಷ್ಟಿಸಿತು. ಯಾಕಂದ್ರೆ, ಅವತ್ತು ಈಕೆ ಮಾತಾಡಿದ್ದು ಸಂಸ್ಕೃತದಲ್ಲಿ. ಅದಕ್ಕೆ ಪ್ರಧಾನಿ ಮೋದಿಯವರೂ ಒಂದೆರಡು ಸಾಲು ಸಂಸ್ಕೃತ ಮಾತಾಡಿದರು. ಇಡೀ ದೇಶವೇ ಇಂಗ್ಲಿಷ್‌ನ ಹಿಂದೆ ಬಿದ್ದಿರುವಾಗ, ಬೆಂಗಳೂರಿನ ಚಿನ್ಮಯಿಯ ಮಾತೃಭಾಷೆ ಸಂಸ್ಕೃತ. ಅವರ ಮನೆಯಲ್ಲಿ ಮಾತು, ಕತೆ, ನಗು, ಕೀಟಲೆ ಎಲ್ಲವೂ ಸಂಸ್ಕೃತದಲ್ಲೇ ನಡೆಯುತ್ತದಂತೆ. ತನ್ನ ಮಾತೃಭಾಷೆ ಸಂಸ್ಕೃತದ ಬಗ್ಗೆ ಚಿನ್ಮಯಿ ಇಲ್ಲಿ ಮಾತಾಡಿದ್ದಾರೆ…

1. ಪ್ರಧಾನಿ ಮೋದಿಯವರ ಜೊತೆ ಸಂಸ್ಕೃತದಲ್ಲಿ ಮಾತಾಡಿದ ಕ್ಷಣದ ಬಗ್ಗೆ ಹೇಳಿ…
ನಾನು ಪ್ರಧಾನಿಯವರ “ಮನ್‌ ಕೀ ಬಾತ್‌’ ಅನ್ನು ಆಗಾಗ ಕೇಳುತ್ತೇನೆ. ಆಗಸ್ಟ್‌ 26ರ ಕಾರ್ಯಕ್ರಮಕ್ಕೆ ಅಪ್ಪ ಕರೆ ಮಾಡಲು ಪ್ರಯತ್ನಿಸ್ತಾ ಇದ್ದರು. ಕೊನೆಗೂ ಅವರಿಗೆ ಲೈನ್‌ ಸಿಕ್ಕಿತು. ಅಪ್ಪ ತಕ್ಷಣ ನನಗೆ ಫೋನ್‌ ಕೊಟ್ಟು, “ನೀನು ಮಾತಾಡು’ ಅಂದರು. ಆಗ ಗಾಬರಿ, ಆಶ್ಚರ್ಯ, ಖುಷಿ ಎಲ್ಲಾ ಒಟ್ಟಿಗೇ ಆಯ್ತು. ಪ್ರಶ್ನೆ ಕೇಳುವಾಗಲೂ ನನ್ನ ಧ್ವನಿ ನಡುಗುತ್ತಿತ್ತು. ಅದು ಜೀವನದಲ್ಲಿ ಎಂದಿಗೂ ಮರೆಯಲಾಗದ ಕ್ಷಣ. 

2. ನೀವು ಪ್ರಧಾನಿಯವರಿಗೆ ಯಾವ ಪ್ರಶ್ನೆ ಕೇಳಿದಿರಿ?
ಆವತ್ತು (ಆ.26) ಸಂಸ್ಕೃತ ದಿನಾಚರಣೆ ಇತ್ತು. ನಾನು ಪ್ರಧಾನಿಯವರ ಬಳಿ, “ಸಂಸ್ಕೃತ ಬಹಳ ಸರಳ ಅಂತ ನಾನು ಭಾವಿಸಿದ್ದೇನೆ. ನನ್ನ ಮಾತೃಭಾಷೆ ಸಂಸ್ಕೃತವೇ. ಸಂಸ್ಕೃತ ದಿನಾಚರಣೆಯ ಈ ಸಂದರ್ಭದಲ್ಲಿ ಭಾಷೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು?’ ಎಂದು ಸಂಸ್ಕೃತದಲ್ಲಿಯೇ ಪ್ರಶ್ನೆ ಕೇಳಿದೆ. 30 ಸೆಕೆಂಡ್‌ಗಳ ಆ ಪ್ರಶ್ನೆಗೆ ಅವರು ಮೂರೂವರೆ ನಿಮಿಷ ಉತ್ತರ ಕೊಟ್ಟರು. ಅದರಲ್ಲೂ ಒಂದೆರಡು ಸಾಲುಗಳನ್ನು ಸಂಸ್ಕೃತದಲ್ಲಿಯೇ ಮಾತಾಡಿದ್ದರಿಂದ ಬಹಳ ಖುಷಿಯಾಯ್ತು. 

