CONNECT WITH US  

ಟಾಪ್‌ ಏರಿ ಕುಳಿತರೂ ಕೇಳ್ಳೋರಿಲ್ಲ

ಕೆಎಸ್‌ಆರ್‌ಟಿಸಿ ಬಸ್‌ಗಳ ಕೊರತೆಯಿಂದ ಖಾಸಗಿ ಬಸ್‌ಗಳು ತುಂಬಿ ತುಳುಕುತ್ತಿದ್ದ ದೃಶ್ಯ ಶನಿವಾರ ಎಲ್ಲೆಡೆ ಕಂಡುಬಂತು. ಬಸ್‌ಗಳ ಟಾಪ್‌ನಲ್ಲಿ  ಪ್ರಯಾಣಿಕರನ್ನು ಕೂರಿಸಬಾರದು ಎಂಬ ನಿಯಮ ಉಲ್ಲಂ ಸಿದ ಖಾಸಗಿ ಬಸ್‌ನವರು, ಸಂಚಾರ ಪೊಲೀಸರ ಎದುರಿನಲ್ಲಿಯೇ ಬಸ್‌ಗಳ ಟಾಪ್‌ನಲ್ಲಿ ಪ್ರಯಾಣಿಕರನ್ನು ಕೂರಿಸಿಕೊಂಡಿ ಹೋಗುತ್ತಿದ್ದರು. ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು. 

ವಾಹನ ದಟ್ಟಣೆಗೆ ಹೆದ್ದಾರಿಗಳು ಬಂದ್‌: ಮತದಾನಕ್ಕಾಗಿ ಸಾರ್ವಜನಿಕರು ತಮ್ಮ ಊರುಗಳಿಗೆ ತೆರಳಿದ ಪರಿಣಾಮ ಶುಕ್ರವಾರ ರಾತ್ರಿ ಹಾಗೂ ಶನಿವಾರ  ಬೆಳಗ್ಗೆ ನಗರದ ಪ್ರಮುಖ ಹೆದ್ದಾರಿಗಳು ಅಕ್ಷರಶಃ ಬಂದ್‌ ಆಗಿದ್ದವು. ಮೈಸೂರು, ತುಮಕೂರು ಹಾಗೂ ಹಳೆ ಮದ್ರಾಸ್‌ ರಸ್ತೆಗಳಲ್ಲಿ ಟ್ರಾμಕ್‌ ಜಾಮ್‌ನಲ್ಲಿ  ಸಿಲುಕಿದ ವಾಹನಗಳು, ನಿಂತ ಜಾಗದಿಂಧ ಗಂಟೆಗಟ್ಟಲೆ ಕದಲಲಿಲ್ಲ. ಪರಿಣಾಮ, ಪ್ರಯಾಣಿಕರು, ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು.  ಪ್ರಮುಖವಾಗಿ ಟೋಲ್‌ ಕೇಂದ್ರಗಳಿರುವ ತುಮಕೂರು ಹಾಗೂ ಮೈಸೂರು ರಸ್ತೆಗಳಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿ, ಕಿಲೋ ಮೀಟರ್‌ ಉದ್ದದವರೆಗೆ  ವಾಹನಗಳು ನಿಂತಿದ್ದವು. 

ಉಚಿತ ಆಟೋ ಸೇವೆ: ಮತಗಟ್ಟೆಗಳಿಗೆ ತೆರಳುವ ಗರ್ಭಿಣಿ, ವಯೋವೃದ್ಧರು, ವಿಕಲಚೇನತರಿಗೆ ವೃಷಭಾವತಿ ನಗರದ  ಆರ್‌.ಜೆ.ಗೌಡ ಎಂಬುವವರು  ಉಚಿತ ಆಟೋ ಸೇವೆ ಒದಗಿಸುವ ಮೂಲಕ ಮತದಾನಕ್ಕೆ ಪ್ರೋತ್ಸಾಹಿಸಿದ್ದಾರೆ. ಶನಿವಾರ ಬೆಳ್ಳಗ್ಗೆಯಿಂದ ಸಂಜೆವರೆಗೆ ನೂರಕ್ಕೂ ಹೆಚ್ಚಿನ ಮತದಾರರನ್ನು  ತಮ್ಮ ಆಟೋದಲ್ಲಿ ಮತಗಟ್ಟೆಗೆ ಕರೆದುಕೊಂಡು ಹೋಗಿ ಮತದಾನದ ನಂತರ ಅವರನ್ನು ಮನೆಗೆ ತಲುಪಿಸುವ ಕೆಲಸವನ್ನು  ಆರ್‌.ಜೆ.ಗೌಡ ಮಾಡಿದರು.  

Trending videos

Back to Top