CONNECT WITH US  

ಗಾಸಿಪ್‌: ಪೊಲೀಸ್‌ ಲೆಕ್ಕಾಚಾರ

ಸಿದ್ದರಾಮಯ್ಯ ಸರ್ಕಾರ ಚುನಾವಣೆ ಎದುರಿಸಲು ಭಾರೀ ಪೊಲೀಸ್‌ ಸರ್ಜರಿ ಮಾಡಿದೆ ಎಂದು ರಾಜಕೀಯ ಪಡಸಾಲೆಯಲ್ಲಿ ಮಾತಿದೆ. ಆಯಕಟ್ಟಿನ ಜಾಗಗಳಲ್ಲಿ, ಅದೂ ಗಡಿ ಜಿಲ್ಲೆ ಮತ್ತು ವಲಯಗಳಲ್ಲಿ ಕಾಂಗ್ರೆಸ್‌ಗೆ ಅನುಕೂಲವಾಗುವ ಅಧಿಕಾರಿಗಳನ್ನೇ ನೇಮಿಸಿದೆ ಎಂಬ ಗುಸುಗುಸು ಎಲ್ಲಾ ಕಡೆ ಜಾಸ್ತಿಯಾಗಿದೆ.

ಕೆಂಪಯ್ಯ ಅವರೇ ಸೂತ್ರಧಾರ ಎಂಬುದು ವಿರೋಧಪಕ್ಷಗಳ ವಠಾರದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ವರಸೆಗೆ ವಿರೋಧಿಗಳಂತೂ ಚಕಿತರಾಗಿದ್ದಾರಂತೆ. ಗಡಿನಾಡಿನ ಮೂಲಕ ಸಾಗಾಟವಾಗುವ ಸಾರಾಯಿ ನಿಯಂತ್ರಣ, ಬ್ಲಾಕ್‌ ಮನಿ ಬಂಡಲ್‌ಗ‌ಳ ವಾಹನಗಳ ತಪಾಸಣೆ, ವಿವಿಧ ಲೋಕಲ್‌ ಪುಢಾರಿಗಳನ್ನು ಮತ್ತು ಚುನಾವಣೆ ಸಮಯದಲ್ಲಿ ಕಾರುಬಾರು ನಡೆಸುವ ಗೂಂಡಾ ಗಳನ್ನು ಹದ್ದುಬಸ್ತಿನಲ್ಲಿಡುವುದು..

ಹೀಗೆ ಆಲೋಚನೆಗಳು ಹಲವಾರು. ಜತೆಗೆ ಕಟ್ಟುನಿಟ್ಟಿನ ಅಧಿಕಾರಿಗಳ ನೇಮಕದಿಂದ ಸಂಭವಿಸಬಹುದಾದ ಕೆಟ್ಟ ಘಟನೆಗಳನ್ನು ನಿಯಂತ್ರಿಸಬಹುದು. ಈ ರಾಜಕೀಯ ಲೆಕ್ಕ ಇದೀಗ ವಿರೋಧಿಗಳು ಮತ್ತಷ್ಟು ಜಾಗೃತರಾಗುವಂತೆ ಮಾಡಿದೆಯಂತೆ. 

ಮತಗಣಿತ
1983ರಲ್ಲಿ ಏಕ ಶಾಸಕಿ:
1978ರ ಚುನಾವಣೆಯಲ್ಲಿ  ಒಟ್ಟು 1165 ಮಂದಿ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಆ ಬಾರಿ 480 ಮಂದಿ ಪಕ್ಷೇತರರು ಸ್ಪರ್ಧಿಸಿದ್ದರು. ಅವರಲ್ಲಿ 10 ಮಂದಿ ವಿಜೇತರಾದರು. 34 ಮಂದಿ ಮಹಿಳೆಯರು ಕಣಕ್ಕಿಳಿದಿದ್ದರು.

