CONNECT WITH US  

ಚಿಹ್ನೆ ಬದಲಾಗಿದ್ದಕ್ಕೆ ಬೇಸತ್ತು ಅಭ್ಯರ್ಥಿ ಆತ್ಮಹತ್ಯೆ ಯತ್ನ

ಸಾಂದರ್ಭಿಕ ಚಿತ್ರ..

ಹಾವೇರಿ: ಚುನಾವಣೆ ಚಿಹ್ನೆ ಬದಲಾಗಿದ್ದಕ್ಕೆ ಬೇಸರಗೊಂಡು ಅಭ್ಯರ್ಥಿಯೊಬ್ಬರು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾವೇರಿಯ ಹಿರೇಕೆರೂರಲ್ಲಿ ನಡೆದಿದೆ. 

ಇಲ್ಲಿನ ಕೆಜೆಪಿ ಅಭ್ಯರ್ಥಿ ಹರೀಶ ಇಂಗಳಗೊಂಡಿ ಅವರಿಗೆ "ತೆಂಗಿನಕಾಯಿ' ಬದಲಿಗೆ "ತೆಂಗಿನಮರದ' ಚಿಹ್ನೆ ನೀಡಲಾಗಿತ್ತು. ಒಂದು ತಿಂಗಳಿಂದಲೂ ಇವರು "ತೆಂಗಿನಕಾಯಿ' ಚಿಹ್ನೆಯನ್ನೇ ಪ್ರಚಾರ ಮಾಡಿದ್ದರು. ಈಗ ಏಕಾಏಕಿ ಚಿಹ್ನೆ ಬದಲಾಗಿದ್ದರಿಂದ ಕಂಗಾಲಾಗಿ ನಗರದ ಕೆಜೆಪಿ ಕಚೇರಿಯಲ್ಲಿ ಎಂಟಕ್ಕೂ ಹೆಚ್ಚು ಮಾತ್ರೆಗಳನ್ನು ಸೇವಿಸಿದ್ದಾರೆ. ತಕ್ಷಣ ಸ್ನೇಹಿತರು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಜೀವ ಉಳಿಸಿದ್ದಾರೆ.
 
ಕೆಜೆಪಿ ಅಭ್ಯರ್ಥಿಗಳಿಗೆ ದಿಢೀರ್‌ ಆಗಿ "ತೆಂಗಿನಕಾಯಿ' ಚಿಹ್ನೆ ಬದಲಾಗಿ ಬೇರೆ ಚಿಹ್ನೆ ನೀಡಲಾಗಿದೆ. ಚಿಹ್ನೆ ಕೈ ತಪ್ಪುವಲ್ಲಿ ರಾಷ್ಟ್ರೀಯ ಪಕ್ಷಗಳ ಕುತಂತ್ರ ಇರುವ ಸಂಶಯವಿದೆ ಎಂದು ಹಾವೇರಿ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಬಸವರಾಜ ಟೀಕಿಹಳ್ಳಿ ಹೇಳಿದ್ದಾರೆ.

Trending videos

Back to Top