ಪಿಯುಸಿ ಪರೀಕ್ಷೆ ಮುಗಿದ ಬಳಿಕ ಏನು ಮಾಡಬೇಕು?


Team Udayavani, Mar 31, 2017, 1:59 PM IST

puc1.jpg

ರಜಾ ಅವಧಿಯಲ್ಲಿ ಕೋರ್ಸ್‌, ತರಬೇತಿಗಳು

ಪರೀಕ್ಷೆ ಎಲ್ಲ ಮುಗಿಯಿತು. ಇನ್ನಿರುವುದು ಮುಂದಿನ ಆಯ್ಕೆ ಬಗ್ಗೆ. ಹಲವಾರು ಕೋರ್ಸ್‌ಗಳಿವೆ. ಆದರೆ ಸರಿಯಾದ ಆಯ್ಕೆ ಹೇಗೆ ಮಾಡಲಿ ಎಂಬ ಗೊಂದಲ ಮನದಲ್ಲಿ ಎದ್ದಾಗಿದೆ. ಹೆತ್ತವರ ಸಲಹೆ ಒಂದಾದರೆ, ಮಕ್ಕಳದ್ದು ಇನ್ನೊಂದು. ಈ ನಡುವೆ ಹುಟ್ಟಿದ ಹಲವಾರು ಅನುಮಾನಗಳು. ಯಾವುದು, ಎಲ್ಲಿ, ಏನು, ಹೇಗೆ…? ಇದಕ್ಕಾಗಿಯೇ ಒಂದಷ್ಟು ಮಾಹಿತಿ ಇಲ್ಲಿವೆ.

ಹಲವು ವಿದ್ಯಾರ್ಥಿಗಳು ಯಾವಾಗ ಪಿಯುಸಿ ಪರೀಕ್ಷೆ ಮುಗಿಯುತ್ತದೆ ಹಾಗೂ ಯಾವಾಗ ರಜೆ ಸಿಗುತ್ತದೆ ಎಂದು ಕಾಯುತ್ತಿರುತ್ತಾರೆ. ರಜೆ ಸಿಕ್ಕ ಮೇಲೆಯಂತೂ ವಿದ್ಯಾರ್ಥಿಗಳಿಗೆ ಮನೆಯಲ್ಲೇ ಕೂತು ಬೋರ್‌ ಎನಿಸಲಾರಂಭಿಸುತ್ತದೆ. ಈ ನಿಟ್ಟಿನಲ್ಲಿ ತಮ್ಮ ಶಿಕ್ಷಣ, ಪ್ರತಿಭೆಗೆ ಪೂರಕ ಕೋರ್ಸ್‌ ಹಾಗೂ ತರಬೇತಿಗಳನ್ನು ಪಡೆದುಕೊಂಡು ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಬೆಳೆಸಿಕೊಳ್ಳಬಹುದು.

ರಜಾ ಅವಧಿಯಲ್ಲಿ ವಿದ್ಯಾರ್ಥಿಗಳು ಸಾಕಷ್ಟು ಕೋರ್ಸ್‌ಗಳನ್ನು ಮಾಡಿಕೊಳ್ಳಬಹುದಾಗಿದ್ದು, ಕೆಲವು ಕೋರ್ಸ್‌ಗಳಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೂ ಸಹಾಯಕವಾಗುವುದಲ್ಲದೇ, ಅವರ ಪ್ರತಿಭೆಯೂ ಹೊರಹೊಮ್ಮಲು ಸಹಕಾರಿಯಾಗುತ್ತದೆ. ಈ ಕೋರ್ಸ್‌ ಹಾಗೂ ತರಬೇತಿಗಳ ಸಹಾಯದಿಂದ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಬಳಿಕವೂ ಇದೇ ಕ್ಷೇತ್ರದಲ್ಲಿ ಬೆಳೆಯಲು ಕೂಡ ಸಾಧ್ಯವಿದೆ.

