CONNECT WITH US  

ರಾಯರಡ್ಡಿ ನೀರಿಳಿಸಿದ ಕಾಂಗ್ರೆಸ್‌ ಮುಖಂಡ

ಕೊಪ್ಪಳ: ಯಲಬುರ್ಗಾ ತಾಲೂಕಿನ ತೆಂಗಿನಕಾಯಿ ಮಿಲ್‌ನಲ್ಲಿ ಇತ್ತೀಚೆಗೆ ನಡೆಯಿತೆನ್ನಲಾದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಸಚಿವ ಬಸವರಾಜ ರಾಯರಡ್ಡಿ ಅವರ ಎದುರಲ್ಲೇ ಕುಕನೂರು ತಾಲೂಕಿನ ತಳಕಲ್‌ ಗ್ರಾಮದ ಕಾಂಗ್ರೆಸ್‌ ಮುಖಂಡ
ಶಿವಕುಮಾರ ಹಳ್ಳಿ ವಾಗ್ಧಾಳಿ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

"ರಾಯರಡ್ಡಿ ಅವರು ವಾಲ್ಮೀಕಿ ಸಮಾಜಕ್ಕೆ ಏನೂ ಕೊಡುಗೆ ನೀಡಿಲ್ಲ. ತಳಕಲ್‌ಗೆ ವಾಲ್ಮೀಕಿ ಸಮುದಾಯ ಭವನ ಮಂಜೂರು ಮಾಡುವ ಭರವಸೆ ನೀಡಿದ್ದರು. ಆದರೆ ಮಂಜೂರು ಮಾಡಿಲ್ಲ. ನಿವೇಶನಗಳನ್ನು ಹಂಚಿಕೆ ಮಾಡಿಲ್ಲ. ಈಗ ಚುನಾವಣೆ ಬಂದಿದೆ ವಾಲ್ಮೀಕಿ ನಾಯಕರ ಅವಶ್ಯಕತೆ ಬಂದ ಮೇಲೆ ಸಭೆ ನಡೆಸಲಾಗುತ್ತಿದೆ' ಎಂದು ಸಚಿವ ರಾಯರಡ್ಡಿ ಎದುರಲ್ಲೇ ಶಿವಕುಮಾರ ಮೈಕ್‌ನಲ್ಲಿ ಮಾತನಾಡಿದ್ದಾರೆ.

ಇದರಿಂದ ಸಭೆಯಲ್ಲಿದ್ದ ಸಚಿವ ಬಸವರಾಜ ರಾಯರಡ್ಡಿಗೆ ಮುಜುಗುರವಾಗಿದ್ದು, ಇದನ್ನರಿತ ಉಳಿದ ಕಾರ್ಯಕರ್ತರು ಕೂಡಲೇ ಶಿವಕುಮಾರ ಹಳ್ಳಿ ಅವರ ಕೈಯಲ್ಲಿದ್ದ ಮೈಕ್‌ ಕಸಿದು ಸಭೆಯಿಂದ ಹೊರ ಕಳಿಸಿರುವ ವಿಡೀಯೋ ವೈರಲ್‌ ಆಗಿದೆ. ಈ ಘಟನೆ ಏ.30ರಂದು ನಡೆದಿದೆ ಎನ್ನಲಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ.

Trending videos

Back to Top