CONNECT WITH US  

ನಾನಲ್ದೆ  ನಿಂಗೆ ಇನ್ಯಾರು ಬೈಬೇಕು?

ನಾನು ನಿನ್ನನ್ನು ತುಂಬಾ ಕೇರ್‌ ಮಾಡ್ತೀನಿ. ನಿನ್ನ ಬಗೆಗಿನ ಸಣ್ಣಪುಟ್ಟ ವಿಷಯಗಳನ್ನು ಅತಿಯಾಗಿ ಮನಸ್ಸಿಗೆ ತಗೋತೀನಿ. ಅದೆಲ್ಲಾ ನಿಂಗೆ ಹಿಂಸೆ ಅನ್ನಿಸಿದ್ರೆ ನಂಗೆ ನೇರವಾಗಿ ಹೇಳು. 

ಹೇ ಮುದ್ದೂ, ಹೇ ಬಂಗಾರ, ಹೇ ಚಿನ್ನಾ, ಹೇ ಬೇಬಿ.... ಹೀಗೆ ದಿನಕ್ಕೆ ಹತ್ತಾರು ಬಾರಿ ನೀ ಕಳಿಸುತ್ತಿದ್ದ ಸಂದೇಶಗಳೆಲ್ಲ ನಿಂತು ಹೋಗಿ, ಕೇವಲ ಹ್‌ಂ , ಹೂ, ಹಾಂ, ಹೌದಾ.. ಅಂತ ಪ್ರತಿಕ್ರಿಯೆಗಳು ಬರತೊಡಗಿದಾಗಲೇ ಗೊತ್ತಾಯ್ತು ನಿಂಗೆ ನನ್ನ ಮೇಲೆ ಕೋಪ ಬಂದಿದೆ ಅಂತ. ಯಾಕೆ ನಿಂಗೆ, ಇಷ್ಟೊಂದು ಕೋಪ?

ನಾನೇನಾದ್ರು ನಿಂಗೆ ಬೈದಿದ್ರೆ, ಅದು ನಿನ್ನ ಮೇಲೆ ಇರುವ ಪ್ರೀತಿಯಿಂದ ಮಾತ್ರ. ನೀ ತಪ್ಪು ಮಾಡಿದಾಗ ಕಾಳಜಿಯಿಂದ ಬೈದು, ಬುದ್ಧಿ ಹೇಳಬೇಕಾದವನು ನಾನಲ್ಲದೆ ಮತ್ಯಾರು? ಇದನ್ನೆಲ್ಲ ಹೇಳ್ತಾ ಇರೋದು ನಿನ್ನ ಒಳ್ಳೆಯದಕ್ಕೆ. ನಿಂಗೆ ಚೂರು ನೋವಾದರೂ ನನಗೆ ತಡ್ಕೊಳ್ಳೋಕೆ ಆಗಲ್ಲ. ಯಾಕೆಂದರೆ ನೀನೇ ನನ್ನ ಪ್ರಪಂಚ!

ದಯವಿಟ್ಟು ನಿನ್ನ ಕೋಪವನ್ನು ಸ್ವಲ್ಪ ಕಮ್ಮಿ ಮಾಡ್ಕೊ. ಕೋಪ ಒಳ್ಳೆಯದಲ್ಲ. ಅತಿಯಾದ ಕೋಪ ಅಮೃತವನ್ನೂ ವಿಷವಾಗಿಸಿ ಬಿಡುತ್ತೆ. ಕೋಪ ಬಂದಾಗ ಬುದ್ಧಿಗೂ- ಬಾಯಿಗೂ ಸಂಬಂಧವೇ ಇರೋದಿಲ್ಲ. ಏನೇನೋ ಬಡಬಡಿಸ್ತೀಯ. ಅದರಿಂದ ನಿನ್ನೆದುರಿಗೆ ಇರೋರಿಗಷ್ಟೇ ಅಲ್ಲ, ಕೋಪ ಇಳಿದ ಮೇಲೆ ನಿನಗೂ ನೋವಾಗುತ್ತೆ. ಇದನ್ನೇ ತಾನೆ ನಾನು ಮೊನ್ನೆ ನಿಂಗೆ ಹೇಳಿದ್ದು. ಅದಕ್ಕೂ ಸಿಟ್ಟು ಮಾಡಿಕೊಂಡರೆ ಹೇಗೆ? 

ನಾನು ನಿನ್ನನ್ನು ತುಂಬಾ ಕೇರ್‌ ಮಾಡ್ತೀನಿ. ನಿನ್ನ ಬಗೆಗಿನ ಸಣ್ಣಪುಟ್ಟ ವಿಷಯಗಳನ್ನು ಅತಿಯಾಗಿ ಮನಸ್ಸಿಗೆ ತಗೋತೀನಿ. ಅದೆಲ್ಲಾ ನಿಂಗೆ ಹಿಂಸೆ ಅನ್ನಿಸಿದ್ರೆ ನಂಗೆ ನೇರವಾಗಿ ಹೇಳು. ಕೋಪ ಮಾತ್ರ ಮಾಡ್ಕೊàಬೇಡ.

ಇಂತಿ ನಿನ್ನ ಪ್ರೀತಿಯ
ಮಹಮ್ಮದ್‌ ಅಲ್ಪಾಜ್‌


Trending videos

Back to Top