ಡಿಟಿಪಿ ಕೋರ್ಸ್‌
ವಿದ್ಯಾರ್ಥಿಗಳು ತಮ್ಮ ಮೊಬೈಲ್‌ನಲ್ಲಿ ಫೋಟೊ ಹಾಗೂ ವಿಡಿಯೋಗಳನ್ನು ಮಾಡುತ್ತಾರಾದರೂ ಅದನ್ನು ಉಳಿಸಿಕೊಳ್ಳುವ ಹಾಗೂ ಉತ್ತಮ ರೂಪ ನೀಡುವ ನಿಟ್ಟಿನಲ್ಲಿ ಯಾವುದೇ ಮಾಹಿತಿ ಹೊಂದಿರುವುದಿಲ್ಲ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮಗೆ ದೊರೆತಿರುವ ರಜಾ ಅವಧಿಯಲ್ಲಿ ಫೋಟೋಶಾಪ್‌ ಅಥವಾ ವಿಡಿಯೋ ಎಡಿಟಿಂಗ್‌ ಕೋರ್ಸ್‌ ಗಳನ್ನು ಮಾಡಿದಲ್ಲಿ  ಫೋಟೋ ಹಾಗೂ ವಿಡಿಯೋಗಳನ್ನು ಎಡಿಟ್‌ ಮಾಡಬಲ್ಲರು ಹಾಗೂ ಕಂಪ್ಯೂಟರ್‌ ಕುರಿತು ಉತ್ತಮ ಜ್ಞಾನವನ್ನೂ ಪಡೆಯಬಲ್ಲರು. ಡಿಟಿಪಿ ಕೋರ್ಸ್‌ ಕೂಡ ಉತ್ತಮವಾಗಿದ್ದು, ವಿದ್ಯಾರ್ಥಿಗಳು ಕಂಪ್ಯೂಟರ್‌ ಸಂಬಂಧಿತ ವಿಷಯಗಳನ್ನು ಪಡೆದಿದ್ದಲ್ಲಿ ಅಥವಾ ಪಡೆದಿಲ್ಲವಾಗಿದ್ದರೂ ಅವರ ಭವಿಷ್ಯದಲ್ಲಿ ಉತ್ತಮ ರೀತಿಯಲ್ಲಿ ಸಹಾಯಕವಾಗಲಿದೆ. 

ನಾಟಕ, ಶಿಲ್ಪಕಲೆ ಕಲಿಕೆ
ಕಲಿಕಾ ವಿಷಯಕ್ಕೆ ಸಂಬಂಧಿಸಿದ್ದರೊಂದಿಗೆ ಪ್ರತಿಭೆಗೂ ಪೂರಕವಾಗಿ ರಜಾ ಸಮಯದಲ್ಲಿ ವಿದ್ಯಾರ್ಥಿಗಳು ನಾಟಕ, ಕ್ರಾಫ್ಟ್‌ ಹಾಗೂ ಮಣ್ಣಿನ ಪಾತ್ರೆ ಮತ್ತು ವಸ್ತುಗಳ ನಿರ್ಮಾಣ, ಶಿಲ್ಪಕಲೆಯ ಬಗ್ಗೆಯೂ ಕಲಿತುಕೊಳ್ಳಬಹುದಾಗಿದೆ. ಈ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಎಲ್ಲವನ್ನೂ ಅಲ್ಪ ಸಮಯದಲ್ಲಿ ಕಲಿಯಲು ಸಾಧ್ಯವಿಲ್ಲದಿದ್ದರೂ ಅಗತ್ಯ ಹಾಗೂ ಪೂರಕ ಅಂಶಗಳನ್ನು ಕಲಿತುಕೊಳ್ಳಬಹುದು. ಇದರಿಂದ ಅವರೊಳಗಿನ ಪ್ರತಿಭೆಯನ್ನು ಒರೆಗೆ ಹಚ್ಚಿದಂತಾಗುವುದಲ್ಲದೇ, ಈ ಕ್ಷೇತ್ರದಲ್ಲಿ ಅವರ ಜ್ಞಾನವೂ ಹೆಚ್ಚಾಗುತ್ತದೆ. ಅಲ್ಲದೇ, ಶಿಕ್ಷಣ ಕ್ಷೇತ್ರದಲ್ಲಿ ಈ ವಿಷಯಗಳಿಗೆ ಪೂರಕವಾದ ವಿಷಯಗಳಿದ್ದರೆ ಅವರಿಗೂ ಸಹಾಯಕವಾಗುತ್ತದೆ. ವಿದ್ಯಾರ್ಥಿಗಳು ಕುಕ್ಕಿಂಗ್‌ ಕೂಡಾ ಕಲಿಯಬಹುದಾಗಿದ್ದು, ಇದರಿಂದ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಲು ಕೂಡ ಸಾಧ್ಯ. 

