CONNECT WITH US  

ಗಾಸಿಪ್‌ : ನಾಯಕರ ಆಟ ಬಲ್ಲವರಾರು?

ಮುಖ್ಯಮಂತ್ರಿ ಸಹಿತ ಪಕ್ಷದ ರಾಜ್ಯಾಧ್ಯಕ್ಷರು, ಪ್ರಭಾವಿ ನಾಯಕರು ವಿಧಾನಸಭೆ ಚುನಾವಣೆಯಲ್ಲಿ ಎರಡೆರಡು ಕ್ಷೇತ್ರಗಳಲ್ಲಿ  
ಸ್ಪರ್ಧೆ ಮಾಡಲು ಮುಂದಾಗಿರುವುದು ಆಯಾ ಕ್ಷೇತ್ರಗಳಲ್ಲಿ ಶಾಸಕರಾಗಿರುವ ಹಾಗೂ ಆಕಾಂಕ್ಷಿಗಳಾಗಿರುವವರನ್ನು ಚಿಂತೆಗೀಡು ಮಾಡಿದೆ. ಯಾವ ನಾಯ ಕರು ಯಾವಾಗ ಎಲ್ಲಿ ಸ್ಪರ್ಧೆ ಮಾಡ್ತಾರೋ ಎಂದು ಆತಂಕ ಪಡುವಂತೆಯೂ ಆಗಿದೆ. ಐದು ವರ್ಷದಿಂದ ಕ್ಷೇತ್ರದಲ್ಲಿ ಕೆಲಸ ಮಾಡಿ ಇದೀಗ ನಾಯಕರು ಬಂದರು ದಾರಿ ಬಿಡಿ ಅಂತ ಸೈಡ್‌ಗೆ ಹೋಗ ಬೇಕು. ನಾಯಕರೋ ಯಾವ ಕ್ಷೇತ್ರಕ್ಕೆ ಹೋದರೂ ಗೆಲ್ಲಬಹುದು. ಆದರೆ, ನಾವು ಏನು ಮಾಡಬೇಕು ಎಂದು ಸಿಕ್ಕ ಸಿಕ್ಕವರ ಬಳಿ ಅವಲತ್ತುಕೊಳ್ಳುತ್ತಿದ್ದಾರಂತೆ. ಹೀಗಾಗಿ, ಕೆಲವು ಶಾಸಕರು, ಆಕಾಂಕ್ಷಿಗಳು ಯಾವ ನಾಯಕರೂ ತಮ್ಮ ಕ್ಷೇತ್ರ ದತ್ತ ಕಣ್ಣು ಹಾಯಿಸದಿರಲಿ ಎಂದು ದೇವರ ಮೊರೆ ಹೋಗಿ ವಿಶೇಷ ಪೂಜೆ, ಹವನ, ಹೋಮಗಳಲ್ಲೂ ತೊಡಗಿದ್ದಾರಂತೆ.

