ಜಿಲ್ಲೆಯಲ್ಲಿ ಕಣ್ಣು ಮುಚ್ಚಿವೆ 85 ಸಿಸಿ ಟಿವಿ ಕೆಮರಾಗಳು


Team Udayavani, Feb 10, 2018, 10:00 AM IST

CCTV-Camera-2-600.jpg

ಕಾಸರಗೋಡು: ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ  ಕಾಪಾಡಲು ಮತ್ತು ಅಹಿತಕರ ಕೃತ್ಯಗಳನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆಯು ಸ್ಥಾಪಿಸಿದ ಸಿಸಿ ಟಿವಿ ಕೆಮರಾಗಳು ಕಣ್ಣು ಮುಚ್ಚಿವೆ. ಜತೆಗೆ ತನಗೆ ಕೊಟ್ಟ ಕಣ್ಗಾವಲು ಕೆಲಸವನ್ನು  ನಿರ್ವಹಿಸಲು ಅಸಮರ್ಥವಾಗಿ ಸುಮ್ಮನೆ ಕುಳಿತಿವೆ. ಈ ಮೂಲಕ ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳನ್ನು ಎಸಗು ವವರಿಗೆ ಭಾರೀ ವರದಾನ ಸಿಕ್ಕಂತಾಗಿದೆ.

ಕಾಸರಗೋಡು ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ 95 ಸಿಸಿ ಟಿವಿ ಕೆಮರಾಗಳನ್ನು  ಅಳವಡಿಸಲಾಗಿದ್ದು, ಅವುಗಳಲ್ಲಿ 10 ಕೆಮರಾಗಳು ಮಾತ್ರವೇ ಇದೀಗ ಕಾರ್ಯಾಚರಿಸುತ್ತಿವೆ. ಈ ಮಧ್ಯೆ 81 ಕೆಮರಾಗಳು ಸಮರ್ಪಕವಾಗಿ ಕಾರ್ಯವೆಸಗದೆ ಮೂರು ವರ್ಷಗಳು ಕಳೆದವು. ಕೊಲೆ ಪ್ರಕರಣಗಳು, ದಾಳಿಗಳು, ಕಳ್ಳತನ ಇತ್ಯಾದಿ ನಿರಂತರ ಸುದ್ದಿಯಾಗುತ್ತಿರುವಾಗ ಸಿಸಿ ಟಿವಿ ಕೆಮರಾಗಳು ಕಾರ್ಯವೆಸಗದಿರುವುದು ಪೊಲೀಸ್‌ ತನಿಖೆಗೆ ತೀವ್ರ ಹಿನ್ನಡೆಯಾಗಿ ಪರಿಣಮಿಸಿದೆ.

2015ನೇ ಡಿಸೆಂಬರ್‌ ತಿಂಗಳಲ್ಲಿ  ಕೆಲಸ ಮಾಡದ ಸಿಸಿ ಟಿವಿ ಕೆಮರಾಗಳನ್ನು  ದುರಸ್ತಿಗೊಳಿಸಲು ಕೆಲ್ಟ್ರೋನ್‌ ಸಂಸ್ಥೆಯನ್ನು  ಸಂಪರ್ಕಿಸಿ ಯೋಜನೆ ರೂಪಿಸಲಾಗಿತ್ತಾದರೂ, ಬಳಿಕ ದುರಸ್ತಿಗೆ ಯಾವುದೇ ಕ್ರಮ ಆರಂಭಗೊಂಡಿಲ್ಲ. ಕೆಮರಾಗಳ ದುರಸ್ತಿಗೆ ಕೆಲ್ಟ್ರೋನ್‌ ಕೇಳಿದ 30 ಲಕ್ಷ  ರೂಪಾಯಿ ಹೆಚ್ಚಾಯಿತು ಎಂಬುದು ರಾಜ್ಯ ಸರಕಾರದ ಮತ್ತು ಪೊಲೀಸ್‌ ಇಲಾಖೆಯ ನಿಲುವು.