3. ಅದೇ ಪ್ರಶ್ನೆಯನ್ನು ಕೇಳಿದ್ದೇಕೆ?
ಹೆಚ್ಚಿನವರಿಗೆ ಆವತ್ತು ಅಂದರೆ, ಶ್ರಾವಣ ಪೌರ್ಣಮಿಯಂದು ಸಂಸ್ಕೃತ ದಿನ ಆಚರಿಸುತ್ತಾರೆ ಅಂತ ಗೊತ್ತಿರಲಿಕ್ಕಿಲ್ಲ. ಯಾಕೆಂದರೆ, ಎಲ್ಲರೂ ಸಂಸ್ಕೃತ ಹಳೆಯ  ಭಾಷೆ, ಅದನ್ನು ಕಲಿತರೆ ಏನೂ ಪ್ರಯೋಜನವಿಲ್ಲ ಅಂತ ಭಾವಿಸಿದ್ದಾರೆ. ಆ ಬಗ್ಗೆ ಪ್ರಧಾನಿಯವರ ಅಭಿಪ್ರಾಯ ಏನು ಅಂತ ತಿಳಿದುಕೊಳ್ಳುವ ಕುತೂಹಲವಿತ್ತು. ಹಾಗಾಗಿ ಆ ಪ್ರಶ್ನೆ ಕೇಳಿದೆ.

4. ಮನೆಯಲ್ಲಿ ನೀವು ಮಾತಾಡುವ ಭಾಷೆ ಯಾವುದು?
ನಮ್ಮ ಮನೆಯಲ್ಲಿ ಎಲ್ಲರೂ ಸಂಸ್ಕೃತವನ್ನೇ ಮಾತಾಡುತ್ತೇವೆ. ನನಗೆ ಸಂಸ್ಕೃತವೇ ಮಾತೃಭಾಷೆ. ಬೇರೆಯವರು ಹೇಗೆ ಕನ್ನಡ, ಇಂಗ್ಲಿಷ್‌ ಮಾತಾಡುತ್ತಾರೋ ಅಷ್ಟೇ ಸರಾಗವಾಗಿ ನಾವು ಸಂಸ್ಕೃತ ಮಾತಾಡುತ್ತೇವೆ. ಅಪ್ಪ-ಅಮ್ಮ ಇಬ್ಬರೂ ಮೂಲತಃ ಶೃಂಗೇರಿಯವರು. ಅಪ್ಪ 8ನೇ ತರಗತಿಯಲ್ಲಿದ್ದಾಗಲೇ “ಸಂಸ್ಕೃತ ಭಾರತಿ’ ಸಂಸ್ಥೆ ಸೇರಿದರು. ಮದುವೆಯ ನಂತರ ಅಮ್ಮನೂ ಸಂಸ್ಕೃತ ಕಲಿತುಕೊಂಡರು. ಈಗ ಅಮ್ಮ, ಸಂಸ್ಕೃತ ವಿಕಿಪೀಡಿಯದಲ್ಲಿ ಕೆಲಸ ಮಾಡುತ್ತಿದ್ದಾರೆ. ನಾನು ಇಂಗ್ಲಿಷ್‌, ಹಿಂದಿಯನ್ನು ದೆಹಲಿಯಲ್ಲಿದ್ದಾಗ ಕಲಿತೆ. ಕನ್ನಡ ಕಲಿತಿದ್ದು ಐದನೇ ತರಗತಿಯಲ್ಲಿ. 

5.  ಸಂಸ್ಕೃತ ಕಲಿಯುವುದು ಕಷ್ಟವೇ?
ನನ್ನ ಮಾತೃಭಾಷೆಯೇ ಸಂಸ್ಕೃತವಾಗಿರೋದ್ರಿಂದ ನನಗದು ಕಷ್ಟ ಅನ್ನಿಸಲೇ ಇಲ್ಲ. ಬೇರೆಯವರಿಗೂ ಅದು ಕಷ್ಟವಾಗಲಾರದು. ಕನ್ನಡ, ಇಂಗ್ಲಿಷ್‌, ಹಿಂದಿಯ ಬಹಳಷ್ಟು ಪದಗಳ ಮೂಲ ಸಂಸ್ಕೃತವೇ ಆಗಿದೆ. ಇಂಗ್ಲಿಷ್‌ನ ಫಾದರ್‌ ಪದಕ್ಕೆ ಮೂಲ, ಸಂಸ್ಕೃತದ ಪಿತೃ, ಮದರ್‌ ಪದ ಬಂದದ್ದು ಮಾತೃ ಎಂಬ ಪದದಿಂದ. ಹಾಗಾಗಿ, ಕಲಿಯುವುದು ಕಷ್ಟವಾಗಲಾರದು. ಆಸಕ್ತರಿಗೆ ಸಂಸ್ಕೃತ ಭಾರತಿಯವರೇ ಉಚಿತ ಸಂಭಾಷಣಾ ಶಿಬಿರಗಳನ್ನು ನಡೆಸುತ್ತಾರೆ.  

6. ನೀವು ಯಾವ ತರಗತಿಯಲ್ಲಿದ್ದೀರಿ? ಮುಂದೆ ಸಂಸ್ಕೃತದಲ್ಲಿ ಹೆಚ್ಚಿನ ಅಧ್ಯಯನ ಮಾಡುವ ಇಚ್ಛೆಯಿದೆಯಾ?
ನಾನೀಗ ಗಿರಿನಗರದ ವಿಜಯ ಭಾರತಿ ವಿದ್ಯಾಲಯದಲ್ಲಿ 10ನೇ ತರಗತಿ ಓದುತ್ತಿದ್ದೇನೆ. ಮುಂದೆ ಏನು ಓದಬೇಕು ಅಂತ ಈಗಲೇ ನಿರ್ಧರಿಸಿಲ್ಲ. 

