ಓಟಿಗಾಗಿ ಕೊಟ್ಟ ನೋಟು ವಾಪಸ್‌ ಕೇಳಿದ ಅಭ್ಯರ್ಥಿ! | Udayavani - ಉದಯವಾಣಿ
   CONNECT WITH US  
echo "sudina logo";

ಓಟಿಗಾಗಿ ಕೊಟ್ಟ ನೋಟು ವಾಪಸ್‌ ಕೇಳಿದ ಅಭ್ಯರ್ಥಿ!

ಖರ್ಚು ಮಾಡಿದ ಹಣಕ್ಕೆ ತಕ್ಕಷ್ಟು ಮತ ಗಿಟ್ಟದಿದ್ದಾಗ ಸಿಟ್ಟಿಗೆದ್ದು ಬೆಂಬಲಿಗರ ವಾಹನವನ್ನೇ ಜಪ್ತಿ ಮಾಡಿಟ್ಟರು

ಚುನಾವಣೆ ಎಂದಾಕ್ಷಣ ಅಭ್ಯರ್ಥಿಗಳು ಮತದಾರರಿಗೆ ಹಣ- ಹೆಂಡ, ಉಡುಗೊರೆ ಹಂಚಿಕೆ ಮಾಡುವುದು ಸಾಮಾನ್ಯ. ಆದರೆ, ನನಗೆ ಮತ ಹಾಕಲಿಲ್ಲ ಎಂದು ಓಟಿಗಾಗಿ ಕೊಟ್ಟ ನೋಟುಗಳನ್ನು ಅಭ್ಯರ್ಥಿಯೊಬ್ಬ ವಾಪಸ್‌ ಕೇಳಿದರೆಂಬ ಪ್ರಸಂಗ ಗಡಿ ಜಿಲ್ಲೆ ಬೀದರನಲ್ಲಿ ನಗೆಪಾಟಲಿಗೆ ಕಾರಣವಾಗಿತ್ತು. ಇಂದು ಗ್ರಾಪಂನಿಂದ ಹಿಡಿದು ಲೋಕಸಭೆ ಚುನಾವಣೆಯಲ್ಲಿ ಓಟಿಗಾಗಿ ನೋಟು ಝಳಪಿಸುವುದು ಸಹಜ.

ಚುನಾವಣೆ ದಿನಗಳು ಸಮೀಪಿಸುತ್ತಿದ್ದಂತೆ ಊರ ಬೆಂಬಲಿಗ ಮುಖಂಡರು ತಮ್ಮ ಪಕ್ಷದ ಅಭ್ಯರ್ಥಿಗಳ ಮನೆ ಸುತ್ತ ಗಿರಕಿ ಹೊಡೆಯುವುದು, ನಮ್ಮ ಬಡಾವಣೆ- ಗಲ್ಲಿಗಳ ಮತಗಳು ಹಾಕಿಸುವೆ ಎಂದು ಹೇಳಿಕೊಂಡು ಪ್ರತಿ ಓಟಿಗೆ ಇಂತಿಷ್ಟು ಅಂತ ನೋಟಿನ ಕಂತೆ ಹೊತ್ತೂಯ್ಯುವರು. ಒಂದಿಷ್ಟು ನೋಟು ಹಂಚುವರು, ನಂತರ ಉಳಿದದ್ದು ಜೇಬಿಗೆ ಹಾಕಿಕೊಳ್ಳುವರು.

ಫಲಿತಾಂಶ ಹೊರಬಿದ್ದ ಬಳಿಕ ನಿಜ ಅರಿತರೂ ಅಭ್ಯರ್ಥಿಗಳು ಸುಮ್ಮನಾಗಿ ಬಿಡುವರು. ಆದರೆ, ಬೀದರ ಉತ್ತರ ಕ್ಷೇತ್ರದ ಅಭ್ಯರ್ಥಿಯೊಬ್ಬರು ಮಾಡಿದ್ದೇ ಬೇರೆ. ಬೀದರ ಉತ್ತರ ಕ್ಷೇತ್ರದ ಉಪ ಚುನಾವಣೆ. ಶಾಸಕರಾಗಿದ್ದ ದಿ| ಗುರುಪಾದಪ್ಪ ನಾಗಮಾರಪಳ್ಳಿ ಅವರ ನಿಧನ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಉಪ ಸಮರಕ್ಕೆ ವೇದಿಕೆ ಸಜ್ಜಾಗಿತ್ತು.

