ಹೀಗೊಂದು “ಆಪರೇಶನ್‌ ಕಮಲ’!

Team Udayavani, Sep 18, 2018, 6:00 AM IST

2.jpg

ಒಂದು ದಿನ ನಮ್ಮ ಅಮ್ಮನ ಜೊತೆಗೆ ಅವರ ದೂರದ ಸಂಬಂಧಿಯ ಊರಿಗೆ ಹೋಗಿದ್ದೆ. ಆ ಊರಿನ ಹೆಸರು ಆನಕ (ಭಯಾನಕ). ಅಲ್ಲಿ ಸೂರ್ಯನ ಉದಯವೇ ಆಗುತ್ತಿರಲಿಲ್ಲ. ಎಲ್ಲಿ ನೋಡಿದರಲ್ಲಿ ಕಗ್ಗತ್ತಲು. ದೀವಿಗೆಯ ಬೆಳಕಿನಲ್ಲೇ ಜನರು ವಾಸಿಸುತ್ತಿದ್ದರು. ಅಂತೂ ಆ ಊರು ತಲುಪಿದೆವು. ಎಲ್ಲಿ ನೋಡಿದರೂ ಜನರು ಕಾಣುತ್ತಿಲ್ಲ. ಸಂಚಾರಿ ವ್ಯವಸ್ಥೆಯಂತೂ ಮೊದಲೇ ಇಲ್ಲ. ಸಂಬಂಧಿಗಳ ಮನೆಯೋ ತುಂಬಾನೇ ದೂರ. ನಡೆಯಲು ಆಗುತ್ತಿಲ್ಲ. ಕಾಲು ತುಂಬಾ ನೋವು ಅಂತಾ ಅಮ್ಮನಿಗೆ ಹೇಳುತ್ತಿದ್ದೆ. ಅಮ್ಮ “ಅಗೊ! ಇಲ್ಲಿಯೇ ಇದೆ ಸ್ವಲ್ಪ ಮುಂದೆ ಹೋದರಾಯಿತು’ ಎಂದರು.

  ಹೋಗುವ ರಸ್ತೆಯಲ್ಲಿ ಸ್ಮಶಾನದ ವಾತಾವರಣವಿತ್ತು. ನಾನಂತೂ ಆ ದೃಶ್ಯವನ್ನೆಲ್ಲ ನೋಡಿ, ಕಿಟಾರ್‌ ಎಂದು ಚೀರಿ ಅಮ್ಮನನ್ನು ತಬ್ಬಿಕೊಂಡೆ. ಅಮ್ಮ, “ಅತ್ತ ನೋಡಬೇಡ. ದೇವರ ಮಂತ್ರ ಜಪಿಸುತ್ತಾ ಹೋಗೋಣ’ ಎಂದರು. ಆಯ್ತು ಎಂದು, ದೇವರ ನಾಮ ಜಪಿಸುತ್ತಾ ಸಂಬಂಧಿಕರ ಮನೆ ತಲುಪಿದೆವು.

  ಅಮ್ಮ ಠಕ್‌ ಠಕ್‌ ಎಂದು ಮನೆಯ ಬಾಗಿಲನ್ನು ತಟ್ಟಿದರು. ಆಗ ಉದ್ದನೆಯ ಕೈ ಬಂದು, ಸರಕ್‌ ಅಂತ ಬಾಗಿಲು ತೆಗೆದ ಸದ್ದಾಯಿತು. ಆದರೆ, ಮುಖವೇ ಕಾಣುತ್ತಿಲ್ಲ. ನನಗೋ ಮೈಯೆಲ್ಲಾ ಬೆವರು. ಅಮ್ಮ ಬಾಗಿ ನನ್ನ ಹಣೆಯ ಬೆವರು ಒರೆಸುವಾಗ ಒಂದು ಮುಖ ಬಾಗಿಲು ಹೊರಗೆ ಬಂತು. “ಅಮ್ಮಾ…’ ಎಂದು ಜೋರಾಗಿ ಕೂಗಿದೆ. ಅಮ್ಮ ನೋಡಿ ಭಯಭೀತಳಾದಳು. ಅವರನ್ನು ನೋಡಿದರೆ, ಅಷ್ಟು ಭಯಾನಕವಾಗಿದ್ದರು.

