CONNECT WITH US  
echo "sudina logo";

"ಓಟಿನ ಬೇಟೆ' ಉಲ್ಲೇಖೀಸಿ ಸರ್ಕಾರಕ್ಕೆ ತರಾಟೆ

ಮಾನ್ವಿ: ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಸೋಮವಾರ ನಡೆದ ಜೆಡಿಎಸ್‌ ವಿಕಾಸ ಪರ್ವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಮ್ಮ ಭಾಷಣದುದ್ದಕ್ಕೂ "ಉದಯವಾಣಿ' ಪತ್ರಿಕೆಯಲ್ಲಿ ಪ್ರಕಟವಾದ ವರದಿಗಳನ್ನು ಪ್ರಸ್ತಾಪಿಸಿ ಕೇಂದ್ರದ ಬಿಜೆಪಿ ಮತ್ತು ರಾಜ್ಯ ಕಾಂಗ್ರೆಸ್‌ ಸರ್ಕಾರದ ಆಡಳಿತವನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲೆಯಲ್ಲಿ ಕೃಷ್ಣಾ ಮತ್ತು ತುಂಗಭದ್ರಾ ನದಿಗಳು ಹರಿದರೂ ನೀರಾವರಿ ಹಾಗೂ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಇದೆ. ಸೋಮವಾರ "ಉದಯವಾಣಿ' ಪತ್ರಿಕೆಯಲ್ಲಿ ಪ್ರಕಟಗೊಂಡ "ನದಿ ಒಡಲಲ್ಲಿ ಬರಗಾಲ ಭಾಗ್ಯ' ಶೀರ್ಷಿಕೆಯ ಸುದ್ದಿ ಪ್ರದರ್ಶಿಸಿದರು. ಇಲ್ಲಿನ ಕೃಷಿ ಭೂಮಿಗೆ ನೀರು ಕೋಡುತ್ತೇವೆ ಎಂಬ ಮಾತು ಕೇವಲ ಭರವಸೆಯಾಗಿಯೇ ಉಳಿದಿದೆ ಎಂದರು.

ನಂತರ "ಉದಯವಾಣಿ'ಯಲ್ಲಿ ಭಾನುವಾರ ಪ್ರಕಟವಾದ "ತುಂಗಭದ್ರೆ ಇದ್ದರೂ ತಪ್ಪಿಲ್ಲಸಂಕಟ' ಸುದ್ದಿ ತೋರಿಸುತ್ತಾ ಜಿಲ್ಲೆಯ ಸಮಸ್ಯೆಗಳನ್ನು ವಿವರಿಸಿದರು. ಇದಕ್ಕೆ ಇಲ್ಲಿನ ಜನಪ್ರತಿನಿಧಿಗಳ ನಿರ್ಲಕ್ಷವೇ ಕಾರಣ. ಶಾಸಕರೇ ಕಾಡಾ ಅಧ್ಯಕ್ಷರಾಗಿದ್ದರೂ ಕಾಲುವೆಗೆ ನೀರು ಹರಿಸಲು ಆಗುತ್ತಿಲ್ಲ. ಅಲ್ಲದೆ ಅಡಳಿತ ಪಕ್ಷದ ಕಾಡಾ ಅಧ್ಯಕ್ಷರಾಗಿರುವ ಶಾಸಕರೇ ನೀರು ಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲು ಮುಂದಾಗಿರುವುದು ನಾಚಿಕೆಗೇಡು ಎಂದರು.

ರಾಯಚೂರಿನಲ್ಲಿಯೇ ಹತ್ತಿ ಕೈಗಾರಿಕೆ ಹಾಗೂ ಬಟ್ಟೆ ತಯಾರಿಕೆ ಕೈಗಾರಿಕೆಗಳನ್ನು ಸ್ಥಾಪಿಸಲಾಗುವುದು. ಜಿಲ್ಲೆಗೆ ನಿರಂತರ ವಿದ್ಯುತ್‌ ಹಾಗೂ ಕಾಲುವೆಗೆ ಎರಡು ಬೆಳೆಗೆ ನೀರು ಹರಿಸಲಾಗುವುದು. ಇದರಿಂದ ಇಲಿನ ಜನತೆ ಗುಳೆ ಹೋಗುವುದನ್ನು ತಪ್ಪಿಸಬಹುದು ಎಂದರು.

Trending videos

Back to Top