ಲೆಫ್ಟ್ ಲೆಫ್ಟ್… ಹುಡುಗಿಯರೆಲ್ಲ ಔಟ್!
Team Udayavani, Jan 15, 2019, 12:30 AM IST
ಒಂದು ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುವ ಜಾಲಿ ಮನಸ್ಸುಗಳೆಲ್ಲ, “ಟೈಂಪಾಸ್ ಮಂಡಕ್ಕಿ’ ಎಂಬ ಗ್ರೂಪ್ ಅನ್ನು ರಚಿಸಿಕೊಂಡೆವು. ಗುಡ್ನೈಟ್ ಸ್ವೀಟ್ ಡ್ರೀಮ್ಸ್ ಮೆಸೇಜ್ಗಳ ಜತೆಗೆ ಒಳ್ಳೊಳ್ಳೆಯ ವಿಚಾರಗಳನ್ನು ಹಂಚಿಕೊಳ್ಳುವ ಸತ್ಸಂಪ್ರದಾಯವೂ ಇಲ್ಲಿತ್ತು. ಹುಡುಗರು ಇದ್ದರು, ಹುಡುಗಿಯರೂ ಇದ್ದರು. ಮದುವೆ ಆದವರು, ಮಕ್ಕಳಾದವರೂ ಇದ್ದರು. ತುಂಬಾ ಸಂಸ್ಕಾರವಂತರು, ವಚನಗಳನ್ನೋ, ಅಧ್ಯಾತ್ಮ ಚಿಂತನೆಯ ಸಾಲುಗಳನ್ನೋ ಹಾಕಿ, ಆ ದಿನದ ಆರಂಭವನ್ನು ತಾಜಾ ಮಾಡುತ್ತಿದ್ದರು.
ಒಂದು ದಿನ… ಹಾಗಾಗಿಬಿಡ್ತು… ನನ್ನ ಪೋಲಿ ಗೆಳೆಯನೊಬ್ಬ ಅವನ ಇನ್ನೊಂದು ಗ್ರೂಪ್ಗೆ ಹಾಕಬೇಕು ಎಂದುಕೊಂಡಿದ್ದ, ಚಿತ್ರನಟಿಯ ಒಂದು ಹಾಟ್ ವಿಡಿಯೋವೊಂದನ್ನು ಈ ಗ್ರೂಪ್ನಲ್ಲಿ ಹಾಕಿಬಿಟ್ಟ. ಅದು ಈ ಗ್ರೂಪ್ಗೆ ಹಾಕಿದ್ದೆಂದು ಆತನಿಗೆ ಗೊತ್ತೇ ಆಗಲಿಲ್ಲ. ಕೆಲವೇ ಸೆಕೆಂಡುಗಳಲ್ಲಿ ಗ್ರೂಪ್ನಲ್ಲಿ ಲೆಫ್ಟ್ ಲೆಫ್ಟ್… ಮೆರವಣಿಗೆ ಶುರುವಾಗಿ ಹೋಯ್ತು. ಇದ್ದ 17 ಹುಡುಗಿಯರು, ನಾಲ್ಕಾರು ಆಂಟಿಯರು, ಒಬ್ಬರಾದ ಮೇಲೆ ಒಬ್ಬರಂತೆ “ಲೆಫ್ಟ್’ ಆಗಿ ಮಾಯಾವಾಗಿಬಿಟ್ಟರು. ಅರೇ, ಇದೇನಾಯ್ತು ಎಂದು ನೋಡಿದಾಗ, ವಾಸ್ತವ ಗೊತ್ತಾಗಿ, ಗೆಳೆಯನಿಗೆ ಕರೆ ಮಾಡಿದೆ. ಅವನೂ ಶಾಕ್ ಆದ. “ಅಯ್ಯೋ ಅದನ್ನು ಈ ಗ್ರೂಪ್ಗೆ ಹಾಕಿಬಿಟ್ನಾ?’ ಅಂತ ಅವನಿಗೆ ಜ್ಞಾನೋದಯ ಆಗೋದೊÅಳಗೆ, ಗ್ರೂಪ್ನ ಎಲ್ಲ ಮಹಿಳಾಮಣಿಗಳೂ ಹೊಂಟೊØàಗಿ ಆಗಿತ್ತು! ಕೊನೆಗೂ ಆ ವಿಡಿಯೋ ಹಾಕಿದವನೂ ಹೋದ!
– ಅನಿತಾ, ಯಾದವಾಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