ಸೀRÅನ್‌ ಪ್ರಿಂಟಿಂಗ್‌, ಎಂಬ್ರಾಯxರಿ, ಡಿಸೈನಿಂಗ್‌ರಜಾ ಅವಧಿಗಳಲ್ಲಿ ಸ್ಕೀÅನ್‌ ಪ್ರಿಂಟಿಂಗ್‌ ಕಲಿಯಲು ತೆರಳಬಹುದಾಗಿದೆ. ಕೆಲವು ಗ್ರೀಟಿಂಗ್ಸ್‌ ಕಾರ್ಡ್‌ಗಳ ಡಿಸೈನ್‌ಗಳಿಗೆ ಕಾರ್ಮಿಕರನ್ನೇ ಬಳಸಲಾಗುತ್ತದೆ. ಕೆಲವು ಸೀRÅನ್‌ ಪ್ರಿಂಟಿಂಗ್‌ನ ಅಂಗಡಿಗಳಲ್ಲಿ ಸೇರಿಕೊಂಡು ಇದನ್ನು ಕಲಿಯಬಹುದು. ಇನ್ನು ಎಂಬ್ರಾಯxರಿ, ಡಿಸೈನಿಂಗ್‌ಗಳನ್ನು ಕೆಲವು ಟೈಲರಿಂಗ್‌ ತರಬೇತಿಗಳಲ್ಲಿ ಕಲಿಸುತ್ತಾರೆ. ಫ್ಯಾಶನ್‌ 
ಡಿಸೈನಿಂಗ್‌ ಕೋರ್ಸ್‌ಗೆ ಸೇರ ಬಯಸುವವರಿಗೆ ಇಂತಹ ತರಬೇತಿಗಳು ಪೂರಕವಾಗಿವೆ.
 
ಆ್ಯಂಕರಿಂಗ್‌ ಕೋರ್ಸ್‌
ಮಾಧ್ಯಮ ಕ್ಷೇತ್ರಕ್ಕೆ ಪೂರಕವಾದಂತಹ ಆ್ಯಂಕರಿಂಗ್‌ ಕೋರ್ಸ್‌ಗಳನ್ನು ಕೆಲವು ಖಾಸಗಿ ಸಂಸ್ಥೆ ಹಾಗೂ ಮಾಧ್ಯಮಗಳೇ ನಡೆಸುತ್ತಿದ್ದು, ಉತ್ತಮ ಮಾತು ಬಲ್ಲ ವಿದ್ಯಾರ್ಥಿಗಳು ಈ ಕೋರ್ಸ್‌ಗಳಿಗೆ ಸೇರಿಕೊಂಡು ತಮ್ಮ ಪ್ರತಿಭೆಗಳನ್ನು ಇನ್ನಷ್ಟು ಬೆಳಗಿಸಿ ವಿವಿಧ ಮಾಧ್ಯಮ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಬಹುದಾಗಿದೆ. ಕೆಲವು ಟಿವಿ ಮಾಧ್ಯಮಗಳಲ್ಲೂ ಉತ್ತಮ ಅವಕಾಶ ಪಡೆದುಕೊಳ್ಳಬಹುದು.