ಪಕ್ಷದ ಅಭ್ಯರ್ಥಿಯೊಬ್ಬರು ಆಯಾ ಬಡಾವಣೆಯ ಬೆಂಬಲಿಗ ನಾಯಕರಿಗೆ ಒಂದು ಓಟಿಗೆ ಇಂತಿಷ್ಟು ಎಂದು ಹೇಳಿ ಗರಿಗರಿ ನೋಟುಗಳನ್ನು ನೀಡಿದ್ದರು. ತಮ್ಮ ಬೆಂಬಲಿಗರ ಅಲ್ಲಿಯ ಓಟುಗಳು ತಮಗೆ ಬೀಳುವುದೆಂಬ ಅತಿ ನಿರೀಕ್ಷೆ ಹೊಂದಿದ್ದರು. ಆದರೆ, ಅಲ್ಲಿ ಆಗಿರುವುದು ಮಾತ್ರ ಬೇರೆ. ಫಲಿತಾಂಶದ ಬಳಿಕ ಬಿದ್ದಿರುವ ಮತಗಳ ಶೀಟ್‌ ನೋಡಿದಾಗ ಅಭ್ಯರ್ಥಿ ದಂಗಾದರು.

ನಿರೀಕ್ಷಿತ ಮತಕ್ಕಿಂತ ಅತಿ ಕಡಿಮೆ ಮತ ಬಿದ್ದಿರುವುದಕ್ಕೆ ಕೆರಳಿ ಬೆಂಬಲಿಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.  ಔತಣಕೂಟದ ನೆಪ ಹೇಳಿ ಬೆಂಬಲಿಗರನ್ನು ತಮ್ಮ ಮನೆಗೆ ಕರೆಯಿಸಿಕೊಂಡ ಅಭ್ಯರ್ಥಿ ತರಾಟೆಗೆ ತೆಗೆದುಕೊಂಡರು. ನಾನು ಕೊಟ್ಟಿರುವ ನೋಟಿಗೆ ಪ್ರತಿಯಾಗಿ ಓಟು ಬೀಳಲಿಲ್ಲ.

ಹಾಗಾಗಿ ಕೊಟ್ಟಿರುವ ಹಣ ವಾಪಸ್‌ ಕೊಡುವಂತೆ ದಬಾಯಿಸಿದರು. ಅಭ್ಯರ್ಥಿಯ ಮಾತು ಕೇಳಿ ಬೆಂಬಲಿಗರು ಹೌಹಾರಬೇಕಾಯಿತು. ಹಣ ವಾಪಸ್‌ ಕೊಡುವವರೆಗೆ ಅವರ ವಾಹನಗಳನ್ನು ಹಿಡಿದಿಟ್ಟುಕೊಂಡರು. ಹಣ ಹಂಚಲು ಪಡೆದಿದ್ದವರು ಅನಿವಾರ್ಯವಾಗಿ ಹಣ ಕೊಟ್ಟು ತಮ್ಮ ತಮ್ಮ ವಾಹನ ಒಯ್ದರು.

* ಶಶಿಕಾಂತ ಬಂಬುಳಗೆ

ಇಂದು ಹೆಚ್ಚು ಓದಿದ್ದು

ಕರ್ನಾಟಕ ಪ್ರದೇಶ ಕುರುಬರ ಸಂಘ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ "ಪ್ರತಿಭಾ ಪುರಸ್ಕಾರ'ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.

Aug 20, 2018 06:00am

Trending videos

Back to Top