ಯಾವುದೇ ಅಹಿತಕರ ಘಟನೆಗಳು ನಡೆದರೂ ಸಿಸಿ ಟಿವಿಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಪೊಲೀಸರು ಹೇಳುತ್ತಾರೆ. ಸ್ವಂತ ಸಿಸಿ ಟಿವಿ ಕೆಮರಾಗಳಿಲ್ಲದೆ ಅಹಿತಕರ ಘಟನೆಗಳು ಸಂಭವಿಸಿದಾಗ ಖಾಸಗಿ ವ್ಯಕ್ತಿಗಳ ಮನೆಗಳಲ್ಲಿ, ಸಂಸ್ಥೆಗಳಲ್ಲಿ  ಸ್ಥಾಪಿಸಿದ ಸಿಸಿ ಟಿವಿ ಕೆಮರಾಗಳು ಚಿತ್ರಿಸಿದ ಫೋಟೋಗಳನ್ನೇ ಆಧಾರವಾಗಿರಿಸಿ ಪೊಲೀಸರು ತಪಾಸಣೆ ನಡೆಸಿ ತನಿಖೆಯನ್ನು ಮುಂದುವರಿಸುತ್ತಾರೆ. ಜಿಲ್ಲೆಯಲ್ಲಿ ದಾಳಿಯ ಘಟನೆಗಳು ಮುಂದುವರಿಯುತ್ತಿರುವಾಗ ಪೊಲೀಸರಿಗೆ ಪ್ರಮುಖವಾಗಿ ನೆರವಿಗೆ ಬರುವ ಸಿಸಿ ಟಿವಿ ಕೆಮರಾಗಳನ್ನು ಮರು ಸ್ಥಾಪಿಸಬೇಕೆಂದು ಸಾರ್ವಜನಿಕ ವಲಯ ಕೂಡ ಆಗ್ರಹಿಸಿದೆ.

2014ರಲ್ಲಿ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ 2.58 ಕೋಟಿ ರೂ.ಗಳನ್ನು ವಿನಿಯೋಗಿಸಿ ಸಿಸಿ ಟಿವಿ ಕೆಮರಾಗಳನ್ನು ಅಳವಡಿಸಲಾಗಿತ್ತು. ಕೆಲ್ಟ್ರೋನ್‌ಗೆ ಇದರ ಹೊಣೆಗಾರಿಕೆ ಕೊಡಲಾಗಿತ್ತು. ಈ ಪೈಕಿ ಚಂದ್ರಗಿರಿ ರಸ್ತೆಯಲ್ಲಿ  ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದುದರಿಂದ ಆ ರೂಟ್‌ನಲ್ಲಿ ಕೆಮರಾಗಳನ್ನು ಸ್ಥಾಪಿಸಲಾಗಿರಲಿಲ್ಲ.

ಶಾಸಕರ ಪ್ರಾದೇಶಿಕ ನಿಧಿ ಬಳಕೆಗೆ ನಿರ್ಧಾರ ಕಾಸರಗೋಡಿನ ಸೂಕ್ಷ್ಮ ಪರಿಸ್ಥಿತಿಯನ್ನು ಗಮನಿಸಿ ಜಿಲ್ಲಾಡಳಿತ ಮತ್ತು ವಿವಿಧ ರಾಜಕೀಯ ಪಕ್ಷಗಳ ಪ್ರಮುಖರನ್ನು ಒಳಗೊಂಡ ಜಿಲ್ಲಾ ಮಟ್ಟದ ಶಾಂತಿ ಸಮಿತಿಯು ಸಿಸಿ ಟಿವಿ ಕೆಮರಾಗಳನ್ನು ದುರಸ್ತಿಗೊಳಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿತ್ತು. ಈ ತೀರ್ಮಾನದಂತೆ ಮಂಜೇಶ್ವರ, ಕಾಸರಗೋಡು ಮತ್ತು  ಕಾಞಂಗಾಡು ಶಾಸಕರ ಪ್ರಾದೇಶಿಕ ಅಭಿವೃದ್ಧಿ ನಿಧಿಯಿಂದ ತಲಾ ಹತ್ತು ಲಕ್ಷ  ರೂ. ಹಾಗೂ ಕೇರಳ ಸರಕಾರದ 2 ಕೋಟಿ ರೂ. ವಿನಿಯೋಗಿಸಿ ಕೆಲ್ಟ್ರೋನ್‌ ಕಂಪೆನಿಗೆ ಮೂರು ವರ್ಷಗಳ ದುರಸ್ತಿ ಕಾಮಗಾರಿ ಸಹಿತ ಹೊಸ ಕೆಮರಾಗಳನ್ನು ಸ್ಥಾಪಿಸಲು ಅನುಮತಿ ನೀಡಲಾಗಿತ್ತು. ಆದರೆ ಈ ನಿರ್ಧಾರ ಕೂಡ ಇದೀಗ ಮೂಲೆಪಾಲಾಗಿರುವುದು ದುರಂತ.