ಮೆಹಂದಿ, ಹೇರ್‌ ಡ್ರೆಸ್‌, ಫೇಸ್‌ ಮಸಾಜ್‌
ಪ್ರಸ್ತುತ ಹೆಚ್ಚು ಬೇಡಿಕೆ ಹಾಗೂ ಹೆಚ್ಚು ಗಳಿಸಬಹುದಾದ ದಾರಿಯಾಗಿದ್ದು, ಇವುಗಳನ್ನು ಕಲಿಸಲು ಕೋರ್ಸ್‌ಗಳು ಕೂಡ ಲಭ್ಯವಿದೆ. ಮದುವೆ ಮುಂತಾದ ಕಾರ್ಯಕ್ರಮಗಳಲ್ಲಿ ಮೆಹಂದಿ, ಹೇರ್‌ ಡ್ರೆಸ್‌ ಮಾಡುವವರು ಹೆಚ್ಚು ಅಗತ್ಯ ಬೀಳುತ್ತಿದ್ದು, ನ್ಯಾಚುರೋಪತಿ ಮಸಾಜ್‌ ಕೇಂದ್ರಗಳಲ್ಲಿ , ಬ್ಯೂಟಿ ಪಾರ್ಲರ್‌ಗಳಲ್ಲಿ ಫೇಸ್‌ ಮಸಾಜ್‌ ಚಿಕಿತ್ಸೆಯ ರೂಪದಲ್ಲಿ ನೀಡಲಾಗುತ್ತದೆ. ಎಲ್ಲರೂ ಇದನ್ನು ನಡೆಸಲು ಸಾಧ್ಯವಿರದ್ದರಿಂದ ಉತ್ತಮ ಜ್ಞಾನ ಹೊಂದಿರುವ ತಜ್ಞರಿಂದಲೇ ಮಾಡಿಸಲಾಗುತ್ತದೆ. ಈ ಕ್ಷೇತ್ರದಲ್ಲಿ ಹೆಚ್ಚಿನ ತರಬೇತಿ ಪಡೆದುಕೊಂಡು ಗಳಿಕೆಯ ಮಾರ್ಗವನ್ನಾಗಿಸಬಹುದು.

ಮೊಬೈಲ್‌, ಕಂಪ್ಯೂಟರ್‌ ಹಾರ್ಡ್‌ವೇರ್‌ 
ತಂತ್ರಜ್ಞಾನದಲ್ಲಿ ಹೆಚ್ಚು ಆಸಕ್ತಿಯುಳ್ಳ ವಿದ್ಯಾರ್ಥಿಗಳು ಮೊಬೈಲ್‌, ಟಿವಿ, ಕಂಪ್ಯೂಟರ್‌ ಹಾರ್ಡ್‌ವೇರ್‌ಗೆ ಸಂಬಂಧಿಸಿದ ಶಾರ್ಟ್‌ ಟೈಮ್‌ ಕೋರ್ಸ್‌ಗಳಿಗೂ ಸೇರಿಕೊಳ್ಳಬಹುದು. ಪದವಿಯಲ್ಲಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಕಲಿಯುವುದಾದಲ್ಲಿ ಹಾರ್ಡ್‌ವೇರ್‌ಗಳ ಬಗ್ಗೆ ಜ್ಞಾನ ಪಡೆಯಬಹುದಲ್ಲದೇ, ಕಲಿಕೆಯೊಂದಿಗೆ ಇತರೆಡೆ ಸೇವೆ ನೀಡುವ ಮೂಲಕ ಗಳಿಕೆಯ ಮಾರ್ಗವನ್ನಾಗಿಸಬಹುದಾಗಿದೆ.
 
ಮೊಲ, ಹಂದಿ, ಕೋಳಿ ಸಾಕಣೆ
ಕೆಲವೆಡೆ ಪ್ರಾಣಿಗಳ ಸಾಕಾಣೆಗೆ ಸಂಬಂಧಿಸಿ ತರಬೇತಿಗಳು ಲಭ್ಯವಿದ್ದು, ಪ್ರಾಣಿಗಳನ್ನು ಸಾಕುವಲ್ಲಿ ವಿದ್ಯಾರ್ಥಿಗಳು ಗಮನ ಹರಿಸುವುದಾದಲ್ಲಿ ಇಂತಹ ಕ್ಷೇತ್ರದತ್ತವೂ ಮುಖ ಮಾಡಬಹುದು. ತರಬೇತಿಯ ಬಳಿಕ ಮೊಲ, ಹಂದಿ ಹಾಗೂ ಕೋಳಿ ಸಾಕಣೆ ಕೇಂದ್ರವನ್ನು ತೆರೆಯಬಹುದು. ಒಂದು ಹಂದಿ ಮರಿಗೆ ಕೆಲವೆಡೆ 2000ರೂ. ಮೌಲ್ಯವಿದೆ. ಈ ನಿಟ್ಟಿನಲ್ಲಿ ಇದು ಕೂಡಾ ಉತ್ತಮ ಮಾರ್ಗವಾಗಿದ್ದು, ಗಳಿಕೆಯನ್ನೂ ಪಡೆಯಬಹುದು.