7. ನಿಮ್ಮ ಹವ್ಯಾಸಗಳೇನು?
ನನಗೆ ಸಂಗೀತ, ಚಿತ್ರಕಲೆ, ಪುಸ್ತಕ ಓದುವುದರಲ್ಲಿ ಆಸಕ್ತಿ ಇದೆ. ಭಗವದ್ಗೀತೆಯ 18 ಅಧ್ಯಾಯಗಳ 700 ಶ್ಲೋಕಗಳನ್ನು ಕಂಠಪಾಠ ಮಾಡಿದ್ದೇನೆ. 

“ಭಾರತದಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಕುಟುಂಬಗಳ ಮಾತೃಭಾಷೆ ಸಂಸ್ಕೃತ. ಸುಮಾರು ಗ್ರಾಮಗಳಲ್ಲಿ ಸಂಸ್ಕೃತವೇ ವ್ಯಾವಹಾರಿಕ ಭಾಷೆ. ಅಲ್ಲಿ ಅಂಗಡಿ, ಶಾಲೆ, ಆಟೋ ಸ್ಟಾಂಡ್‌ ಹೀಗೆ ಎಲ್ಲಾ ಕಡೆ ಸಂಸ್ಕೃತವನ್ನೇ ಮಾತಾಡುತ್ತಾರೆ. ಶಿವಮೊಗ್ಗ ಜಿಲ್ಲೆಯ ಮತ್ತೂರು ಹಾಗೂ ಅದಕ್ಕೆ ಸಮೀಪದ ಹೊಸಹಳ್ಳಿ, ಮಧ್ಯಪ್ರದೇಶದ ಝಿರಿ, ಮೋಹದ್‌, ಬಾಗುÌರ್‌ ಎಂಬ ಹಳ್ಳಿಗಳು, ಒರಿಸ್ಸಾದ ಸಸಾನ, ರಾಜಸ್ಥಾನದ ಗನೋಡದಲ್ಲಿ ಸರ್ವವೂ ಸಂಸ್ಕೃತಮಯ. ಸಂಸ್ಕೃತ ಓದುವುದು ವ್ಯರ್ಥ ಎಂದು ಹಲವರು ಹೇಳುತ್ತಾರೆ. ಆದರೆ, ಸಂಸ್ಕೃತ ಓದಿದವರಿಗೂ ಸಾಕಷ್ಟು ಉದ್ಯೋಗಾವಕಾಶಗಳಿವೆ. ನಮ್ಮ ಸಂಸ್ಕೃತ ಭಾರತಿ ಸಂಸ್ಥೆಯೇ 4800 ಶಾಖೆಗಳನ್ನು ಹೊಂದಿದ್ದು, 39ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅಮೆರಿಕದ 40ಕ್ಕೂ ಹೆಚ್ಚು ನಗರಗಳಲ್ಲಿ ಶಾಖೆಗಳಿವೆ. ದೇಶ- ವಿದೇಶಗಳಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ಅಕಾಡೆಮಿಗಳಿವೆ. ಹಾಗಾಗಿ ಸಂಸ್ಕೃತ ಅಧ್ಯಯನ ಮಾಡುವುದು ಉದ್ಯೋಗದ ದೃಷ್ಟಿಯಿಂದಲೂ ವ್ಯರ್ಥವಲ್ಲ’
– ಲಕ್ಷ್ಮೀನಾರಾಯಣ್‌, ಚಿನ್ಮಯಿ ತಂದೆ

ಸಂಸ್ಕೃತ ಕಲಿಯಲು ಸುಲಭದ ಹಾದಿಗಳು
– “ಸಂಸ್ಕೃತ ಭಾರತಿ’ಯ ಉಚಿತ ಸಂಸ್ಕೃತ ಶಿಬಿರಗಳು
– ಸಂಸ್ಕೃತ ಕಲಿಯಲು ದೂರಶಿಕ್ಷಣ (ಕರೆಸ್ಪಾಂಡೆನ್ಸ್‌ ಕೋರ್ಸ್‌) ಇದೆ
– ಸಂಸ್ಕೃತ ಪುಸ್ತಕಗಳು
– ಸ್ಮಾರ್ಟ್‌ಫೋನ್‌ನಲ್ಲಿಯೂ ದೇವನಾಗರಿ ಲಿಪಿ ಲಭ್ಯ
– ಇಂಟರ್ನೆಟ್‌ನಲ್ಲಿ ಸಂಸ್ಕೃತ ಗ್ರಂಥಗಳ ಜಾಡು ಹಿಡಿಯಿರಿ

ಸಂದರ್ಶನ: ಪ್ರಿಯಾಂಕ ಎನ್‌.

ಟಾಪ್ ನ್ಯೂಸ್

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.