ಈ ಪೈಕಿ 8 ಮಂದಿ ಶಾಸನಸಭೆ ಪ್ರವೇಶಿಸಿ ದ್ದರು.1983ರ ಚುನಾವಣೆಯಲ್ಲಿ ಕಣಕ್ಕಿಳಿದ 1365 ಮಂದಿ ಅಭ್ಯರ್ಥಿಗಳಲ್ಲಿ 751 ಮಂದಿ ಪಕ್ಷೇತರರಾಗಿದ್ದರು. ಅವರಲ್ಲಿ 22 ಸ್ವತಂತ್ರ ಅಭ್ಯರ್ಥಿಗಳು ವಿಜೇತರಾದರು. ಆ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿದಿದ್ದ ಒಟ್ಟು ಮಹಿಳಾ ಅಭ್ಯರ್ಥಿಗಳ ಸಂಖ್ಯೆ 34. ಅವರಲ್ಲಿ ಕೇವಲ ಒಬ್ಟಾಕೆ ಶಾಸಕಿಯಾದರು. 

ಯುವ ಮನ
ವಿದ್ಯಾವಂತರಿಗೆ ಸೂಕ್ತ ಉದ್ಯೋಗ ಕೊರತೆಯಿದ್ದು, ಆ ನಿಟ್ಟಿನಲ್ಲಿ ಉದ್ಯೋಗ ಸೃಷ್ಟಿಸುವ ಹಾಗೂ ಯುವಜನ ಪರ ಕಾಳಜಿ ಹೊಂದಿರುವವರಿಗೆ ನನ್ನ ಮತ. ಸುಳ್ಳು ಆಶ್ವಾಸನೆ ನೀಡಿ ಚುನಾವಣಾ ಸಂದರ್ಭದಲ್ಲಿ ಮಾತ್ರ ಜನರಿಗೆ ಸಿಗುವ ಆಭ್ಯರ್ಥಿ ನಮಗೆ ಬೇಕಿಲ್ಲ. ಐದು ವರ್ಷ ಅಧಿಕಾರ ನೀಡುವಾಗ ಐದು ನಿಮಿಷವಾದರೂ  ಆಲೋಚಿಸಿ ಮತ ನೀಡೋಣ. 
-ತಿಪ್ಪೇಸ್ವಾಮಿ.ಜಿ.ಟಿ.ಕಲ್ಲಹಳ್ಳಿ,  ದಾವಣಗೆರೆ

ರಾಜಕಾರಣಿಗಳು ನೀಡುವ ಭರವಸೆಗಳ ಆಧಾರದಲ್ಲಿ ಮತ ಚಲಾಯಿಸಿದ್ದಾಗಿದೆ, ಇನ್ನು ಮುಂದೆ ಒಟ್ಟಾರೆ ಅಭಿವೃದ್ದಿ, ಜೀವನ ಸುಧಾರಣೆ, ಪ್ರತಿಭಾವಂತರಿಗೆ ಅವಕಾಶ ಹೀಗೆ ಜನ ಜೀವನಕ್ಕೆ ಸಂಬಂಧಿಸಿದಂತೆ ಜಾರಿಯಾಗುವ ಎಲ್ಲಾ ಯೋಜನೆಗಳು ನಿರಂತರ ಮೌಲ್ಯಮಾಪನಕ್ಕೆ ಒಳಪಡಿಸುವ ವ್ಯವಸ್ಥೆ ಜಾರಿಗೆ ಮನಸ್ಸು ಮಾಡುವ ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕಿದೆ.
-ಆರ್‌.ಪಿ.ಅಪೂರ್ವ, ರಾಮನಗರ

ಯಾರಿಗೂ ಹಳ್ಳಿಯ ಸಮಸ್ಯೆಗಳ ಬಗ್ಗೆ ಕಾಳಜಿಯೇ ಇಲ್ಲ. ಎಲ್ಲರೂ ಗ್ರಾಮೀಣ ಅಭಿವೃದ್ಧಿ ಮಾಡ್ತೇವೆ ಅಂತಾರೆ. ಆದರೆ ಐದು ವರ್ಷ ಕಳೆದರೂ ಜನರಿಗೆ ಸೌಲಭ್ಯ ಸಿಗುವುದಿಲ್ಲ. ಇಂದಿಗೂ ಹಳ್ಳಿಗಳಲ್ಲಿ ಮೂಲಸೌಕರ್ಯವಿಲ್ಲ. ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ನಾಯಕರು ಗಮನ ಹರಿಸಬೇಕು.
-ಸುರೇಶ ಪೂಜಾರ, ಕೊಪ್ಪಳ 

Trending videos

Back to Top