ಮೆಮೊರಿ ಕ್ಯಾಂಪ್‌
ಬೌದ್ಧಿಕ ಸಾಮರ್ಥಯವನ್ನು ವೃದ್ಧಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮೆಮೊರಿ ಕ್ಯಾಂಪ್‌ಗ್ಳಿಗೂ ಸೇರಬಹುದು. ಇದರ ಮೂಲಕ ಸುಮಾರು 13 ವಿಷಯಗಳನ್ನು ಒಟ್ಟಿಗೆ ನೆನಪಿನಲ್ಲಿಡುವ ಹಾಗೂ ಹೇಳುವಂತಹ ಸಾಮರ್ಥಯ ವಿದ್ಯಾರ್ಥಿಗಳಲ್ಲಿ ಬೆಳೆಯುತ್ತದೆ. ಈ ಬುದ್ಧಿ ಶಕ್ತಿ ವೃದ್ಧಿ ಕೋರ್ಸ್‌ನಲ್ಲಿ ವಿದ್ಯಾರ್ಥಿಗಳು ಬರೆಯುವುದು, ಮಾತನಾಡುವುದು ಹಾಗೂ ಸಾಮಾನ್ಯ ಜ್ಞಾನದ ತಿಳುವಳಿಕೆ ಕಡ್ಡಾಯವಾಗಿರುತ್ತದೆ. ಪ್ರತಿಭಾನ್ವೇಷಣೆಗೆ ಒತ್ತು ನೀಡುವ ಈ ಕ್ಯಾಂಪ್‌ನಿಂದಾಗಿ ವಿದ್ಯಾರ್ಥಿಗಳು ಒಟ್ಟು 10 ಪ್ರತಿಭೆಗಳನ್ನು ತಮ್ಮದಾಗಿಸಿಕೊಳ್ಳಬಹುದಾಗಿದ್ದು, ನಮ್ಮಲ್ಲೇ ಅಡಕವಾಗಿರುವ ಇವುಗಳನ್ನು ವ್ಯಕ್ತಪಡಿಸುವುದು ಕ್ಯಾಂಪ್‌ನ ಉದ್ದೇಶ. 

ಇದರ ಮೂಲಕ ವಿದ್ಯಾರ್ಥಿಗಳು ಶಾಲೆ- ಕಾಲೇಜಿನಲ್ಲಿ ಕಲಿಸುವ ವಿಷಯಗಳನ್ನು ಹೆಚ್ಚು ಪ್ರೀತಿಸುವಂತಾಗುತ್ತದೆ. ದೇಹದ ಸಾಮರ್ಥಯವನ್ನು ಹೆಚ್ಚಿಸಲು ಥೆರಪಿಯ ಮೂಲಕ ಇದನ್ನು ಕಲಿಸಲಾಗುತ್ತದೆ. ಸ್ವರೂಪ ಅಧ್ಯಯನ ಕೇಂದ್ರದಲ್ಲಿ ಇದಕ್ಕೆ ಸಂಬಂಧಿಸಿದ 6 ದಿನಗಳ ಹಾಗೂ 12 ದಿನಗಳ ಕ್ಯಾಂಪ್‌ಗ್ಳನ್ನು ನಡೆಸಲಾಗುತ್ತದೆ. ಎಲ್‌ಕೆಜಿಯಿಂದ 5ನೇ ತರಗತಿ ಹಾಗೂ 6ನೇಯಿಂದ ಸಾಮಾನ್ಯರವರೆಗೂ ಎರಡು ವಿಭಾಗದಲ್ಲಿ ಮಾಡಲಾಗುತ್ತದೆ. ಈ ಕೋರ್ಸ್‌ ಪಡೆದುಕೊಂಡ ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸಲು ಪೂರಕವಾಗಿದೆ ಎಂದು ಹೇಳುತ್ತಾರೆ ಸ್ವರೂಪ ಅಧ್ಯಯನ ಕೇಂದ್ರದ ನಿರ್ದೇಶಕ ಗೋಪಾಡ್ಕರ್‌.

