CONNECT WITH US  

ಮೋದಿ ಬಾಯಿ ಹಿಡಿತದಲ್ಲಿರಲಿ: ಖರ್ಗೆ

ಹುಮನಾಬಾದ: 76 ವರ್ಷಗಳ ನನ್ನ ಜೀವನದ ಉದ್ದಕ್ಕೂ ರಾಜಕೀಯದ ವಿವಿಧ ಹುದ್ದೆಗಳನ್ನು ಹೊಂದಿದ್ದ ಸಂದರ್ಭದಲ್ಲಿ ಹಾಗೂ ಲೋಕಸಭೆಯಲ್ಲಿ ಕೂಡ ನನ್ನ ವಿರುದ್ಧ ಯಾರೊಬ್ಬರೂ ಈವರೆಗೆ ಮಾತನಾಡಿಲ್ಲ. ಆದರೆ ಮೋದಿ ನನ್ನ ಕ್ಷೇತ್ರದಲ್ಲಿಯೇ ನನ್ನ ವಿರುದ್ಧ ಮಾತನಾಡಿ, ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಗುರುವಾರ ನಡೆದ ಕಾಂಗ್ರೆಸ್‌ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಸುಳ್ಳು ಭರವಸೆಗಳನ್ನು ನೀಡುವ, 10 ಕೋಟಿ ರೂ.ಸೂಟ್‌ ಹಾಕಿಕೊಳ್ಳುವ ವ್ಯಕ್ತಿ ನೀವು ನನ್ನ ವಿರುದ್ಧ ಮಾತನಾಡುತ್ತೀರಾ? ಇಂತಹ ವ್ಯಕ್ತಿಗಳ ವಿರುದ್ಧ ಹೇಗೆ ಹೋರಾಡಬೇಕು ಎಂಬುದು ನನಗೆ ಗೊತ್ತಿದೆ.

ಮೋದಿ ತಮ್ಮ ಬಾಯಿ ಹಿಡಿತದಲ್ಲಿಟ್ಟುಕೊಂಡು ಮಾತನಾಡಿದರೆ ಒಳ್ಳೆಯದು. ನನ್ನಂತಹ ವ್ಯಕ್ತಿಯನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಾಡಲು ಮೋದಿ ಸರ್ಕಾರ ಮುಂದಾಗಿಲ್ಲ. ಅಲ್ಲಿ ದಲಿತರಿಗೆ ವಿರೋಧ ಪಕ್ಷದ ನಾಯಕನನ್ನಾಗಿ ಮಾಡಲು ಮುಂದಾಗದ ಅವರು ಇಲ್ಲಿಗೆ ಬಂದು ನನ್ನ ಬಗ್ಗೆ ಕಾಳಜಿ ತೋರಿಸುತ್ತಿದ್ದಾರೆ. ಪ್ರೀತಿ ನನ್ನ ಜೊತೆ, ಮದುವೆ ಇನ್ನೊಬ್ಬರ ಜೊತೆ. ಮದುವೆ ಈಗಾಗಲೇ ಬಿಜೆಪಿಯೊಂದಿಗೆ ಆಗಿದೆ. ಆದರೆ ಪ್ರೀತಿಯನ್ನು ದಲಿತರೊಂದಿಗೆ ತೋರಿಸುತ್ತಿದ್ದಾರೆ ಎಂದರು.

Trending videos

Back to Top