ಯಾವುದೂ ಅತಿಯಾಗದಿರಲಿ ಎಲ್ಲವೂ ಮಿತಿಯಲ್ಲೇ ಇರಲಿ!


Team Udayavani, Sep 11, 2018, 6:00 AM IST

27.jpg

ಸಿಡುಕು ಮೂತಿ ಸಿದ್ದಪ್ಪನಿಗೆ,
ಹೇ ಹುಡುಗಾ! ಒಂದೇ ಒಂದು ಮಾತು; ನಂಗೊತ್ತು, ಇದನ್ನೆಲ್ಲಾ ಓದೋದಕ್ಕೆ  ನಿಂಗೆ ತಾಳ್ಮೆ ಇಲ್ಲ ಅಂತ. ಆದ್ರೂ ನಿನಗೋಸ್ಕರ ಈ ಪತ್ರ ಬರೀತಾ ಇದೀನಿ. ಪ್ಲೀಸ್‌ ಓದು… ನಿನಗೆ ಎಷ್ಟೊಂದೆಲ್ಲಾ ಹೇಳಬೇಕು, ನಿನ್ನೊಂದಿಗೆ ಹಗಲೆಲ್ಲಾ ಪಟಪಟ ಅಂತ ಮಾತಾಡಬೇಕು, ನಿನ್ನ ಕೋಪ ನೋಡಿ ಮೌನ ತಾಳಬೇಕು, ನಿನ್ನ ತುಟಿಯಂಚಲ್ಲಿ ಕಿರುನಗೆ ನೋಡಿ ಜೋರಾಗಿ ನಗಬೇಕು… ಇನ್ನೂ ಏನೇನೋ ಹುಚ್ಚು ಆಸೆಗಳನ್ನು ಮನದ ತುಂಬಾ ತುಂಬಿಕೊಂಡಿದ್ದೇನೆ. ಇವೆಲ್ಲವನ್ನೂ ನಿನ್ನ ಮುಂದೆ ನಿಂತು ಹೇಳ್ಬೇಕು ಅನ್ನಿಸುತ್ತೆ. ಆದ್ರೆ ಎಲ್ಲರೊಡನೆ ಅಳುಕಿಲ್ಲದೆ ಮಾತಾಡೋ ನಾನು, ನಿನ್ನ ಕಂಡಾಗ ಮೂಗಿಯಾಗಬಿಡ್ತೀನಿ. ಎದೆಯ ತುಂಬಾ ಏನೋ ಕಳವಳ, ಹೆದರಿಕೆ.. ಅದರೊಡನೆ ತಿಳಿಯದ ಸಂತಸ, ನಾಚಿಕೆ  ಮನೆಮಾಡಿರುತ್ತದೆ. ನಿನ್ನೊಂದಿಗೆ ಕಳೆದ ಗಂಟೆಗಳು ನನಗೆ ಮರೆಯಲಾಗದ ಕ್ಷಣಗಳು. ಯಾವಾಗಲೂ ನಿನ್ನ ಮಾತು ಕೇಳುತ್ತಲೇ ಇರೋಣ ಅನ್ನಿಸುತ್ತದೆ. 

ಆ ಮಾತುಗಳೇ ಅಲ್ವಾ ನಿನ್ನನ್ನು ನಂಗೆ ಸಿಗೋ ಹಾಗೆ ಮಾಡಿದ್ದು. ಅದೇ ಅಲ್ವಾ ನಮ್ಮಿಬ್ಬರ ಸ್ನೇಹಕ್ಕೆ ಸೇತುವೆ ಆದದ್ದು… ನಿನ್ನೊಡನೆ ನಡೆದ ಆ ಕ್ಷಣದಲ್ಲಿ ಉರಿಬಿಸಿಲು ಕೂಡ ತಂಪಾಗಿತ್ತು. ಕಲ್ಲು ಮುಳ್ಳಿನ ಹಾದಿ ಕೂಡ ಬರಿಗಾಲಿನಲ್ಲಿ ಇದ್ದಾಗಲೂ ಮೆತ್ತನೆಯ ಹೂವಿನ ಹಾದಿಯಂತೆ ಭಾಸವಾಗಿತ್ತು. 

ನಿನ್ನ ಹೆಜ್ಜೆಗಳನ್ನು ಹಿಂಬಾಲಿಸಿ ಬರುವಾಗ, ದೂರದಲ್ಲಿ ನನಗೋಸ್ಕರಾನೇ ಯಾರೋ ಹಾಡುತ್ತಿದ್ದರೇನೋ ಅನ್ನೋ ಹಾಗೆ ಒಂದು ಹಾಡು ಕೇಳುತ್ತಿತ್ತು. “ನಡೆದರೆ ನಿನ್ನ ಹೆಜ್ಜೆ ಮೇಲೆ ನನಗದೇ ಸಪ್ತಪದಿ…’ ಎಂದು. ಹೌದು ಅನ್ನಿಸ್ತಿದೆ ಹುಡುಗ. ನಿನ್ನ ಹೆಜ್ಜೆ ಮೇಲೆ ಹೆಜ್ಜೆಯನಿಟ್ಟು ನಡೆಯುವಾಗ ಲೋಕವನ್ನೇ ಮರೆತಿದ್ದೆ. ಮಗುವಂತೆ ಹಿಂಬಾಲಿಸಿ ನಿನ್ನ ಹಿಂದೆ ಬರುವಾಗ ನನ್ನ ಪಪ್ಪನ ನೆನಪಾಗುತ್ತಿತ್ತು.   

