CONNECT WITH US  

ಮನ ಗೆದ್ದ ಯಕ್ಷದ್ವಂದ್ವ ಗಾಯನ

ಶಿರಸಿ: ತಾಲೂಕಿನ ಹುಲೇಕಲ್‌ ರಸ್ತೆಯಲ್ಲಿರುವ ಕಲ್ಗಾರ್‌ ವಡ್ಡುವಿನಲ್ಲಿ ಸಂಘಟಿಸಲಾಗಿದ್ದ ರಘು ರಾಮರ ಯಕ್ಷದ್ವಂದ್ವ ಗಾಯನ ಕಲಾಸಕ್ತರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು. ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ ಮತ್ತು ರಾಮಕೃಷ್ಣ ಹೆಗಡೆ ಹಿಲ್ಲೂರ್‌ ಆಯ್ದ ಪೌರಾಣಿಕ ಪ್ರಸಂಗಗಳ ಹಾಡನ್ನು ಒಂದೊಂದಾಗಿ ಹಾಡಿದರು. ಜನ್ಸಾಲೆ ಬಲರಾಮನ ಒಡ್ಡೊಲಗ ಪ್ರಸಂಗದ ಹಾಗೂ ಹಿಲ್ಲೂರು ರತ್ನಾವತಿ ಕಲ್ಯಾಣದ ಹಾಡುಗಳನ್ನು, ಶೃಂಗಾರ ರಸ ಹಾಡಿನಲ್ಲಿ ಜನ್ಸಾಲೆ ತ್ರಿಲೋಕ ಸುಂದರಿಯ ಪ್ರವೇಶದ ಹಾಗೂ ಕಂಸವಧೆ ಪ್ರಸಂಗದ ಹಾಡನ್ನು ಸೊಗಸಾಗಿ ಹಾಡಿದರೆ ಹಿಲ್ಲೂರ್‌ ಬಬ್ರುವಾಹನ ಕಾಳಗ ಮತ್ತು ದೇವಿ ಮಹಾತ್ಮೆ ಪ್ರಸಂಗದ ಹಾಡುಗಳ
ಹಾಡಿದರು. ಶಶಿಪ್ರಭಾ ಪರಿಣಯ ಹಾಗೂ ಹಿಲ್ಲೂರ ರಾಮಕೃಷ್ಣ ಭೀಷ್ಮ ವಿಜಯ ಪ್ರಸಂಗದ ಹಾಸ್ಯ ಸನ್ನಿವೇಶದ ಹಾಡುಗಳನ್ನು
ಹಾಡಿದರು.

ಮದ್ದಲೆಯಲ್ಲಿ ಶಂಕರ ಭಾಗವತ ಹಾಗೂ ಸುನೀಲ್‌ ಭಂಡಾರಿ ಕಡತೋಕಾ ಮತ್ತು ಚಂಡೆ ವಾದನದಲ್ಲಿ ಗಣೇಶ ಗಾಂವಕರ್‌ ಹಾಗೂ
ಸುಜನಕುಮಾರ್‌ ಹಾಲಾಡಿ ದ್ವಂದ್ವ ವಾದನ ನುಡಿಸಿದರು. ವೇದಮೂರ್ತಿ ಮಂಜುನಾಥ ಭಟ್ಟ ಕೈಲಗಾರ ಉದ್ಘಾಟಿಸಿದರು.
ಮಂಜುನಾಥ ಭಟ್ಟ ಹಾಗೂ ದಿನೇಶ ಭಟ್ಟ ದಂಪತಿಗಳು ಕಲಾವಿದರನ್ನು ಗೌರವಿಸಿದರು. ಗಿರಿಧರ ಕಬ್ನಳ್ಳಿ ನಿರೂಪಿಸಿದರು.

Trending videos

Back to Top