ಹಲವೆಡೆಗಳಲ್ಲಿ ಸಮಾಜದ್ರೋಹಿಗಳು, ಕಿಡಿಗೇಡಿಗಳು ಕೆಮರಾಗಳನ್ನು ಹಾನಿಗೊಳಿಸಿರುವುದಾಗಿ ಮಾಹಿತಿಯಿದೆ. ಹಾನಿಗೀಡಾದ ಕೆಮರಾಗಳನ್ನು ದುರಸ್ತಿಗೊಳಿಸಲು ಇದುವರೆಗೆ ಒಂದು ರೂಪಾಯಿ ಕೂಡ ಬಿಡುಗಡೆಗೊಳಿಸಿಲ್ಲ  ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯ ವಿವಿಧ ಪ್ರಕರಣಗಳ ತನಿಖೆಯಲ್ಲಿ ಸಿಸಿ ಟಿವಿ ಕ್ಯಾಮರಾಗಳು ಅತ್ಯಂತ ಉಪಯುಕ್ತವಾಗುತ್ತಿವೆ ಎಂದು ಪೊಲೀಸರು ಹೇಳುತ್ತಿದ್ದರೂ, ಕೆಮರಾಗಳು ಕೆಟ್ಟುಹೋದಲ್ಲಿ ಪ್ರಮುಖ ಪ್ರಕರಣಗಳ ತನಿಖೆಗೂ ಯಾವುದೇ ಪ್ರಯೋಜನ ಸಿಗುತ್ತಿಲ್ಲ.

ಇದೀಗ ದುರಸ್ತಿ  ಕಾರ್ಯಗಳಿಗೆ ಬೃಹತ್‌ ಮೊತ್ತ ನೀಡಬೇಕಾಗಿದ್ದರೂ, ಕೇವಲ 30 ಲಕ್ಷ  ರೂ. ಗಳನ್ನಾದರೂ ಬಿಡುಗಡೆ ಮಾಡಲು ಕೂಡ ಸರಕಾರ ತಯಾರಾಗುತ್ತಿಲ್ಲ. ಈ ಮೊತ್ತವನ್ನು ನೀಡಿದರೂ ಕ್ಯಾಮರಾಗಳನ್ನು ದುರಸ್ತಿಗೊಳಿಸಲು ಸಾಧ್ಯವಿದೆ. ಆದರೆ ಈ ನಿಟ್ಟಿನಲ್ಲಿ  ಜಿಲ್ಲೆಯ ಪೊಲೀಸ್‌ ಇಲಾಖೆ ಕೂಡ ಯಾಕೋ ಗಂಭೀರ ನಿಲುವು ತಳೆದಂತೆ ಕಂಡುಬರುತ್ತಿಲ್ಲ ಎಂಬುದು ಅಚ್ಚರಿಯ ವಿಷಯವಾಗಿದೆ.

1.5 ಕೋಟಿ ರೂ. ಬಿಡುಗಡೆ
ಕಾಸರಗೋಡು ಜಿಲ್ಲೆಯಲ್ಲಿ ಪದೇ ಪದೇ ಕೊಲೆ, ದರೋಡೆ, ಕಳವು, ಕೋಮು ಗಲಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ರಸ್ತೆ ಮತ್ತು ಜಂಕ್ಷನ್‌ಗಳಲ್ಲಿರುವ ಸಿ.ಸಿ. ಟಿ.ವಿ. ಕೆಮರಾಗಳನ್ನು ನವೀಕರಿಸಲಾಗುವುದೆಂದು ಎಡಿಜಿಪಿ  ರಾಜೇಶ್‌ ದಿವಾನ್‌ ತಿಳಿಸಿದ್ದಾರೆ. ಇದಕ್ಕಾಗಿ ಜಿಲ್ಲೆಗೆ 1.5 ಕೋಟಿ ರೂ. ಸರಕಾರ ಬಿಡುಗಡೆ ಮಾಡಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಜಿ. ಸೈಮನ್‌ ತಿಳಿಸಿದ್ದಾರೆ.

ಟಾಪ್ ನ್ಯೂಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

5-ksrgdu

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.