ಹುಡುಗ, ನಾನು ನಿನ್ನನ್ನು ಮಗುವಿನ ಥರ ನೋಡಿಕೊಳ್ಳುತ್ತೇನೆ. ಪ್ಲೀಸ್‌, ನನ್ನನ್ನು ನೀನು ನನ್ನ ಪಪ್ಪನ ತರಹ ಕಾಪಾಡ್ತೀಯ ಅಲ್ವಾ? ನಿನ್ನ ಮೇಲೆ ತುಂಬಾ ನಂಬಿಕೆ ಇಟ್ಟಿದ್ದೇನೆ. ಅದನ್ನು ಉಳಿಸಿಕೊಳ್ತೀಯ ಅಲ್ವಾ? ಆ…ನಾನು ನಿನ್ನ ಜೊತೆ ಇದ್ದರೆ ನಿನ್ನ  ಜೀವನ  ಸುಖದ ಹಾಸಿಗೆ ಅಂತ ನಾನು ಹೇಳಲ್ಲ. ಆದ್ರೆ ಏನೇ ಕಷ್ಟ ಬರ್ಲಿ, ನಾನು ನಿನ್ನ ಜೊತೆಯಲ್ಲೇ ಇರುತ್ತೇನೆ.

ಎಲ್ಲರಂತೆ ನಾನು ಸುಂದರಿ ಏನಲ್ಲ. ನನ್ನ ಮುಖದಲ್ಲಿ ಕಲೆ ಇರಬಹುದೇನೋ, ಆದರೆ ನನ್ನ ಪ್ರೀತಿಯಲ್ಲಿ ಮಾತ್ರ ಎಳ್ಳಷ್ಟೂ  ಕಲೆಯಿಲ್ಲ. 
ಮತ್ತೆ… ನಿನಗೆ ಏನೇನ್‌ ಇಷ್ಟಾನೋ ಅದೆಲ್ಲ ಹಾಗೇ ಇರಲಿ. ಆದರೆ ನಿನ್ನ ಕೆಲವೊಂದು ಇಷ್ಟಗಳ ಮೇಲೆ ಗಮನವಿರಲಿ. ಕೆಟ್ಟದ್ದನ್ನು ಮಾಡುವ ಮುಂಚೆ ಹತ್ತು ಸಲ ಯೋಚಿಸು. ನಿನಗಾಗಿ ಒಂದು ಜೀವ ಇರುತ್ತೆ ಅಂತ .ಅತಿಯಾಗಿ ಯಾವುದನ್ನೂ  ಮಾಡಬೇಡ ಎಲ್ಲವೂ ಮಿತವಾಗಿರಲಿ. ಯಾವಾಗಲೂ ಸಿಡುಕು ಮೂತಿ ಸಿದ್ದಪ್ಪನ ತರಹ ಇರೋದನ್ನ ಬಿಟ್ಟು ಸ್ವಲ್ಪ ನಗು ಮಾರಾಯ, ನಿನ್ನ ಗಂಟೇನೂ ಹೋಗಲ್ಲ. ನಗ್ತಿàಯಾ ಅಲ್ವಾ? ಪ್ಲೀಸ್‌ ಕಣೋ… ನನಗೋಸ್ಕರ ನಗು ನೋಡೋಣ ಒಮ್ಮೆ,

ಎಲ್ಲಿ ಒಂದು ಸಲ ನಗು… ಹಾಂ ಹೀಗೆ. ಯಾವಾಗಲೂ ಹೀಗೆ ನಗ್ತಾ ಇರು.. ನೀನು ನನ್ನ ಪ್ರೀತಿಯನ್ನು ಒಪ್ಪಿಕೊಳ್ಳುತ್ತೀಯಾ ಅಂದ್ರೆ, ಅದೇ ಏರ್‌ಸೆಲ್‌ ನಂಬರ್‌ಗೆ ಕಾಲ್‌ ಮಾಡು. ಎಲ್ಲಾ ಮರೆತು ನಿನ್ನ ಕರೆಗಾಗಿ ಕಾಯ್ತಾ ಇದ್ದೇನೆ. 
ಇಂತಿ ನಿನ್ನ ಮುದ್ದು ಪೆದ್ದು ಗೆಳತಿ…

ಅಪೂರ್ವ ನಾಗರಾಜ್‌ 

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.