CONNECT WITH US  

ಕನ್ನಡ ವಿಭಾಗವನ್ನು ಬೆಳೆಸುವಲ್ಲಿ ಹಿರಿಯ ಪ್ರಾಧ್ಯಾಪಕರ ಕೊಡುಗೆ ಅನನ್ಯ

ಕಾಸರಗೋಡು: ಕಾಸರಗೋಡಿನ ಸರಕಾರಿ ಕಾಲೇಜಿನಲ್ಲಿ ಕನ್ನಡ ವಿಭಾಗವನ್ನು ಕಟ್ಟಿ ಬೆಳೆಸುವಲ್ಲಿ ವಿಭಾಗದ ಹಿರಿಯ ಪ್ರಾಧ್ಯಾಪಕರ ಕೊಡುಗೆ ಅನನ್ಯವಾದುದು. ಅವರ ಪರಿಶ್ರಮದಿಂದ ಇಂದು ಹಲವಾರು ಮಂದಿ ಕನ್ನಡ ಅಧ್ಯಾಪಕರಾಗಿ, ಸಂಶೋಧಕರಾಗಿ, ಪತ್ರಕರ್ತರಾಗಿ ಪ್ರಸಿದ್ಧಿಗೆ ಬರಲು ಸಾಧ್ಯವಾಗಿದೆ ಎಂದು ನಿವೃತ್ತ ಪ್ರಾಂಶುಪಾಲರಾದ ಡಾ| ಸುಬ್ರಹ್ಮಣ್ಯ ಭಟ್‌ ಹೇಳಿದರು.

ಅವರು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ನಡೆದ ಸ್ಮೃತಿ ಕಾರ್ಯಕ್ರಮದಲ್ಲಿ ವಿಭಾಗದಲ್ಲಿ ಈ ಹಿಂದೆ ಸೇವೆ ಸಲ್ಲಿಸಿ ದಿವಂಗತರಾದ ಸುಬ್ರಾಯ ಭಟ್‌, ಬಿ.ಕೆ.ತಿಮ್ಮಪ್ಪ, ವೇಣುಗೋಪಾಲ ಕಾಸರಗೋಡು ಮತ್ತು ಬಿ.ಪದ್ಮನಾಭ ಇವರ ಕುರಿತಾಗಿ ನೆನಪುಗಳನ್ನು ಮೆಲುಕು ಹಾಕಿದರು.

ಈ ಎಲ್ಲಾ ಪ್ರಾಧ್ಯಾಪಕರು ಅನುವಾದ ಸಂಶೋಧನೆ, ಅನುವಾದ, ಸಮರ್ಥ ಅಧ್ಯಾಪನದ ಮೂಲಕ ತಮ್ಮ ಸೇವಾವಧಿಯಲ್ಲಿ ಅತ್ಯುನ್ನತ ಕೊಡುಗೆ ನೀಡಿದ್ದಾರೆ ಎಂದರು.ವಿಭಾಗ ಮುಖ್ಯಸ್ಥೆ ಸುಜಾತಾ ಎಸ್‌. ಅಧ್ಯಕ್ಷತೆ ವಹಿಸಿದರು. ತೃತೀಯ ಪದವಿ ವಿದ್ಯಾರ್ಥಿಗಳಾದ ಸುನೀತಾ ಮತ್ತು ಸವಿತಾ ಪಿ. ಅವರಿಗೆ ಪ್ರೊ|ಬಿ.ಪದ್ಮನಾಭ ಸ್ಮರಣಾರ್ಥ ನೀಡುವ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಶ್ರದ್ಧಾ ಪ್ರಾರ್ಥಿಸಿದರು. ಕಾರ್ಯಕ್ರಮ ಸಂಯೋಜಕಿ ಡಾ|ಆಶಾಲತಾ ಕಾರ್ಯಕ್ರಮ ನಿರೂಪಿಸಿದರು.

Trending videos

Back to Top