ಕ್ರೀಡೆ ಹಾಗೂ ಆರ್ಟ್‌ ತರಬೇತಿಗಳು
ರಜೆಗಳನ್ನು ಸದುಪಯೋಗಗೊಳಿಸಲು ವಿದ್ಯಾರ್ಥಿಗಳು ಕ್ರಿಕೆಟ್‌, ಸ್ವಿಮ್ಮಿಂಗ್‌, ಸ್ಕೇಟಿಂಗ್‌ ಮುಂತಾದ ಕ್ರೀಡಾ ತರಬೇತಿಗಳನ್ನು ಪಡೆಯಬಹುದಲ್ಲದೇ, ಪೈಯಿಂಟಿಂಗ್‌, ಸ್ಕೆಚ್ಚಿಂಗ್‌, ಗ್ಲಾಸ್‌ ಪೈಂಟಿಂಗ್‌ ಮುಂತಾದ ಕಲೆಯ ಕುರಿತ ಕೋರ್ಸ್‌ಗಳಿಗೂ ಸೇರಿಕೊಳ್ಳಬಹುದು. ಇದರಿಂದ ವಿದ್ಯಾರ್ಥಿಗಳ ಮಾನಸಿಕ ಹಾಗೂ ದೈಹಿಕ ಸಾಮರ್ಥಯ ವೃದ್ಧಿಸುತ್ತದಲ್ಲದೇ, ಮುಂದಿನ ಕಲಿಕೆಗೂ ಸಹಾಯಕವಾಗುತ್ತದೆ.

ಟಾಪ್ ನ್ಯೂಸ್

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Apologize for the size of the wrong ad: Supreme to Ramdev

Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್‌ ಗೆ ಸುಪ್ರೀಂ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election; Vigorous fight of new faces in Dakshina Kannada

Lok Sabha Election; ದಕ್ಷಿಣ ಕನ್ನಡದಲ್ಲಿ ಹೊಸ ಮುಖಗಳ ಹುರುಪಿನ ಸೆಣಸಾಟ

Defense Expenditure: India to rank fourth in the world by 2023

Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Bhojshala: ASI seeks 8 weeks time for scientific survey

Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್‌ಐ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

5-ksrgdu

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 

Kasaragod ಎನ್‌ಡಿಎ ಅಭ್ಯರ್ಥಿ ಅಶ್ವಿ‌ನಿ ಪ್ರಚಾರಕ್ಕೆ ಅಡ್ಡಿ: ಕೇಸು ದಾಖಲು

Kasaragod ಎನ್‌ಡಿಎ ಅಭ್ಯರ್ಥಿ ಅಶ್ವಿ‌ನಿ ಪ್ರಚಾರಕ್ಕೆ ಅಡ್ಡಿ: ಕೇಸು ದಾಖಲು

ಸಿಡಿದ ಗ್ಯಾಸ್‌ ಸಿಲಿಂಡರ್‌; ಪಾರಾದ ಕುಟುಂಬ: ಶೇಣಿ ಬಾರೆದಳದಲ್ಲಿ ಮನೆಗೆ ತಗಲಿದ ಬೆಂಕಿ

ಸಿಡಿದ ಗ್ಯಾಸ್‌ ಸಿಲಿಂಡರ್‌; ಪಾರಾದ ಕುಟುಂಬ: ಶೇಣಿ ಬಾರೆದಳದಲ್ಲಿ ಮನೆಗೆ ತಗಲಿದ ಬೆಂಕಿ

banUppala ಮನೆಯಿಂದ ನಗ, ನಗದು ಕಳವು: ಯುವಕನಿಗೆ ಕೋವಿ ತೋರಿಸಿ ಬೆದರಿಕೆ

Uppala ಮನೆಯಿಂದ ನಗ, ನಗದು ಕಳವು: ಯುವಕನಿಗೆ ಕೋವಿ ತೋರಿಸಿ ಬೆದರಿಕೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Apologize for the size of the wrong ad: Supreme to Ramdev

Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್‌ ಗೆ ಸುಪ್ರೀಂ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election; Vigorous fight of new faces in Dakshina Kannada

Lok Sabha Election; ದಕ್ಷಿಣ ಕನ್ನಡದಲ್ಲಿ ಹೊಸ ಮುಖಗಳ ಹುರುಪಿನ ಸೆಣಸಾಟ

Defense Expenditure: India to rank fourth in the world by 2023

Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.