ಮತಗಣಿತ
ಸಿಪಿಐ-12 ಬಾರಿ ನಿರಂತರ ಸ್ಪರ್ಧೆ ರಾಜ್ಯ ವಿಧಾನಸಭೆ ಚುನಾವಣೆ ಇತಿಹಾಸ ನೋಡಿದಾಗ, ಎಡಪಕ್ಷ, ಸಿಪಿಐ ಸತತ 6 ಚುನಾವಣೆಗಳಲ್ಲಿ ನಿರಂತರವಾಗಿ 3 ಶಾಸಕರನ್ನು ವಿಧಾನಸಭೆಗೆ ಕಳುಹಿಸುತ್ತಿತ್ತು. ಆದರೆ 1985ನೇ ಇಸ್ವಿ ಕೊನೆ. ಆ ನಂತರದ 6 ಚುನಾವಣೆಗಳಲ್ಲೂ ಸಿಪಿಐ ಸ್ಪರ್ಧಿಸುತ್ತಾ ಬಂದರೂ ಪ್ರತಿ ಬಾರಿಯೂ ಶೂನ್ಯ ಸಾಧನೆ ಮಾಡಿದೆ. ರಾಜಕೀಯವಾಗಿ ಮೇಲೇಳಲೇ ಇಲ್ಲ ಕಮ್ಯುನಿಸ್ಟ್‌ ಪಕ್ಷ. ಗಮನಿಸಬೇಕಾದ ಇನ್ನೊಂದು ಸಂಗತಿ ಎಂದರೆ, ರಾಜ್ಯದ 12 ಚುನಾವಣೆಗಳಲ್ಲಿ ಒಂದೇ ಚಿಹ್ನೆಯಡಿ (ಕತ್ತಿ, ಸುತ್ತಿಗೆ, ನಕ್ಷತ್ರ) ಸ್ಪರ್ಧಿಸಿದ ಏಕೈಕ ಪಕ್ಷ ಕಮ್ಯುನಿಸ್ಟ್‌ ಪಾರ್ಟಿ ಆಫ್ ಇಂಡಿಯಾ (ಸಿಪಿಐ). 1989ರಲ್ಲಿ 18 ಸ್ಥಾನಗಳಲ್ಲಿ, 1994ಹಾಗೂ 1999ರಲ್ಲಿ 8, 2004ರಲ್ಲಿ 5, 2008ರಲ್ಲಿ 10 ಹಾಗೂ 2013ರಲ್ಲಿ 8 ಸ್ಥಾನಗಳಲ್ಲಿ ಸಿಪಿಐ ಸ್ಪರ್ಧಿಸಿತ್ತು. 1989ರಲ್ಲಿ 16, 1994ರಲ್ಲಿ 7, 1999ರಲ್ಲಿ ಎಲ್ಲಾ 8, 2004ರಲ್ಲಿ 4, 2008ರಲ್ಲಿ ಎಲ್ಲಾ 10, 2013ರಲ್ಲಿ ಎಲ್ಲಾ 8 ಸ್ಥಾನಗಳಲ್ಲಿ ಠೇವಣಿ ಕಳಕೊಂಡಿತು.

ಯುವಮನ
ಪದವಿ ಶಿಕ್ಷಣ ಮುಗಿಸಿದರೂ ಉತ್ತಮ ಉದ್ಯೋಗಾವಕಾಶ ದೊರಕುತ್ತಿಲ್ಲ. ದೇಶ ಅಭಿವೃದ್ಧಿ ಹೊಂದಲು ಪ್ರತಿಯೊಬ್ಬ ನಿರುದ್ಯೋಗಿಗೆ ಉದ್ಯೋಗ ದೊರೆಯಬೇಕು. ದೇಶದ ಪ್ರಗತಿಗೆ ದುಡಿಯುವವರಿಗೆ ನನ್ನ ಮತ.
ಮಾಲತಿ ಆರ್‌. ಸಿದ್ದಾಪುರ, ಉಡುಪಿ

ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಒತ್ತು ಕೊಡುವಂಥ ಜನಪ್ರತಿನಿಧಿ ಬೇಕು.  ಅದರಲ್ಲೂ ಪರಿಸರದ ಬಗ್ಗೆ ಕಾಳಜಿ ತೋರುವ ನಾಯಕನಾಗಿರಬೇಕು. ಅಂತಹ ಉತ್ತಮ ಅಭ್ಯರ್ಥಿಗೆ ನನ್ನ ಮತ ನೀಡುತ್ತೇನೆ. 
ರವಿ ಕಿರಣ್‌, ಬೆಂಗಳೂರು

ಪ್ರಜೆಗಳೇ, ಮತದಾನಕ್ಕೆ ಮೊದಲು ನಮ್ಮ ಬಳಿ ಬಂದು ಮಾತಿನ ಬಂಡವಾಳ ಪ್ರಯೋಗಿಸಿ ಗೆದ್ದ ಬಳಿಕ ಜನರನ್ನು ಮರೆತು ಬಿಡುವ ಜನಪ್ರತಿನಿಧಿಗಳನ್ನು ಆರಿಸಬೇಡಿ. ನಗರ, ಜಿಲ್ಲೆ, ರಾಜ್ಯ ಮತ್ತು ದೇಶವನ್ನು ಅರಿತ ಒಬ್ಬ ಚತುರನನ್ನು ಚುನಾಯಿಸಿ.
ರಬ್ಟಾನ್‌, ಮಂಗಳೂರು

Trending videos

Back to Top