CONNECT WITH US  

ಎಚ್‌ಐವಿ ಸೋಂಕಿತರಲ್ಲಿ ಧೈರ್ಯ ತುಂಬಿ

ಮುಂಡಗೋಡ: ಏಡ್ಸ್‌ ಬಂದ ತಕ್ಷಣ ಸಾವು ಎಂದರ್ಥವಲ್ಲ. ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಎಚ್‌ಐವಿ ಸೊಂಕಿತರನ್ನು ಅಲಕ್ಷಿಸದೆ ಅವರಲ್ಲಿ ಧೈರ್ಯ ತುಂಬಿ ನಮ್ಮಂತೆ ಬದುಕಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಸಿವಿಲ್‌ ನ್ಯಾಯಾಧೀಶೆ ರೇಷ್ಮಾ ಕೆ.ಗೋಣಿ ಹೇಳಿದರು.

ವಿವೇಕಾನಂದ ಬಯಲು ರಂಗಮಂದಿರದಲ್ಲಿ ವಿಶ್ವ ಎಚ್‌ಐವಿ/ ಏಡ್ಸ್‌ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವೈದ್ಯಾಧಿಕಾರಿ ಡಾ| ಲಕ್ಷ್ಮೀದೇವಿ ಮಾತನಾಡಿ, ಎಚ್‌ಐವಿ ಬಾಧಕರು ಇತರರಂತೆ ಸಮಾನವಾಗಿ ಬದುಕಬೇಕು. ಅಂಥವರ ಮಕ್ಕಳ ಸ್ಥಿತಿಗತಿ ಬಗ್ಗೆ ಸಮಾಜ ಗಮನ ಹರಿಸಿ ಅವರ ಏಳಿಗೆಗೆ ಶ್ರಮಿಸಬೇಕು. ಏಡ್ಸ್‌ ಮುಕ್ತ ರಾಷ್ಟ್ರವನ್ನಾಗಿಸಲು ಪಣತೊಡಬೇಕು.

ಮುಂಡಗೋಡದಲ್ಲಿ 109 ಸೊಂಕಿತರಿದ್ದಾರೆ. ಅವರಲ್ಲಿ 83 ಜನ ಎಆರ್‌ಟಿಗೆ ಒಳಪಟ್ಟವರಿದ್ದಾರೆ. ಉಳಿದವರು ಯಾವುದೇ ರೀತಿಯ ಚಿಕಿತ್ಸೆ ಪಡೆಯಲು ಬಂದಿಲ್ಲ. ಸೋಂಕಿತರು ಕೀಳರಿಮೆ ತೊರೆಯಬೇಕೆಂದರು. ಲೊಯೋಲ ಸಂಸ್ಥೆ ಮುಖ್ಯಸ್ಥ ಫಾ| ಅರುಣ್‌ ಲೂಯಿಸ್‌ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣದ ಎಜಿ ಚರ್ಚ್‌, ಮಾರಿಕಾಂಬಾ ದೇವಸ್ಥಾನ, ಜ್ಯೋತಿ ಆರೋಗ್ಯ ಕೇಂದ್ರದಿಂದ ಏಕ ಕಾಲಕ್ಕೆ ಜಾಗೃತಿ ಜಾಥಾ 
ಪ್ರಾರಂಭಗೊಂಡಿತು. ವೈದ್ಯಾಧಿಕಾರಿ ಡಾ| ಕಿರಣ, ಫಾ| ಫ್ರಾನ್ಸಿಸ್‌ ಬಾಲರಾಜ ಮತ್ತು ವಿನಾಯಕ ರಾಯ್ಕರ ಜಾಥಾಕ್ಕೆ ಚಾಲನೆ ನೀಡಿದರು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಲೊಯೋಲ ಪಪೂ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. 

ತಹಶೀಲ್ದಾರ ಅಶೋಕ ಗುರಾಣಿ, ಶಾಜಿ ಥಾಮಸ್‌, ಫಾ| ಪಿ.ಟಿ. ಸಾಮ್‌ಸನ್‌, ಲೂವಿಜಾ ಫರ್ನಾಡಿಸ್‌, ಪ್ರಮೊದ ಪಡ್ತಿ, ಎಲ್‌. ನರಸಿಂಹಮೂರ್ತಿ, ಎ.ಟಿ. ಹೊಂಗಲ್‌, ಮಹಾಬಲೇಶ್ವರ ನಾಯ್ಕ, ಅಜಿತ್‌ ಜನಗೌಡಾ ಮತ್ತು ಜಿ.ಎಸ್‌ ಕಾತೂರ ಇದ್ದರು. ವಿನಾಯಕ ಶೇಟ್‌ ಮತ್ತು ಬಸವರಾಜ ನಿರೂಪಿಸಿದರು. ಲೊಕೇಶ ಕಲಾಲ ವಂದಿಸಿದರು.

ಇಂದು ಹೆಚ್ಚು ಓದಿದ್ದು

ತುಮಕೂರಿನ ಹಳೆ ಸಿದ್ಧಗಂಗಾ ಮಠದ ಆವರಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್

Jan 18, 2019 06:50am

ರಾಜ್ಯ ಸರ್ಕಾರ ಪತನಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿ ಬೆಂಗಳೂರಿನಲ್ಲಿಮಾಜಿ ಸಚಿವ ಎಚ್‌.ಕೆ.ಪಾಟೀಲ್‌, ಜಯಮಾಲಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

Jan 18, 2019 06:50am

Trending videos

Back to Top