  ಬಾಯಲ್ಲಿ ಹಲ್ಲುಗಳೇ ಇರಲಿಲ್ಲ. ಬಾಯಿ ತೆಗೆದರೆ ಬ್ರಹ್ಮಾಂಡವೇ ಕಾಣುತ್ತಿತ್ತು. ಮಾರುದ್ದ ಗಡ್ಡ, ಮೈಯೆಲ್ಲ ರೋಮಗಳಿಂದ ಆವೃತವಾಗಿತ್ತು. ಕಣ್ಣುಗಳೆರಡು ನಿಂಬೆ ಹಣ್ಣಿನ ಗಾತ್ರ ಹೊಂದಿದ್ದವು. ಆತನಿಗೆ ಮೂಗು, ಕಿವಿಗಳೇ ಇದ್ದಿರಲಿಲ್ಲ. ಮುಖದಲ್ಲಿ ಕಣ್ಣುಗಳೇ ಎದ್ದು ಕಾಣುತ್ತಿದ್ದವು. ಅಮ್ಮ ಮೂಛೆì ಬಿದ್ದರು. ಆ ಗಡ್ಡ ವೇಷಧಾರಿ ತನ್ನ ನಾಲಿಗೆಯನ್ನು ಹೊರ ಚಾಚಿ ನಾಲಿಗೆಯಿಂದ ನನ್ನನ್ನು ಎಳೆದ. “ಅಮ್ಮ ಅಮ್ಮ!’ ಎಂದು ಕೂಗ ತೊಡಗಿದೆ. ಅಮ್ಮನಿಗೆ ಎಚ್ಚರವಾಗುತ್ತಿಲ್ಲ. ನನಗೆ ದಿಕ್ಕೇ ತೋಚದಂತಾಯಿತು.

  ಮನದಲ್ಲಿ ಇಷ್ಟ ದೇವರನ್ನು ಸ್ಮರಿಸುತ್ತಿದ್ದೆ. ಸ್ವಲ್ಪ ಸಮಯದ ನಂತರ ಅದೆಲ್ಲಿಂದಲೋ ಒಂದು ಕಮಲದ ಹೂ ಬಂತು. ತದನಂತರ ಬೆಂಕಿ ಬರುವುದು ಕಂಡಿತು. ಕಮಲದ ಹೂ ಬಂದು, ನನ್ನನ್ನು ಮತ್ತು ಅಮ್ಮನನ್ನು ಎತ್ತಿಕೊಂಡಿತು. ಬೆಂಕಿ ಬಂದು ಗಡ್ಡದಾರಿ ಮನುಷ್ಯನ ನಾಲಿಗೆಯನ್ನು ಸೀಳಿ ಎರಡು ಹೋಳಾಗಿ ಮಾಡಿತು. ಆ ಮನುಷ್ಯ ಅಲ್ಲಿಯೇ ಭಸ್ಮವಾದ.

  ನಾನು ಅಮ್ಮನನ್ನು ಎಬ್ಬಿಸಿ ನಡೆದ ಎಲ್ಲ ಘಟನೆಯನ್ನು ಹೇಳಿದೆ. ಅಮ್ಮ, “ಮಗು ಇನ್ನೂ ಬೆಳಗಾಗಿಲ್ಲ. ನೀನು ಕಂಡಿರುವುದು ಕನಸು’ ಅಂತಂದಳು. ಕನಸೇನೋ ನಿಜ… ಆದರೆ, ಇವತ್ತಿಗೂ ಆ ಗಡ್ಡದಾರಿ ಮನುಷ್ಯ ನನ್ನ ಕಲ್ಪನಾ ಲೋಕದಲ್ಲಿ ವಿಲನ್‌ ಆಗಿ ಕಾಡುತ್ತಲೇ ಇದ್ದಾನೆ. ಆ ಮೂರು ನಿಮಿಷದ ಮನುಷ್ಯನನ್ನು ನೆನೆದು ಪ್ರತಿಕ್ಷಣ ಬೆಚ್ಚುತ್ತೇನೆ.

– ಅಶ್ವಿ‌ನಿ ಪಿಡಶೆಟ್ಟಿ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.